ಹೆಂಗಳೆಯರೇ… ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ತಯಾರಿಸಬಹುದು ನ್ಯಾಚುರಲ್‌ ಪಿಂಕ್‌ ಲಿಪ್‌ಸ್ಟಿಕ್‌

ಲಿಪ್‌ಸ್ಟಿಕ್‌ ಇಲ್ಲದೆ ಮಹಿಳೆಯರ ಮೇಕಪ್‌ ಪರಿಪೂರ್ಣ ಆಗೋದೇ ಇಲ್ಲ. ಇದು ನಿಮ್ಮ ಇಡೀ ನೋಟವನ್ನು ಬದಲಾಯಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಪ್ರತಿನಿತ್ಯ ರಾಸಾಯನಿಕಯುಕ್ತ ಲಿಪ್‌ಸ್ಟಿಕ್‌ಗಳನ್ನು ತುಟಿಗೆ ಹಚ್ಚುವುದರಿಂದ ತುಟಿಯ ಬಣ್ಣ ಕ್ರಮೇಣ ಕಪ್ಪಾಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವಂತಹ ಈ ಮೂರು ವಸ್ತುಗಳನ್ನು ಬಳಸಿ ನೀವು ನ್ಯಾಚುರಲ್‌ ಲಿಪ್‌ಸ್ಟಿಕ್‌ ತಯಾರಿಸಬಹುದು. ಅದು ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಹೆಂಗಳೆಯರೇ… ಈ ಮೂರು ವಸ್ತುಗಳಿದ್ದರೆ ಮನೆಯಲ್ಲೇ ತಯಾರಿಸಬಹುದು ನ್ಯಾಚುರಲ್‌ ಪಿಂಕ್‌ ಲಿಪ್‌ಸ್ಟಿಕ್‌
ಸಾಂದರ್ಭಿಕ ಚಿತ್ರ
Image Credit source: Getty Images

Updated on: Nov 18, 2025 | 5:16 PM

ಲಿಪ್‌ಸ್ಟಿಕ್‌ (lipstick)  ಅಂದ್ರೆ ಹೆಣ್ಮಕ್ಳಿಗೆ ಸಖತ್‌ ಇಷ್ಟ. ಈ ಲಿಪ್‌ಸ್ಟಿಕ್‌ ಮುಖಕ್ಕೆ ಮೆರಗನ್ನು ನೀಡುತ್ತದೆ ಎಂಬ ಕಾರಣಕ್ಕೆ ಹೆಚ್ಚಿನ ಮಹಿಳೆಯರು ಪ್ರತಿನಿತ್ಯ ಲಿಪ್‌ಸ್ಟಿಕ್‌ ಹಚ್ಚಿಕೊಳ್ಳುತ್ತಾರೆ. ಇದು ಅಂದವನ್ನು ಹೆಚ್ಚಿಸುವುದೇನೋ ನಿಜ ಆದ್ರೆ ಈ ಲಿಪ್‌ಸ್ಟಿಕ್‌ನಲ್ಲಿರುವ ರಾಸಾಯನಿಕಗಳು ತುಟಿಯ ಬಣ್ಣವನ್ನು ಕಪ್ಪಾಗಿಸುವುದರ ಜೊತೆಗೆ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಈ ಕೆಮಿಕಲ್‌ಯುಕ್ತ ಲಿಪ್‌ಸ್ಟಿಕ್‌ಗಳನ್ನು ಬಳಸುವ ಬದಲು ಮನೆಯಲ್ಲಿಯೇ ಈ ಮೂರು ವಸ್ತುಗಳನ್ನು ಬಳಸಿ ನ್ಯಾಚುರಲ್‌ ಲಿಪ್‌ಸ್ಟಿಕ್‌ ತಯಾರಿಸಿ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಈ ರೀತಿ ಮನೆಯಲ್ಲಿಯೇ ಲಿಪ್‌ಸ್ಟಿಕ್‌ ತಯಾರಿಸಿ:

ಮನೆಯಲ್ಲೇ ತಯಾರಿಸಿದ ಈ ಲಿಪ್‌ಸ್ಟಿಕ್‌ ನೈಸರ್ಗಿಕವಾಗಿ ಗುಲಾಬಿ ತುಟಿ ಪಡೆಯಲು ಸಹಾಯ ಮಾಡುತ್ತದೆ.

ಮನೆಯಲ್ಲಿ ಲಿಪ್ಸ್ಟಿಕ್ ತಯಾರಿಸಲು ಬೇಕಾಗುವ ಪದಾರ್ಥಗಳು:

  • ಬೀಟ್ರೂಟ್
  • ತೆಂಗಿನ ಎಣ್ಣೆ
  • ವ್ಯಾಸಲೀನ್ ಅಥವಾ ಶಿಯಾ ಬಟರ್‌

ಮನೆಯಲ್ಲಿಯೇ ಲಿಪ್‌ಸ್ಟಿಕ್ ತಯಾರಿಸುವುದು ಹೇಗೆ?

  • ಮನೆಯಲ್ಲಿ ಲಿಪ್ಸ್ಟಿಕ್ ತಯಾರಿಸಲು, ಮೊದಲು ಬೀಟ್ರೂಟ್ ಅನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಚೆನ್ನಾಗಿ ಕುದಿಸಿದ ನಂತರ, ಅದನ್ನು ಮಿಕ್ಸಿಯಲ್ಲಿ ರುಬ್ಬಿ ದಪ್ಪ ಪೇಸ್ಟ್‌ ತಯಾರಿಸಿ.
  • ಬೀಟ್ರೂಟ್ ಪೇಸ್ಟ್ ಮಾಡಿದ ನಂತರ, ನೀವು ಈಗ ಲಿಪ್ಸ್ಟಿಕ್ ಬೇಸ್  ತಯಾರಿಸಬೇಕು. ಇದನ್ನು ಮಾಡಲು, 1 ಟೀಚಮಚ ತೆಂಗಿನ ಎಣ್ಣೆ ಮತ್ತು 1/2 ಟೀಚಮಚ ವ್ಯಾಸಲೀನ್ ಅಥವಾ ಶಿಯಾ ಬಟರನ್ನು ಡಬಲ್ ಬಾಯ್ಲರ್‌ಗೆ ಸೇರಿಸಿ ಚೆನ್ನಾಗಿ ಬಿಸಿ ಮಾಡಿ. ಎಲ್ಲವೂ ಚೆನ್ನಾಗಿ ಮಿಶ್ರಣವಾದ ನಂತರ, ಬಾಯ್ಲರ್ ಆಫ್ ಮಾಡಿ. ಈ ಮಿಶ್ರಣವನ್ನು ಒಂದು ಬಟ್ಟಲಿಗೆ ವರ್ಗಾಯಿಸಿ.
  • ನಂತರ ಬೀಟ್ರೂಟ್ ಪೇಸ್ಟನ್ನು ತೆಗೆದುಕೊಂಡು ಅದನ್ನು ಮೊದಲೇ ತಯಾರಿಸಿಟ್ಟ ತೆಂಗಿನೆಣ್ಣೆ ಬೇಸ್‌ಗೆ ಸೇರಿಸಿ. ಈ ಎರಡೂ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಸಣ್ಣ ಬಾಕ್ಸ್‌ನಲ್ಲಿ ಹಾಕಿಟ್ಟು ಒಂದು ದಿನ ರೆಫ್ರಿಜರೇಟರ್‌ನಲ್ಲಿ ಇಟ್ಟರೆ ನ್ಯಾಚುರಲ್‌ ಲಿಪ್‌ಸ್ಟಿಕ್‌ ಸಿದ್ಧ.

ಇದನ್ನೂ ಓದಿ: ಕೂದಲು ಉದುರುವಿಕೆಯ ಸಮಸ್ಯೆಗೆ ಗುಡ್‌ಬೈ ಹೇಳಲು ನೀವು ಮಾಡಬೇಕಾದದ್ದು ಇಷ್ಟೆ

ಮನೆಯಲ್ಲಿ ತಯಾರಿಸಿದ ಈ ಲಿಪ್‌ಸ್ಟಿಕ್‌ ತುಟಿಗೆ ನೈಸರ್ಗಿಕ ಗುಲಾಬಿ ಬಣ್ಣವನ್ನು ನೀಡುವುದು ಮಾತ್ರವಲ್ಲದೆ, ಯಾವುದೇ ಹಾನಿಯಿಂದ ತುಟಿಯನ್ನು ರಕ್ಷಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Tue, 18 November 25