International Day of Sign Languages 2024 : ಕರ್ನಾಟಕದ ಈ ಹಳ್ಳಿಯಲ್ಲಿ ಆರು ತಲೆಮಾರಿನಿಂದ ಬಳಕೆಯಲ್ಲಿದೆ ಅಲಿಪುರ್ ಸಂಕೇತ ಭಾಷೆ

ಸಾಮಾನ್ಯವಾಗಿ ಸಂವಹನ ನಡೆಸಲು ಬೇಕಾಗುವುದೇ ಈ ಭಾಷೆ. ಆದರೆ ಶ್ರವಣ ದೋಷ ಇರುವವರು ಭಾಷೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ತಮ್ಮ ಭಾವನೆಯನ್ನು ವ್ಯಕ್ತಪಡಿಸುವುದಕ್ಕೆ ದೃಶ್ಯ ಸೂಚನೆಗಳನ್ನು ಕೈ ಸನ್ನೆಗಳು, ಸಂಕೇತಗಳು, ಮುಖದ ಅಭಿವ್ಯಕ್ತಿಗಳು ಮತ್ತು ದೇಹದ ಚಲನೆಯನ್ನೊಳಗೊಂಡ ಸಂಕೇತ ಭಾಷೆಗಳನ್ನು ಬಳಸಲಾಗುತ್ತದೆ. ಈ ಸಂಕೇತ ಭಾಷೆಯ ಅಭಿವೃದ್ಧಿ ಮತ್ತು ಸಂರಕ್ಷಣೆಯನ್ನು ಬೆಂಬಲಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನವನ್ನು ಸೆಪ್ಟೆಂಬರ್ 23 ರಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

International Day of Sign Languages 2024 : ಕರ್ನಾಟಕದ ಈ ಹಳ್ಳಿಯಲ್ಲಿ ಆರು ತಲೆಮಾರಿನಿಂದ ಬಳಕೆಯಲ್ಲಿದೆ ಅಲಿಪುರ್ ಸಂಕೇತ ಭಾಷೆ
ಸಂಕೇತ ಭಾಷೆಗಳ ದಿನ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 23, 2024 | 11:51 AM

ಸಾಮಾನ್ಯವಾಗಿ ಎಲ್ಲರೂ ಕೂಡ ಭಾಷೆಯ ಮೂಲಕ ತಮಗನಿಸಿದ್ದನ್ನು ಹೇಳುತ್ತಾರೆ. ಆದರೆ ಕಿವುಡುತನದ ಸಮಸ್ಯೆಯಿರುವವರಿಗೆ ಅದು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಸಂವಹನಕ್ಕಾಗಿ ಈ ಸಂಕೇತ ಭಾಷೆಯನ್ನು ಅವಲಂಬಿಸಿರುತ್ತಾರೆ. ಈ ಸಂಕೇತ ಭಾಷೆ ಕಲಿಯುವುದು ಅಂದುಕೊಂಡಷ್ಟು ಕಷ್ಟವಲ್ಲ. ಇದು ಸಂಪೂರ್ಣವಾಗಿ ವಿಭಿನ್ನ ರೀತಿಯ ಭಾಷೆಯಾಗಿದೆ, ಇದು ಆಲೋಚನೆಗಳು ಮತ್ತು ಭಾವನೆಗಳನ್ನು ವ್ಯಕ್ತಪಡಿಸಲು ದೃಶ್ಯ ಸಂಕೇತಗಳು ಮತ್ತು ದೇಹದ ಚಲನೆಯನ್ನು ಬಳಸಲಾಗುತ್ತದೆ. ಪ್ರತಿಯೊಂದು ದೇಶವು ತನ್ನದೇ ಆದ ಸಂಕೇತ ಭಾಷೆಯನ್ನು ಹೊಂದಿದೆ. ಇತರ ಭಾಷೆಗಳಂತೆ ಸಂಕೇತ ಭಾಷೆಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ. ಹೊಸ ಪದಗಳು ಮತ್ತು ಚಿಹ್ನೆಗಳು ಹೊಸ ಆಲೋಚನೆಗಳು ಮತ್ತು ತಂತ್ರಗಳೊಂದಿಗೆ ವಿಕಸನಗೊಳ್ಳುತ್ತವೆ. ಶ್ರವಣದೋಷವುಳ್ಳವರು ಹೆಚ್ಚೆಚ್ಚು ಈ ಭಾಷೆಯನ್ನು ಬಳಸಲು ಉತ್ತೇಜಿಸುವುದಕ್ಕಾಗಿ ಈ ದಿನವು ಮೀಸಲಾಗಿದೆ.

ಅಂತಾರಾಷ್ಟ್ರೀಯ ಸಂಕೇತ ಭಾಷೆಗಳ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆ

ಇಂಟನ್ರ್ಯಾಷನಲ್ ಡೇ ಆಫ್ ಸೈನ್ ಲ್ಯಾಂಗ್ವೇಜಸ್ ಅನ್ನು ಆಚರಿಸುವ ಬಗ್ಗೆ ವಿಶ್ವ ಕಿವಿ ಕೇಳದಿರುವವರ ಒಕ್ಕೂಟವು ಪ್ರಸ್ತಾಪಿಸಿತು. ಡಬ್ಲ್ಯೂ ಎಫ್ ಡಿ ಕಿವುಡತನ ಹೊಂದಿರುವ ಜನರ 135 ರಾಷ್ಟ್ರೀಯ ಸಂಘಗಳ ಒಕ್ಕೂಟವಾಗಿದೆ. ಫೆಡರೇಶನ್ ಪ್ರಪಂಚದಾದ್ಯಂತ ಸುಮಾರು 70 ಮಿಲಿಯನ್ ಕಿವುಡತನ ಹೊಂದಿರುವ ಜನರನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಕಿವಿ ಕೇಳದಿರುವವರ ಅಂತಾರಾಷ್ಟ್ರೀಯ ವಾರದ ಭಾಗವಾಗಿ 2018 ರಲ್ಲಿ ಮೊದಲ ಅಂತಾರಾಷ್ಟ್ರೀಯ ಸಂಕೇತ ಭಾಷೆಯ ದಿನವನ್ನು ಆಚರಿಸಲಾಯಿತು. ಈ ದಿನವನ್ನು ಸೆಪ್ಟೆಂಬರ್ 1958 ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು.

ಕಿವುಡ ಮತ್ತು ಶ್ರವಣದೋಷವುಳ್ಳ ಜನರ ಭಾಷೆ ಮತ್ತು ಸಂಕೇತ ಭಾಷೆಯ ಬಗ್ಗೆ ಜಾಗೃತಿ ಮೂಡಿಸಲು ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಸಂಕೇತ ಭಾಷೆಗಳ ಬಗ್ಗೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನಿಮ್ಮ ಸುತ್ತಮುತ್ತಲಿನ ಜನರನ್ನು ಸಂಕೇತ ಭಾಷೆಯನ್ನು ಕಲಿಯಲು ಪ್ರೋತ್ಸಾಹಿಸುವ ಮೂಲಕ ನೀವು ಈ ಅಂತಾರಾಷ್ಟ್ರೀಯ ಸಂಕೇತ ಭಾಷೆ ದಿನವನ್ನು ಆಚರಿಸಬಹುದು.

ಇದನ್ನೂ ಓದಿ: ನೀವು ಸಹ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಕುಡಿಯುತ್ತಿದ್ದೀರಾ? ಅದರ ಪರಿಣಾಮ ಇಲ್ಲಿದೆ 

ಸಂಕೇತ ಭಾಷೆಯನ್ನು ಹೆಚ್ಚು ಬಳಸುತ್ತಿರುವ ಕರ್ನಾಟಕ ಗ್ರಾಮವಿದು

ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಎಂಬ ಸಣ್ಣ ಹಳ್ಳಿಯಲ್ಲಿನ ಜನರು ಅಲಿಪುರ್ ಸಂಕೇತ ಭಾಷೆಯನ್ನು ಹೆಚ್ಚು ಬಳಸುತ್ತಾರೆ. ಸರಿಸುಮಾರು 19,000 ಜನರಿರುವ ಗ್ರಾಮದಲ್ಲಿ, ಸುಮಾರು 160 ವ್ಯಕ್ತಿಗಳು ಸಾಂದರ್ಭಿಕವಾಗಿ ಹುಟ್ಟು ಕಿವುಡರಾಗಿದ್ದಾರೆ. ಹೀಗಾಗಿ ಸಂವಹನಕ್ಕಾಗಿ ಅಲಿಪುರ್ ಸಂಕೇತ ಭಾಷೆಯನ್ನು ಬಳಸುತ್ತಾರೆ. ಈ ಭಾಷೆಯು ಕಳೆದ ಆರು ತಲೆಮಾರಿನಿಂದಲೂ ಬಳಕೆಯಲ್ಲಿದೆ. ಈ ಹಳ್ಳಿಯಲ್ಲಿ ಕಿವುಡುತನ ಹೊಂದಿರುವವರ ಸಂಖ್ಯೆಯು ಅಧಿಕವಾಗಿರುವುದರಿಂದ ಈ ಸಂಕೇತ ಭಾಷೆಯನ್ನು ಕಿವಿಕೇಳುವ ವ್ಯಕ್ತಿಗಳು ತಮ್ಮವರ ಜೊತೆಗೆ ಸಂವಹನ ನಡೆಸಲು ಬಳಸುತ್ತಾರೆ.

ಈ ಹಳ್ಳಿಯಲ್ಲಿ ಅಲಿಪುರ್ ಸಂಕೇತ ಭಾಷೆಯಾಗಿ ಪ್ರಾರಂಭಿಸಿದ್ದು ಇವರೇ ನೋಡಿ

ಅಲಿಪುರ ಹಳ್ಳಿಯಲ್ಲಿ ವಾಸಿಸುವ ಬಹುತೇಕರು ಶಿಯಾ ಮುಸ್ಲಿಮರಾಗಿದ್ದು, ಇಲ್ಲಿನ ನಿವಾಸಿಗಳು ತಮ್ಮ ಮಕ್ಕಳ ಮದುವೆಯನ್ನು ರಕ್ತಸಂಬಂಧಿಗಳೊಂದಿಗೆ ಮಾಡುವುದೇ ಈ ಕಿವುಡತನ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಿದೆ. ಹೀಗಾಗಿ ಈ ಗ್ರಾಮದ ದಂಪತಿಗಳಿಗೆ ಹುಟ್ಟುವ ಮಕ್ಕಳಿಗೆ ಹುಟ್ಟು ಕುರುಡುತನ ಹಾಗೂ ಶ್ರವಣದೋಷದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಅಲಿಪುರ್ ಸಂಕೇತ ಭಾಷೆಯನ್ನೇ ಸಂವಹನಕ್ಕಾಗಿ ಬಳಸುತ್ತಿದ್ದು, ಆದರೆ ಈ ಭಾಷೆಗೆ ಯಾವುದೇ ಅಧಿಕೃತ ಸ್ಥಾನಮಾನವಿಲ್ಲ.

ಇಲ್ಲಿನ ಜನರ ಸಂವಹನ ಭಾಷೆಯಾಗಿರುವ ಅಲಿಪುರ್ ಸಂಕೇತ ಭಾಷೆಯಾಗಿ ಹೊರಹೊಮ್ಮಲು ಕಾರಣವಾದರು ಸಿಬಾಜಿ ಪಾಂಡಾ. ಈ ವ್ಯಕ್ತಿಯು ನೆದರ್ಲ್ಯಾಂಡ್ಸ್ ನಲ್ಲಿ ಸೈನ್ ಲ್ಯಾಂಗ್ವೇಜ್ ಸಂಶೋಧನೆ ಮಾಡುವ ಸಂದರ್ಭದಲ್ಲಿ ಹಳ್ಳಿಯ ಸಂಕೇತ ಭಾಷೆಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ರೀತಿಯ ಸಂಕೇತ ಭಾಷೆಯ ವಿಶಿಷ್ಟ ಲಕ್ಷಣಗಳ ಬಗ್ಗೆ ಮಾಹಿತಿ ಪಡೆದ ಬಳಿಕ 2007 ರಲ್ಲಿ ಅವರು ಮೊದಲ ಬಾರಿಗೆ ಅಲಿಪುರಕ್ಕೆ ಭೇಟಿ ನೀಡಿದ್ದರು.

ಸಿಬಾಜಿ ಪಾಂಡಾರವರು ಅಲಿಪುರಗೆ ಬಂದ ಸಂದರ್ಭದಲ್ಲಿ ಕಿವುಡತನ ಸಮಸ್ಯೆಯಿಂದ ಬಳಲುತ್ತಿರುವವರ ಪ್ರಮಾಣವು ಸರಿಸುಮಾರು 0.75% ರಷ್ಟು ಇತ್ತು. ಆ ವೇಳೆಯಲ್ಲಿ ಅವರ ಸಂಶೋಧನೆಗೆ ಇಲ್ಲಿನ ಗ್ರಾಮಸ್ಥರೇ ಸಹಾಯ ಮಾಡಿದ್ದರು. 52 ವರ್ಷದ ಮಾಜಿ ಗ್ರಾಮ ಪಂಚಾಯತ್ ಮುಖ್ಯಸ್ಥರಾದ ಮೀರ್ ಫಾಜಿಲ್ ರಜಾ ಅವರು ಕಿವುಡರಿಗಾಗಿ ಅಲಿಪುರ ಯೂನಿಟಿ ಸೊಸೈಟಿಯನ್ನು ಸ್ಥಾಪಿಸಲು ಹಾಗೂ ಇಂಗ್ಲಿಷ್‌ನಿಂದ ಸಂಕೇತ ಭಾಷೆಗೆ ಭಾಷಾಂತರಿಸಲು ಸಹಾಯ ಮಾಡಿದ್ದರು. ಈ ಮೂಲಕ ಅಲಿಪುರ್ ಸಂಕೇತ ಭಾಷೆಯನ್ನು ದಾಖಲಿಸಿದ ಮೊದಲ ವ್ಯಕ್ತಿ ಸಿಬಾಜಿ ಪಾಂಡಾ ಎಂದೆನಿಸಿಕೊಂಡಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​​ ಮಾಡಿ

Published On - 9:50 am, Mon, 23 September 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್