AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಇಂತಹ ಜನರೊಂದಿಗೆ ಇದ್ದರೆ ನೀವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯ

ನಮ್ಮ ಸೋಲು-ಗೆಲುವು, ಯಶಸ್ಸು ಇವೆಲ್ಲವೂ ನಾವು ಎಂತಹವರ ಜೊತೆ ಇದ್ದೇವೆ ಎಂಬುದರ ಮೇಲೂ ನಿರ್ಧಾರವಾಗುತ್ತದೆ. ಸಕಾರಾತ್ಮಕ ಮನಸ್ಥಿತಿಯ ಜನರ ಜೊತೆಗೆ ನಾವು ಯಶಸ್ಸನ್ನು ಸಾಧಿಸಬಹುದು. ಅದೇ ಕೆಟ್ಟ ಸಹವಾಸದಿಂದ ನಮ್ಮ ವ್ಯಕ್ತಿತ್ವವೇ ಕೆಟ್ಟು ಹೋಗುತ್ತದೆ. ಅದರಲ್ಲೂ ಈ ಒಂದಷ್ಟು ಜನರ ಜೊತೆ ಇದ್ರೆ ನೀವು ಜೀವನದಲ್ಲಿ ಉದ್ಧಾರ ಆಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಜೀವನದಲ್ಲಿ ಉದ್ಧಾರವಾಗಲು ಮೊದಲು ಎಂತಹ ಜನರಿಂದ ದೂರವಿರಬೇಕು ಎಂಬುದನ್ನು ತಿಳಿಯಿರಿ.

Chanakya Niti: ಇಂತಹ ಜನರೊಂದಿಗೆ ಇದ್ದರೆ ನೀವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Nov 01, 2025 | 4:28 PM

Share

ಸಹವಾಸದಿಂದ ಸನ್ಯಾಸಿ ಕೆಟ್ಟ ಎಂಬ ಹಳೆ ಮಾತೊಂದಿದೆ. ಈ ಮಾತಿನಂತೆ ನೀವು ಕೆಟ್ಟವರ ಸಹವಾಸ ಮಾಡಿದರೆ ಜೀವನದಲ್ಲಿ ಎಂದಿಗೂ ಯಶಸ್ಸು (success) ಗಳಿಸಲು ಸಾಧ್ಯವಿಲ್ಲ. ಅದೇ ಸಜ್ಜನರು, ಸಕಾರಾತ್ಮಕ ವ್ಯಕ್ತಿಗಳ ಸ್ನೇಹ ಬೆಳೆಸಿದರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲೂ ಸಕಾರಾತ್ಮಕ ಬದಲಾವಣೆಗಳು ಆಗುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹೀಗೆ ನಮ್ಮ ಏಳು-ಬೀಳು ಎನ್ನುವಂತಹದ್ದು ನಾವು ಎಂತಹವರ ಸಹವಾಸದಲ್ಲಿ ಇದ್ದೇವೆ ಎಂಬುದರ ಮೇಲೂ ನಿರ್ಧಾರವಾಗುತ್ತದೆ. ಅದಕ್ಕಾಗಿಯೇ ಆಚಾರ್ಯ ಚಾಣಕ್ಯರು ಜೀವನದಲ್ಲಿ ಉದ್ಧಾರವಾಗಲು ಬಯಸುವವರು ಈ ಒಂದಷ್ಟು ಜನರಿಂದ ಸಾಧ್ಯವದಷ್ಟು ದೂರವಿರಬೇಕು ಎಂದು ಎಚ್ಚರಿಕೆ ನೀಡಿದ್ದು. ಹಾಗಿದ್ರೆ ಜೀವನದಲ್ಲಿ ಯಶಸ್ಸು ಗಳಿಸಲು ಎಂತಹ ಜನರಿಂದ ದೂರವಿರಬೇಕು ಎಂಬುದನ್ನು ನೋಡೋಣ ಬನ್ನಿ.

ಯಶಸ್ಸು ಸಾಧಿಸಲು ಬಯಸಿದರೆ ಇಂತಹ ಜನರಿಂದ ದೂರವಿರಿ:

ನಕಾರಾತ್ಮಕವಾಗಿ ಯೋಚಿಸುವ ಜನ: ಆಚಾರ್ಯ ಚಾಣಕ್ಯರ ಪ್ರಕಾರ, ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಯಾರಿಂದಲೂ ನೀವು ದೂರವಿರಬೇಕು. ಅಂತಹ ಜನರು ನೀವು ಮಾಡುವ ಪ್ರತಿಯೊಂದರಲ್ಲೂ ತಪ್ಪುಗಳನ್ನು ಹುಡುಕುತ್ತಾರೆ ಮತ್ತು ನಿಮ್ಮ ನೈತಿಕತೆಯನ್ನು ದುರ್ಬಲಗೊಳಿಸುತ್ತಾರೆ. ಆದ್ದರಿಂದ ನೀವು ಸಾಧ್ಯವಾದಷ್ಟು ಅಂತಹ ಜನರಿಂದ ದೂರವಿರಬೇಕು ಮತ್ತು ಸಕಾರಾತ್ಮಕ ಜನರ ಜೊತೆ ಬೆರೆಯಬೇಕು.  ʻ

ಸೋಮಾರಿ ಜನರಿಂದ ದೂರವಿರಿ: ಚಾಣಕ್ಯರ ಪ್ರಕಾರ, ನೀವು ಸೋಮಾರಿಗಳಿಂದ ಸಾಧ್ಯವಾದಷ್ಟು ದೂರವನ್ನು ಕಾಯ್ದುಕೊಳ್ಳಬೇಕು. ಅಂತಹ ಜನರು ಜೀವನದಲ್ಲಿ ಸ್ವತಃ ಯಶಸ್ವಿಯಾಗುವುದಿಲ್ಲ ಜೊತೆಗೆ ನಿಮ್ಮನ್ನೂ ಉದ್ಧಾರವಾಗಲು ಬಿಡುವುದಿಲ್ಲ. ಅವರು ಕಠಿಣ ಪರಿಶ್ರಮದಿಂದ ಯಾವಾಗಲೂ ಹಿಂದೆ ಸರಿಯುತ್ತಾರೆ, ಜೊತೆಗೆ ನಿಮಗೂ ಸಾಕಷ್ಟು ಅಡ್ಡಿಯುಂಟು ಮಾಡುತ್ತಾರೆ. ಆದ್ದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಬಯಸಿದರೆ ಇಂತಹ ಸೋಮಾರಿ ಜನರ ಸಹವಾಸದಿಂದ ದೂರವಿರಿ.

ಇದನ್ನೂ ಓದಿ
Image
ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಬಡವರಾಗಿಯೇ ಉಳಿಯಲು ಕಾರಣ ಏನು ಗೊತ್ತಾ?
Image
ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ನೀವು ದೂರವಿದ್ದಷ್ಟು ಒಳ್ಳೆಯದು
Image
ಇತರರಿಗೆ ಸಹಾಯ ಮಾಡುವ ಮುನ್ನ, ಚಾಣಕ್ಯರ ಈ ಮಾತುಗಳನ್ನೊಮ್ಮೆ ಕೇಳಿ
Image
ಪುರುಷರ ವ್ಯಕ್ತಿತ್ವನ್ನು ಆಕರ್ಷಕಗೊಳಿಸುವ ಗುಣಗಳಿವು

ಇತರರ ಪ್ರಗತಿಯನ್ನು ನೋಡಿ ಅಸೂಯೆ ಪಡುವ ಜನ: ಇತರರ ಪ್ರಗತಿಯನ್ನು ನೋಡಿ ಅಸೂಯೆ ಪಡುವ ಜನರಿಂದ ದೂರವಿರಲು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ. ಇಂತಹ ಜನರು ನಿಮ್ಮ ಜೀವನದಲ್ಲೂ ಇದ್ದರೆ, ಅವರು ಯಾವಾಗಲೂ ನಿಮ್ಮ ಯಶಸ್ಸಿಗೆ ತಡೆಯಾಗುತ್ತಾರೆ, ನಿಮ್ಮ ಕೆಟ್ಟದ್ದನ್ನೆ ಅವರು ಬಯಸುತ್ತಾರೆ. ಹಾಗಾಗಿ ಇನ್ನೊಬ್ಬರ ಒಳಿತನ್ನು ಕಂಡು ಹೊಟ್ಟೆಕಿಚ್ಚು ಪಡುವ ಜನರಿಂದ ದೂರವಿರಲು ಪ್ರಯತ್ನಿಸಿ.

ಇದನ್ನೂ ಓದಿ: ಇದೇ ಕಾರಣಕ್ಕಂತೆ ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಬಡವರಾಗಿಯೇ ಉಳಿಯುವುದು

ನಂಬಿಕೆ ದ್ರೋಹಿಗಳಿಂದ  ದೂರವಿರಿ: ನೀವು ಜೀವನದಲ್ಲಿ ಉದ್ಧಾರವಾಗಬೇಕಾದರೆ ನಿಮಗೆ ದ್ರೋಹ ಮಾಡುವ ಅಥವಾ ವಿಶ್ವಾಸಘಾತುಕ, ಸ್ವಾರ್ಥ ಮನೋಭಾವದ ಜನರಿಂದ ದೂರವಿರಬೇಕು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ.  ಅಂತಹ ಜನರು ತಮ್ಮ ಅಗತ್ಯಕ್ಕಾಗಿ ನಿಮ್ಮನ್ನು ಬಳಸಿಕೊಳ್ಳುತ್ತಾರೆ, ಕೊನೆಗೆ ನಿಮಗೆಯೇ ದ್ರೋಹ ಬಗೆಯುತ್ತಾರೆ. ಇಂತಹವರ ಜೊತೆಯಲ್ಲಿದ್ದರೆ ಯಾರೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಇಂತಹ ಜನರಿಂದ ಸಾಧ್ಯವಾದಷ್ಟು ದೂರವಿರಿ, ಸಕಾರಾತ್ಮಕ ಮನೋಭಾವನೆ ಹೊಂದಿರುವ ಜನರೊಂದಿಗೆ ಸ್ನೇಹ ಬೆಳೆಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ