
ಕಲೆಗಾರರು (Artist) ಏನಕ್ಕೂ ಪ್ರಯೋಜನವಿಲ್ಲ ಎಂದು ನಾವು ಎಸೆಯುವ ವಸ್ತುವಿನಲ್ಲೂ ಏನೋ ವಿಶೇಷವನ್ನು ಕಾಣುತ್ತಾರೆ. ಹೀಗೆ ಕಸದಿಂದ ರಸ ಎಂಬಂತೆ ಏನು ಉಪಯೋಗವಿಲ್ಲ ಎಂದು ಬಿಸಾಡಿದಂತಹ ವಸ್ತುಗಳಿಗೆ ಹೊಸ ರೂಪ ನೀಡುವ ಹಲವು ಕಲೆಗಾರರಿದ್ದಾರೆ. ಇವರುಗಳಲ್ಲಿ DIY ಆರ್ಟಿಸ್ಟ್ ಅಭಿನವ್ ಯಾದವ್ ಕೂಡಾ ಒಬ್ಬರು. ಇದೀಗ ಇವರು ಕಸದ ತೊಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದ ಕೆಟ್ಟು ಹೋದ ಹಳೆಯ ಫ್ರಿಡ್ಜ್‌ಗೆ ಹೊಸ ರೂಪವನ್ನು ನೀಡಿದ್ದಾರೆ. ಹೌದು ಇವರು ತಮ್ಮ ಕ್ರಿಯೆಟಿವಿಟಿಯನ್ನು ಬಳಸಿಕೊಂಡು ಹಳೆಯ ಫ್ರಿಡ್ಜನ್ನು ಶೂ ಕ್ಯಾಬಿನೆಟ್ (old fridge turned into a shoe cabinet)ಆಗಿ ಪರಿವರ್ತಿಸಿದ್ದಾರೆ. ಇವರ ಕ್ರಿಯೆಟಿವಿಟಿ, ತಾಳ್ಮೆ ಮತ್ತು ಕಲೆಗೆ ನೋಡುಗರು ತಲೆ ಬಾಗಿದ್ದಾರೆ.
ವಾರಣಾಸಿ ಮೂಲದ DIY ಆರ್ಟಿಸ್ ಅಬಿನವ್ ಯಾದವ್ ಹಳೆಯ ರೆಫ್ರಿಜರೇಟರನ್ನು ಶೂ ಕ್ಯಾಬಿನೇಟ್ ಆಗಿ ಪರಿವರ್ತಿಸಿದ್ದಾರೆ. ಗುಜರಿಯಲ್ಲಿ ಬಿದ್ದಿದ್ದ ರೆಫ್ರಿಜರೇಟರನ್ನು ಮನೆಗೆ ತಂದು ಅದಕ್ಕೊಂದು ಹೊಸ ರೂಪ ಕೊಟ್ಟು, ಚೆಂದವಾಗಿ ಶೂ ಕ್ಯಾಬಿನೆಟ್ ಆಗಿ ಪರಿವರ್ತಿಸಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೊದಲಿಗೆ ಫ್ರಿಡ್ಜನ್ನು ಚೆನ್ನಾಗಿ ತೊಳೆದು ಅದರಲ್ಲಿರುವ ತುಕ್ಕನ್ನೆಲ್ಲಾ ತೆಗೆದು, ಕ್ಲೀನ್ ಮಾಡಿದ ಬಳಿಕ ಬಿಳಿ ಪ್ರೈಮರ್ ಹಚ್ಚಿ, ಅದು ಒಣಗಿದ ಬಳಿಕ ಫ್ರಿಡ್ಜ್‌ನ ಹೊರ ಭಾಗಕ್ಕೆ ಚೆಂದದ ಡಿಸೈನ್ ಮಾಡಿ, ಫ್ರಿಡ್ಜ್ ಒಳಗೂ ಪೈಂಟ್ ಹಚ್ಚಿ ನೋಡಲು ತುಂಬಾನೇ ಆಕರ್ಷಕವಾಗಿರುವಂತಹ ಶೂ ಕ್ಯಾಬಿನೇಟನ್ನು ರೆಡಿ ಮಾಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲದಿರಲು ಈ ಅಭ್ಯಾಸಗಳೇ ಕಾರಣ ಎನ್ನುತ್ತಾರೆ ಚಾಣಕ್ಯ
ಜುಲೈ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 24.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಇದಂತೂ ತುಂಬಾನೇ ಅದ್ಭುತವಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಗೆಳೆಯ ನಿನ್ನ ಕ್ರಿಯೆಟಿವಿಟಿಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼ2 ಸಾವಿರ ಬೆಲೆಯ ಶೂ ಕ್ಯಾಬಿನೆಟ್ ಮಾಡಲು ಇವನು 20 ಸಾವಿರ ರೂ ಖರ್ಚು ಮಾಡಿದ್ದಾನೆʼ ಎಂದು ಹೇಳಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ