World Veterinary Day 2024: ಮೂಕ ಜೀವಿಗಳ ನೋವನ್ನು ಅರಿಯುವ ಪಶು ವೈದ್ಯರ ನಿಸ್ವಾರ್ಥ ಸೇವೆಗಿರಲ್ಲೊಂದು ಸಲಾಂ!

ಮನುಷ್ಯನ ಆರೋಗ್ಯದ ಸ್ವಲ್ಪ ವ್ಯತ್ಯಾಸವಾದರೂ ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತೇವೆ. ಪ್ರಾಣಿಗಳು ಕೂಡ ನಮ್ಮಂತೆ ಜೀವಿಯಾಗಿದ್ದರೂ ತಮಗಾಗುವ ನೋವು ಸಂಕಟವನ್ನು ಹೇಳಿಕೊಳ್ಳಲು ಆಗದು. ಅವುಗಳ ಆರೋಗ್ಯವು ಹದಗೆಟ್ಟಾಗ ಸರಿಯಾದ ಚಿಕಿತ್ಸೆ ನೀಡುವವರೇ ಈ ಪಶು ವೈದ್ಯರು. ಪ್ರತಿವರ್ಷವು ಏಪ್ರಿಲ್ ತಿಂಗಳ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಆ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

World Veterinary Day 2024: ಮೂಕ ಜೀವಿಗಳ ನೋವನ್ನು ಅರಿಯುವ ಪಶು ವೈದ್ಯರ ನಿಸ್ವಾರ್ಥ ಸೇವೆಗಿರಲ್ಲೊಂದು ಸಲಾಂ!
World Veterinary Day 2024
Edited By:

Updated on: Apr 26, 2024 | 7:54 PM

ಮನುಷ್ಯ ಮತ್ತು ಪ್ರಾಣಿಗಳ ಸಂಬಂಧ ಬಿಡಿಸಲಾರದ ಅನುಬಂಧ. ಮಾತು ಬಾರದ ಪ್ರಾಣಿಗಳು ಕೂಡ ಮನುಷ್ಯನ ಭಾವನೆಗೆ ಸ್ಪಂದಿಸುತ್ತದೆ. ಹೀಗಾಗಿ ಅವುಗಳಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ಸರಿಯಾದ ಚಿಕಿತ್ಸೆ ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಪ್ರತೀವರ್ಷ ಎಪ್ರಿಲ್ ತಿಂಗಳ ಕೊನೇ ಶನಿವಾರ ವನ್ನು ವಿಶ್ವ ಪಶುವೈದ್ಯಕೀಯ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಪಶುವೈದ್ಯಕೀಯ ದಿನದ ಇತಿಹಾಸ:

1863 ರಲ್ಲಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಎಡಿನ್‌ಬರ್ಗ್‌ನ ಪಶುವೈದ್ಯಕೀಯ ಕಾಲೇಜು ಪ್ರೊಫೆಸರ್ ಜಾನ್ ಗಮ್ಗೀ ಅವರು ಅಂತಾರಾಷ್ಟ್ರೀಯ ಪಶುವೈದ್ಯಕೀಯ ಕಾಂಗ್ರೆಸ್ ಸಭೆಯನ್ನು ನಡೆಸಿ, ಇದರಲ್ಲಿ ಎಪಿಜೂಟಿಕ್‌ ಅಥವಾ ಪ್ರಾಣಿ ಸಾಂಕ್ರಾಮಿಕ ರೋಗಗಳು ಮತ್ತು ಯುರೋಪಿನಲ್ಲಿ ಜಾನುವಾರು ವ್ಯಾಪಾರದ ಪ್ರಮಾಣಿತ ನಿಯಮಗಳ ಕುರಿತು ಚರ್ಚಿಸಲಾಯಿತು. ಆ ಬಳಿಕ ಅಂತಾರಾಷ್ಟ್ರೀಯ ಪಶುವೈದ್ಯಕೀಯ ಕಾಂಗ್ರೆಸ್ ಅನ್ನು ವಿಶ್ವ ಪಶುವೈದ್ಯಕೀಯ ಕಾಂಗ್ರೆಸ್ ಎನ್ನುವ ಹೆಸರಿನಿಂದ ಕರೆಯಲಾಯಿತು. ಅಂದಿನಿಂದ ಪ್ರಾಣಿಗಳ ಆರೋಗ್ಯ ರಕ್ಷಣೆಗೆ ಹೆಚ್ಚು ನೀಡುವ ಮೂಲಕ ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಪಶುವೈದ್ಯಕೀಯ ದಿನದ ಮಹತ್ವ:

ವಿಶ್ವ ಪಶುವೈದ್ಯಕೀಯ ಸಂಘವು ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣವನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಅದರೊಂದಿಗೆ ಜಾನುವಾರುಗಳನ್ನು ಸಾಕಲು ಅಗತ್ಯವಾದ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಹಾಗೂ ಉಚಿತ ಆರೋಗ್ಯ ಸೇವೆಗಳನ್ನು ನೀಡುವುದನ್ನು ಪ್ರೋತ್ಸಾಹಿಸಲಾಗುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ವೈದ್ಯರನ್ನು ಈ ದಿನದಂದು ಸ್ಮರಿಸಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ