ಮನುಷ್ಯನ ಜೀವನವು ನಿಂತ ನೀರಿನಂತಾಗ ಬಾರದು, ಸದಾ ಹರಿಯುತ್ತಿರಬೇಕು. ಹೀಗಿದ್ದರೆ ಮಾತ್ರ ಬದುಕಿಗೊಂದು ಅರ್ಥ ಸಿಗುತ್ತದೆ. ಹೊಸ ಹೊಸ ಯೋಚನೆಗಳಿಂದ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಬೇಕು. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸುತ್ತಿದ್ದಾರೆ, ಆದರೆ ಕೆಲ ಮಹಿಳೆಯರು ತಮ್ಮ ಚಿಂತನೆಯ ಮೂಲಕ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕಾಗುತ್ತದೆ. ಸಕರಾತ್ಮಕ ಚಿಂತನೆಯು ಯಶಸ್ವಿ ಜೀವನದ ಕೀಲಿ ಕೈಯಾಗಿದೆ. ಹೀಗಾಗಿ ಎಲ್ಲಾ ಸಂದರ್ಭಗಳಲ್ಲಿ ವಿಮರ್ಶಾತ್ಮಕವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಎಲ್ಲಾ ಮಹಿಳೆಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷವು ಫೆಬ್ರವರಿ 22 ರಂದು ವಿಶ್ವ ಚಿಂತನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಗರ್ಲ್ ಗೈಡ್ ಮತ್ತು ಗರ್ಲ್ ಸ್ಕೌಟ್ ದಿನ ಎಂದು ಕರೆಯುತ್ತಾರೆ.
1926 ರಲ್ಲಿ ನಡೆದ ನಾಲ್ಕನೇ ಗರ್ಲ್ ಸ್ಕೌಟ್ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಈ ವಿಶ್ವ ಚಿಂತನಾ ದಿನದ ಕುರಿತು ಪ್ರಸ್ತಾನೆ ಮಾಡಲಾಯಿತು. ಫೆಬ್ರವರಿ 22 ರಂದು ಚಿಂತನಾ ದಿನವನ್ನು ಆಚರಿಸಲು ಒಪ್ಪಿಗೆ ದೊರೆಯಿತು. ಹೀಗಾಗಿ ವರ್ಲ್ಡ್ ಅಸೋಸಿಯೇಷನ್ ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ (WAGGGS) ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವ ಚಿಂತನಾ ದಿನವನ್ನು ಆಚರಿಸಲಾಗುತ್ತದೆ. ಅದಲ್ಲದೇ ಬಾಯ್ ಸ್ಕೌಟ್ಸ್ ಆಫ್ ಅಮೇರಿಕಾವನ್ನು ಸ್ಥಾಪಿಸಿದ ರಾಬರ್ಟ್ ಬೇಡೆನ್-ಪೊವೆಲ್ ಅವರ ಜನ್ಮದಿನವಾಗಿದೆ. ಅವರ ಜನ್ಮದಿನವನ್ನು ನೆನಪಿಸುವ ಮೂಲಕ ವಿಶ್ವ ಚಿಂತನಾ ದಿನ ಮತ್ತು ವಿಶ್ವ ಸ್ಕೌಟ್ ದಿನವನ್ನಾಗಿ ಆಚರಿಸುತ್ತ ಬರಲಾಗುತ್ತಿದೆ.
ಇದನ್ನೂ ಓದಿ: ಸುಟ್ಟ ಗಾಯಕ್ಕೆ ಟೂತ್ ಪೇಸ್ಟ್ ಹಚ್ಚುವ ಅಭ್ಯಾಸವಿದೆಯೇ, ಇಂದೇ ನಿಲ್ಲಿಸಿ
ವಿಶ್ವ ಚಿಂತನಾ ದಿನವು ಮಹಿಳೆಯರು ಹಾಗೂ ಹುಡುಗಿಯರಿಗೆ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು, ಆದ್ಯತೆಯ ವಿಷಯಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸಲು ಹಾಗೂ ಜಾಗತಿಕ ಪರಿಹಾರಗಳನ್ನು ನೀಡಲು ವೇದಿಕೆಯನ್ನು ಒದಗಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಸ್ಕೌಟ್‌ಗಳಿಗೆ ಈ ದಿನದಂದು ಇತರ ಹೆಣ್ಣು ಸ್ಕೌಟ್‌ಗಳೊಂದಿಗೆ ಮಾರ್ಗದರ್ಶನ ನೀಡಲು ಅವಕಾಶ ನೀಡಲಾಗುತ್ತದೆ. ವಿಶ್ವದಲ್ಲಿರುವ ಎಲ್ಲಾ ಹೆಣ್ಣು ಮಕ್ಕಳು ಜಾಗತಿಕವಾಗಿ ತಮಗೆ ಅನಿಸಿದ್ದನ್ನು ಮುಕ್ತವಾಗಿ ತಿಳಿಸಲು ಅವಕಾಶವನ್ನು ಹೊಂದಿದ್ದಾರೆ. ಬಾಲಕಿಯರ ಸ್ಕೌಟ್ಸ್ ಮತ್ತು ಗರ್ಲ್ ಗೈಡ್‌ಗಳು ಮಹತ್ವದ ವಿಷಯಗಳಲ್ಲಿ ಪ್ರಪಂಚದಾದ್ಯಂತ ಯುವತಿಯರ ಪ್ರಗತಿಗಾಗಿ ಹಣವನ್ನು ಸಂಗ್ರಹಿಸುವತ್ತ ಗಮನ ಹರಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:01 pm, Wed, 21 February 24