AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ

ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಹಂಟಾವೈರಸ್ ಅಪಾಯ ಹೆಚ್ಚುತ್ತಿದೆ. ಕ್ರೂಸ್ ಹಡಗಿನಲ್ಲಿ ಈ ವೈರಸ್ ಹರಡಿತ್ತು. ಅಂದಿನಿಂದ, ಜನರು ಇದು ಹೊಸ ವೈರಸ್ ಎಂದು ಭಾವಿಸುತ್ತಿದ್ದಾರೆ, ಆದರೆ ಇದು ಹೊಸ ರೋಗವಲ್ಲ. ಈ ವೈರಸ್‌ನ ಹಲವಾರು ಪ್ರಕರಣಗಳು ಈ ಹಿಂದೆಯೂ ಕಂಡುಬಂದಿತ್ತು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಹಾಗಾದರೆ ಅದು ಯಾವಾಗ, ಎಲ್ಲಿ ಕಂಡುಬಂದಿತ್ತು? ಎಷ್ಟು ಜನರಿಗೆ ಅಪಾಯ ಉಂಟುಮಾಡಿತ್ತು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಂಟಾವೈರಸ್ ಈಗ ಕಂಡುಬಂದಿದ್ದಲ್ಲ; ಆರೋಗ್ಯ ತಜ್ಞರು ನೀಡಿರುವ ಮಾಹಿತಿಯಲ್ಲಿದೆ ಆತಂಕಕಾರಿ ಅಂಶ
HantavirusImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 13, 2026 | 6:41 PM

Share

ಇತ್ತೀಚಿನ ದಿನಗಳಲ್ಲಿ ಹಂಟಾವೈರಸ್ (Hantavirus) ಮತ್ತೆ ಸುದ್ದಿಯಲ್ಲಿದೆ. ವಿಶೇಷವಾಗಿ ಕ್ರೂಸ್ ಶಿಪ್‌ನಲ್ಲಿ ಈ ವೈರಸ್‌ ಸೋಂಕು ಕಾಣಿಸಿಕೊಂಡ ನಂತರ ಹಲವು ದೇಶಗಳಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ಹಂಟಾವೈರಸ್ ಹೊಸ ವೈರಸ್ ಅಲ್ಲ. ಇದಕ್ಕೂ ಮೊದಲು ಕೂಡ ಅನೇಕ ದೇಶಗಳಲ್ಲಿ ಇದರ ಪ್ರಕರಣಗಳು ದಾಖಲಾಗಿವೆ. ಹೌದು, ಅಮೆರಿಕದ ಸಿಡಿಸಿ (CDC) ವರದಿ ಪ್ರಕಾರ, 1993ರಿಂದ 2023ರ ಅಂತ್ಯದವರೆಗೆ ಅಮೆರಿಕದಲ್ಲಿ ಸುಮಾರು 890 ಲ್ಯಾಬ್‌ ನಲ್ಲಿ ದೃಢಪಟ್ಟ ಹಂಟಾವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ತಜ್ಞರ ಪ್ರಕಾರ, ಈ ವೈರಸ್ ಅಪಾಯಕಾರಿ ಸ್ವರೂಪ ಹೊಂದಿದ್ದು, ಸೋಂಕಿತರಲ್ಲಿ ಗಂಭೀರ ಶ್ವಾಸಕೋಶ ಸಮಸ್ಯೆ ಉಂಟುಮಾಡುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಈ ವೈರಸ್‌ನಿಂದ ಸೋಂಕಿತರಾದವರಲ್ಲಿ ಸುಮಾರು 35 ಶೇಕಡಾ ಮಂದಿ ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ಆರೋಗ್ಯ ಸಂಸ್ಥೆಗಳು ಈ ವೈರಸ್‌ನ್ನು ಗಂಭೀರವಾಗಿ ಪರಿಗಣಿಸುತ್ತಿವೆ.

ಹಂಟಾವೈರಸ್ ಎಂದರೇನು?

ಹಂಟಾವೈರಸ್ ಮುಖ್ಯವಾಗಿ ಇಲಿಗಳಿಂದ ಕಂಡುಬರುವ ವೈರಸ್ ಆಗಿದೆ. ಇವುಗಳ ಮೂತ್ರ, ಮಲ ಅಥವಾ ಲಾಲಾರಸದ ಸಂಪರ್ಕದಿಂದ ವೈರಸ್ ಹರಡಬಹುದು. ಸೋಂಕಿತ ಸ್ಥಳಗಳಲ್ಲಿ ಉಂಟಾಗುವ ಧೂಳಿನ ಕಣಗಳ ಮೂಲಕವೂ ವೈರಸ್ ಗಾಳಿಯಲ್ಲಿ ಹರಡುವ ಸಾಧ್ಯತೆ ಇದೆ. ತಜ್ಞರ ಪ್ರಕಾರ, ಸಾಮಾನ್ಯ ಹಂಟಾವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುವುದಿಲ್ಲ. ಆದರೆ “ಆಂಡೀಸ್ ಸ್ಟ್ರೇನ್” ಎನ್ನುವ ಒಂದು ವಿಶೇಷ ರೂಪದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುವುದರಿಂದ ಜಾಗತಿಕ ಆರೋಗ್ಯ ಸಂಸ್ಥೆಗಳು ಹೆಚ್ಚಿನ ನಿಗಾವಹಿಸುತ್ತಿವೆ.

ಯಾವ ಲಕ್ಷಣಗಳು ಕಾಣಿಸಬಹುದು?

  • ಜ್ವರ ಮತ್ತು ನಡುಕ
  • ತೀವ್ರ ತಲೆನೋವು
  • ದೇಹ ಮತ್ತು ಸ್ನಾಯು ನೋವು
  • ದೌರ್ಬಲ್ಯ ಮತ್ತು ದಣಿವು
  • ಉಸಿರಾಟದ ತೊಂದರೆ

ಇದನ್ನೂ ಓದಿ: ಹಂಟಾವೈರಸ್ ವೈರಸ್ ಅಪಾಯ: ಭಾರತದಲ್ಲಿ ರೋಗ ಹರಡುವುದನ್ನು ತಡೆಯಲು 165 ಲ್ಯಾಬ್‌ಗಳು ಸಜ್ಜು

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತೆ?

ಆರೋಗ್ಯ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ, ಪುರುಷರಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬಂದಿತ್ತು. ಈಗಾಗಲೇ ಮಧುಮೇಹ, ಹೃದಯ ಸಮಸ್ಯೆ ಅಥವಾ ಕಡಿಮೆ ರೋಗನಿರೋಧಕ ಶಕ್ತಿ ಇರುವವರಲ್ಲಿ ಸೋಂಕು ಗಂಭೀರವಾಗುವ ಸಾಧ್ಯತೆ ಹೆಚ್ಚಿದೆ.

ಹೇಗೆ ಮುನ್ನೆಚ್ಚರಿಕೆ ವಹಿಸಬೇಕು?

  • ಮನೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚದಂತೆ ನೋಡಿಕೊಳ್ಳಿ
  • ಇಲಿ ಮಲ-ಮೂತ್ರವನ್ನು ಸ್ವಚ್ಛಗೊಳಿಸುವಾಗ ಮಾಸ್ಕ್ ಮತ್ತು ಗ್ಲೌಸ್ ಧರಿಸಿ
  • ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿ
  • ಹಾರ ಪದಾರ್ಥಗಳನ್ನು ಮುಚ್ಚಿಟ್ಟುಕೊಳ್ಳಿ
  • ಮುಚ್ಚಿದ ಕೊಠಡಿಗಳನ್ನು ಸ್ವಚ್ಛಗೊಳಿಸುವಾಗ ಎಚ್ಚರಿಕೆ ವಹಿಸಿ

ಆರೋಗ್ಯ ತಜ್ಞರ ಪ್ರಕಾರ, ಹಂಟಾವೈರಸ್ ಬಗ್ಗೆ ಆತಂಕಕ್ಕಿಂತ ಜಾಗ್ರತೆ ಮುಖ್ಯ. ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us