Yoga for Stress : ಅತಿಯಾದ ಒತ್ತಡದಿಂದ ಬಳಲುತ್ತಿದ್ದೀರಾ? ಮನಸ್ಸು ರಿಲ್ಯಾಕ್ಸ್ ಆಗಲು ಈ ಯೋಗಾಸನಗಳು ಬೆಸ್ಟ್
ಈಗಿನ ಕಾಲದಲ್ಲಿ ಯಾರಿಗೂ ಸಮಯ ಅನ್ನೋದೇ ಇದೆ. ಕೆಲಸದ ಒತ್ತಡಗಳ ಮಧ್ಯೆ ನಿಮ್ಮ ಮನಸ್ಸು ಇಲ್ಲಸಲ್ಲದ್ದನ್ನು ಯೋಚಿಸಲು ಪ್ರಾರಂಭಿಸುತ್ತದೆ. ಅತಿಯಾಗಿ ಯೋಚನೆ ಮಾಡುವುದರಿಂದ ಆತಂಕ ಮತ್ತು ಒತ್ತಡಗಳು ಹೆಚ್ಚಾದಂತೆ ಮಾನಸಿಕ ಆರೋಗ್ಯ ಕೆಡುವುದಂತೂ ಖಂಡಿತ. ಹೀಗಾದಾಗ ಮನಸ್ಸನ್ನು ನಿಗ್ರಹಿಸಿಕೊಳ್ಳಲು ದಿನನಿತ್ಯವು ಈ ಯೋಗ ಭಂಗಿಗಳು ಮಾಡುವುದು ಆರೋಗ್ಯಕ್ಕೆ ಸಹಕಾರಿಯಾಗಿದೆ.
ಈಗಿನ ಬ್ಯುಸಿ ಮತ್ತು ಬದುಕಿನ ಜಂಜಾಟಗಳಿಂದ ಮಾನಸಿಕ ಒತ್ತಡ ಹಾಗೂ ದೈಹಿಕ ಒತ್ತಡದಿಂದ ಬಳಲುತ್ತಿರುವವರೇ ಹೆಚ್ಚು. ಆದರೆ ಕೆಲವೊಮ್ಮೆ ಇಲ್ಲಸಲ್ಲದ ವಿಷಯಗಳಿಗೆ ಅತಿಯಾಗಿ ಯೋಚನೆಯಿಂದ ಒತ್ತಡದ ಜೀವನ, ಖಿನ್ನತೆ, ನಿದ್ರಾಹೀನತೆ ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾದಾಗ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಎಲ್ಲಾ ಮಾನಸಿಕ ಸಮಸ್ಯೆಗೆ ಯೋಗಕ್ಕಿಂತ ಉತ್ತಮ ಮದ್ದಿಲ್ಲ.
ಒತ್ತಡ ನಿವಾರಿಸುವ ಯೋಗಾಸನಗಳು
- ಬಾಲಾಸನ: ಬಾಲಾಸನವು ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಈ ಯೋಗ ಭಂಗಿಯು ಪ್ರಯೋಜನಕಾರಿಯಾಗಿದೆ. ಒತ್ತಡ ಕಡಿಮೆ ಮಾಡಿ ದೇಹಕ್ಕೂ ವಿಶ್ರಾಂತಿಯನ್ನು ನೀಡುತ್ತದೆ.
- ಪ್ರಾಣಾಯಾಮ : ಪ್ರಾಣಾಯಾಮವು ಉಸಿರಾಟಕ್ಕೆ ಸಂಬಂಧಿಸಿದ ಯೋಗ ಭಂಗಿ ಇದಾಗಿದ್ದು, ಆತಂಕಕ್ಕೆ ಒಳಗಾಗಿರುವ ಮನಸ್ಸನ್ನು ಶಾಂತಗೊಳಿಸುತ್ತದೆ. ದೇಹ ಹಾಗೂ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ದಿನನಿತ್ಯ ಪ್ರಾಣಾಯಾಮ ಮಾಡುವುದರಿಂದ ಉತ್ತಮ ಮಾನಸಿಕ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.
- ಶವಾಸನ : ದಿನ ನಿತ್ಯ ಶವಾಸನ ಮಾಡುವುದರಿಂದ ಕೇಂದ್ರ ನರಮಂಡಲವನ್ನು ಶಾಂತಗೊಳಿಸಿ, ಒತ್ತಡದಿಂದ ಉಂಟಾಗುವ ತಲೆನೋವು, ಆಯಾಸವನ್ನು ನಿವಾರಿಸುತ್ತದೆ. ಹಾಗೂ ಜೀರ್ಣಕ್ರಿಯೆಯಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
- ಗರುಢಾಸನ : ಮನಸ್ಸನ್ನು ನಿಗ್ರಹಿಸಲು ಹಾಗೂ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ಈ ಆಸನವು ಸಹಕಾರಿಯಾಗಿದೆ. ಇದನ್ನು ಎಲ್ಲಾ ವಯಸ್ಸಿನವರೂ ಕೂಡ ಮಾಡಬಹುದಾಗಿದ್ದು ಒತ್ತಡವು ನಿವಾರಣೆಯಾಗುತ್ತದೆ.
- ನಟರಾಜಾಸನ : ಈ ಆಸನವು ಡ್ಯಾನ್ಸಿಂಗ್ ಪೋಸ್ ರೀತಿಯಿದ್ದು, ನಿಂತುಕೊಂಡೆ ಸುಲಭವಾಗಿ ಮಾಡಬಹುದಾಗಿದೆ. ಮಾನಸಿಕ ಖಿನ್ನತೆ ಹಾಗೂ ಆತಂಕವನ್ನು ಹೊಂದಿರುವವರು ದಿನನಿತ್ಯ ಮಾಡುವುದರಿಂದ ಈ ಸಮಸ್ಯೆಯು ದೂರವಾಗುತ್ತದೆ.
- ವಿಪರೀತಕರ್ಣಿ : ಈ ಆಸನವನ್ನು ಗೋಡೆಯ ಸಹಾಯದಿಂದಲೂ ಮಾಡಬಹುದು. ಈ ಯೋಗ ಭಂಗಿಯು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವುದರೊಂದಿಗೆ ಒತ್ತಡ ಹಾಗೂ ಆತಂಕವನ್ನು ನಿವಾರಿಸಲು ಸಹಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ