Pigmentation: ಪಿಗ್ಮೆಂಟೇಶನ್ ಸಮಸ್ಯೆಯಿಂದ ಮುಖದ ಅಂದ ಹಾಳಾಗಿದ್ದರೆ ಈ ಮನೆಮದ್ದುಗಳನ್ನು ಬಳಸಿ

ಆಲೋವೇರಾ ಅಥವಾ ಅಲೋವೆರಾ ಜೆಲ್​ ಚರ್ಮದ ಸಮಸ್ಯೆಗೆ ಅತ್ಯುತ್ತಮ  ಮದ್ದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಆಲೋವೆರಾವನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿ ಇದರಿಂದ ಕ್ರಮೇಣ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

Pigmentation: ಪಿಗ್ಮೆಂಟೇಶನ್ ಸಮಸ್ಯೆಯಿಂದ ಮುಖದ ಅಂದ ಹಾಳಾಗಿದ್ದರೆ ಈ ಮನೆಮದ್ದುಗಳನ್ನು ಬಳಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Feb 11, 2022 | 2:55 PM

ಮುಖದ ಸೌಂದರ್ಯ (Beauty) ಎಲ್ಲರಿಗೂ ಮುಖ್ಯ.  ಆದರೆ ಒತ್ತಡದ ಬದುಕು, ಸೂರ್ಯನ ಬಿಸಿಲು, ಅತಿಯಾದ ಗ್ಯಾಜೆಟ್​ಗಳ ಬಳಕೆಯಿಂದ ಮುಖದ ಚರ್ಮ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಮುಖದ ಮೇಲೆ ಕಪ್ಪು ಕಲೆಗಳು, ಚರ್ಮ ಕೆಂಪಾಗುವುದು, ಚರ್ಮ ಸುಟ್ಟಂತಾಗಿ ಕಪ್ಪಗಾಗುತ್ತದೆ. ಇದನ್ನು ಪಿಗ್ಮಂಟೇಶನ್ (Pigmentation)​ ಅಥವಾ ಮುಖದ ಮೇಲಿನ ಬಂಗು ಎಂದು ಕರೆಯುತ್ತಾರೆ.  ಇದು ಚರ್ಮಕ್ಕೆ ಯಾವುದೇ ರೀತಿಯ ಮಾಡುವುದಿಲ್ಲ. ಆದರೆ ಮುಖದ ಅಂದವನ್ನು ಕೆಡಿಸುತ್ತದೆ. ಮೇಕಪ್ (Makeup)​ ಮಾಡಿಕೊಂಡರೆ ಕಲೆಗಳು ಮುಚ್ಚುಹೋಗುತ್ತವೆ. ಅದರೆ ಮೇಕಪ್​ ಕೂಡ ಮುಖಕ್ಕೆ ಅಷ್ಟೇ ಹಾನಿಕಾರವಾಗಿರುವುದರಿಂದ ಬಳಕೆಯ ಮುನ್ನ ಎಚ್ಚರ ಅಗತ್ಯ. ಹೀಗಾಗಿ ಪಿಗ್ಮೆಂಟೇಶನ್​ ಸಮಸ್ಯೆಗಳಿಗೆ ಮನೆಮದ್ದು ಬಳಸುವುದು ಉತ್ತಮ ಜತೆಗೆ ಶಾಶ್ವತ ಪರಿಹಾರ ಕೂಡ ದೊರಕುತ್ತದೆ. ಹೀಗಾಗಿ ಈ ಸರಳ ವಿಧಾನಗಳನ್ನು ಬಳಸಿ ಮುಖದ ಮೇಲಿನ ಕಲೆಗಳನ್ನು ನಿವಾರಿಸಿಕೊಳ್ಳಿ.

ನಿಂಬೆ ರಸ: ವಿಟಮಿನ್​ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್​ ಗುಣಗಳನ್ನು ಹೊಂದಿರುವ  ನಿಂಬು ಮುಖದ ಮೇಲೆನ ಬಂಗು ಅಥವಾ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ನಿಂಬು ರಸದಲ್ಲಿ ಹತ್ತಿಯ ಉಂಡೆಯನ್ನು ನೆನಸಿ ಮುಖಕ್ಕೆ ಹಚ್ಚಿಕೊಳ್ಳಿ ಇದರಿಂದ ಕಲೆಗಳು ನಿವಾರಣೆಯಾಗುತ್ತದೆ.

ಆಲೋವೆರಾ: ಆಲೋವೇರಾ ಅಥವಾ ಅಲೋವೆರಾ ಜೆಲ್​ ಚರ್ಮದ ಸಮಸ್ಯೆಗೆ ಅತ್ಯುತ್ತಮ  ಮದ್ದು. ಪ್ರತಿದಿನ ರಾತ್ರಿ ಮಲಗುವ ಮುನ್ನ ಆಲೋವೆರಾವನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿ ಇದರಿಂದ ಕ್ರಮೇಣ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ. ಅಲ್ಲದೆ ನೀವು ಮೇಕಪ್​ ಹಾಕಿಕೊಳ್ಳುವ ಮೊದಲು ಚರ್ಮದ ರಕ್ಷಣೆಗೆ ಆಲೋವೆರಾವನ್ನು ಹಚ್ಚಿಕೊಳ್ಲಿ. ನಂತರ  ಒಂದೆರಡು ನಿಮಿಷ ಬಿಟ್ಟು ಪೌಂಡೇಶನ್​ ಕ್ರೀಮ್​ ಹಚ್ಚಿಕೊಳ್ಳಿ. ಇದರಿಂದ ಮೇಕಪ್​ ಕೂಡ ಮುಖದ ಮೇಲೆ ಹೆಚ್ಚು ಸಮಸಯ ಉಳಿಯುತ್ತದೆ.

ಆಲೂಗಡ್ಡೆ: ಕ್ಯಾಟೆಕೊಲೇಸ್ ಎನ್ನುವ ಅಂಶ ಮುಖವನ್ನು ಸ್ವಚ್ಛಗೊಳಿಸುತ್ತದೆ. ಬಂಗು, ಕಪ್ಪು ಕಲೆ,  ಕಾಂತಿ ಕಳೆದ ಚರ್ಮವನ್ನು ಸರಿಮಾಡುತ್ತದೆ. ಕ್ಯಾಟೆಕೊಲೇಸ್ ಅಂಶ ಆಲೋಗಡ್ಡೆಯಲ್ಲಿ ಇರುತ್ತದೆ. ಹೀಗಾಗಿ ಅದರ ರಸವನ್ನು ತೆಗೆದು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷ ಬಿಟ್ಟು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುವುದರಿಂದ ಮುಖದ ಸೌಂದರ್ಯ  ಉತ್ತಮವಾಗುತ್ತದೆ.

ಕಿತ್ತಳೆ ಸಿಪ್ಪೆ: ಆ್ಯಂಟಿ ಮೈಕ್ರೋಬಯಲ್​ ಮತ್ತು ವಿಟಮಿನ್​ ಸಿ ಅಂಶಗಳನ್ನು ಯಥೇಚ್ಛವಾಗಿ ಹೊಂದಿರುವ ಕಿತ್ತಳೆ ಸಿಪ್ಪೆ ನಿರ್ಜೀವ ಜೀವಕೋಶಗಳನ್ನು ತೊಡೆದುಹಾಕಿ ಮುಖವನ್ನು ಕಾಂತಿಯುತಗೊಳಿಸುತ್ತದೆ. ನೀವು ಕಿತ್ತಳೆ ಹಣ್ಣಿನ ಪೇಸ್​ ಮಾಸ್ಕ್​ಅನ್ನು ಕೂಡ ಹಾಕಿಕೊಳ್ಳಬಹುದು.

ಟೊಮೆಟೋ: ಮುಖದ ಅಂದವನ್ನು ಹೆಚ್ಚಿಸುವಲ್ಲಿ ಟೊಮೆಟೋ ಪಾತ್ರ ಬಹುದೊಡ್ಡದು. ಟೊಮೆಟೋವನ್ನು ಕತ್ತರಿಸಿ ಅದರ ಮೇಲೆ ಸಕ್ಕರೆಯನ್ನು ಹಾಕಿ ಮುಖಕ್ಕೆ ಉಜ್ಜುವುದರಿಂದ  ನೈಸರ್ಗಿಕ ಬ್ಲೀಚಿಂಗ್​ ಸಿಗುತ್ತದೆ. ಇದು ಚರ್ಮದ ಮೇಲಿರುವ ಸತ್ತ ಕೋಶಗಳನ್ನು ತೆಗೆದು ಹಾಕಿ ಚರ್ಮವನ್ನುಆಋಓಗ್ಯಯುತವಾಗಿಸುತ್ತದೆ.

ಮೊಸರು ಮತ್ತು ಅರಿಶಿನ: ಅರಿಶಿನ ಮತ್ತು ಮೊಸರಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿದೆರೆ ಕಪ್ಪು ಕಲೆಗಳ ಜತೆಗೆ ಸಣ್ಣ ಮಟ್ಟದ  ಬ್ಲೀಚಿಂಗ್​ ಕೂಡ ಆಗುತ್ತದೆ. ಹೀಗಾಗಿ ಮೊಸರು ಕೂಡ ಮುಖದ ಚರ್ಮಕ್ಕೆ ಉತ್ತಮ ಪದಾರ್ಥವಾಗಿದೆ. ಅರಿಶಿನದಲ್ಲಿರುವ ಆ್ಯಂಟಿ ಆಕ್ಸಿಡೆಂಟ್​​ ಅಂಶಗಳು ಮುಖದ ಮೇಲೆ ಆಗುವಮೊಡವೆಗಳನ್ನು ನಿವಾರಿಸುತ್ತದೆ. ಜತೆಗೆ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:

ಮಲಗಿದ ಕೂಡಲೇ ನಿದ್ರೆ ಬರಬೇಕೇ? ನಿದ್ರಾಹೀನತೆಯಿಂದ ದೂರ ಇರಲು ಈ ಮಾರ್ಗ ಅನುಸರಿಸಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ