Rabies Symptoms: ನಾಯಿ ಕಚ್ಚಿದರೆ ಎಷ್ಟು ಗಂಟೆಗಳ ಒಳಗೆ ಚಿಕಿತ್ಸೆ ನೀಡಬೇಕು?

ರೇಬೀಸ್ ರೋಗಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ, ಅದು ಮಾರಣಾಂತಿಕವಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ರೇಬೀಸ್ ಪೀಡಿತರು ಸಾಯಬಹುದು. ಹಾಗಾದರೆ ಹುಚ್ಚು ನಾಯಿ ಕಚ್ಚಿದ ಎಷ್ಟು ದಿನಗಳಲ್ಲಿ ರೋಗದ ತೀವ್ರತೆ ಅರಿವಿಗೆ ಬರುತ್ತದೆ? ಹೇಗೆ ತಪ್ಪಿಸಬೇಕು ಇಲ್ಲಿದೆ ಮಾಹಿತಿ.

Rabies Symptoms: ನಾಯಿ ಕಚ್ಚಿದರೆ ಎಷ್ಟು ಗಂಟೆಗಳ ಒಳಗೆ ಚಿಕಿತ್ಸೆ ನೀಡಬೇಕು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 15, 2024 | 2:25 PM

ಪ್ರಾಣಿಗಳ ಕಡಿತವು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಆ ಸಾಲಿನಲ್ಲಿ ರೇಬೀಸ್ ಕೂಡ ಸೇರಿಕೊಳ್ಳುತ್ತದೆ. ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದಿದ್ದರೆ, ಅದು ಮಾರಣಾಂತಿಕವಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ರೇಬೀಸ್ ಪೀಡಿತರು ಸಾಯಬಹುದು. ಹಾಗಾದರೆ ಹುಚ್ಚು ನಾಯಿ ಕಚ್ಚಿದ ಎಷ್ಟು ದಿನಗಳಲ್ಲಿ ರೋಗದ ತೀವ್ರತೆ ಅರಿವಿಗೆ ಬರುತ್ತದೆ? ಹೇಗೆ ತಪ್ಪಿಸಬೇಕು ಇಲ್ಲಿದೆ ಮಾಹಿತಿ.

ರೇಬೀಸ್ ಎಂದರೇನು?

ರೇಬಿಸ್ ಸೋಂಕು ಮುಖ್ಯವಾಗಿ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಪ್ರಾಣಿಗೆ ಈ ರೋಗ ಬಂದು ಅದು ಮನುಷ್ಯನಿಗೆ ಕಚ್ಚಿದರೆ ಆ ವ್ಯಕ್ತಿಗೂ ಈ ರೋಗ ಹರಡುತ್ತದೆ. ಸೋಂಕಿತ ಪ್ರಾಣಿಗಳ ಲಾಲಾರಸದಲ್ಲಿ ಈ ವೈರಸ್ ಇರುತ್ತದೆ. ಈ ಕಾಯಿಲೆಗೆ ತುತ್ತಾದ ಪ್ರಾಣಿಯು ಮನುಷ್ಯನನ್ನು ಕಚ್ಚಿದಾಗ, ವೈರಸ್ ಲಾಲಾರಸದ ಮೂಲಕ ಮನುಷ್ಯನ ರಕ್ತವನ್ನು ಪ್ರವೇಶಿಸುತ್ತದೆ. ರೋಗಲಕ್ಷಣಗಳು ಸಾಮಾನ್ಯವಾಗಿ ಒಂದರಿಂದ ಮೂರು ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಸಮಯದಲ್ಲಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಮತ್ತು ಸರಿಯಾದ ಚುಚ್ಚುಮದ್ದನ್ನು ನೀಡದಿದ್ದರೆ ಸಾವಿನ ಅಪಾಯವಿದೆ. ಇನ್ನು ನಾಯಿ, ಬೆಕ್ಕು ಮತ್ತು ಮಂಗಗಳ ಕಡಿತದಿಂದ ರೇಬೀಸ್ ರೋಗ ಹರಡುತ್ತದೆ. ವಾಸ್ತವವಾಗಿ, ಇವುಗಳಲ್ಲಿ ಯಾವುದಾದರೂ ಪ್ರಾಣಿಗಳಿಗೆ ರೇಬೀಸ್ ಕಾಯಿಲೆ ಇದ್ದರೆ, ಅದು ಮನುಷ್ಯನನ್ನು ಕಚ್ಚಿದರೆ ಅದು ಆ ಮನುಷ್ಯನಿಗೂ ಹರಡುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಸೋಂಕಿತ ಪ್ರಾಣಿ ಕಚ್ಚಿದರೆ ಮೊದಲು ಏನು ಮಾಡಬೇಕು?

ನಾಯಿ, ಬೆಕ್ಕು ಅಥವಾ ಕೋತಿ ಕಚ್ಚಿದರೆ ಮೊದಲು ಆ ಪ್ರದೇಶವನ್ನು ಚೆನ್ನಾಗಿ ತೊಳೆದುಕೊಳ್ಳಿ. ಗಾಯ ತುಂಬಾ ಆಳವಾಗಿದ್ದರೆ, ಚೆನ್ನಾಗಿ ಆ ಜಾಗವನ್ನು ಸ್ವಚ್ಛ ಮಾಡಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಸರಿಯಾದ ಲಸಿಕೆ ತೆಗೆದುಕೊಳ್ಳಿ. ಯಾವುದೇ ಪ್ರಾಣಿ ಕಚ್ಚಿದ 24 ಗಂಟೆಗಳ ಒಳಗೆ ನೀವು ಲಸಿಕೆ ತೆಗೆದುಕೊಳ್ಳಬೇಕು.

ಇದನ್ನೂ ಓದಿ: ವಿವಾಹಿತ ಹೆಣ್ಣು ತನ್ನ ಗಂಡನ ಬಳಿ ಈ ವಿಚಾರಗಳ ಬಗ್ಗೆ ಬಾಯಿ ಬಿಡುವುದೇ ಇಲ್ವಂತೆ

ರೇಬೀಸ್ ರೋಗದ ಮುಖ್ಯ ಲಕ್ಷಣಗಳೇನು?

ರೇಬಿಸ್ ರೋಗದ ಮುಖ್ಯ ಲಕ್ಷಣಗಳೆಂದರೆ ನೋವು, ಆಯಾಸ, ತಲೆನೋವು, ಜ್ವರ, ಸ್ನಾಯು ಬಿಗಿತ, ಕಿರಿಕಿರಿ, ಆಕ್ರಮಣಕಾರಿ ನಡವಳಿಕೆ, ವಿಚಿತ್ರ ಚಟುವಟಿಕೆಗಳು, ಪಾರ್ಶ್ವವಾಯು, ಬಾಯಿಯಲ್ಲಿ ನೀರು ಬರುವುದು, ಪ್ರಕಾಶಮಾನವಾದ ಬೆಳಕು ಅಥವಾ ಶಬ್ದಕ್ಕೆ ಕಿರಿಕಿರಿಯಾಗುವುದು, ಮಾತನಾಡಲು ತೊಂದರೆಯಾಗುವುದು.

ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಪ್ರಾಣಿಗಳನ್ನು ಸಾಕಿದ್ದರೆ, ಆ ಪ್ರಾಣಿಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕುವುದು ಬಹಳ ಮುಖ್ಯ. ಇದರಿಂದ ಅದು ಯಾರನ್ನಾದರೂ ಪರಚಿದರೂ ಅಥವಾ ಕಚ್ಚಿದರೂ ಮನೆಯಲ್ಲಿ ವಾಸಿಸುವವರಿಗೆ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ