World Vegan Day 2025: ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಸಸ್ಯಾಧಾರಿತ ಆಹಾರ ಕ್ರಮದ ಪಾತ್ರ ಅಪಾರ

ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿಸಸ್ಯಾಧಾರಿತ ಆಹಾರ ಕ್ರಮದ ಪಾತ್ರ ಅಪಾರ. ಈ ನಿಟ್ಟಿನಲ್ಲಿ ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಯ ಮಹತ್ವನ್ನು ಗಮನದಲ್ಲಿಟ್ಟುಕೊಂಡು ಸಸ್ಯ ಆಧಾರಿತ ಆಹಾರ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು ಮತ್ತು ಪರಿಸರವನ್ನು ರಕ್ಷಿಸುವ ಜೊತೆಗೆ ಶುದ್ಧ ಸಸ್ಯಾಹಾರಿ ಆಹಾರಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 1 ರಂದು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತದೆ.

World Vegan Day 2025: ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಸಸ್ಯಾಧಾರಿತ ಆಹಾರ ಕ್ರಮದ ಪಾತ್ರ ಅಪಾರ
ವೆಗನ್‌ ಡೇ
Image Credit source: Freepik

Updated on: Nov 01, 2025 | 9:37 AM

ಇತ್ತೀಚಿನ ದಿನಗಳಲ್ಲಿ ವಿಶ್ವದೆಲ್ಲೆಡೆ ವೆಗನ್‌ (Vegan) ಲೈಫ್‌ಸ್ಟೈಲ್‌ ಕ್ರೇಜ್‌ ಹೆಚ್ಚಾಗಿದ್ದು, ಹೆಚ್ಚಿನ ಜನರು ವೆಗನ್‌ ಆಹಾರ ಕ್ರಮವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಲವು ಸೆಲೆಬ್ರಿಟಿಗಳಿಂದ ಹಿಡಿದು  ಸಾಮಾನ್ಯ ಜನರು ಕೂಡಾ ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಯ ಪಾಲನೆ ಮಾಡುತ್ತಿದ್ದಾರೆ. ಈ ಆಹಾರ ಪದ್ಧತಿ ಶಾಕಾಹಾರಕ್ಕಿಂತ ಭಿನ್ನವಾಗಿದ್ದು, ಆ ಆಹಾರ ಕ್ರಮದಲ್ಲಿ ಸಸ್ಯ ಆಧಾರಿದ ಆಹಾರಗಳನ್ನು ಬಿಟ್ಟು ಯಾವುದೇ ಪ್ರಾಣಿಜನ್ಯ ಆಹಾರವನ್ನು ಸೇವಿಸುವಂತಿಲ್ಲ. ಈ ಶುದ್ಧ ಸಸ್ಯಾಹಾರಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ  ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕಡಿಮೆ ಮಾಡುವುದರ ಜೊತೆಗೆ ನಮ್ಮ ಆರೋಗ್ಯಕರವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು ಮತ್ತು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಹೀಗೆ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿಸಸ್ಯಾಧಾರಿತ ಆಹಾರ ಕ್ರಮದ ಪಾತ್ರ ಅಪಾರ. ಈ ನಿಟ್ಟಿನಲ್ಲಿ ಸಸ್ಯ ಆಧಾರಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಹಾಗೂ  ಶುದ್ಧ ಸಸ್ಯಾಹಾರಿ ಆಹಾರಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು  ಪ್ರತಿವರ್ಷ ನವೆಂಬರ್ 1 ರಂದು ವಿಶ್ವ ಸಸ್ಯಾಹಾರಿ  ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಸ್ಯಾಹಾರಿ ದಿನದ ಇತಿಹಾಸವೇನು?

ಪ್ರತಿ ವರ್ಷ ನವೆಂಬರ್ 1 ರಂದು ಪ್ರಪಂಚದಾದ್ಯಂತ  ಶುದ್ಧ ಸಸ್ಯಹಾರಿ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಇತಿಹಾಸವನ್ನು ನೋಡುವುದಾದರೆ, 1994 ರಲ್ಲಿ ಇಂಗ್ಲೇಂಡಿನಲ್ಲಿರುವ  ದಿ ವೆಗನ್ ಸೊಸೈಟಿಯ ಆಗಿನ ಅಧ್ಯಕ್ಷರಾದ ಲೂಯಿಸ್ ವಾಲಿಸ್ ಅವರು ಈ ಸಂಸ್ಥೆಯ  ಸ್ಥಾಪನೆಯ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ  ವಿಶ್ವ ಸಸ್ಯಾಹಾರಿ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 1 ರಂದು ವಿಶ್ವದಾದ್ಯಂತ  ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ವೆಗನ್ ಜೀವನಶೈಲಿಯನ್ನು ಅನುಸರಿಸಲು ಜನರನ್ನು ಪ್ರೇರೇಪಿಸುವುದು ಈ ದಿನದ ಆಚರಣೆಯ ಉದ್ದೇಶವಾಗಿದೆ.

ವಿಶ್ವ ಸಸ್ಯಾಹಾರಿ ದಿನದ ಮಹತ್ವವೇನು?

  • ಆರೋಗ್ಯಕರ ಜೀವನಶೈಲಿ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವಲ್ಲಿ ವಿಶ್ವ ಸಸ್ಯಾಹಾರಿ ದಿನವು ಪ್ರಮುಖ ಪಾತ್ರ ವಹಿಸುತ್ತದೆ.
  • ಸಸ್ಯಧಾರಿತ ಆಹಾರ ಕ್ರಮವು ಆರೋಗ್ಯಕರ ಜೀವನಶೈಲಿಯ ಭಾಗವಾಗಿದ್ದು, ಶುದ್ಧ ಸಸ್ಯಾಹಾರಿ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಪರಿಸರ ಮತ್ತು ವೈಯಕ್ತಿಕ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
  • ಅಲ್ಲದೆ ಸಸ್ಯಾಹಾರಿ ದಿನವು ಪ್ರಾಣಿ ಹಿಂಸೆಯನ್ನು ತಡೆಗಟ್ಟುವುದು ಮತ್ತು ಪರಿಸರ ರಕ್ಷಣೆಯ ಬಗ್ಗೆಯೂ ಜಾಗೃತಿ ಮೂಡಿಸುತ್ತದೆ.

ಸಸ್ಯಾಧಾರಿದ ಆಹಾರ ಕ್ರಮ (ವೆಗನ್‌) ಎಂದರೇನು?

ವೆಗನ್‌ ಆಹಾರಕ್ರಮದಲ್ಲಿ ಯಾವುದೇ ಪ್ರಾಣಿಜನ್ಯ ಆಹಾರ ಇರುವುದಿಲ್ಲ. ಅಂದರೆ ಪ್ರಾಣಿ ಮೂಲದ ಆಹಾರಗಳಾದ ಹಾಲು, ಮೊಟ್ಟೆ, ಬೆಣ್ಣೆ, ಗಿಣ್ಣು, ಚೀಸ್‌, ಮಜ್ಜಿಗೆ  ಇತ್ಯಾದಿ. ಶಾಕಾಹಾರದಲ್ಲಿ ಇದು ಸ್ವೀಕೃತವಾಗಿದೆ. ಆದರೆ ವೆಗನ್‌ ಆಹಾರ ಪದ್ಧತಿಯಲ್ಲಿ ಪ್ರಾಣಿ ಮೂಲದ ಯಾವುದೇ ಆಹಾರವನ್ನು ಸೇವಿಸುವಂತಿಲ್ಲ. ವೆಗನ್ ಆಹಾರ ಪದ್ಧತಿಯು ಪ್ರಾಣಿಗಳಿಗೆ ಯಾವುದೇ ಹಾನಿ ಮಾಡದೆ ಸಸ್ಯ ಮೂಲದಿಂದ ಪಡೆದ ಆಹಾರ ಮತ್ತು‌ ಅವುಗಳ ಉತ್ಪನ್ನಗಳ ಸೇವನೆಯನ್ನು ಒಳಗೊಂಡಿರುತ್ತದೆ. ಈ ಶುದ್ಧ ಸಸ್ಯಾಹಾರಿ ಆಹಾರ ಕ್ರಮವು  ಪೋಷಕಾಂಶಗಳಿಂದ ಸಮೃದ್ಧವಾದ್ದು, ಇದು ಜನರ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಈ ಆಹಾರ ಪದ್ಧತಿಯ ಪಾಲನೆಯಿಂದ ಅನೇಕ ಅಪಾಯಕಾರಿ ಕಾಯಿಲೆಗಳು ಬಾರದಂತೆ ತಡೆಯಬಹುದು.

ಇದನ್ನೂ ಓದಿ
ನವೆಂಬರ್‌ 1 ರಂದೇ ಏಕೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು?
ಖರ್ಚು ತಗ್ಗಿಸಿ ಭವಿಷ್ಯದ ಭದ್ರ ಬುನಾದಿಗಾಗಿ ಹಣ ಕೂಡಿಡಿ
ನವೆಂಬರ್‌ ತಿಂಗಳ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ
ಬಡತನ ನಿರ್ಮೂಲನಾ ದಿನದ ಪ್ರಾಮುಖ್ಯತೆಯೇನು?

ಇದನ್ನೂ ಓದಿ: ನವೆಂಬರ್‌ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ

ವೆಗನ್‌ ಆಹಾರ ಕ್ರಮದ ಪಾಲನೆಯ ಪ್ರಯೋಜನಗಳು:

ಹೃದಯದ ಆರೋಗ್ಯ:  ಸಸ್ಯಾಧಾರಿತ ಆಹಾರ ಕ್ರಮವು ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಹೃದ್ರೋಗದಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ಆಹಾರಗಳಲ್ಲಿ ಹೆಚ್ಚಿನ ಫೈಬರ್ ಇದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ತೂಕ ನಿಯಂತ್ರಣ: ಈ ಆಹಾರವು ದೇಹದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಟೈಪ್-2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಅಧಿಕ ರಕ್ತದೊತ್ತಡ: ಈ ಆಹಾರ ಕ್ರಮವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಅಲ್ಲದೆ  ವೆಗನ್‌ ಆಹಾರವು ಹೆಚ್ಚು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ದೇಹಕ್ಕೆ ಪ್ರಯೋಜನಕಾರಿಯಾದ ಹಲವು  ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಈ ಆಹಾರದಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ, ಮೆಗ್ನೇಸಿಯಂ, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇದ್ದು, ಈ  ಈ ಎಲ್ಲಾ ಖನಿಜಗಳು ಮತ್ತು ಪೋಷಕಾಂಶಗಳು ನಮ್ಮ  ಆರೋಗ್ಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ