Valentine’s Day 2023: ಮಾಜಿ ಪ್ರಿಯಕರನ ಮೇಲೆ ಸಿಟ್ಟಿದೆಯೇ? ಜಿರಳೆಗೆ ಹೆಸರಿಡುವ ಮೂಲಕ ತೀರಿಸಿಕೊಳ್ಳಿ

ಕೆನಡಾದ ಮೃಗಾಲಯವೊಂದು ಪ್ರೇಮಿಗಳ ದಿನದಂದು ವಿಶೇಷ ಅಭಿಯಾನವೊಂದನ್ನು ಪ್ರಾರಂಭಿಸಿದೆ. ನಿಮ್ಮ ಮಾಜಿ ಪ್ರಿಯಕರರ ಹೆಸರನ್ನು ನೀವು ಜಿರಳೆಗೆ ಹೆಸರಿಡಬಹುದು. ಆನ್‌ಲೈನ್ ಮೂಲಕ ನೀವೂ ಭಾಗಿಯಾಗಬಹುದು.

Valentine's Day 2023: ಮಾಜಿ ಪ್ರಿಯಕರನ ಮೇಲೆ ಸಿಟ್ಟಿದೆಯೇ? ಜಿರಳೆಗೆ ಹೆಸರಿಡುವ ಮೂಲಕ ತೀರಿಸಿಕೊಳ್ಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Feb 06, 2023 | 6:15 PM

ಪ್ರತಿಯೊಬ್ಬರ ಜೀವನದಲ್ಲೂ ಮಾಜಿ ಪ್ರಿಯತಮ ಅಥವಾ ಪೇಯಸಿ, ಕಿರಿಕಿರಿ ಉಂಟು ಮಾಡುವ ಬಾಸ್ ಆಗಿರಲಿ, ಅಥವಾ ನಿಮ್ಮ ಜೀವನದಲ್ಲಿ ಮೂಗು ತುರಿಸುವ ಸಂಬಂಧಿಗಳು ಇದ್ದೇ ಇರುತ್ತಾರೆ. ಅಂತಹವರನ್ನು ನೀವು ಖಂಡಿತವಾಗಿಯೂ ದ್ವೇಷಿಸುತ್ತೀರಿ. ಈಗ ಕೆನಡಾದಲ್ಲಿರುವ ಒಂದು ಮೃಗಾಲಯವು ಜನರಿಗೆ ಮಗುವಿನಂತೆ ಕ್ಷುಲ್ಲಕವಾಗಿರಲು ಮತ್ತು ಅವರ ಭಾವನೆಗಳನ್ನು ಹೊರಹಾಕಲು ಅವಕಾಶವೊಂದನ್ನು ನೀಡುತ್ತಿದೆ. ಇನ್ನೇನು ಪ್ರೇಮಿಗಳ ದಿನ ಬರುತ್ತಿದೆ ಇದರ ಸಲುವಾಗಿ ಟೊರೊಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ‘ಎ-ರೋಚ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ಇದು ಜನರಿಗೆ ಯಾರೊಬ್ಬರ ಗೌರವಾರ್ಥದ ಸಲುವಾಗಿ ಜಿರಳೆಗೆ ಹೆಸರಿಡುವ ಅವಕಾಶವನ್ನು ನೀಡುತ್ತಿದೆ.

ಮೃಗಾಲಯವು ರೂ.1507 ದೇಣಿಗೆಗಾಗಿ ಮೃಗಾಲಯವು ನಿಮ್ಮನ್ನು ದ್ವೇಷಿಸುವವರ ಹೆಸರನ್ನು ಜಿರಳೆಗೆ ಹೆಸರಿಸಲು ಅವಕಾಶವೊಂದನ್ನು ನೀಡುತ್ತಿದೆ. ಕಂಪೆನಿಯು ಟ್ವೀಟ್‌ನಲ್ಲಿ ಈ ಅಭಿಯಾನವನ್ನು ಘೋಷಿಸಿ ಮತ್ತು ‘ರೋಸಸ್ ಆರ್ ರೆಡ್, ವೈಲೆಟ್ಸ್ ಆರ್ ಬ್ಲೂ’ ನಿಮ್ಮ ಜೀವನದಲ್ಲಿ ನಿಮ್ಮನ್ನು ಯಾರಾದರೂ ಕಾಡುತ್ತಿದ್ದಾರೆಯೇ? ಈ ಪ್ರೇಮಿಗಳ ದಿನದಂದು ಅಂತಹವರ ಸಲುವಾಗಿ ಜಿರಳೆಗೆ ಅವರ ಹೆಸರನ್ನು ಇಡುವ ಮೂಲಕ ಅವರಿಗೆ ರೋಮಾಂಚನವನ್ನು ನೀಡಿ ಎಂದು ಟ್ವೀಟ್‌ನಲ್ಲಿ ಬರೆದಿದೆ.

ನೀವೂ ಇದರಲ್ಲಿ ಭಾಗಿಯಾಗಬೇಕಾ?

ಜಿರಳೆಯನ್ನು ಹೆಸರಿಡುವುದನ್ನು ಆನ್‌ಲೈನ್ ಮುಖಾಂತರ ಮಾಡಲಾಗುತ್ತದೆ. ಆನ್‌ಲೈನ್‌ನಲ್ಲಿ ‘ಡೆಡಿಕೇಟ್ ಯುವರ್ ಡೊನೇಷನ್’ಎಂಬುದನ್ನು ಆಯ್ಕೆ ಮಾಡಿ ಅದರಲ್ಲಿ ‘ಇನ್ ಹಾನರ್ ಆಫ್’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ನೀವು ಯಾರ ಹೆಸರು ಬರೆಯಬೇಕೆಂದಿದೆಯೋ ಅವರ ಹೆಸರನ್ನು ಖಾಲಿ ಜಾಗದಲ್ಲಿ ಭಡ್ತಿ ಮಾಡಿ ನಂತರ ಪೋಸ್ಟ್ ಮಾಡಿ ನಂತರ ಅವರು ಜಿರಲೆಯ ಹೆಸರಿನ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡುತ್ತಾರೆ.

ಇದನ್ನೂ ಓದಿ: ಸ್ನೇಹವಾಗಿರಲಿ ಅಥವಾ ಪ್ರೀತಿಯಾಗಿರಲಿ ಯಾರನ್ನಾದರೂ ನಂಬುವ ಮುನ್ನ ಈ 5 ವಿಷಯಗಳು ನಿಮಗೆ ನೆನಪಿರಲಿ

ಇದಾಗಿಯೂ ಟೊರೊಂಟೊ ಮೃಗಾಲಯವು ಜಿರಳೆಗಳನ್ನು ಹೆಸರಿಸಲು ಕೆಲವೊಂದು ಮಿತಿಗಳನ್ನು ಹೇರಿದೆ. ದ್ವೇಷದ ಮಾತುಗಳು ಅಥವಾ ಅಶ್ಲೀಲತೆಯನ್ನು ಸಹಿಸುವುದಿಲ್ಲ ಎಂದು ಹೇಳಿದೆ. ಹೆಸರಿಸುವ ಅವಕಾಶಗಳು ನಿಮ್ಮ ಮಾಜಿ ಪ್ರಿಯತಮೆ, ಪ್ರಿಯಕರರಿಗೆ ಮಾತ್ರ ಸೀಮಿತವಾಗಿಲ್ಲ. ನಿಮ್ಮ ಬಾಸ್, ಮಾಜಿ ಸ್ನೇಹಿತರು, ಸಂಬಂಧಿಗಳು ಅಥವಾ ನಿಮ್ಮನ್ನು ದ್ವೇಷ ಮಾಡುವ ಯಾರಿಗಾದರೂ ನೀವು ಜಿರಳೆಯನ್ನು ಹೆಸರಿಸಬಹುದು ಎಂದು ಟೊರೆಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ದಾನಿ ಉಸ್ತುವಾರಿ ಮತ್ತು ಸಹಯೋಗ ಸಂಯೋಜಕ ಕೆಲ್ಸಿ ಗೊಡೆಲ್ ತಿಳಿಸಿದರು. ಮೃಗಾಲಯದ ಅಭಿಯಾನವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಕೆಲವರು ಅದನ್ನು ವಿನೋದಮಯವಾಗಿದೆ ಎಂದು ಹೇಳಿದರೆ, ಕೆಲವರು ಇದು ಸಂವೇದನಾಶೀಲವಲ್ಲ ಎಂದು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:10 pm, Thu, 19 January 23