Vaishaliyaana : ಲೇಖಕಿ ಡಾ. ಕೆ. ಎಸ್. ವೈಶಾಲಿಯವರ ಅಂಕಣ ‘ವೈಶಾಲಿಯಾನ‘ ನಾಳೆಯಿಂದ ನಿಮ್ಮ ಓದಿಗೆ

Language : ‘ಭಾಷೆಯ ಮೂಲಕ ಪ್ರಪಂಚವನ್ನು ಅವಲೋಕಿಸಿ, ಬಣ್ಣಿಸುವ ಪ್ರಕ್ರಿಯೆಯೆಂದರೆ ವಾಸ್ತವತೆಯ ಮೇಲೆ ಹಿಡಿತ ಸಾಧಿಸುವ ಒಂದು ಕ್ರಮ. ಏಕೆಂದರೆ, ಭಾಷೆಯ ಸಹಾಯದಿಂದ ನಾವು ಅದನ್ನು ಸೆರೆಹಿಡಿದು ಒಂದು ಚೌಕಟ್ಟಿನಲ್ಲಿ ಸಂಯೋಜಿಸುತ್ತೇವೆ ಅಲ್ಲವೇ? ಬಹುಶಃ ಹೀಗಿರುವುದರಿಂದಲೇ ಭಾಷೆಗೆ ಒಂದು ವಿಶೇಷವಾದ ಶಕ್ತಿಯಿದೆ.’ ಡಾ. ಕೆ. ಎಸ್. ವೈಶಾಲಿ

Vaishaliyaana : ಲೇಖಕಿ ಡಾ. ಕೆ. ಎಸ್. ವೈಶಾಲಿಯವರ ಅಂಕಣ ‘ವೈಶಾಲಿಯಾನ‘ ನಾಳೆಯಿಂದ ನಿಮ್ಮ ಓದಿಗೆ
Follow us
ಶ್ರೀದೇವಿ ಕಳಸದ
|

Updated on: Jan 07, 2022 | 3:38 PM

ವೈಶಾಲಿಯಾನ | Vaishaliyaana : ಡಾ. ಕೆ. ಎಸ್. ವೈಶಾಲಿ (Dr. K.S. Vaishali) ಬೆಂಗಳೂರು ವಿಶ್ವವಿದ್ಯಾನಿಲಯದ, ಜ್ಞಾನ ಭಾರತಿಯ, ಆಂಗ್ಲ ಸಾಹಿತ್ಯ ಅಧ್ಯಯನ ಸ್ನಾತಕೋತ್ತರ ವಿಭಾಗದಲ್ಲಿ ಪ್ರಾಧ್ಯಾಪಕಿ. ಇಂಗ್ಲಿಷ್, ಕನ್ನಡ ಭಾಷೆಗಳಲ್ಲಿ ಬರೆಯುವ ಇವರು ಅನುವಾದಕಿ ಕೂಡ. ಇಂಗ್ಲಿಷ್‌ನಲ್ಲಿ ‘ಪ್ರಿಸನಿಂಗ್ ರಿದಮ್ಸ್’ ಹಾಗೂ ‘ಮೆಟಮಾರ್ಫಿಕ್ ಜರ್ನೀಸ್’ ಎಂಬ ಎರಡು ಸ್ತ್ರೀವಾದಿ ವಿಮರ್ಶಾತ್ಮಕ ಕೃತಿಗಳನ್ನು ಹೊರತಂದಿದ್ದಾರೆ. ಇವರ ಅನುವಾದಿತ ಕಾದಂಬರಿಗಳಾದ ‘ಪದ್ಮರಾಗ’ ಕ್ರೈಸ್ಟ್​ ವಿಶ್ವವಿದ್ಯಾನಿಲಯದ ಕನ್ನಡ ಸಂಘದಿಂದ ಮತ್ತು ಒರ್ಹಾನ್ ಪಾಮುಕ್‌ರವರ ರಾಜಕೀಯ ಕಾದಂಬರಿ (Snow) ‘ಹಿಮ’ ಸೃಷ್ಟಿ ಪ್ರಕಾಶನದಿಂದ ಹೊರಬಂದಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆಯೂ ಆಗಿರುವ ಇವರು ಭಾರತ ಒಳಗೊಂಡಂತೆ ಅಮೆರಿಕ, ಇಂಗ್ಲೆಂಡ್, ಕೆನಡಾ, ಥೈಲ್ಯಾಂಡ್ ಮೊದಲಾದ ದೇಶಗಳಲ್ಲಿ ಸಂಗೀತ ಕಛೇರಿಗಳನ್ನು, ವಿದೇಶಿ ವಿಶ್ವವಿಶ್ವವಿದ್ಯಾಲಯಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡಿ, ಸಂಗೀತ ಪ್ರೇಮಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ‘ದಿ ಹಿಂದೂ’ ಪತ್ರಿಕೆಯಲ್ಲಿ ಇವರು ಬರೆದ ಸುಮಾರು 90ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದಾರೆ. 

*

ನಾಳೆಯಿಂದ ಹದಿನೈದು ದಿನಕ್ಕೊಮ್ಮೆ (ಶನಿವಾರ) ಇವರ ಅಂಕಣ ವೈಶಾಲಿಯಾನ ಪ್ರಾರಂಭವಾಗಲಿದ್ದು, ಮುನ್ನಾದಿನ ಆಶಯವನ್ನು ಹಂಚಿಕೊಂಡಿದ್ದಾರೆ.

*

‘ವಾಸ್ತವತೆ’ ಎಂಬುದರ ಸ್ವರೂಪವನ್ನು ಸಂಯೋಜಿಸಿ ರೂಪಿಸುವುದೇ ‘ಭಾಷೆ’. ನಮ್ಮ ಸುತ್ತಲಿನ ಪ್ರಪಂಚವನ್ನು ಗ್ರಹಿಸುವ ಪರಿಯನ್ನು ಭಾಷೆಯೇ ನಿಯಂತ್ರಿಸುತ್ತದೆ. ಭಾಷೆಯ ಬುನಾದಿಯ ಮೇಲೆ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ… ಹೀಗೆ ಹಲವಾರು ಸಂಕೀರ್ಣ ಘಟಕಗಳು ಟಿಸಿಲೊಡೆದು, ಕವಲುಗಳಾಗಿ ವೈವಿಧ್ಯಮಯ ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಭಾಷೆಯ ಮೂಲಕ ಪ್ರಪಂಚವನ್ನು ಅವಲೋಕಿಸಿ, ಬಣ್ಣಿಸುವ ಪ್ರಕ್ರಿಯೆಯೆಂದರೆ ವಾಸ್ತವತೆಯ ಮೇಲೆ ಹಿಡಿತ ಸಾಧಿಸುವ ಒಂದು ಕ್ರಮ. ಏಕೆಂದರೆ, ಭಾಷೆಯ ಸಹಾಯದಿಂದ ನಾವು ಅದನ್ನು ಸೆರೆಹಿಡಿದು ಒಂದು ಚೌಕಟ್ಟಿನಲ್ಲಿ ಸಂಯೋಜಿಸುತ್ತೇವೆ ಅಲ್ಲವೇ? ಬಹುಶಃ ಹೀಗಿರುವುದರಿಂದಲೇ ಭಾಷೆಗೆ ಒಂದು ವಿಶೇಷವಾದ ಶಕ್ತಿಯಿದೆ. ವಾಸ್ತವತೆ ಎನ್ನುವ ಪರಿಕಲ್ಪನೆ ಭಾಷೆಯಿಂದಲೇ ನಿರ್ಮಾಣಗೊಂಡಿರುವುದರಿಂದ, ಭಾಷೆಯೇ ನಾವು ನೋಡುವ, ಅರ್ಥೈಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ವನಿಯೋಜಿತವಾಗಿ ನಿರ್ಧರಿಸುತ್ತಿರುತ್ತದೆ ಮತ್ತು ನಿರ್ಬಂಧಿಸುತ್ತದೆ ಕೂಡ. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಎಷ್ಟು ಜಟಿಲವಾಗಿ ಒಂದರೊಳಗೊಂದು ಹೆಣೆದುಕೊಂಡಿವೆಯೆಂದರೆ ಅವುಗಳನ್ನು ಬೇರ್ಪಡಿಸಿ ನೋಡುವುದು ಹಲವಾರು ಬಾರಿ ಒಂದು ರೀತಿಯ ದುಸ್ಸಾಹಸವೇ ಆಗಿ ಪರಿಣಮಿಸುತ್ತದೆ. ಶುಷ್ಕ, ನಿರರ್ಥಕ ಪ್ರಯತ್ನವಾಗುವ ಅಪಾಯವೂ ಇದೆ. ಆದ್ದರಿಂದ ನಾವು ಭಾಷೆಯ ಅಧ್ಯಯನದ ಜೊತೆಗೆ ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಗಳೂ ಬೆಸೆದುಕೊಂಡಿರುವುದನ್ನು ಮನಗಾಣಬಹುದಾಗಿದೆ.

Glossolalia ಎನ್ನುವ ಒಂದು ವಿಲಕ್ಷಣವಾದ ಸ್ಥಿತಿಯಿದೆ. ಅರೆ ಪ್ರಜ್ಞಾವಸ್ಥೆಯಲ್ಲಿ ಅಥವಾ ಒಂದು ಉತ್ಕಟವಾದ ಭಾವಾವೇಶದ ಕ್ಷಣಗಳಲ್ಲಿ ನಾವು ಬಡಬಡಿಸುವುದು ಯಾರಿಗೂ ಅರ್ಥವಾಗದೇ ಹೋಗಬಹುದು. ಭಾಷಾತಜ್ಞರೊಬ್ಬರ ಪ್ರಕಾರ ಒಂದು ಬಹುಭಾಷಿಕ ನೆಲೆಯ ಸಂದರ್ಭದಲ್ಲಿ, ಅನುವಾದಕರಿಲ್ಲದ ಪರಿಸ್ಥಿತಿಯಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡುವ ನಾವೆಲ್ಲರೂ ಮತ್ತೊಂದು ಭಾಷೆಯಲ್ಲಿ ವ್ಯವಹರಿಸುವ ಜನರಿಗೆ ಗ್ಲೋಸೋಲಾಲಿಯದಿಂದ ಬಳಲುತ್ತಿರುವಂತೆಯೇ ಭಾಸವಾಗುತ್ತೇವೆ. ನಮ್ಮ ಪ್ರಸಕ್ತ ಆಧುನಿಕೋತ್ತರ ಪ್ರಪಂಚದಲ್ಲಿ ಯಾವುದೇ ಕ್ಲಿಷ್ಟವಾದ ಪರಿಕಲ್ಪನೆ ಅಥವಾ ವಿಚಾರವನ್ನು ಅರ್ಥೈಸಿಕೊಳ್ಳವುದರ ಬಗ್ಗೆಯೇ ಅನುಮಾನಗಳು ಮೂಡತೊಡಗಿವೆ. ಯಾವ ವಿಷಯದ ಕುರಿತಾದರೂ ಸತ್ಯಕ್ಕೆ ಸಮೀಪವಾದ ಒಂದು ಪ್ರಾಮಾಣಿಕ ಪ್ರತಿನಿಧೀಕರಣದ ಬಗ್ಗೆಯೇ ನಮ್ಮಲ್ಲಿ ಗುಮಾನಿಗಳಿವೆ. ಆತಂಕ ಉಂಟಾಗುತ್ತದೆ. ಈ ಗಮನಾರ್ಹ ಅಂಶಗಳು ನಾವು ಭಾಷೆ- ಸಾಹಿತ್ಯ- ಸಂಸ್ಕೃತಿಯ ಅಧ್ಯಯನಗಳಲ್ಲಿ ವಿಶ್ಲೇಷಣೆಯ ವಿಭಿನ್ನ ಕ್ರಮಗಳ ಕಲಿಕೆಗಾಗಿ ನಮ್ಮ ಪಠ್ಯ ಕ್ರಮಗಳಲ್ಲಿ ಪ್ರಮುಖವಾದ ಸ್ಥಾನವನ್ನು ಮೀಸಲಿಡಬೇಕಾದ ಅವಶ್ಯಕತೆಯನ್ನು ಸಾರಿ ಹೇಳುತ್ತವೆ.

ಸುಮಾರು ಎರಡು ದಶಕಗಳಿಂದ ಬೆಂಗಳೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ ಸ್ನಾತಕೋತ್ತರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತ, ಪ್ರಸ್ತುತ ಆ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ನನ್ನನ್ನು ಮೇಲೆ ನಾನು ಪ್ರಸ್ತಾಪಿಸಿರುವ ವಿಷಯಗಳು ಬಹುವಾಗಿ ಕಾಡಿವೆ. ನನ್ನ ಅನೇಕ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಿಂದ ಬಂದವರಲ್ಲ. ಅವರಲ್ಲಿ ಇಂದಿಗೂ ಹಲವಾರು ಮಂದಿ ಮೊದಲ ತಲೆಮಾರಿನ ಸಾಕ್ಷರಸ್ಥರು ಅಥವಾ ಇಂಗ್ಲಿಷ್ ವ್ಯಾಸಂಗ ನಿರತರಲ್ಲಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಗಮನಿಸಿದಾಗ ಮೊದಲನೇ ತಲೆಮಾರಿನವರು. ಸಮಕಾಲೀನ ವಸಾಹತೋತ್ತರ ಭಾರತದ ಸಂದರ್ಭದಲ್ಲಿ, ಇಂಗ್ಲಿಷ್ ಭಾಷೆಗಿರುವ ಅತ್ಯಂತ ವೈಶಿಷ್ಟ್ಯಪೂರ್ಣವಾದ ಹಿನ್ನೆಲೆ ಮತ್ತು ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ರೂಢಿಗತವಾಗಿ ಬೆಳೆದು ಬಂದಿರುವ ವಸಾಹತುಶಾಹಿ ಮೌಲ್ಯಗಳು, ಪಠ್ಯಕ್ರಮಗಳಲ್ಲಿ ಕಂಡುಬರುವಂಥ ಜಡ್ಡುಗಟ್ಟಿದ, ಸಂಕುಚಿತ, ಪುರುಷ ಪ್ರಧಾನ ದೃಷ್ಟಿಕೋನಗಳು ಇಂಗ್ಲಿಷ್ ಪ್ರಾಧ್ಯಾಪಕಿಯ ಮೇಲೆ ದುಪ್ಪಟ್ಟು ಹೊರೆಯನ್ನೇ ಹೊರಿಸುತ್ತವೆ. ಇಂಗ್ಲಿಷ್ ನಮ್ಮನ್ನು ಆಳಿದವರ ಭಾಷೆಯಾದರೂ, ವಸಾಹತೀಕರಣದ ಪರಿಣಾಮವಾಗಿ ಎಷ್ಟು ಘಾಸಿಗೊಂಡಿದ್ದೇವೆಂಬುದರ ಅನಾವರಣವನ್ನೂ ಮಾಡಲು ಇಂಗ್ಲಿಷ್ ಶಿಕ್ಷಕಿಯೇ ಸಮರ್ಥಳಾಗಿದ್ದಾಳೆಂಬುದೂ ಒಂದು ವಿರೋಧಾಭಾಸವೇ ಸರಿ. ಇಂಗ್ಲಿಷ್ ಭಾಷೆ- ಸಾಹಿತ್ಯ-ಸಂಸ್ಕೃತಿಯ ಅಧ್ಯಯನ ವಿಮೋಚನೆಯ ಹಾದಿಯಾಗಿ ಪರಿಣಮಿಸುವುದು ಇಂಗ್ಲಿಷ್‌ನ ಮೂಲಕ ನಮ್ಮನ್ನು ವಿಚಲಿತಗೊಳಿಸುವ ಭಾಷಾ- ರಾಜಕಾರಣದ ಬಿಕ್ಕಟ್ಟುಗಳು, ಜಾತೀಯತೆ, ಧರ್ಮ, ಸಮುದಾಯ ಪ್ರಜ್ಞೆ, ಲಿಂಗ ಸಮಾನತೆ – ಇವೇ ಮೊದಲಾದ ವಿಷಯಗಳೊಡನೆ ಮುಖಾ-ಮುಖಿಯಾದಾಗ ಮಾತ್ರ ಎನ್ನುವುದು ನನ್ನ ಅಭಿಪ್ರಾಯ.

Vaishaliyana Column by Writer Feminist Dr KS Vaishali

ವೈಶಾಲಿಯವರ ಕೃತಿಗಳು

ಇಂದು ಇಂಗ್ಲಿಷ್ ವಿಶ್ವವ್ಯಾಪಿಯಾದ ಭಾಷೆ. ಕೇವಲ ದಕ್ಷಿಣ ಏಷ್ಯಾದಲ್ಲಿಯೇ ಇಂಗ್ಲಿಷ್ ಶಿಕ್ಷಣದ ಉದ್ಯಮ ಕೋಟ್ಯಂತರ ಡಾಲರ್‌ಗಳ ವಹಿವಾಟು ಆಗಿ ಮಾರ್ಪಟ್ಟಿದೆ. ಆದರೆ ಈ ಪರಿಮಾಣಾತ್ಮಕ ನೆಲೆಯಿಂದ ನಮಗೆ ಲಭ್ಯವಾಗುವ ಅಂಕಿ-ಅಂಶಗಳು ಗುಣಾತ್ಮಕವಾಗಿ ಯಾವ ಉಪಯುಕ್ತವಾದ ಒಳನೋಟವನ್ನೂ ನೀಡಲಾರವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸಂಖ್ಯಾತ ಜನರು ಇಂಗ್ಲಿಷ್ ಭಾಷೆಯನ್ನು ಬಳಸುತ್ತಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಯಾವ ಮನಸ್ಥಿತಿಯಲ್ಲಿ ಇಂಗ್ಲಿಷ್ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುತ್ತಿದ್ದಾರೆ, ಬೇರೆ ದಾರಿಯಿಲ್ಲದೇ ನಿರುಪಾಯರಾಗಿ ಅದನ್ನು ಒಲ್ಲದ ಮನಸ್ಸಿನಿಂದ ಕಲಿಯುತ್ತಿದ್ದಾರೆಯೇ, ಅಥವಾ ನಿರ್ಲಿಪ್ತರಾಗಿ ಇಲ್ಲವೇ ಹತಾಶರಾಗಿ ಭಾಷಾ ಕಲಿಕೆಯಲ್ಲಿ ತೊಡಗಿದ್ದಾರೆಯೇ, ಯಾವ ಸಾಮಾಜಿಕ, ಆರ್ಥಿಕ, ರಾಜಕೀಯ ಕಾರಣಗಳಿಂದಾಗಿ ಜನರು ಇಂಗ್ಲಿಷ್ ಕಲಿಕೆಯ ಬಗ್ಗೆ ಅನಾದರ – ಅಸಡ್ಡೆ ತೋರುತ್ತಾರೆ ಎನ್ನುವುದೂ ಮುಖ್ಯವಾಗುತ್ತದೆ ಎಂದು ಹೇಳುವ ಡೇವಿಡ್ ಕ್ರಿಸ್ಟಲ್ ಎಂಬ ಭಾಷಾತಜ್ಞನ ಅಭಿಮತ ಇಲ್ಲಿ ಬಹಳ ಪ್ರಸ್ತುತವಾಗುತ್ತದೆ. ಇಂಥಾ ಕೆಲವು ಅನಿಸಿಕೆಗಳು, ಚಿಂತನೆ- ಜಿಜ್ಞಾಸೆಗಳನ್ನು ಹಂಚಿಕೊಳ್ಳಲು ಪ್ರಸ್ತುತ ಅಂಕಣವನ್ನು ಪ್ರಾರಂಭಿಸುತ್ತಿದ್ದೇನೆ. ನಮ್ಮ ಇಂದಿನ ಪರಿಸರದಲ್ಲಿ ಇಂಗ್ಲಿಷ್ ಅಧ್ಯಯನ ಎಷ್ಟರ ಮಟ್ಟಿಗೆ ಅಂರ್ತಶಿಸ್ತೀಯವಾಗಿ, ಬಹುಭಾಷಿಕ ನೆಲೆಯಲ್ಲಿ ರೂಪುಗೊಳ್ಳಬೇಕು ಎಂಬ ಆಶಯವೂ ಇಲ್ಲಿದೆ.

ನನ್ನ ಐದನೆಯ ವಯಸ್ಸಿನಿಂದಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತ, ಕಳೆದ ನಾಲ್ಕು ದಶಕಗಳಿಂದ ಅದರಲ್ಲಿ ಗಾಢವಾಗಿ ತೊಡಗಿಕೊಂಡಿರುವ ನನಗೆ ಸಂಗೀತ, ಇಂಗ್ಲಿಷ್ ಸಾಹಿತ್ಯ- ಸಂಸ್ಕೃತಿ ಅಧ್ಯಯನ, ಅನುವಾದ, ಸ್ತ್ರೀವಾದ – ಇವೆಲ್ಲವೂ ಒಂದು ವೈಶಿಷ್ಟ್ಯಪೂರ್ಣವಾದ, ವೈಚಾರಿಕ, ಭಾವನಾತ್ಮಕವಾದ ಅಂತರಶಿಸ್ತೀಯ ನೆಲೆಯನ್ನು ಒದಗಿಸಿಕೊಟ್ಟಿವೆ. ನಿಮ್ಮೊಡನೆ ನನ್ನ ವಿಚಾರಗಳನ್ನು ಹಂಚಿಕೊಳ್ಳಲು ಕಾತುರದಿಂದ ಎದುರು ನೋಡುತ್ತಿದ್ದೇನೆ.

ವೈಶಾಲಿಯವರ ಈ ಬರಹವನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ