Beauty Tips:ಔಷಧೀಯ ಸಸ್ಯವನ್ನು ಬಳಸಿ ನೈಸರ್ಗಿಕವಾಗಿ ಕಾಂತಿಯುತ ತ್ವಚೆ ಪಡೆಯಿರಿ ಇಲ್ಲಿದೆ ಮಾಹಿತಿ

| Updated By: ಅಕ್ಷತಾ ವರ್ಕಾಡಿ

Updated on: Oct 22, 2022 | 6:27 PM

ಯಾವುದೇ ವೈದ್ಯರ ಮೆಡಿಸಿನ್ ಇಲ್ಲದೇ ಕೆಲವ ನೈಸರ್ಗಿಕವಾಗಿ ಔಷಧೀಯ ಸಸ್ಯಗಳಿಂದಲೂ ಚರ್ಮದ ಆರೋಗ್ಯವನ್ನು ತಡೆಗಟ್ಟಬಹುದು. ಮಾಗಿಲೋಯ್ ಕ್ಲಿನಿಕಲ್ ಸಂಶೋಧನೆಯಿಂದ ತಿಳಿದುಬಂದಿದೆ.

Beauty Tips:ಔಷಧೀಯ ಸಸ್ಯವನ್ನು ಬಳಸಿ ನೈಸರ್ಗಿಕವಾಗಿ ಕಾಂತಿಯುತ ತ್ವಚೆ ಪಡೆಯಿರಿ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Image Credit source: tv9 Hindi
Follow us on

ಈ ಔಷಧೀಯ ಸಸ್ಯವು ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿನ ಸೂಕ್ಷ್ಮ ಗೆರೆಗಳು, ಸುಕ್ಕುಗಳು,ಕಪ್ಪು ಕಲೆಗಳು ಮತ್ತು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಮಾಗಿಲೋಯ್ ಕ್ಲಿನಿಕಲ್ ಸಂಶೋಧನೆಯಲ್ಲಿ ಕಂಡುಬಂದಿದೆ.

ಅಮೃತ ಬಳ್ಳಿಯು ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿಯಾಗಿದ್ದು, ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. ಇದರ ತೊಗಟೆಯು ಬೂದಿಮಿಶ್ರಿತ ಕಂದು ಬಣ್ಣವನ್ನು ಹೊಂದಿದ್ದು,ಇದು ಹಸಿರು ಮಿಶ್ರಿತ ಹಳದಿ ಬಣ್ಣದ ಹೂ ಬಿಡುತ್ತದೆ. ಇದು ಹೇರಳವಾಗಿ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು ದೇಹದ ಯಾವುದೇ ಸಮಸ್ಯೆಗಳಿಗೆ ಇದ್ದರಿಂದ ಪ್ರಯೋಜನವಿದೆ.

ನೈಸರ್ಗಿಕವಾಗಿ ಕಾಂತಿಯುತ ತ್ವಚೆ ಪಡೆಯಲು ಇಲ್ಲಿದೆ ಅಮೃತ ಬಳ್ಳಿಯ ಮನೆಮದ್ದು.

ಪ್ರಯೋಜನಗಳು:

ಈ ಔಷಧೀಯ ಸಸ್ಯವು ನಿಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿನ ಸೂಕ್ಷ್ಮ ಗೆರೆಗಳು, ಸುಕ್ಕುಗಳು,ಕಪ್ಪು ಕಲೆಗಳು ಮತ್ತು ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಮಾಗಿಲೋಯ್ ಕ್ಲಿನಿಕಲ್ ಸಂಶೋಧನೆಯಲ್ಲಿ ಕಂಡುಬಂದಿದೆ. ಇದರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿಂದಾಗಿ, ವಿವಿಧ ಚರ್ಮ ರೋಗಗಳಿಂದ ಚರ್ಮವನ್ನು ರಕ್ಷಿಸುವಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ.ಅದರ ಜೊತೆಗೆ ಪ್ರತಿ ದಿನ ನಿಮ್ಮ ಮುಖದ ಚರ್ಮಕ್ಕೆ ನೀವು ಇದನ್ನು ಬಳಸುವುದರಿಂದ ನೈಸರ್ಗಿಕವಾಗಿ ಕಾಂತಿಯುತ ತ್ವಚೆಯನ್ನು ಪಡೆಯಬಹುದು.

  • ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಗಳನ್ನು ನಿಯಂತ್ರಿಸುವ ಮೂಲಕ ಅಮೃತ ಬಳ್ಳಿಯು ಸ್ಪಷ್ಟ, ಸುಂದರ ಮತ್ತು ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಕುಷ್ಠರೋಗ, ಎಸ್ಜಿಮಾ ಅಥವಾ ಇಸುಬು ಮತ್ತು ಚರ್ಮದ ಗಂಟಿ ನಂತಹ ಗಂಭೀರ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
  •  ಕಪ್ಪು ಕಲೆಗಳು ಮತ್ತು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತದೆ.
  • ಇದು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ, ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಭಾರತೀಯ ಸಾಂಪ್ರದಾಯದಂತೆ ಪ್ರತಿಯೊಂದು ಮನೆಗಳಲ್ಲಿ ನೆಟ್ಟು ಬೆಳೆಸಲಾಗುತ್ತದೆ. ಜೊತೆಗೆ ಸಾಕಷ್ಟು ಔಷಧಗಳಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಇದನ್ನು ಪುಡಿ, ಕಷಾಯ ಅಥವಾ ಜ್ಯೂಸ್ ಸೇರಿದಂತೆ ವಿವಿಧ ರೀತಿಯಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ. ಯಾವುದೇ ಚರ್ಮದ ಸಮಸ್ಯೆಗಳು ಕಂಡು ಬಂದಲ್ಲಿ ಅಮೃತ ಬಳ್ಳಿಯನ್ನು ಪೇಸ್ಟ್ ಮಾಡಿ ಹಚ್ಚಬಹುದು. ಈ ಔಷಧೀಯ ಸಸ್ಯವು ಶಕ್ತಿಯುತವಾದ ರೋಗನಿರೋಧಕವನ್ನು ಉತ್ತೇಜಿಸುವ ಗುಣಲಕ್ಷಣಗಳನ್ನು ಹೊಂದಿದೆ.

ಇದನ್ನು ಓದಿ:Cataract: ಆರಂಭಿಕ ಕಣ್ಣಿನ ಪೊರೆಯಂತಹ ಸಮಸ್ಯೆಗೆ ಇಲ್ಲಿದೆ ತಜ್ಞರ ಸಲಹೆ

ಜ್ವರನಿವಾರಕ, ಉರಿಯೂತದ ಮತ್ತು ಉತ್ಕರ್ಷಣ ನಿರೋಧಕವಾಗಿ ಎಲ್ಲಾ ವೈದ್ಯಕೀಯ ವೈಪರೀತ್ಯಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವ ಔಷಧವಾಗಿದೆ.
ಉರಿಯೂತ ಮತ್ತು ಮೊಡವೆಗಳನ್ನು ಕಡಿಮೆ ಮಾಡುವುದು ಸೇರಿದಂತೆ ಹಲವಾರು ವಿಧಗಳಲ್ಲಿ ಈ ಔಷಧೀಯ ಸಸ್ಯ ಚರ್ಮಕ್ಕೆ ಬಹಳಷ್ಟು ಉಪಯುಕ್ತವಾಗಿದೆ. ಇದು ಚರ್ಮಕ್ಕೆ ಹೊಸ ಕಾಂತಿ ನೀಡಿ ನೈಸರ್ಗಿಕ ಹೊಳಪನ್ನು ನೀಡುತ್ತದೆ.

Published On - 6:09 pm, Sat, 22 October 22