Saffron: ಕೇಸರಿ ಯಾಕೆ ತುಂಬಾ ದುಬಾರಿ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಅದರ ಕೃಷಿ ಪ್ರಕ್ರಿಯೆ ಬಗ್ಗೆ ತಿಳಿಯಿರಿ

| Updated By: preethi shettigar

Updated on: Jun 22, 2021 | 7:39 AM

ಕೇಸರಿ ಹೂವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕೆ ಭಾರತದಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಆದರೆ ಕೇಸರಿ ಹೂವು ಏಕೆ ಎಷ್ಟು ದುಬಾರಿ ಎಂಬುವುದು ಇನ್ನು ಕೆಲವರಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ. ಇದಕ್ಕೆ ಉತ್ತರ ಈ ಕೆಳಗಿನಂತಿದೆ.

Saffron: ಕೇಸರಿ ಯಾಕೆ ತುಂಬಾ ದುಬಾರಿ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಅದರ ಕೃಷಿ ಪ್ರಕ್ರಿಯೆ ಬಗ್ಗೆ ತಿಳಿಯಿರಿ
ಕೇಸರಿ ಹೂವು
Follow us on

ಕೇಸರಿ ಹೂವಿನ ಹೆಸರನ್ನು ಕೇಳಿದಾಗ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ ಅದು ಪ್ರತಿ ಕಿಲೋಗೆ ಲಕ್ಷ ರೂಪಾಯಿಗೆ ಮಾರಾಟವಾಗುತ್ತದೆ ಎನ್ನುವುದು. ಭಾರತೀಯರು ಹೆಚ್ಚು ಇದನ್ನು ಬಳಸುತ್ತಾರೆ. ಚಿನ್ನದಂತೆ ಬೆಲೆ ಬಾಳುವ ಕೇಸರಿ ಹೂವು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ. ಕೇಸರಿ ಹೂವು ಆಹಾರದ ರುಚಿಯನ್ನು ಕೂಡ ಹೆಚ್ಚಿಸುತ್ತದೆ. ಈ ಕಾರಣಕ್ಕೆ ಭಾರತದಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಆದರೆ ಕೇಸರಿ ಹೂವು ಏಕೆ ಎಷ್ಟು ದುಬಾರಿ ಎಂಬುವುದು ಇನ್ನು ಕೆಲವರಲ್ಲಿ ಗೊಂದಲದ ಗೂಡಾಗಿ ಪರಿಣಮಿಸಿದೆ. ಇದಕ್ಕೆ ಉತ್ತರ ಈ ಕೆಳಗಿನಂತಿದೆ.

ಕೇಸರಿ ಹೂವು ಬೆಳೆಸುವ ಪ್ರಕ್ರಿಯೆ
ಕೇಸರಿ ಒಂದು ರೀತಿಯ ದುಬಾರಿ ಮಸಾಲಾ ಪದಾರ್ಥ.  ಕೇಸರಿಯನ್ನು ತಂಪಾದ ವಾತಾವರಣದಲ್ಲಿ ಬೆಳೆಸಲಾಗುತ್ತದೆ. ಕೇಸರಿಯ ಉಪಯುಕ್ತ ಭಾಗ – ಕೆಂಪು ಕೇಸರಗಳು ಮಾತ್ರ. ಒಂದು ಕಿಲೋ ಕೇಸರಗಳಿಗೆ ಕನಿಷ್ಠ ಎರಡು ಲಕ್ಷ ಹೂವುಗಳು ಬೇಕಾಗುತ್ತವೆ. ಅದಕ್ಕಾಗಿಯೇ ಕೇಸರಿ ವಿಶ್ವದ ಅತ್ಯಂತ ದುಬಾರಿ ಪದಾರ್ಥವಾಗಿದೆ. ಕೇಸರಗಳು ಸ್ವಲ್ಪ ಕಹಿ ಮತ್ತು ಸಿಹಿಯಾಗಿರುತ್ತವೆ. ಗರ್ಭಿಣಿ ಮಹಿಳೆಯರ ಆಹಾರದಲ್ಲಿ ಕೇಸರಿ ಹೂವನ್ನು ತೆಗೆದುಕೊಂಡರೆ, ಮಗು ಕಪ್ಪು ಅಥವಾ ಬೂದು ಬಣ್ಣಕ್ಕೆ ಬದಲಾಗಿ ಬಿಳಿ ಅಥವಾ ಕೆಂಪು ಬಣ್ಣದಲ್ಲಿ ಜನಿಸುತ್ತದೆ ಎಂಬುದು ಜನಪ್ರಿಯ ನಂಬಿಕೆ.

ಇಳುವರಿ ತುಂಬಾ ಕಡಿಮೆ
ಕೇಸರಿಯ ಬೆಲೆ ಹೆಚ್ಚು. ಆದರೆ ಇಳುವರಿ ತುಂಬಾ ಕಡಿಮೆ. ಸುಗ್ಗಿಯ ಸಮಯದಲ್ಲಿ ಹೆಚ್ಚಾಗಿ ಕೇಸರಿ ಬೆಳೆಯಲಾಗುತ್ತದೆ. ಸಂಪೂರ್ಣ ಕೊಯ್ಲು ಮಾಡಿದ ನಂತರದಲ್ಲಿ ಇದರ ಬೆಳೆಯ ಗಾತ್ರದಲ್ಲಿ ಬದಲಾಗುತ್ತದೆ. ಒಂದೂವರೆ ಚದರ ಅಡಿಗಳಲ್ಲಿ ಕೃಷಿ ಮಾಡಿದರೆ ಕೇವಲ 50 ಗ್ರಾಂ ಕೇಸರಿಯನ್ನು ಕೊಯ್ಲು ಮಾಡಬಹುದು.

15 ವರ್ಷಗಳಿಗೊಮ್ಮೆ ಬಿತ್ತನೆ
ಕೇಸರಿ ಬೀಜಗಳನ್ನು ಬಿತ್ತನೆ ಮಾಡುವುದು 15 ವರ್ಷಗಳಿಗೊಮ್ಮೆ. ಪ್ರತಿ ವರ್ಷ ಹೂವುಗಳು ಬರುತ್ತವೆ. ಆದರೆ 15 ವರ್ಷಗಳ ನಂತರ ಮತ್ತೆ ಬೆಳೆ ತೆಗೆಯಬೇಕು. ಆಗ ಕೇಸರಿ ಗಿಡದ ಗಡ್ಡೆಯಲ್ಲಿ ಇನ್ನಿತರ ಗಡ್ಡೆಗಳು ಬೆಳೆದಿರುತ್ತದೆ ನಂತರ ಅವುಗಳನ್ನು ಇನ್ನಿತರ ಗಿಡಗಳಾಗಿ ಬೆಳೆಸಲಾಗುತ್ತದೆ.

ಕೇಸರಿ ಹೂವನ್ನು ಹೇಗೆ ತಯಾರಿಸಲಾಗುತ್ತದೆ?
ಕೇಸರಿ ಗಿಡ ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಸಸ್ಯಗಳಂತೆ ಕಾಣುತ್ತದೆ. ಈ ಗಿಡದ ಮಧ್ಯೆ ನೇರಳೆ ಬಣ್ಣದ ಹೂವು  ಅರಳಲು ಪ್ರಾರಂಭವಾಗುತ್ತದೆ. ಈ ಹೂವಿನ ಮಧ್ಯದಲ್ಲಿ ಕೇಸರ ಇರುತ್ತದೆ. ಒಂದು ಹೂವಿನಲ್ಲಿ ಕೇವಲ ಮೂರು ಎಳೆಗಳು ಲಭ್ಯವಿದೆ. ಅದಕ್ಕಾಗಿಯೇ ಒಂದು ಕಿಲೋ ಕೇಸರಿ ಹೂವನ್ನು ತಯಾರಿಸಲು ಎಷ್ಟು ಹೂವುಗಳು ಬೇಕಾಗುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಸುಮಾರು ಅರ್ಧ ಲಕ್ಷ ಹೂವುಗಳನ್ನು ಒಟ್ಟುಗೂಡಿಸಿ ಒಂದು ಕಿಲೋ ಕೇಸರಿ ಹೂವನ್ನು ತಯಾರಿಸಲಾಗುತ್ತದೆ. ಆಯುರ್ವೇದದಿಂದ ಅಡುಗೆಯವರೆಗೆ ಕೇಸರಿ ಹೂವವನ್ನು ಬಳಸಲಾಗುತ್ತದೆ. ಕೇಸರಿ ರಕ್ತವನ್ನು ಶುದ್ಧೀಕರಿಸಲು ಮತ್ತು ಕಡಿಮೆ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸುಮಾರು 160 ಕೇಸರಿ ಹೂವುಗಳನ್ನು ಹೊರತೆಗೆದಾಗ, ಅದರಿಂದ ಕೇವಲ ಒಂದು ಗ್ರಾಂ ಕೇಸರಿ ಉತ್ಪತ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ, ಒಂದು ಗ್ರಾಂ ಕೇಸರಿ ಹೂವಿಗೆ, ತುಂಬಾ ಶ್ರಮಿಸಬೇಕಾಗುತ್ತದೆ. ಅಲ್ಲದೆ ಹೀಗೆ ಸಂಗ್ರಹಿಸಿದ ಒಂದು ಗ್ರಾಂ ಕೇಸರಿ ಹೂವು 100 ಲೀಟರ್ ಹಾಲಿಗೆ ಸಾಕಾಗುವಷ್ಟು ಇರುತ್ತದೆ. ಹೀಗಾಗಿ ಕೇಸರಿ ಹೆಚ್ಚು ದುಬಾರಿ.

ಇದನ್ನೂ ಓದಿ:

Health Tips: ಆಹಾರ ಕ್ರಮ ಸರಿಯಾಗಿದ್ದಲ್ಲಿ ಆರೋಗ್ಯವೂ ಸುಧಾರಿಸುತ್ತದೆ; ಇಲ್ಲಿದೆ ಕೆಲವು ಸಲಹೆಗಳು

Gourd Juice Side Effects: ಸೋರೆಕಾಯಿ ಜ್ಯೂಸ್​ ಸೇವಿಸುವ ಮೊದಲು ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ