ಕಾಡು ಪ್ರಾಣಿ ಹಾಗೂ ಬಾನಾಡಿಗಳಿಗೆ ಮನೆಯಿಂದ ನೀರು ಪೂರೈಸುತ್ತಿರುವ ಗ್ರಾಮಸ್ಥರು
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಕುಡಿಯಲು ನೀರು ಇಲ್ಲಿದೆ ಪ್ರಾಣಿ, ಪಕ್ಷಿ ಮತ್ತು ಮನುಷ್ಯರು ಪರದಾಡುತ್ತಿದ್ದಾರೆ. ನೀರು ಸಿಗದೆ ಪ್ರಾಣಿಗಳು ಜೀವ ಬಿಡುತ್ತಿವೆ. ಈ ನಡುವೆಯೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಹಾಗೂ ಹನಮಂತಪುರ ಗ್ರಾಮಸ್ಥರ ವಿನೂತನ ಪ್ರಕೃತಿ ಸೇವೆ ಮೆಚ್ಚುಗೆಗೆ ಕಾರಣವಾಗಿದೆ.