AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿರುವ ಇಲಿಗಳಿಂದ ಹಂಟಾವೈರಸ್ ಬರುತ್ತದೆಯೇ? ಈ ಲಕ್ಷಣಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ

ಹಂಟಾವೈರಸ್ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಈ ವೈರಸ್ ಸೋಂಕಿತ ಇಲಿಗಳಿಂದ ಮನುಷ್ಯರಿಗೆ ಹರಡುತ್ತದೆ ಎಂಬುದು ತಿಳಿರಬಹುದು. ನಮ್ಮ ಮನೆಗಳ ಸುತ್ತಮುತ್ತ ಇಲಿಗಳು ಇರುವುದರಿಂದ ಇವು ಕೂಡ ಈ ವೈರಸ್‌ನ ಅಪಾಯವನ್ನು ಹೆಚ್ಚಿಸಬಹುದೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳುವುದು ಬಹಳ ಒಳ್ಳೆಯದು. ಏಕೆಂದರೆ ಈ ಬಗ್ಗೆ ತಿಳಿದುಕೊಂಡಿದ್ದಾಗ ಅವುಗಳನ್ನು ತಡೆಗಟ್ಟುವುದು ಬಹಳ ಸುಲಭವಾಗುತ್ತದೆ. ಹಾಗಾಗಿ ಈ ಆರೋಗ್ಯ ಸಮಸ್ಯೆ ಕಂಡುಬರುವ ಮೊದಲು ಕಂಡುಬರುವ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳಿ.

ಮನೆಯಲ್ಲಿರುವ ಇಲಿಗಳಿಂದ ಹಂಟಾವೈರಸ್ ಬರುತ್ತದೆಯೇ? ಈ ಲಕ್ಷಣಕಂಡುಬಂದರೆ ನಿರ್ಲಕ್ಷ್ಯ ಮಾಡಬೇಡಿ
HantavirusImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 19, 2026 | 7:31 PM

Share

ಪ್ರಪಂಚದ ಹಲವೆಡೆ ಹಂಟಾವೈರಸ್ (Hantavirus) ಬಗ್ಗೆ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಭಯವೂ ಹೆಚ್ಚಾಗಿದೆ. ಸಾಮಾನ್ಯವಾಗಿ ಈ ವೈರಸ್ ಸೋಂಕಿತ ಇಲಿಗಳ ಮಲ, ಮೂತ್ರ ಮತ್ತು ಲಾಲಾರಸದ ಮೂಲಕ ಮಾನವರಿಗೆ ಹರಡಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಮನೆಗಳಲ್ಲಿ ಇಲಿಗಳಿರುವುದು ಸಾಮಾನ್ಯವಾದರೂ, ಇದರಿಂದಲೇ ವೈರಸ್ ಹರಡುತ್ತದೆ ಎಂಬುದಲ್ಲ. ಆದರೆ ಸ್ವಚ್ಛತೆಯ ಕೊರತೆ ಮತ್ತು ಇಲಿಗಳ ಹೆಚ್ಚಳ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ವೈದ್ಯಕೀಯವಾಗಿ “ಹಂಟಾವೈರಸ್ ಪಲ್ಮನರಿ ಸಿಂಡ್ರೋಮ್” ಎಂದು ಕರೆಯಲಾಗುವ ಈ ಸೋಂಕು ಮುಖ್ಯವಾಗಿ ಸೋಂಕಿತ ಇಲಿಗಳ ಸಂಪರ್ಕದಿಂದ ಹರಡುತ್ತದೆ. ಇಲಿಗಳ ಮಲ ಅಥವಾ ಮೂತ್ರ ಒಣಗಿ ಗಾಳಿಯಲ್ಲಿ ಮಿಶ್ರಣವಾದಾಗ, ಅದನ್ನು ಉಸಿರಾಟದ ಮೂಲಕ ಒಳಗೆಳೆದರೆ ಸೋಂಕಿನ ಅಪಾಯ ಉಂಟಾಗಬಹುದು. ವಿಶೇಷವಾಗಿ ದೀರ್ಘಕಾಲ ಮುಚ್ಚಿಟ್ಟ ಕೊಠಡಿಗಳು, ಗೋದಾಮುಗಳು ಮತ್ತು ಕಸದ ಪ್ರದೇಶಗಳಲ್ಲಿ ಈ ಅಪಾಯ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.

ಯಾವ ಸೂಚನೆಗಳನ್ನು ನಿರ್ಲಕ್ಷ್ಯ ಮಾಡಬಾರದು?

ಮನೆಯಲ್ಲಿ ವಿಚಿತ್ರ ದುರ್ವಾಸನೆ ಬರುತ್ತಿದ್ದರೆ, ವಸ್ತುಗಳು ಇಲಿಗಳಿಂದ ಕಚ್ಚಲ್ಪಟ್ಟಿರುವ ಗುರುತು ಕಂಡುಬಂದರೆ ಅಥವಾ ಇಲಿಗಳ ಸಂಖ್ಯೆ ಹೆಚ್ಚಾಗಿದ್ದರೆ ಎಚ್ಚರಿಕೆಯಿಂದ ಇರಬೇಕು. ದೀರ್ಘಕಾಲ ಮುಚ್ಚಿಟ್ಟಿದ್ದ ಕೊಠಡಿಗಳನ್ನು ತೆರೆಯುವಾಗ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ. ಅಂಥ ಸ್ಥಳಗಳಲ್ಲಿ ವೈರಸ್ ಕಣಗಳು ಗಾಳಿಯಲ್ಲಿ ಹರಡುವ ಸಾಧ್ಯತೆ ಇರುತ್ತದೆ. ಕುಟುಂಬದ ಯಾರಿಗಾದರೂ ಏಕಾಏಕಿ ಜ್ವರ, ದೇಹ ನೋವು, ದೌರ್ಬಲ್ಯ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ

ಭಾರತದಲ್ಲಿ ಹ್ಯಾಂಟಾವೈರಸ್ ಅಪಾಯ ಇದೆಯೇ?

ಸಾಂಕ್ರಾಮಿಕ ರೋಗ ತಜ್ಞ ಡಾ. ಜುಗಲ್ ಕಿಶೋರ್ ಅವರು ಹೇಳುವ ಪ್ರಕಾರ, ಭಾರತದಾದ್ಯಂತ ಮನೆಗಳಲ್ಲಿ ಇಲಿಗಳು ಸಾಮಾನ್ಯವಾಗಿದ್ದರೂ ಹ್ಯಾಂಟಾವೈರಸ್ ಹರಡುವ ಸಾಧ್ಯತೆ ಈಗಾಗಲೇ ಕಂಡುಬಂದಿಲ್ಲ. ದೇಶದಲ್ಲಿ ಈ ವೈರಸ್‌ನ ಯಾವುದೇ ಪ್ರಕರಣ ದಾಖಲಾಗಿಲ್ಲ. ಅಲ್ಲದೆ ಪ್ರತಿಯೊಂದು ಇಲಿಯಲ್ಲೂ ಈ ವೈರಸ್ ಇರುವುದಿಲ್ಲ. ಲಕ್ಷಾಂತರ ಇಲಿಗಳಲ್ಲಿ ಕೆಲವೇ ಕೆಲವು ಸೋಂಕಿತವಾಗಿರಬಹುದು. ಆದ್ದರಿಂದ ಅನಾವಶ್ಯಕ ಭಯ ಬೇಡ, ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದು ಅವರು ಹೇಳಿದ್ದಾರೆ.

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಮುಖ್ಯ. ಆಹಾರ ಪದಾರ್ಥಗಳನ್ನು ಮುಚ್ಚಿ ಇಡಿ, ಕಸವನ್ನು ಸಮಯಕ್ಕೆ ತೆರವುಗೊಳಿಸಿ ಹಾಗೂ ಇಲಿಗಳ ಸಂಚಾರ ಕಂಡುಬಂದರೆ ತಕ್ಷಣ ನಿಯಂತ್ರಣ ಕ್ರಮ ಕೈಗೊಳ್ಳಿ. ಮುಚ್ಚಿದ ಕೊಠಡಿಗಳನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಮತ್ತು ಗ್ಲೌಸ್ ಧರಿಸುವುದು ಸುರಕ್ಷಿತ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಯತ್ನಾಳ್​​ ಹೇಳಿಕೆ ಬೆಂಬಲಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ!
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಏಕಾಏಕಿ ಕಳಚಿ ಬಿತ್ತು ವೇಗವಾಗಿ ಚಲಿಸುತ್ತಿದ್ದ ಬಸ್ಸಿನ ಟೈರ್
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಇಡೀ ವಿಶ್ವಕ್ಕೆ ಇಂಟರ್ನೆಟ್ ಆಘಾತ ನೀಡುತ್ತಾ ಇರಾನ್?
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ
ಗಿನ್ನಿಸ್​​ ದಾಖಲೆ ಬರೆದ ತುಮಕೂರು: ಪ್ರಮಾಣಪತ್ರ ಸ್ವೀಕರಿಸಿದ ಸಿದ್ದರಾಮಯ್ಯ