Literature : ಅಭಿಜ್ಞಾನ ; ‘ನೀನು ಕನ್ನಡದಲ್ಲಿ ಬರೆಯಬೇಕು’ ಬಿಎಂಶ್ರೀ ಶೇಷಗಿರಿರಾಯರಿಗೆ ಹೇಳಿದ್ದು ಈ ಕಾರಣಕ್ಕೆ

L S Sheshagiri Rao : ಕಷ್ಟದ ದಿನಗಳು, ಆದರೂ ಶೇಷಗಿರಿರಾಯರು ಇಂಟರ್ ಮೀಡಿಯಟ್‌ನಲ್ಲಿ ಪ್ರಥಮ ದರ್ಜೆ ಗಳಿಸಿದ್ದು ಮಾತ್ರವಲ್ಲದೆ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದಿದ್ದರು. ಹೀಗಾಗಿ ಬಿ.ಇ.ಕೋರ್ಸಿಗೆ ಅರ್ಜಿ ಸಲ್ಲಿಸಿದರು. ಆಗ ಅವರ ಶಾಲಾಗೆಳೆಯ ಎಚ್.ವೈ. ಶಾರದಾ ಪ್ರಸಾದ್ ಪತ್ರ ಬರೆದು, ‘ನಿನಗೆ ಇಂಗ್ಲೀಷ್‌ನಲ್ಲಿ ಫಸ್ಟ್ ರ‍್ಯಾಂಕ್ ಬಂದಿದೆ ಇಂಗ್ಲೀಷ್ ಆನರ್ಸಗೆ ಅರ್ಜಿ ಹಾಕು ಸಬ್ಜೆಕ್ಟ್ ಸ್ಕಾಲರ್‌ಶಿಪ್ ಸಿಗುತ್ತದೆ’ ಎಂದರು.

Literature : ಅಭಿಜ್ಞಾನ ; ‘ನೀನು ಕನ್ನಡದಲ್ಲಿ ಬರೆಯಬೇಕು’ ಬಿಎಂಶ್ರೀ ಶೇಷಗಿರಿರಾಯರಿಗೆ ಹೇಳಿದ್ದು ಈ ಕಾರಣಕ್ಕೆ
ಪ್ರೊ. ಎಲ್. ಎಸ್. ಶೇಷಗಿರಿರಾವ್
Follow us
|

Updated on:Jan 01, 2022 | 10:22 AM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಪತ್ರಕರ್ತ ಎನ್. ಎಸ್. ಶ್ರೀಧರ ಮೂರ್ತಿ ಅವರ ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆ- ಎಲ್. ಎಸ್. ಶೇಷಗಿರಿ ರಾವ್ ಕೃತಿಯಿಂದ

*​

ಶೇಷಗಿರಿರಾಯರು ಹದಿನಾಲ್ಕನೇ ವಯಸ್ಸಿಗೆ ಇಂಟರ್ ಮೀಡಿಯಟ್‌ಗೆ ಬಂದರು. ಸರ್ಕಾರಿ ಕಾಲೇಜಿಗೆ ಓದಲು ಸೇರಿದರು. ಒಂದು ರೀತಿಯಲ್ಲಿ ಈ ದಿನಗಳು ಅವರ ಜೀವನದಲ್ಲಿ ಕಷ್ಟದ ದಿನಗಳು ಎನ್ನಿಸಿದ್ದವು. ಕನ್ನಡ ಮಾಧ್ಯಮದಿಂದ ಬಂದ ಅವರಿಗೆ ಇಂಗ್ಲೀಷ್ ಮಾಧ್ಯಮಕ್ಕೆ ಹೊಂದಿಕೊಳ್ಳುವುದು ಕಷ್ಟವಾಯಿತು. ವಿಜ್ಞಾನದ ವಿಷಯಗಳನ್ನು ಕಲಿಯುವುದು ಇನ್ನೂ ಕಷ್ಟ ಎನ್ನಿಸಿತು. ಇದರ ಜೊತೆಗೆ ಗೆಳೆಯರ ಬಳಗ ಕೂಡ ಬದಲಾಗಿತ್ತು. ಅವರ ಆತ್ಮೀಯ ಗೆಳೆಯರಲ್ಲಿ ಹಲವರು ಉತ್ತೀರ್ಣರಾಗದೆ ಉಳಿದರೆ, ಕೆಲವರ ಆಯ್ಕೆ ಬೇರೆ ಕಾಲೇಜ್ ಆಗಿತ್ತು. ಎಲ್ಲರೂ ಹೊಸಬರೇ. ಇದರ ಜೊತೆಗೆ ಮನೆಯಲ್ಲಿ ಕೂಡ ಆಗ ಕಷ್ಟದ ದಿನಗಳು ನಡೆಯುತ್ತಿದ್ದವು. ಹೀಗಿದ್ದರೂ ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳದ ಶೇಷಗಿರಿರಾಯರು ಇಂಟರ್ ಮೀಡಿಯಟ್‌ನಲ್ಲಿ ಪ್ರಥಮ ದರ್ಜೆ ಗಳಿಸಿದ್ದು ಮಾತ್ರವಲ್ಲದೆ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದಿದ್ದರು. ಹೀಗಾಗಿ ಬಿ.ಇ.ಕೋರ್ಸಿಗೆ ಅರ್ಜಿ ಸಲ್ಲಿಸಿದರು. ಆಗ ಅವರ ಶಾಲಾಗೆಳೆಯ ಎಚ್.ವೈ. ಶಾರದಾ ಪ್ರಸಾದ್ ಪತ್ರ ಬರೆದು, ‘ನಿನಗೆ ಇಂಗ್ಲೀಷ್‌ನಲ್ಲಿ ಫಸ್ಟ್ ರ‍್ಯಾಂಕ್ ಬಂದಿದೆ ಇಂಗ್ಲೀಷ್ ಆನರ್ಸಗೆ ಅರ್ಜಿ ಹಾಕು ಸಬ್ಜೆಕ್ಟ್ ಸ್ಕಾಲರ್‌ಶಿಪ್ ಸಿಗುತ್ತದೆ’ ಎಂದು ತಿಳಿಸಿದರು, ಗೆಳೆಯನ ಈ ಪತ್ರ ಶೇಷಗಿರಿರಾಯರನ್ನು ಸಾಹಿತ್ಯದತ್ತ ಎಳೆದು ತಂದಿತು. ಜೊತೆಗೆ ತಂದೆ ಸ್ವಾಮಿರಾಯರಿಗೆ ನಿವೃತ್ತಿ ದಿನ ಹತ್ತಿರ ಬಂದಿತ್ತು. ಆದಷ್ಟು ಬೇಗ ಓದನ್ನು ಮುಗಿಸಿ ತಂದೆಗೆ ನೆರವಾಗುವ ಉದ್ದೇಶವೂ ಶೇಷಗಿರಿರಾಯರನ್ನು ಆನರ್ಸ್ ಕಡೆಗೆ ಎಳೆದು ತಂದಿತು. ಮೈಸೂರಿನಲ್ಲಿಯೇ ಅಕ್ಕನ ಮನೆ ಇದ್ದಿದ್ದೂ ಈ ನಿರ್ಧಾರಕ್ಕೆ ಇನ್ನೊಂದು ಕಾರಣವಾಯಿತು. ಆದರೆ ಈ ಎಲ್ಲಾ ಗೊಂದಲಗಳ ನಡುವೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅರ್ಜಿ ಹಾಕುವ ಸಮಯ ಆಗಿತ್ತು. ಆತಂಕದಿಂದಲೇ ಶೇಷಗಿರಿರಾಯರು ಅಲ್ಲಿನ ಪ್ರಿನ್ಸಿಪಾಲ್ ರಾಲೋ ಅವರಿಗೆ ತಮ್ಮ ಆತಂಕ ವಿವರಿಸಿ ಅರ್ಜಿಗಾಗಿ ಪತ್ರ ಬರೆದರು. ಅದಕ್ಕೆ ಬಂದ ಉತ್ತರ ಹೀಗಿತ್ತು.

‘My young friend, rules do not apply to the student who gets the First Rank in the examination. I have  asked the office to send an application form. Fill it and return early’

Abhijnana excerpt from Bharatiya Sahitya Nirmapakaru LS Sheshagiri Rao by Journalist NS Sreedhar Murthy

ಎನ್. ಎಸ್. ಶ್ರೀಧರ ಮೂರ್ತಿ ಬರೆದ ಈ ಕೃತಿ ಫೆ. 16ರಿಂದ ಲಭ್ಯ

ಆದರೆ ಈ ಕಥೆಗೆ ಇನ್ನೊಂದು ತಿರುವು ಕೂಡ ಲಭಿಸಿತು. ಇಷ್ಟೆಲ್ಲಾ ವಿದ್ಯಮಾನಗಳು ನಡೆಯುವ ಹೊತ್ತಿಗೆ ಸೆಂಟ್ರಲ್ ಕಾಲೇಜ್‌ನಲ್ಲಿಯೇ ಆನರ್ಸ್​ ಆರಂಭಿಸಲು ತೀರ್ಮಾನಿಸಲಾಗಿತ್ತು. ಬಿ.ಎಂ.ಶ್ರೀಯವರು ನಿವೃತ್ತಿಯ ಹಂತಕ್ಕೆ ಬಂದಿದ್ದರು. ಅವರಿಗೆ ಆನರ್ಸ್​ಗೆ ಪಾಠ ಹೇಳಬೇಕು ಎನ್ನುವ ಅದಮ್ಯ ಆಕಾಂಕ್ಷೆ ಇತ್ತು. ಒಂದು ರೀತಿಯಲ್ಲಿ ಅವರ ಇಚ್ಛೆ ಪೂರೈಸಲೆಂದೇ ಆನರ್ಸ್ ಆರಂಭವಾಗಿತ್ತು. ಹೀಗಾಗಿ ಶೇಷಗಿರಿರಾಯರಿಗೆ ಕಾಲೇಜಿನಿಂದಲೇ ಸಂದರ್ಶನ ಪತ್ರ ಸಿಕ್ಕಿತು. ಸಂದರ್ಶನದಲ್ಲಿ ಬಿ.ಎಂ.ಶ್ರೀಯವರೇ ಪರೀಕ್ಷಕರು. ರಾಯರ ಅಂಕಪಟ್ಟಿ ನೋಡಿದ ಕೂಡಲೇ ಶ್ರೀಯವರು,

‘You get the first place. So there is no problem about admission’

ಎಂದವರೇ ಇನ್ನೊಂದು ಮುಖ್ಯವಾದ ಪ್ರಶ್ನೆಯನ್ನು ಕೇಳಿದರು,

‘What will you do after your Honours?’

ಈ ಅನಿರೀಕ್ಷಿತ ಪ್ರಶ್ನೆಗೆ ಶೇಷಗಿರಿ ರಾಯರು ಏನು ಉತ್ತರಿಸಬೇಕು ಎಂದು ತಿಳಿಯದೆ,

‘I suppose I will take up a job’ ಎಂದರು.

ಶ್ರೀಯವರು ತಕ್ಷಣವೇ ‘No, that is not what I mean, What are you going to do for your lanaguge’ ಎಂದು ಪ್ರಶ್ನಿಸಿದರು.

ಮುಂದೆ ಅವರೇ ತಮ್ಮ ಪ್ರಶ್ನೆಗೆ ಉತ್ತರವನ್ನೂ ಹೀಗೆ ಹೇಳಿದರು.

‘See, we are at such a stage that anything you bring from another literature will be of immense value for us. Kannada has to develop. If you can just write an article on a sonnet that will be helpful. If you write in English on the sonnet people in America and England will not read it. But you write something for your people in Kannada they will be grateful to you. I expect you to do it’

ಈ ಮಾತುಗಳು ಒಂದು ರೀತಿಯಲ್ಲಿ ಮುಂದೆ ಶೇಷಗಿರಿರಾಯರ ಬರಹದ ಬದುಕು ರೂಪುಗೊಳ್ಳಲು ಕಾರಣವಾದವು.

ಸೌಜನ್ಯ : ಕೇಂದ್ರ ಸಾಹಿತ್ಯ ಅಕಾಡೆಮಿ

ಇದನ್ನೂ ಓದಿ : Gandhiji : ಅಭಿಜ್ಞಾನ ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಗಾಂಧಿ ಕಥನ’ದ ಆಯ್ದ ಭಾಗ

Published On - 10:20 am, Sat, 1 January 22

ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಟ್ರಾಫಿಕ್ ಪೊಲೀಸ್​ಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಎಳೆದೊಯ್ದ ಚಾಲಕ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ
ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಕಾರ್ಯಕ್ರಮದಲ್ಲಿ ಭಾಗಿ