ಇಂದಿನ ಯುಗದಲ್ಲಿ ಸ್ಮಾರ್ಟ್‌ಫೋನ್(Smartphone) ಅಭ್ಯಾಸವು ನಮ್ಮ ದೈನಂದಿನ ಜೀವನವನ್ನು ತುಂಬಾ ಸುಲಭಗೊಳಿಸಿದೆ. ಸ್ಮಾರ್ಟ್‌ಫೋನ್ ಇಲ್ಲದೆ ಬಹುತೇಕರ ಜೀವನ ಸುಗಮವಾಗಿ ಸಾಗಲು ಸಾಧ್ಯವಿಲ್ಲ ಎನ್ನುವಂತೆ ಆಗಿದೆ. ತಜ್ಞರ ಪ್ರಕಾರ, ಜನರು ಸ್ಮಾರ್ಟ್‌ಫೋನ್‌ಗಳಿಗೆ ಅಡಿಕ್ಟ್(Addict) ಆಗಿದ್ದಾರೆ. ಸ್ಮಾರ್ಟ್‌ಫೋನ್‌ಗಳು ಹೇಗೆ ಅನುಕೂಲವಾಗಿದೆಯೋ ಅಷ್ಟೇ ಹಾನಿಕಾರಕವಾಗಿದೆ. ಸ್ಮಾರ್ಟ್‌ಫೋನ್‌ನ ಅತಿಯಾದ ಬಳಕೆಯಿಂದ ಕಣ್ಣುಗಳಿಗೆ(Eyes) ಹಾನಿಯಾಗುತ್ತದೆ ಮತ್ತು ಇದರಿಂದ ನಿದ್ರಾಹೀನತೆಯ ಸಮಸ್ಯೆಯೂ ಎದುರಾಗುತ್ತದೆ. ಅಚ್ಚರಿಯ ಸಂಗತಿಯೆಂದರೆ ಇದು ಕಣ್ಣುಗಳ ಹೊರತಾಗಿ ಇತರ ರೀತಿಯಲ್ಲಿ ಕೂಡ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದರಿಂದ ಹೊರಸೂಸುವ ವಿಕಿರಣ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಜನರು ಯಾವಾಗಲೂ ಮೊಬೈಲ್ ಫೋನ್‌ಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದ ಕೆಟ್ಟ ಅಭ್ಯಾಸವಾಗಿದೆ. ವಿಕಿರಣದಿಂದಾಗಿ ಫೋನ್ ಅನ್ನು ಎಲ್ಲಿ ಇಡಬಾರದು ಅಂದರೆ ದೇಹಕ್ಕೆ ಹತ್ತಿರವಾದ ಜಾಗದಲ್ಲಿ ಇಡಬಾರದು ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಮೊಬೈಲ್ ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ ನೋಡಿ.
ದಿಂಬಿನ ಕೆಳಗೆ
ಯುವಕರು ಸಾಮಾನ್ಯವಾಗಿ ತಮ್ಮ ಬಳಿ ಫೋನ್ ಇಟ್ಟುಕೊಂಡಿರುತ್ತಾರೆ. ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಮೊಬೈಲ್ ಇಡುತ್ತಾರೆ. ತಜ್ಞರ ಪ್ರಕಾರ, ಮೊಬೈಲ್‌ನಿಂದ ಹೊರಸೂಸುವ ವಿಕಿರಣವು ಮೆದುಳಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ತಲೆದಿಂಬಿನ ಕೆಳಗೆ ಫೋನ್ ಅನ್ನು ನಿರಂತರವಾಗಿ ಇಟ್ಟುಕೊಳ್ಳುವವರಿಗೆ ಒಮ್ಮೊಮ್ಮೆ ತಲೆಸುತ್ತು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಪ್ಯಾಂಟ್ ಹಿಂದಿನ ಜೇಬಿನಲ್ಲಿ
ಹಲವರಿಗೆ ಹಿಂದಿನ ಜೇಬಿನಲ್ಲಿ ಫೋನ್ ಇಡುವ ಅಭ್ಯಾಸವಿದೆ. ಇತ್ತೀಚಿನ ದಿನಗಳಲ್ಲಿ ಫೋನ್ ಅನ್ನು ಹಿಂಬದಿಯ ಜೇಬಿನಲ್ಲಿ ಇಟ್ಟುಕೊಳ್ಳುವ ಟ್ರೆಂಡ್ ಯುವಜನತೆಯಲ್ಲಿ ಕಾಣಸಿಗುತ್ತದೆ. ಇದರಿಂದ ದೇಹಕ್ಕೆ ಹಾನಿಯಾಗುತ್ತದೆ. ತಜ್ಞರ ಪ್ರಕಾರ, ಈ ಸ್ಥಿತಿಯಲ್ಲಿ ಹೊಟ್ಟೆ ನೋವು ಮತ್ತು ಕಾಲುಗಳಲ್ಲಿ ನೋವಿನ ಸಮಸ್ಯೆ ಕಾಣಬಹುದು. ಅಲ್ಲದೆ, ಈ ತಪ್ಪಿನಿಂದಾಗಿ ನಿಮ್ಮ ಫೋನ್ ಒಡೆಯಬಹುದು ಅಥವಾ ಕಳ್ಳತನವಾಗಬಹುದು. ಆದ್ದರಿಂದ ಸ್ಮಾರ್ಟ್‌ಫೋನ್ ಅನ್ನು ಈ ರೀತಿ ಇಡುವುದನ್ನು ತಪ್ಪಿಸಿ.
ಶರ್ಟ್ ಜೇಬಿನಲ್ಲಿ
ಅನೇಕ ಬಾರಿ ಜನರು ಆತುರದಲ್ಲಿ ಫೋನ್ ಅನ್ನು ತಮ್ಮ ಶರ್ಟ್ ಜೇಬಿನಲ್ಲಿ ಇಡಲು ಪ್ರಾರಂಭಿಸುತ್ತಾರೆ. ಹೀಗೆ ಫೋನ್ ಇಟ್ಟುಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು ಎಂಬುದು ತಜ್ಞರ ಅಭಿಪ್ರಾಯ. ಹೃದಯಾಘಾತದಂತಹ ಗಂಭೀರ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಫೋನ್ ಅನ್ನು ಶರ್ಟ್ ಜೇಬಿನಲ್ಲಿ ಇಡುವ ಅಭ್ಯಾಸವನ್ನು ಮಾಡಿಕೊಳ್ಳಬೇಡಿ. ಫೋನ್‌ನಿಂದ ಹೊರಸೂಸುವ ವಿಕಿರಣವು ಹೃದಯವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕತೆ, ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ -ತಿಳಿದುಕೊಳ್ಳಿ
Winter Health: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಹಸಿರು ಬಟಾಣಿ ಸೇವಿಸಿ; ಪ್ರಯೋಜಗಳು ಇಲ್ಲಿವೆ