Important days in November 2025: ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ
ಪ್ರತಿ ತಿಂಗಳು ಸಹ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಅದೇ ರೀತಿ ವರ್ಷದ 11 ನೇ ತಿಂಗಳಾದ ನವೆಂಬರ್‌ನಲ್ಲೂ ಹಲವು ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಕನ್ನಡ ರಾಜ್ಯೋತ್ಸವದಿಂದ ಹಿಡಿದು ಮಕ್ಕಳ ದಿನದ ವರೆಗೆ ನವೆಂಬರ್‌ನಲ್ಲಿ ಯಾವೆಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ತಿಳಿಯಿರಿ.

ಸಾಂದರ್ಭಿಕ ಚಿತ್ರ Image Credit source: Getty Images
ಪ್ರತಿ ತಿಂಗಳೂ ವಿಶೇಷ ಹಬ್ಬ ಹರಿದಿನಗಳು ಇರುವಂತೆ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುವಂತಹ ಸಲುವಾಗಿ ಈ ಕಾರ್ಯಕ್ರಮಗಳನ್ನು (Important days) ಆಚರಿಸಲಾಗುತ್ತದೆ. ಇನ್ನೇನೂ ನವೆಂಬರ್ ತಿಂಗಳು ಆರಂಭವಾಗುತ್ತಿದ್ದು, ಕನ್ನಡ ರಾಜ್ಯೋತ್ಸವದಿಂದ ಹಿಡಿದು ಮಕ್ಕಳ ದಿನಾಚರಣೆ, ಪುರುಷರ ದಿನಾಚರಣೆವರೆಗೆ ಈ ತಿಂಗಳಲ್ಲಿ ಯಾವೆಲ್ಲಾ ವಿಶೇಷ ರಾಷ್ಟ್ರೀಯ, ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಕಾರ್ಯಕ್ರಮಗಳು:
- ನವೆಂಬರ್ 1, 2025: ಕನ್ನಡ ರಾಜ್ಯೋತ್ಸವ
- ನವೆಂಬರ್ 1, 2025: ವಿಶ್ವ ಸಸ್ಯಾಹಾರಿ ದಿನ
- ನವೆಂಬರ್ 3, 2025: ವಿಶ್ವ ಜೆಲ್ಲಿ ಮೀನು ದಿನ
- ನವೆಂಬರ್ 5, 2025: ಗುರು ನಾನಕ್ ಜಯಂತಿ
- ನವೆಂಬರ್ 7, 2025: ಶಿಶು ರಕ್ಷಣಾ ದಿನ
- ನವೆಂಬರ್ 7, 2025: ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
- ನವೆಂಬರ್ 8, 2025: ವಿಶ್ವ ರೇಡಿಯೋಗ್ರಫಿ ದಿನ
- ನವೆಂಬರ್ 9, 2025: ರಾಷ್ಟ್ರೀಯ ಕಾನೂನು ಸೇವೆಗಳ ದಿನ
- ನವೆಂಬರ್ 9, 2025: ವಿಶ್ವ ಸ್ವಾತಂತ್ರ್ಯ ದಿನ
- ನವೆಂಬರ್ 10, 2025: ವಿಶ್ವ ಸಾರ್ವಜನಿಕ ಸಾರಿಗೆ ದಿನ
- ನವೆಂಬರ್ 10, 2025: ವಿಶ್ವ ರೋಗನಿರೋಧಕ ದಿನ
- ನವೆಂಬರ್ 11, 2025: ರಾಷ್ಟ್ರೀಯ ಶಿಕ್ಷಣ ದಿನ
- ನವೆಂಬರ್ 12, 2025: ವಿಶ್ವ ನ್ಯುಮೋನಿಯಾ ದಿನ
- ನವೆಂಬರ್ 13, 2025: ವಿಶ್ವ ದಯೆ ದಿನ
- ನವೆಂಬರ್ 14, 2025: ಮಕ್ಕಳ ದಿನಾಚರಣೆ
- ನವೆಂಬರ್ 14, 2025: ವಿಶ್ವ ಮಧುಮೇಹ ದಿನ
- ನವೆಂಬರ್ 16, 2025: ರಾಷ್ಟ್ರೀಯ ಪತ್ರಿಕಾ ದಿನ
- ನವೆಂಬರ್ 17, 2025: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ದಿನ
- ನವೆಂಬರ್ 17, 2025: ರಾಷ್ಟ್ರೀಯ ಅಪಸ್ಮಾರ ದಿನ
- ನವೆಂಬರ್ 19, 2025: ವಿಶ್ವ ಶೌಚಾಲಯ ದಿನ
- ನವೆಂಬರ್ 19, 2025: ಅಂತಾರಾಷ್ಟ್ರೀಯ ಪುರುಷರ ದಿನ
- ನವೆಂಬರ್ 20, 2025: ಸಾರ್ವತ್ರಿಕ ಮಕ್ಕಳ ದಿನ
- ನವೆಂಬರ್ 21, 2025: ವಿಶ್ವ ದೂರದರ್ಶನ ದಿನ
- ನವೆಂಬರ್ 21, 2025: ವಿಶ್ವ ಹಲೋ ದಿನ
- ನವೆಂಬರ್ 23, 2025: ರಾಷ್ಟ್ರೀಯ ಗೋಡಂಬಿ ದಿನ
- ನವೆಂಬರ್ 25, 2025: ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನ
- ನವೆಂಬರ್ 26, 2025: ರಾಷ್ಟ್ರೀಯ ಹಾಲು ದಿನ
- ನವೆಂಬರ್ 26, 2025: ಭಾರತದ ಸಂವಿಧಾನ ದಿನ
- ನವೆಂಬರ್ 29, 2025: ಅಂತಾರಾಷ್ಟ್ರೀಯ ಜಾಗ್ವಾರ್ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




