
ಜಾಗತಿಕ ತಾಪಮಾನದಂತ ಸಮಸ್ಯೆಗಳು ದೊಡ್ಡ ಬೆದರಿಕೆಯಾಗಿ ನಿಂತಿರುವ ಕಾಲದಲ್ಲಿ ನಾವು ನಾವು ವಾಸಿಸುತ್ತಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ಪವನ ಶಕ್ತಿಯಂತಹ (Wind) ಸಾಂಪ್ರದಾಯಿಕವಲ್ಲದ ಶಕ್ತಿಯ ಪರಿಣಾಮಕಾರಿಯಾಗಿ ಬಳಸುವುದು ಮುಖ್ಯವಾಗುತ್ತದೆ. ಪವನ ಶಕ್ತಿಯು ಶುದ್ಧ, ನವೀಕರಿಸಬಹುದಾದ ಮತ್ತು ಹೇರಳವಾದ ಶಕ್ತಿಯ ಮೂಲವಾಗಿದ್ದು, ಇದರ ಸರಿಯಾದ ಬಳಕೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪವನ ಶಕ್ತಿಯ ಮಹತ್ವದ ಬಗ್ಗೆ ಹಾಗೂ ಗಾಳಿಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್ 14 ರಂದು ವಿಶ್ವ ಗಾಳಿ (World Wind Day 2025) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ವಿಶ್ವ ಗಾಳಿ ದಿನದ ಇತಿಹಾಸ:
ಯುರೋಪಿಯನ್ ವಿಂಡ್ ಎನರ್ಜಿ ಅಸೋಸಿಯೇಷನ್ (EWEA) 2007 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಿತು. ನಂತರ, 2009 ರಲ್ಲಿ ಈ ಸಂಘಟನೆ ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ (GWEC) ಸಹಭಾಗಿತ್ವದಲ್ಲಿ ಈ ದಿನವನ್ನು ವಿವಿಧ ಕಾರ್ಯಕ್ರಮಗಳ ಜೊತೆಗೆ ಜಾಗತಿಕವಾಗಿ ಆಚರಿಸಲು ಪ್ರಾರಂಭಿಸಿತು. ಎರಡೂ ಸಂಸ್ಥೆಗಳು ಈ ದಿನದಂದು ಶುದ್ಧ ಗಾಳಿಯ ಮಹತ್ವದ ಬಗ್ಗೆ ಮತ್ತು ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಜನರಿಗೆ ಅರಿವು ಮೂಡಿಸಲಾಗುತ್ತದೆ.
ಇದನ್ನೂ ಓದಿ: ವಿಶ್ವ ಸಾಗರ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸವನ್ನು ತಿಳಿಯಿರಿ
ವಿಶ್ವ ಗಾಳಿ ದಿನದ ಮಹತ್ವ:
ಜಾಗತಿಕ ತಾಪಮಾನ ಏರಿಕೆಯ ಬೆದರಿಕೆಯನ್ನು ಎದುರಿಸುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ವಾಹನಗಳ ದಟ್ಟನೆ, ಇಂಗಾಲದ ಹೊರ ಸೂಸುವಿಕೆ ಮತ್ತು ಹಸಿರು ಮನೆ ಪರಿಣಾಮಗಳಿಂದ ಆರೋಗ್ಯವು ಹಾಳಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪವನ ಶಕ್ತಿಯ ರೂಪಗಳನ್ನು ಸರಿಯಾದ ರೀತಿಯಲ್ಲಿ ಬಳಸುವುದು ಮುಖ್ಯವಾಗಿದೆ.
ಪವನ ಶಕ್ತಿಯು ಶುದ್ಧ, ನವೀಕರಿಸಬಹುದಾದ ಮತ್ತು ಹೇರಳವಾದ ಶಕ್ತಿಯ ಮೂಲವಾಗಿದ್ದು, ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗೆ ಗಾಳಿಯನ್ನು ಕಲುಷಿತಗೊಳ್ಳದಂತೆ ಹೇಗೆ ಬಳಸಬೇಕು ಎಂಬ ಬಗ್ಗೆ ಹಾಗೂ ಪವನ ಶಕ್ತಿಯ ಮಹತ್ವದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ