AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Men’s Day 2025: ಮೆನ್ಸ್‌ ಡೇಯ ಈ ಸಂದರ್ಭದಲ್ಲಿ ಪುರುಷರು ತಮಗೆ ತಾವೇ ಈ ಪ್ರಾಮಿಸ್‌ಗಳನ್ನು ಮಾಡಿಕೊಳ್ಳಬೇಕು

ಪ್ರತಿ ವರ್ಷ ನವೆಂಬರ್ 19 ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಪುರುಷರ ಸಕಾರಾತ್ಮಕ ಕೊಡುಗೆಗಳು ಮತ್ತು ಕುಟುಂಬ ಹಾಗೂ ಸಮಾಜಕ್ಕಾಗಿ ಅವರ ತ್ಯಾಗಗಳನ್ನು ಶ್ಲಾಘಿಸಲು, ಅವರ ಯೋಗಕ್ಷೇಮ ಮತ್ತು ಸಮಾಜದಲ್ಲಿ ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲು ಈ ದಿನವನ್ನು ಮೀಸಲಿಡಲಾಗಿದೆ. ಈ ವಿಶೇಷ ದಿನಾಚರಣೆ ಅದು ಹೇಗೆ ಪ್ರಾರಂಭವಾಯಿತು, ಇದರ ಹಿನ್ನೆಲೆಯೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

International Men’s Day 2025: ಮೆನ್ಸ್‌ ಡೇಯ ಈ ಸಂದರ್ಭದಲ್ಲಿ ಪುರುಷರು ತಮಗೆ ತಾವೇ ಈ ಪ್ರಾಮಿಸ್‌ಗಳನ್ನು ಮಾಡಿಕೊಳ್ಳಬೇಕು
ಅಂತಾರಾಷ್ಟ್ರೀಯ ಪುರುಷರ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on: Nov 19, 2025 | 9:19 AM

Share

ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಮಾನರೇ. ಮಹಿಳೆಯರಿಲ್ಲದೆ ಪುರುಷರು ಹಾಗೂ ಪುರುಷರಿಲ್ಲದೆ ಮಹಿಳೆಯರು ಮುಂದೆ ಸಾಗಲು ಸಾಧ್ಯವಿಲ್ಲ. ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಮುಂದಿದ್ದಾರೆ. ಆದರೆ ಇನ್ನೊಂದೆಡೆ ಇಂದು ಪುರುಷರು ಹೆಚ್ಚು ಶೋಷಣೆಗೊಳಗಾಗುತ್ತಿದ್ದಾರೆ, ತಮಗಾಗುವ ಮಾನಸಿಕ ದೌರ್ಜನ್ಯದಿಂದ ಖಿನ್ನತೆಗೊಳಗಾಗುತ್ತಿದ್ದಾರೆ. ಪುರುಷರಿಗಾಗುವ ಈ ಕಿರುಕುಳಗಳ ಬಗ್ಗೆ ಯಾರು ಅಷ್ಟಾಗಿ ಧ್ವನಿ ಎತ್ತುವುದಿಲ್ಲ. ಈ ಕಾರಣಕ್ಕೆ  ಸಮಾಜದಲ್ಲಿ ಪುರುಷರ ಮೇಲಿನ  ಶೋಷಣೆ, ಕಿರುಕುಳ, ತಾರತಮ್ಯ, ದೌರ್ಜನ್ಯದ ವಿರುದ್ದ ಧ್ವನಿ ಎತ್ತುಲು ಹಾಗೂ ಅವರಿಗೆ ಅವರ ಹಕ್ಕುಗಳನ್ನು ನೀಡಲು, ಪುರುರುಷ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು,  ಲಿಂಗ ಸಮಾನತೆಯನ್ನು  ಉತ್ತೇಜಿಸಲು ಪ್ರತಿವರ್ಷ ನವೆಂಬರ್ 19ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು (International Men’s Day) ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಇತಿಹಾಸ:

ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯನ್ನು ಮೊದಲ ಬಾರಿಗೆ 1992 ರಲ್ಲಿ ಥಾಮಸ್ ಓಸ್ಟರ್ ಎಂಬವರು ಆಚರಿಸಿದರು ಎಂದು ಹೇಳಲಾಗುತ್ತದೆ. ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಸಲುವಾಗಿ ಈ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಅವರು ಜಾರಿಗೆ ತಂದರು. ಆದರೆ ಈ ಆಚರಣೆಗೆ ಅಷ್ಟೇನೂ ಪ್ರೋತ್ಸಾಹ ದೊರೆಯದ ಕಾರಣ 1995 ರಲ್ಲಿ ನಿಲ್ಲಿಸಬೇಕಾಯಿತು. ನಂತರ 1999 ರಲ್ಲಿ ಮತ್ತೊಮ್ಮೆ ಪುರುಷರ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ವೆಸ್ಟ್ ಇಂಡೀಸ್‌ನ ಭಾರತೀಯ ಮೂಲದ ಪ್ರೊಫೆಸರ್ ಡಾ. ಜೊರೋಮ್ ತಿಲಕ್ ಸಿಂಗ್ ಎಂಬವರು 1999 ನವೆಂಬರ್ 19 ರಂದು ತಮ್ಮ ತಂದೆಯ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಿದರು.  ಲಿಂಗ ಸಮಾನತೆಯನ್ನು ಉತ್ತೇಜಿಸಲು, ಪುರುಷರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಈ ಸಮಾಜದಲ್ಲಿ ಧ್ವನಿ ಎತ್ತಬೇಕು ಎಂದು ಈ ಆಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 19 ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಪುರುಷರ ದಿನದ ಮಹತ್ವ:

  • ಪುರುಷರ ಕಲ್ಯಾಣದ ಮೇಲೆ ಪ್ರಯತ್ನಗಳನ್ನು ಕೇಂದ್ರೀಕರಿಸಲು ಮತ್ತು ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 19 ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.
  • ಪುರುಷರ ಮಾನಸಿಕ ಆರೋಗ್ಯದ ಬಗ್ಗೆ  ಕಾಳಜಿ ವಹಿಸುವುದು, ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು, ಪುರುಷರ ಸಕಾರಾತ್ಮಕ ಗುಣಗಳನ್ನು ಶ್ಲಾಘಿಸುವುದು, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಪುರುಷರ ಸಾಧನೆಯನ್ನು ಗೌರವಿವುದು ಹಾಗೂ ಮುಖ್ಯವಾಗಿ ಲಿಂಗ ಸಮಾನತೆಯನ್ನು ಉತ್ತೇಜಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಸದೃಢ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ

ಪುರುಷರು ತಮಗೆ ತಾವೇ ಮಾಡಿಕೊಳ್ಳಬೇಕಾದ ಪ್ರಾಮಿಸ್‌ಗಳಿವು:

ನಾನು ನನ್ನ ಭಾವನೆಗಳನ್ನು ಮರೆಮಾಡುವುದಿಲ್ಲ: ಪುರುಷರು ತುಂಬಾ ಬಲಿಷ್ಠರು ಅವರು ಭಾವನಾತ್ಮಕವಾಗಿ ಅಷ್ಟು ಬೇಗ ನೊಂದುಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈ ಒಂದು ಹೇಳಿಕೆ ಅವರ ಮಾನಸಿಕ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡುತ್ತದೆ. ಹೌದು ಅವರು ಆತಂಕ, ದುಃಖ ಅಥವಾ ಒತ್ತಡ ಸೇರಿದಂತೆ ಎಲ್ಲಾ ಭಾವನೆಗಳನ್ನು ಮರೆಮಾಡಿದಾಗ  ಅದು ಅವರನ್ನು ಒಳಗಿನಿಂದ ದುರ್ಬಲಗೊಳಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಪುರುಷರೂ ತಮಗಾಗುವ ದುಃಖ, ನೋವುಗಳನ್ನೆಲ್ಲಾ ತಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಬೇಕು. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ದೌರ್ಬಲ್ಯದ ಸಂಕೇತವಲ್ಲ. ಈ ಭರವಸೆಯೊಂದಿಗೆ, ನೀವು ಆರೋಗ್ಯಕರ ಮತ್ತು ಶಾಂತಿಯುತ ಜೀವನದತ್ತ ಮೊದಲ ಹೆಜ್ಜೆ ಇಡಬಹುದು.

ನಾನು ಸ್ವ-ಆರೈಕೆಗೆ ಆದ್ಯತೆ ನೀಡುತ್ತೇನೆ: ಹೆಚ್ಚಿನ ಪುರುಷರು ಕುಟುಂಬ, ಕೆಲಸ ಮತ್ತು ಇತರ ಜವಾಬ್ದಾರಿಗಳ ನಡುವೆ ತಮ್ಮನ್ನು ತಾವೇ ನಿರ್ಲಕ್ಷಿಸುತ್ತಾರೆ. ತಮ್ಮ ಆರೋಗ್ಯ, ಸ್ವ ಆರೈಕೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುವುದಿಲ್ಲ. ಈ ತಪ್ಪನ್ನು ಮಾಡದಿರಿ. ಇದರ ಬದಲಿಗೆ ನಿಮಗಾಗಿ ಸ್ವಲ್ಪ ಸಮಯ ಮೀಸಲಿಡಿ, ವ್ಯಾಯಾಮ ಧ್ಯಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ, ಆರೋಗ್ಯ, ತ್ವಚೆಯ ಆರೈಕೆಯ ಬಗ್ಗೆಯೂ ಕಾಳಜಿ ವಹಿಸಿ, ನಿಮ್ಮನ್ನು ನೀವು ಪ್ರೀತಿಸಿ. ಇದು ನಿಮ್ಮ ಜೀವನದಲ್ಲಿ ಖಂಡಿತವಾಗಿಯೂ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.

ಸಮಾಜದ ಕಟ್ಟುಪಾಡುಗಳನ್ನು ಬದಲಾಯಿಸುತ್ತೇನೆ: ಸಮಾಜದಲ್ಲಿ ಒಂದು ಕಟ್ಟುಪಾಡು ಇದೆ. ಅದೇನೆಂದರೆ ಪುರುಷರು ಬಲಶಾಲಿಗಳು, ಅವರು ಮನೆಕೆಲಸಗಳನ್ನು ಮಾಡುವುದಿಲ್ಲ. ಈ ಮನಸ್ಥಿತಿಯನ್ನು ಬದಲಾಯಿಸಿ, ನಿಮ್ಮ ಅಮ್ಮ, ಹೆಂಡತಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಿ. ಲಿಂಗ ಸಮಾನತೆಯನ್ನು ಬೆಂಬಲಿಸಿ. ಈ ಬದ್ಧತೆಯು ನಿಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡುತ್ತದೆ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ