
ಮನುಷ್ಯನ ಜೀವನವು ಒಂದೇ ಕಡೆ ತಟಸ್ಥವಾಗಿರಬಾರದು, ಸದಾ ಹರಿಯುತ್ತಿರಬೇಕು. ಸಕಾರಾತ್ಮಕ ಆಲೋಚನೆಗಳೊಂದಿಗೆ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಬೇಕು. ಹೊಸ ಹೊಸ ಯೋಚನೆಗಳಿಂದ ಯೋಜನೆಗಳನ್ನು ರೂಪಿಸಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಹೀಗಾಗಿ ಜೀವನದಲ್ಲಿ ಯಾವುದೇ ಸಂದರ್ಭದಲ್ಲಿಯಾದರೂ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಚಿಂತನೆಯ ಮಹತ್ವ ಅರಿತುಕೊಂಡೆ ಅದಕ್ಕಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದ್ದು, ಅದುವೇ ವಿಶ್ವ ಚಿಂತನಾ ದಿನ. ಎಲ್ಲಾ ಮಹಿಳೆಯರನ್ನು ಪ್ರೋತ್ಸಾಹಿಸಿ, ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುವ ದಿನ ಇದಾಗಿದೆ. ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವ ಚಿಂತನಾ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ಚಿಂತನಾ ದಿನದ ಇತಿಹಾಸ
1926 ರಲ್ಲಿ ನಡೆದ ನಾಲ್ಕನೇ ಗರ್ಲ್ ಸ್ಕೌಟ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ವಿಶ್ವ ಚಿಂತನಾ ದಿನದ ಕುರಿತು ಪ್ರಸ್ತಾನೆ ಮಾಡಲಾಯಿತು. ಫೆಬ್ರವರಿ 22 ರಂದು ಚಿಂತನಾ ದಿನವನ್ನು ಆಚರಿಸಲು ಒಪ್ಪಿಗೆ ದೊರೆಯಿತು. ಹೀಗಾಗಿ ವರ್ಲ್ಡ್ ಅಸೋಸಿಯೇಷನ್ ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ (WAGGGS) ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವ ಚಿಂತನಾ ದಿನವನ್ನು ಆಚರಿಸಲಾಗುತ್ತದೆ. ಬಾಯ್ ಸ್ಕೌಟ್ಸ್ ಆಫ್ ಅಮೇರಿಕಾವನ್ನು ಸ್ಥಾಪಿಸಿದ ರಾಬರ್ಟ್ ಬೇಡೆನ್-ಪೊವೆಲ್ ಅವರ ಜನ್ಮದಿನ ಕೂಡ ಹೌದು. ಅವರ ಜನ್ಮದಿನವನ್ನು ನೆನಪಿಸುವ ಮೂಲಕ ವಿಶ್ವ ಚಿಂತನಾ ದಿನ ಮತ್ತು ವಿಶ್ವ ಸ್ಕೌಟ್ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ: ಮನೆ ಮೇಲಿರುವ ನೀರಿನ ಟ್ಯಾಂಕ್ ಸ್ಪಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ವಿಶ್ವ ಚಿಂತನಾ ದಿನದ ಮಹತ್ವ
ವಿಶ್ವ ಚಿಂತನಾ ದಿನವು ಮಹಿಳೆಯರು ಹಾಗೂ ಹುಡುಗಿಯರಿಗೆ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು, ಆದ್ಯತೆಯ ವಿಷಯಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಲು ಹಾಗೂ ಜಾಗತಿಕ ಪರಿಹಾರಗಳನ್ನು ನೀಡಲು ವೇದಿಕೆಯನ್ನು ಒದಗಿಸುವುದೇ ಈ ದಿನದ ಉದ್ದೇಶವಾಗಿದೆ. ಅದಲ್ಲದೇ, ಗರ್ಲ್ ಸ್ಕೌಟ್‌ಗಳಲ್ಲಿ ಸಹೋದರತ್ವದ ಮಹತ್ವವನ್ನು ಎತ್ತಿ ತೋರಿಸುವ ಸಲುವಾಗಿ ಈ ದಿನ ಮಹತ್ವದ್ದಾಗಿದೆ. ಈ ದಿನದಂದು ಬಾಲಕಿಯರ ಸ್ಕೌಟ್ಸ್ ಮತ್ತು ಗರ್ಲ್ ಗೈಡ್‌ಗಳು ಮಹತ್ವದ ಬಗ್ಗೆ ತಿಳಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ದಿನ ಸ್ಕೌಟ್ ಮತ್ತು ಗೈಡ್‌ಗಾಗಿ ನಿಧಿ ಸಂಗ್ರಹಣೆ ಮಾಡಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ