Literature : ಅಭಿಜ್ಞಾನ ; ಕಿರಂ ಈದ ಹುಲಿಯ ರಕ್ಷಣೆಗೆ ಧಾವಿಸುತ್ತಿದ್ದದ್ದು ಈ ಸಂದರ್ಭದಲ್ಲಿ

Ki Ram Nagaraj : ‘ಕಿರಂ ಅವರ ಪ್ರಿಯ ಶಿಷ್ಯ ಆಶಾದೇವಿ ಬಸವಣ್ಣನ ಮೇಲೆ ಸ್ತ್ರೀಸಂವೇದನೆಯ ಹಿನ್ನೆಲೆಯಲ್ಲಿ ನಿಷ್ಠುರವಾದ ಕಾಮೆಂಟನ್ನು ಮಾಡಿದರು. ಕಿರಂ ಪ್ರಿಯ ಶಿಷ್ಯೆ ಎಂಬ ಮಮಕಾರವನ್ನೂ ಬಿಟ್ಟು ಅವರ ಮೇಲೆ ಹರಿಹಾಯ್ದರು. ಇದರಿಂದ ನೊಂದುಕೊಂಡ ಆಶಾದೇವಿ, ಎಲ್ಲಿ ಜಲಪ್ರವೇಶ ಮಾಡುವರೋ ಎಂದು ನಾನು ಹೆದರಿ ಹೊಳೆಯ ದಿಕ್ಕಿಗೆ ಹೋಗದಂತೆ ಅವರ ಕಾವಲು ಕಾಯಬೇಕಾಯಿತು.’ ರಹಮತ್ ತರೀಕೆರೆ

Literature : ಅಭಿಜ್ಞಾನ ; ಕಿರಂ ಈದ ಹುಲಿಯ ರಕ್ಷಣೆಗೆ ಧಾವಿಸುತ್ತಿದ್ದದ್ದು ಈ ಸಂದರ್ಭದಲ್ಲಿ
ಪ್ರೊ. ಕಿ.ರಂ. ನಾಗರಾಜ
Follow us
ಶ್ರೀದೇವಿ ಕಳಸದ
|

Updated on:Jan 02, 2022 | 3:10 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಪ್ರದೀಪ ಮಾಲ್ಗುಡಿ ಸಂಪಾದಿಸಿದ ‘ನಿಜದ ನಾಡೋಜ’ ಕೃತಿಯಲ್ಲಿ ಲೇಖಕ ರಹಮತ್ ತರೀಕೆರೆ ಬರೆದ ‘ಮಾತೇ ಮಾಧ್ಯಮವಾಗಿದ್ದ ಕಿರಂ’ ಬರಹದಿಂದ.

*

ಭಾವಾವೇಶವು ಕಿರಂ ವ್ಯಕ್ತಿತ್ವದ ಬೇರ್ಪಡಿಸಲಾಗದ ಅಂಶ. ಅವರು ಭಾಗವಹಿಸುತ್ತಿದ್ದ ಸಭೆ-ಗೋಷ್ಠಿಗಳಲ್ಲಿ ತನ್ಮಯತೆ-ಧ್ಯಾನಗಳಿರುವಂತೆ, ಜಗಳ-ಜೋರುಗಳೂ ಇರುತ್ತಿದ್ದವು ಕೆಲವೊಮ್ಮೆ ಸಭಾತ್ಯಾಗದಂತಹ ನಾಟಕೀಯ ಘಟನೆಗಳು ನಡೆಯುತ್ತಿದ್ದವು. ಸಭೆಗಳಲ್ಲಿ ಅವರ ಇರುವಿಕೆಯೇ ಸಂಚಲನೆ ಉಂಟು ಮಾಡಿರುತ್ತಿತ್ತು. ತೀವ್ರವಾದ ಬೇಕು-ಬೇಡಗಳಿದ್ದ ಕಿರಂ, ತಮಗೆ ಒಪ್ಪಿಗೆಯಾಗದ ಅಥವಾ ಅಸಂಬದ್ಧವೆನಿಸುವ ಮಾತನ್ನು ಯಾರಾದರೂ ಆಡುತ್ತಿದ್ದರೆ, ಅವರ ಮೇಲೆ ಎರಗಿ ಹೋಗುತ್ತಿದ್ದರು.

ಅನೇಕ ಹಿರಿಯ ವಿದ್ವಾಂಸರೇ ಕಿರಂ ಅವರಿಗೆ ಸಹಮತವಿಲ್ಲದ ಮಾತುಗಳನ್ನಾಡಿ ಲಾಠಿಚಾರ್ಜಿಗೆ ಒಳಗಾಗಿರುವ ಹಲವಾರು ಪ್ರಕರಣಗಳಿವೆ, ಕಿರಂ ಅಭಿಮಾನಿಗಳಿಗೆ ಮೇಷ್ಟರು ಎದುರಾಳಿಗಳ ಮೇಲೆ ಮಾಡುತ್ತಿದ್ದ ‘ಆಕ್ರಮಣ’ ಕಂಡು ಖುಷಿಯಾಗುತ್ತಿತ್ತು. ಕೆಲವೊಮ್ಮೆ ಭಾಷಣಕಾರರು, ಕಿರಂ ಮೂಡನ್ನು ಗಮನಿಸಿ, ಜಾಣ್ಮೆಯಿಂದ ತಮ್ಮ ಧೋರಣೆಯನ್ನು ಬದಲಿಸಿ ಮಾತನಾಡುವುದೂ ಇರುತ್ತಿತ್ತು. ಕೆಟ್ಟ ಪ್ರಶ್ನೆಗಾರರಿಂದ ಒಳ್ಳೆಯ ಭಾಷಣಕಾರರನ್ನು ಉಳಿಸಬೇಕು ಅನಿಸಿದರೂ ಅಷ್ಟೆ, ಕಿರಂ ಈದ ಹುಲಿಯ ರಕ್ಷಣೆಗೆ ಧಾವಿಸುತ್ತಿದ್ದರು. ಈ ಭಾವಾವೇಶದ ಇಷ್ಟಾನಿಷ್ಟಗಳ ಕತ್ತಿವರಸೆಯಿಂದ ಸಭೆಗಳಲ್ಲಿ ಭಿನ್ನಮತಗಳ ವಿನಿಮಯಕ್ಕೆ ಬೇಕಾದ ವಾತಾವರಣವೂ ಕ್ಷೀಣವಾಗುತ್ತಿತ್ತು. ಕಿರಂ ಇವು ಮಾಡಿದ ಜಗಳ ಮರೆಯುತ್ತಿದ್ದರು. ಆದರೆ ಬೈಸಿಕೊಂಡವರಲ್ಲಿ ಕಹಿಯ ಪಸೆ  ಉಳಿದುಬಿಡುತ್ತಿತ್ತು.

ಒಮ್ಮೆ ಹೀಗಾಯಿತು. ಅದು ಕೂಡಲಸಂಗಮದಲ್ಲಿ ನಡೆದ ಬಸವಣ್ಣನನ್ನು ಕುರಿತ ವಿಚಾರ ಸಂಕಿರಣ, ಕಿರಂ ಅವರ ಪ್ರಿಯ ಶಿಷ್ಯ ಆಶಾದೇವಿ ಬಸವಣ್ಣನ ಮೇಲೆ ಸ್ತ್ರೀಸಂವೇದನೆಯ ಹಿನ್ನೆಲೆಯಲ್ಲಿ ನಿಷ್ಠುರವಾದ ಕಾಮೆಂಟನ್ನು ಮಾಡಿದರು. ಕಿರಂ ಪ್ರಿಯ ಶಿಷ್ಯೆ ಎಂಬ ಮಮಕಾರವನ್ನೂ ಬಿಟ್ಟು ಅವರ ಮೇಲೆ ಹರಿಹಾಯ್ದರು. ಇದರಿಂದ ನೊಂದುಕೊಂಡ ಆಶಾದೇವಿ, ಎಲ್ಲಿ ಜಲಪ್ರವೇಶ ಮಾಡುವರೋ ಎಂದು ನಾನು ಹೆದರಿ ಹೊಳೆಯ ದಿಕ್ಕಿಗೆ ಹೋಗದಂತೆ ಅವರ ಕಾವಲು ಕಾಯಬೇಕಾಯಿತು. ಇನ್ನೊಂದು ಸಭೆಯಲ್ಲಿ ನೋಡುತ್ತಿದ್ದೇನೆ. ವೇದಿಕೆಯ ಮೇಲೆ ಕುಳಿತಿದ್ದ ತಮ್ಮ ಶಿಷ್ಯೆಗೆ ಕಿರಂ ಮೆಲ್ಲಗೆ ಬಂದು ಪೊಟ್ಟಣವೊಂದನ್ನು ಮುಚ್ಚಿಟ್ಟುಕೊಂಡು ಕೊಟ್ಟು ಹೋದರು. ಅವರ ಪಕ್ಕದಲ್ಲಿದ್ದ ನಾನು ಏನೆಂದು ವಿಚಾರಿಸಿದೆ. ‘ಯಾವುದೊ ಅಗತ್ಯ ಔಷಧಿ ಬೇಕಿತ್ತು. ಮೇಷ್ಟರು ಮೆಡಿಕಲ್ ಶಾಪಿಗೆ ಹೋಗಿದ್ದರು’ ಎಂದು ಉತ್ತರಿಸಿದರು. ಬಸವಣ್ಣ ಹೇಳುವಂತೆ, ಕಿರಂ, ಒಂದು ಕೈಯಲ್ಲಿ ಓಜುಗಟ್ಟಿಗೆ ಇನ್ನೊಂದು ಕೈಯಲ್ಲಿ ಹಾಲಬಟ್ಟಲು ಹಿಡಿದು, ಬಡಿದು ಕುಡಿಸುವ ತಂದೆ. ಬಡಿತದ ಗಾಯಕ್ಕೆ ಹಾಲಿನ ಮುಲಾಮು.

Abhijnana anecdote from Kannada Writer Rahamat Tarikere Article on Kiram Nagaraj Edited By Pradeep Malgudi Nijada Nadoja

ಲೇಖಕ ರಹಮತ್ ತರೀಕೆರೆ ಮತ್ತು ಈ ಕೃತಿಯ ಸಂಪಾದಕ ಪ್ರದೀಪ್ ಮಾಲ್ಗುಡಿ

ಶಿಷ್ಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಸಾಹಿತ್ಯ ಅಭಿರುಚಿ ಹುಟ್ಟಿಸಲು ಜೀವಮಾನವಿಡೀ ಮಾತಾಡಿದ ಕಿರಂ, ಅವರಿಗೆ ಹಣ ಮತ್ತು ಅಧಿಕಾರದ ಮೋಹವಿರಲಿಲ್ಲ. ಇದು ಅವರಿಗೆ ದೊಡ್ಡ ನೈತಿಕತೆಯನ್ನು ದೊರಕಿಸಿತ್ತು. ಅವರು ವ್ಯವಸ್ಥೆಯ ವಿರುದ್ಧದ ಚಳುವಳಿಗಳಲ್ಲಿ ಪರಿಣಾಮ ಲೆಕ್ಕಿಸದೆ ಭಾಗವಹಿಸುತ್ತಿದ್ದರು. ಅಷ್ಟೇ ಏಕೆ, ಕಳೆದ 30-40 ವರ್ಷಗಳ ಕರ್ನಾಟಕದ ಸಾಂಸ್ಕೃತಿಕ ಚಳವಳಿಗಳಲ್ಲಿ ಕಿರಂ ಪಾತ್ರವು ನೆಲದ ಮರೆಯ ನಿದಾನದಂತಿದೆ. ಈ ಪಾತ್ರವು ತಮ್ಮ ಶಿಷ್ಯ ಸಿದ್ಧಲಿಂಗಯ್ಯನವರ ‘ಹೊಲೆಮಾದಿಗರ ಹಾಡು’ ಸಂಕಲನಕ್ಕೆ ಹಿನ್ನುಡಿ ಮಾತು ಬರೆದು ಪ್ರಕಟಿಸುವುದರಿಂದ ಶುರುವಾಗುತ್ತದೆ. ಈ ಕಾವ್ಯವೂ ಮೌನವಾಗಿ ಓದಿಕೊಳ್ಳುವ ಪದ್ಧತಿಗೆ ಬದಲಾಗಿ, ಗಟ್ಟಿಯಾಗಿ ಹಾಡಿಕೊಳ್ಳಬೇಕು ಎಂದು ಸೂಚನೆಯುಳ್ಳ ಮೌಖಿಕ ಸಂಪ್ರದಾಯದ್ದು ಎನ್ನುವುದು ಗಮನಾರ್ಹ.

ಸೌಜನ್ಯ : ಸಂಸ ಪ್ರಕಾಶನ, ಬೆಂಗಳೂರು. 9844086993

ಇದನ್ನೂ ಓದಿ : Literature : ಅಭಿಜ್ಞಾನ ; ‘ನೀನು ಕನ್ನಡದಲ್ಲಿ ಬರೆಯಬೇಕು’ ಬಿಎಂಶ್ರೀ ಶೇಷಗಿರಿರಾಯರಿಗೆ ಹೇಳಿದ್ದು ಈ ಕಾರಣಕ್ಕೆ

Published On - 12:29 pm, Sun, 2 January 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ