AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದ ಒತ್ತಡ, ಆತಂಕವನ್ನು ನಿವಾರಿಸಲು ಶಿಲ್ಪಾ ಶೆಟ್ಟಿ ಮಾಡುವ ಯೋಗ ಭಂಗಿ ಯಾವುದು ಗೊತ್ತಾ?

shilpa shetty: ಆರೋಗ್ಯದ ಸುರಕ್ಷತೆಗಾಗಿ ನಟಿ ಶಿಲ್ಪಾ ಶೆಟ್ಟಿ ಯೋಗಾಭ್ಯಾಸವನ್ನು ಮಾಡುತ್ತಾರೆ. ಇತರರಿಗೆ ಸ್ಪೂರ್ತಿ ನೀಡುವಂತಹ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಕೆಲವು ಯೋಗ ಭಂಗಿಗಳನ್ನು ಮಾಡುವ ಮೂಲಕ ಇನಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ದೇಹದ ಒತ್ತಡ, ಆತಂಕವನ್ನು ನಿವಾರಿಸಲು ಶಿಲ್ಪಾ ಶೆಟ್ಟಿ ಮಾಡುವ ಯೋಗ ಭಂಗಿ ಯಾವುದು ಗೊತ್ತಾ?
ನಟಿ ಶಿಲ್ಪಾ ಶೆಟ್ಟಿ
TV9 Web
| Edited By: |

Updated on: Jun 21, 2021 | 10:40 AM

Share

ಕೊವಿಡ್​ ಸಾಂಕ್ರಾಮಿಕ ರೋಗ ಎಲ್ಲರ ಮನಸ್ಥಿತಿಯನ್ನು ಕೆಡಿಸಿಬಿಟ್ಟಿತು. ಮಾನಸಿಕ ಹಾಗೂ ದೈಹಿಕ ಒತ್ತಡ ಜನರಲ್ಲಿ ಕಾಡತೊಡಗಿತು. ಹೀಗಿರುವಾಗ ಜನರು ಅನಗತ್ಯ ಚಿಂತೆಯನ್ನು ಬಿಟ್ಟು, ಧೈರ್ಯದಿಂದ ಸಮಸ್ಯೆಯನ್ನು ಎದುರಿಸಬೇಕು. ಜತೆಗೆ ಮಾನಸಿಕ ಒತ್ತಡದಿಂದ ಪರಿಹಾರ ಕಂಡುಕೊಳ್ಳಲೇ ಬೇಕು. ಯೋಗದ ಕೆಲವು ಆನಸಗಳು ನಿಮ್ಮ ಮಾನಸಿಕ ಒತ್ತಡವನ್ನು ಸುಧಾರಿಸುತ್ತದೆ. ಆರೋಗ್ಯದ ಸುರಕ್ಷತೆಗಾಗಿ ನಟಿ ಶಿಲ್ಪಾ ಶೆಟ್ಟಿ ಯೋಗಾಭ್ಯಾಸವನ್ನು ಮಾಡುತ್ತಾರೆ. ಇತರರಿಗೆ ಸ್ಪೂರ್ತಿ ನೀಡುವಂತಹ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಯೋಗ ಭಂಗಿಗಳನ್ನು ಮಾಡುವ ಮೂಲಕ ಇನಸ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ ಕೆಲವು ಯೋಗಗಳ ಆಸನಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ, ಇವುಗಳು ನಿಮ್ಮ ಮಾನಸಿಕ ಮತ್ತು ದೇಹದ ಒತ್ತಡವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.

ನಮ್ಮ ಮನಸ್ಸು ಶಾಂತಿಯಿಂದಿರಲು ಯೋಗಾಸನವು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಜತೆಗೆ ನಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಯೋಗಾಸನ ಸಹಾಯಕವಾಗಿದೆ. ದೈಹಿಕ ಒತ್ತಡ ಮತ್ತು ಮಾನಸಿಕ ಆತಂಕವನ್ನು ನಿವಾರಿಸಲು ಈ ಆಸನ ಸಹಾಯ ಮಾಡುತ್ತದೆ. ಈ ಯೋಗಾಸನದ ಹೆಸರು ಪಾರ್ಶ್ವ ಸುಖಾಸನ. ದೈಹಿಕವಾಗಿ ನಿಮ್ಮ ಕುತ್ತಿಗೆ, ಭುಜಗಳು, ಬೆನ್ನಿನ ಭಾಗವನ್ನು ಹಿಗ್ಗಿಸಲು ಇದು ಸಹಾಯ ಮಾಡುತ್ತದೆ ಎಂದು ತಿಳಿಸುವ ಮೂಲಕ ಪೋಸ್ಟ್​ ಹಂಚಿಕೊಂಡಿದ್ದಾರೆ.

ನಿಮಗೆ ಸಾಧ್ಯವಾದಾಗ ಸ್ವಲ್ಪ ವಿರಾಮ ತೆಗೆದುಕೊಳ್ಳಿ. ನಿಮ್ಮ ಮನಸ್ಸು ಶಾಂತವಾಗಿರಲಿ ಮತ್ತು ದೇಹವನ್ನು ಸಡಿಲವಾಗಿ ಬಿಡಿ. ಈ ಆಸನವನ್ನು ನಿಧಾನವಾಗಿ ಅಭ್ಯಾಸ ಮಾಡಿ.. ನಿಮ್ಮ ಮನಸ್ಸು ಮತ್ತು ದೇಹವು ಸಡಿಲವಾಗಿರಲಿ ಎಂದು ಹೇಳಿದ್ದಾರೆ.

ಪಾರ್ಶ್ವ ಸುಖಾಸನ ಮಾಡುವ ವಿಧಾನ

* ನೆಲದ ಮೇಲೆ ಚಾಪೆಯನ್ನು ಹಾಸಿಕೊಂಡು ಆರಾಮವಾಗಿ ಪದ್ಮಾಸನದಲ್ಲಿ ಕುಳಿತುಕೊಳ್ಳಿ *ನಿಮ್ಮ ಎಡ ಬದಿಯ ಕೈಯನ್ನು(ಮೊಣಕೈ ಬಾಗಿರಲಿ) ಎಡಭಾಗದ ಕಾಲಿನ ಪಕ್ಕಕ್ಕೆ ಬಾಗಿಸಿ ನೆಲಕ್ಕೆ ಊರಿ *ನಿಮ್ಮ ಬಲಭಾಗದ ಕೈಯನ್ನು ಮೇಲಕ್ಕೆ ಎತ್ತಿ ಎಡಭಾಗಕ್ಕೆ ಬಾಗಿ- 30 ಸೆಕೆಂಡುಗಳ ಕಾಲ ಹಾಗೆಯೇ ಇರಿ *ಇದೇ ರೀತಿ ಬಲಭಾಗದ ಕೈಗಳನ್ನು ನೆಲಕ್ಕೆ ಊರಿ, ಎಡಗೈಯನ್ನು ಮೇಲಕ್ಕೆತ್ತಿ ಬಲ ಭಾಗದ ಕಡೆಗೆ ಬಾಗಿರಿ *ಕನಿಷ್ಠ 5 ಬಾರಿಯಾದರೂ ಈ ಆಸನವನ್ನು ಮಾಡಿ *ಮೊದಲಿಗೆ ಪ್ರಯಯತ್ನಿಸುವಾಗ ಬಹಳ ಎಚ್ಚರಿಕೆಯಿಂದರಿ *ಯೋಗಸಾನ ಮಾಡುವಾಗ ಗಡಿಬಿಡಿ ಬೇಡ *ಪ್ರತಿಯೊಂದು ಯೋಗ ಭಂಗಿಗಳಿಗೂ ಅದರದೇ ಆದ ಶೈಲಿಯಿದೆ. ಹಾಗಿರುವಾಗ ಆ ಆಸನದ ಕುರಿತಾಗಿ ಸಂಪೂರ್ಣವಾಗಿ ತಿಳಿದುಕೊಂಡು ನಂತರ ಯೋಗಾಭ್ಯಾಸ ಮಾಡುವುದು ಅತ್ಯವಶ್ಯಕ

ಇದನ್ನೂ ಓದಿ:

International Yoga Day 2021: ಕೊರೊನಾ ಸೋಂಕಿತರೊಂದಿಗೆ ಕೊವಿಡ್​ ಕೇಂದ್ರದಲ್ಲೇ ಯೋಗ ದಿನಾಚರಣೆ ಆಚರಿಸಿದ ರೇಣುಕಾಚಾರ್ಯ

International Yoga Day 2021: 18ಸಾವಿರ ಅಡಿ ಎತ್ತರದ ಹಿಮಾಚ್ಛಾದಿತ ಪ್ರದೇಶದಲ್ಲಿ ಯೋಗಾಭ್ಯಾಸ ಮಾಡಿದ ಐಟಿಬಿಪಿ ಯೋಧರು

Follow Us
ಕೆನ್ನೆಗೆ ಬಾರಿಸಿದ ಟೀಚರ್; ಕುಸಿದುಬಿದ್ದು ಪ್ರಾಣಬಿಟ್ಟ 6 ವರ್ಷದ ಮಗು!
ಕೆನ್ನೆಗೆ ಬಾರಿಸಿದ ಟೀಚರ್; ಕುಸಿದುಬಿದ್ದು ಪ್ರಾಣಬಿಟ್ಟ 6 ವರ್ಷದ ಮಗು!
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ