World Wind Day 2024 : ವಿಶ್ವ ಗಾಳಿ ದಿನ; ವಾಯು ಮಾಲಿನ್ಯ ತಡೆಗಟ್ಟಿ, ಪರಿಸರ ರಕ್ಷಿಸೋಣ

|

Updated on: Jun 14, 2024 | 7:14 PM

ಉಸಿರಾಡಲು ಶುದ್ಧ ಗಾಳಿಯೇ ಇಲ್ಲದೇ ಹೋದರೆ ಮನುಷ್ಯನ ಆರೋಗ್ಯದ ಗತಿಯೇನು? ಹೀಗಾಗಿ ಈ ಗಾಳಿ ಶಕ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಜೂನ್ 15 ರಂದು ವಿಶ್ವದಾದ್ಯಂತ ವಿಶ್ವ ಗಾಳಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಮಾಹಿತಿ ಇಲ್ಲಿದೆ.

World Wind Day 2024 : ವಿಶ್ವ ಗಾಳಿ ದಿನ; ವಾಯು ಮಾಲಿನ್ಯ ತಡೆಗಟ್ಟಿ, ಪರಿಸರ ರಕ್ಷಿಸೋಣ
World Wind Day 2024
Follow us on

ಮಾನವನ ಅಪರಿಮಿತ ಚಟುವಟಿಕೆಗಳಿಂದಾಗಿ ಪರಿಸರವು ಕ್ರಮೇಣವಾಗಿ ನಾಶವಾಗುತ್ತಿದೆ. ಹೀಗಾಗಿ ಜನರು ನೈಸರ್ಗಿಕ ಸಂಪನ್ಮೂಲಗಳ ಕಡೆಗೆ ಹೆಚ್ಚು ಅವಲಂಬಿತರಾಗಬೇಕಾದ ಅನಿವಾರ್ಯತೆಯೂ ಬಂದೋದಾಗಿದೆ. ಕಳೆದ ಕೆಲವು ವರ್ಷಗಳಿಂದ ಜಾಗತಿಕ ತಾಪಮಾನ ಏರಿಕೆ, ವಾಹನಗಳ ದಟ್ಟನೆ, ಇಂಗಾಲದ ಹೊರಸೂಸುವಿಕೆ ಮತ್ತು ಹಸಿರುಮನೆ ಅನಿಲಗಳ ಪರಿಣಾಮಗಳಿಂದ ಆರೋಗ್ಯವು ಹಾಳಾಗುತ್ತಿದೆ. ಈ ಅಗತ್ಯವಾದ ಇಂಧನ ಮೂಲಗಳಲ್ಲಿ ಒಂದಾಗಿರುವ ಗಾಳಿ ಶಕ್ತಿಯ ಬಳಕೆಯೂ ಸರಿಯಾದ ರೀತಿಯಲ್ಲಿಯಾಗಬೇಕು.

ಎಂದಿಗೂ ಬರಿದಾಗದ ವಾಯುವನ್ನು, ಶಕ್ತಿಯಾಗಿ ಪರಿವರ್ತಿಸಿದರೆ ಇಂಧನಗಳಾಗಿ ಬಳಸುವ ಅವಕಾಶವು ನಮ್ಮ ಮುಂದಿದೆ. ಹೀಗಾಗಿ ಈ ವಾಯುವನ್ನು ಕಲುಷಿತಗೊಳಿಸದೇ ಹೇಗೆ ಬಳಸಬೇಕು ಹಾಗೂ ಪವನ ಶಕ್ತಿಯ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಜೂನ್ 15ರಂದು ವಿಶ್ವ ಗಾಳಿ ದಿನ (ವಿಶ್ವ ಪವನ ದಿನ ) ವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ತುಂಬಾ ದಪ್ಪ ಇದ್ದೀರಾ? ತೆಳ್ಳಗಾಗಲು ಈ ಆಹಾರಗಳನ್ನು ದಿನನಿತ್ಯ ಸೇವಿಸಿ

ವಿಶ್ವ ಗಾಳಿ ದಿನದ ಇತಿಹಾಸ ಹಾಗೂ ಮಹತ್ವ:

ಇಂದು ಶುದ್ಧವಾದ ಗಾಳಿಯೂ ಇಲ್ಲದಂತಾಗಿದೆ. ಕಲುಷಿತ ಗಾಳಿಯನ್ನೇ ಉಸಿರಾಡುವ ಪರಿಸ್ಥಿತಿಯೂ ಎದುರಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಗಾಳಿ ದಿನ ಪ್ರಾರಂಭವಾಯಿತು. ‘ವಿಂಡ್ ಡೇ’ ಅನ್ನು ಮೊದಲ ಬಾರಿಗೆ ಜೂನ್ 15, 2007 ರಂದು ಆಚರಿಸಲಾಯಿತು. 2009 ರ ವೇಳೆಗೆ ವಿಂಡ್ ಯುರೋಪ್ ಮತ್ತು ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ ಸಹಭಾಗಿತ್ವದಲ್ಲಿ ಮತ್ತು ವಿಶ್ವ ವಿಂಡ್ ಡೇ ಅಥವಾ ಗ್ಲೋಬಲ್ ವಿಂಡ್ ಡೇ ಎಂದು ಮರುನಾಮಕರಣ ಮಾಡಿತು. ಗಾಳಿ ಶಕ್ತಿ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಅತ್ಯಂತ ಮಹತ್ವದ್ದಾಗಿದೆ. ಈ ವಿಶೇಷ ದಿನದಂದು ಸಂಘ ಸಂಸ್ಥೆಗಳು ಸೆಮಿನಾರ್, ಅಭಿಯಾನ ಸೇರಿದಂತೆ ಇನ್ನಿತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: