World’s Oldest Person: ವಿಶ್ವದ ಅತ್ಯಂತ ಹಿರಿಯ ಮಹಿಳೆ, ಈಕೆ ಎಂದಿಗೂ ಆಸ್ಪತ್ರೆಗೆ ಹೋಗಿಲ್ಲ, ಇವರ ಜೀವನಶೈಲಿ ಗುಟ್ಟು ಏನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 20, 2023 | 1:02 PM

ಯುನೈಟೆಡ್ ಸ್ಟೆಟ್‌ನಲ್ಲಿ ಜನಿಸಿದ 115 ವರ್ಷ ವಯಸ್ಸಿನ ಸ್ಪಾನಿಷ್ ಅಜ್ಜಿಯೊಬ್ಬರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗುವ ಸಾಧ್ಯತೆ ಇದೆ ಎಂದು ಗಿನ್ನೆಸ್ ವಿಶ್ವದಾಖಲೆಗಳ ಸಲಹೆಗಾರರೊಬ್ಬರು ಬುಧವಾರ ಹೇಳಿದ್ದಾರೆ. 118 ವರ್ಷ ವಯಸ್ಸಿನ ಫ್ರೆಂಚ್ ಸನ್ಯಾನಿಸಿ ಲುಸಿಲ್ ರಾಂಡನ್ ನಿಧನರಾದ ನಂತರ ಮರಿಯಾ ಬ್ರನ್ಯಾಸ್ ಮೊರೆರಾ ಇವರು ಅತೀ ಹೆಚ್ಚು ವಯಸ್ಸಿನ ಹಿರಿಯ ವ್ಯಕ್ತಿಯಾಗಿದ್ದಾರೆ ಎಂದು ಜೆರೊಂಟಾಲಜಿಯ ಹಿರಿಯ ಸಲಹೆಗಾರ ರಾಬರ್ಟ್ ಡಿ ಯಂಗ್ ಹೇಳಿದ್ದಾರೆ.

Worlds Oldest Person: ವಿಶ್ವದ ಅತ್ಯಂತ ಹಿರಿಯ ಮಹಿಳೆ, ಈಕೆ ಎಂದಿಗೂ ಆಸ್ಪತ್ರೆಗೆ ಹೋಗಿಲ್ಲ, ಇವರ ಜೀವನಶೈಲಿ ಗುಟ್ಟು ಏನು?
Follow us on

ಬಾರ್ಸಿಲೋನಾ: ಯುನೈಟೆಡ್ ಸ್ಟೆಟ್‌ನಲ್ಲಿ ಜನಿಸಿದ 115 ವರ್ಷ ವಯಸ್ಸಿನ ಸ್ಪಾನಿಷ್ ಅಜ್ಜಿಯೊಬ್ಬರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯಾಗುವ ಸಾಧ್ಯತೆ ಇದೆ ಎಂದು ಗಿನ್ನೆಸ್ ವಿಶ್ವದಾಖಲೆಗಳ ಸಲಹೆಗಾರರೊಬ್ಬರು ಬುಧವಾರ ಹೇಳಿದ್ದಾರೆ. 118 ವರ್ಷ ವಯಸ್ಸಿನ ಫ್ರೆಂಚ್ ಸನ್ಯಾನಿಸಿ ಲುಸಿಲ್ ರಾಂಡನ್ ನಿಧನರಾದ ನಂತರ ಮರಿಯಾ ಬ್ರನ್ಯಾಸ್ ಮೊರೆರಾ ಇವರು ಅತೀ ಹೆಚ್ಚು ವಯಸ್ಸಿನ ಹಿರಿಯ ವ್ಯಕ್ತಿಯಾಗಿದ್ದಾರೆ ಎಂದು ಜೆರೊಂಟಾಲಜಿಯ ಹಿರಿಯ ಸಲಹೆಗಾರ ರಾಬರ್ಟ್ ಡಿ ಯಂಗ್ ಹೇಳಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಡಾಕ್ಯುಮೆಂಟ್ ಪರಿಶೀಲನೆಗಳನ್ನು ನಡೆಸಿದ ನಂತರ ಮೊರೆರಾ ಅವರ ಕುಟುಂಬವನ್ನು ಸಂದರ್ಶಿಸಿ ಆ ಬಳಿಕ ಅಧಿಕೃತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಜೆರೊಂಟಾಜಜಿ ರಿಸರ್ಚ್ ಗ್ರೂಪ್‌ನ ಸೂಪರ್ ಸೆಂಟೆನೇರಿಯನ್ ಸಂಶೋಧನಾ ಡೇಟಾಬೇಸ್‌ನ ನಿರ್ದೇಕಕರೂ ಆಗಿರುವ ಹೆಗಾರ ರಾಬರ್ಟ್ ಡಿ ಯಂಗ್ ಹೇಳಿದ್ದಾರೆ.

ಬ್ರನ್ಯಾಸ್ ಮೊರೆರಾ ಅವರ ಕಿರಿಯ ಮಗಳು 78 ವರ್ಷ ವಯಸ್ಸಿನ ರೋಸಾ ಮೊರೆಟ್ ತನ್ನ ತಾಯಿಯ ಧೀರ್ಘಾಯುಷ್ಯಕ್ಕೆ ‘ಜೆನೆಟಿಕ್ಸ್’ ಕಾರಣವೆಂದು ಹೇಳಿದ್ದಾರೆ. ಅವರು ಎಂದಿಗೂ ಆಸ್ಪತ್ರೆಗೆ ಹೋದವರಲ್ಲ. ಅವರ ಯಾವುದೇ ದೇಹದ ಮೂಳೆಗಳು ಮುರಿದಿಲ್ಲ, ಅವರು ಚೆನ್ನಾಗಿಯೇ ಇದ್ದಾರೆ, ಅವರಿಗೆ ಯಾವುದೇ ರೀತಿಯ ನೋವುಗಳಿಲ್ಲ ಎಂದು ರೋಸಾ ಮೊರೆಟ್ ಬುಧವಾರ ಪ್ರಾದೇಶಿಕ ಕ್ಯಾಟಲಾನ್ ದೂರದರ್ಶನಕ್ಕೆ ಮಾಹಿತಿ ನೀಡಿದರು.

ಇದನ್ನೂ ಓದಿ: ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಲು ಮಾಡಬೇಕಾದ ಐದು ಜೀವನಶೈಲಿ ಬದಲಾವಣೆಗಳು

ಬ್ರನ್ಯಾಸ್ ಮೊರೆರಾ ಮಾರ್ಚ್ 4, 1907ರಂದು ಸ್ಯಾನ್ ಫ್ರಾನ್ಸಿಕ್ಕೋದಲ್ಲಿ ಜನಿಸಿದರು. ನಂತರ ಇವರ ಕುಟುಂಬ ಮೆಕ್ಸಿಕೋದಿಂದ ಅಮೇರಿಕಾಕ್ಕೆ ಸ್ಥಳಾಂತರಗೊಂಡ ಸ್ವಲ್ಪ ಸಮಯದ ಬಳಿಕ, ವಿಶ್ವ ಸಮರವು ನಡೆಯುತ್ತಿರುವ ಕಾರಣ 1915ರಲ್ಲಿ ಸ್ಪೇನ್ ದೇಶಕ್ಕೆ ಸ್ಥಳಾಂತರಗೊಳ್ಳುತ್ತಾರೆ.

ಸ್ಪೇನ್‌ನಲ್ಲಿ ನೆಲೆಸಿದ ಬಳಿಕ 1932 ರಲ್ಲಿ ವೈದ್ಯರೊಬ್ಬರನ್ನು ಮೊರೆರಾ ವಿವಾಹವಾಗುತ್ತಾರೆ. ಸುಧೀರ್ಘ ನಾಲ್ಕು ದಶಕಗಳ ಕಾಲ ಸಂಸಾರ ನಡೆಸಿದ ಇವರ ಪತಿ ತನ್ನ 75ನೇ ವಯಸ್ಸಿಗೆ ನಿಧನ ಹೊಂದುತ್ತಾರೆ. ಇವರಿಗೆ ಮೂವರು ಮಕ್ಕಳು ಹಾಗೂ 11 ಮೊಮ್ಮಕ್ಕಳಿದ್ದಾರೆ.

ತನ್ನ 113ನೇ ಜನ್ಮದಿನವನ್ನು ಆಚರಿಸಿದ ಕೆಲವೇ ದಿನಗಳ ಬಳಿಕ ಬ್ರಾನ್ಯಾಸ್ ಮೊರೆರಾ ಅವರು ಕೋವಿಡ್-19 ಸೋಂಕಿಗೆ ತುತ್ತಾಗುತ್ತಾರೆ. ಓಲೇಟ್‌ನಲ್ಲಿರುವ ಅವರ ಮನೆಯಲ್ಲಿಯೇ ಕೋವಿಡ್‌ಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗುತ್ತಾರೆ. ಇಂದಿಗೂ ಆಸ್ಪತ್ರೆಗೆ ದಾಖಲಾಗದೆ ಆರೋಗ್ಯವಂತರಾಗಿರುವ ಮರಿಯಾ ಬ್ರನ್ಯಾಸ್ ಮೊರೆರಾ ಇವರು ವಿಶ್ವದ ಹಿರಿಯ ವಯಸ್ಸಿನ ವ್ಯಕ್ತಿಯಾಗಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 1:02 pm, Fri, 20 January 23