Artisans Lifestyle : ಬಿದಿರಲ್ಲ, ಇದು ಖರ್ಜೂರ ಕಡ್ಡಿಯ ಮಾಯೆ!

Roadside Life : ‘ಈ ಕಡ್ಡಿ ಹತ್ತು ರೂಪಾಯಿಗೆ ಒಂದು. ಆಂಧ್ರದಿಂದ ತರುತ್ತೇವೆ. ಎಲ್ಲರೂ ನಿಂತು ನೋಡುವವರೇ, ಕೊಳ್ಳುವವರು ಯಾರು? ಎರಡು ದಿನಕ್ಕೊಂದು ಬುಟ್ಟಿ ಮಾರಾಟವಾಗುತ್ತದೆ. ದಿನವೂ ಮಾರಾಟವಾದರೆ ಹೊಟ್ಟೆತುಂಬ ಊಟ ಮಾಡಬಹುದು.’ ಶೈಲಮ್ಮ

Artisans Lifestyle : ಬಿದಿರಲ್ಲ, ಇದು ಖರ್ಜೂರ ಕಡ್ಡಿಯ ಮಾಯೆ!
ಬೆಂಗಳೂರಿನ ಬೀದಿಬದಿ ಬುಟ್ಟಿ ಹೆಣೆಯುವಿಕೆಯಲ್ಲಿ ತೊಡಗಿಕೊಂಡಿರುವ ಶೈಲಮ್ಮ ಮತ್ತವಳ ಮಕ್ಕಳು

Artisans Lifestyle : ಆರಂಭದಲ್ಲಿ ನೋಡಿದಾಗ, ಬಿದಿರಿನಿಂದ ತಯಾರಾಗುತ್ತಿರುವ ಬುಟ್ಟಿಗಳು ಎಂದೇ ಭಾವಿಸಿದ್ದೆ. ನಂತರ ಶೈಲಮ್ಮ ಈ ಕುರಿತು ವಿವರಿಸಿದರು. ಅವರು ಬುಟ್ಟಿ ಹೆಣೆಯುವುದು ಖರ್ಜೂರದ ಮರದ ಕಡ್ಡಿಗಳಿಂದ. ‘ಊರಿನಿಂದ ಲಾರಿ, ಟೆಂಪೋಗಳಲ್ಲಿ ಆ ಕಡ್ಡಿಗಳನ್ನು ತಂದು ಇಲ್ಲಿ ಬುಟ್ಟಿ ಹೆಣೆದು ಮಾರಾಟ ಮಾಡುತ್ತೇವೆ. ಈ ಖರ್ಜೂರದ ಒಂದು ಕಡ್ಡಿಗೆ 10 ರೂಪಾಯಿ. ಒಂದು ಚಿಕ್ಕ ಬುಟ್ಟಿಗೆ 10 ರಿಂದ 15 ಕಡ್ಡಿಗಳು, ದೊಡ್ಡ ಬುಟ್ಟಿ ತಯಾರಿಸಲು 25 ರಿಂದ 30 ಕಡ್ಡಿಗಳು ಬೇಕಾಗುತ್ತವೆ. ಬುಟ್ಟಿಯ ಗಾತ್ರದ ಮೇಲೆ ಎಷ್ಟು ಬೇಕೋ ಅಷ್ಟು ಕಡ್ಡಿಗಳನ್ನು ತೆಳ್ಳಗೆ ಸೀಳಿಕೊಂಡು ಬೇಕಾದ ಆಕಾರದಲ್ಲಿ ಬುಟ್ಟಿಗಳನ್ನು ಹೆಣೆಯುತ್ತೇವೆ’. ಇವರೊಂದಿಗೆ ಮಾತನಾಡುತ್ತಾ ಸೆರೆಹಿಡಿದ ಚಿತ್ರಗಳೂ ಇಲ್ಲಿವೆ.
ಜ್ಯೋತಿ ಎಸ್.

 

ಹೇಳ್ಕೊಳಕ್ ಒಂದ್ ಊರು, ಉಳ್ಕೊಳೋಕ್ ಒಂದ್ ಊರು, ತಲೆ ಮ್ಯಾಗೆ ಒಂದ್ ಸೂರು, ಮಲಗಾಕೆ ಭೂಮ್ ತಾಯಿ ಮಂಚ…

ಕರ್ನಾಟಕದ ಗಡಿಭಾಗದವರಾದ ಶೈಲಮ್ಮ ಮತ್ತು ಶ್ರೀನಿವಾಸ್ ದಂಪತಿ ಆಂಧ್ರಪ್ರದೇಶದ ಕಡಪದವರು. ಈ ದಂಪತಿಗೆ ನಾಲ್ಕು ಮಕ್ಕಳು. ಇವರು ಹೊಟ್ಟೆಪಾಡಿಗಾಗಿ ಬೆಂಗಳೂರಿನತ್ತ ವಲಸೆ ಬಂದಿದ್ದಾರೆ. ರಾಜಾನುಕುಂಟೆ ಸಮೀಪ ರಸ್ತೆ ಬದಿಯಲ್ಲಿ ಜೋಪಡಿಯೊಂದನ್ನು ಕಟ್ಟಿಕೊಂಡು, ಬುಟ್ಟಿ ಹೆಣೆಯುವ ಕಾಯಕದೊಂದಿಗೆ ಇವರ ದೈನಂದಿನ ಬದುಕು ಸಾಗುತ್ತದೆ. ನಾಲ್ಕು ಸಣ್ಣ ಮಕ್ಕಳನ್ನು ನೋಡಿಕೊಳ್ಳುತ್ತ ಬುಟ್ಟಿ ಹೆಣೆಯುವುದು ಕಷ್ಟ ಎಂದು ಒಂದು ಮಗುವನ್ನು ಮಾವನೂರಿನಲ್ಲಿ ಬಿಟ್ಟಿದ್ದಾರೆ. ಅಪ್ಪ, ತಾತ, ಮುತ್ತಾತನ ಕಾಲದಿಂದಲೂ ಜೀವನೋಪಾಯಕ್ಕೆ ಇದೇ ವೃತ್ತಿ. ಬುಟ್ಟಿ ಹೆಣೆಯುವುದನ್ನು ಬಿಟ್ಟರೆ… ಹಸಿವು ನಮ್ಮನ್ನು ಹಣಿಯುತ್ತದೆ. ಹಾಗಾಗಿ ಇದರೊಂದಿಗೆ ನಿತ್ಯವೂ ಹೆಣಗಾಟ ಅನಿವಾರ್ಯ ಎನ್ನುತ್ತಾರೆ ಶೈಲಮ್ಮ. ಅವರ ಗಂಡ ಶ್ರೀನಿವಾಸ್, ಕಾಲು ಒರೆಸುವ ಮ್ಯಾಟ್, ಮೋಪ್, ಸ್ಟಡಿ ಟೇಬಲ್ ಇತ್ಯಾದಿ ಮಾರುತ್ತಾರೆ’ ಎನ್ನುತ್ತಾರೆ

Artisans lifestyle bengaluru

‘ಕೊಳ್ಳುವವರು ಯಾರಿಹರು?’ ಮಕ್ಕಳೊಂದಿಗೆ ಶೈಲಮ್ಮ

ಆರಂಭದಲ್ಲಿ ನೋಡಿದಾಗ, ಬಿದಿರಿನಿಂದ ತಯಾರಾಗುತ್ತಿರುವ ಬುಟ್ಟಿಗಳು ಎಂದೇ ಭಾವಿಸಿದ್ದೆ. ನಂತರ ಶೈಲಮ್ಮ ಈ ಕುರಿತು ವಿವರಿಸಿದರು. ಅವರು ಬುಟ್ಟಿ ಹೆಣೆಯುವುದು ಖರ್ಜೂರದ ಮರದ ಕಡ್ಡಿಗಳಿಂದ. ‘ ಊರಿನಿಂದ ಲಾರಿ, ಟೆಂಪೋಗಳಲ್ಲಿ ಆ ಕಡ್ಡಿಗಳನ್ನು ತಂದು ಇಲ್ಲಿ ಬುಟ್ಟಿ ಹೆಣೆದು ಮಾರಾಟ ಮಾಡುತ್ತೇವೆ. ಈ ಖರ್ಜೂರದ ಒಂದು ಕಡ್ಡಿಗೆ 10 ರೂಪಾಯಿ. ಒಂದು ಚಿಕ್ಕ ಬುಟ್ಟಿಗೆ 10 ರಿಂದ 15 ಕಡ್ಡಿಗಳು, ದೊಡ್ಡ ಬುಟ್ಟಿ ತಯಾರಿಸಲು 25 ರಿಂದ 30 ಕಡ್ಡಿಗಳು ಬೇಕಾಗುತ್ತವೆ. ಬುಟ್ಟಿಯ ಗಾತ್ರದ ಮೇಲೆ ಎಷ್ಟು ಬೇಕೋ ಅಷ್ಟು ಕಡ್ಡಿಗಳನ್ನು ತೆಳ್ಳಗೆ ಸೀಳಿಕೊಂಡು ಬೇಕಾದ ಆಕಾರದಲ್ಲಿ ಬುಟ್ಟಿಗಳನ್ನು ಹೆಣೆಯುತ್ತೇವೆ.’

ಹಕ್ಕಿಗಳು ನಾಜೂಕಾಗಿ, ಸೂಕ್ಷ್ಮವಾಗಿ, ಚತುರತೆಯಿಂದ ತನ್ನ ಗೂಡು ಕಟ್ಟಿಕೊಳ್ಳುತ್ತವೆಯಲ್ಲ ಹಾಗೆ ಇವರೂ ಕೂಡ ತಾಳ್ಮೆ ಮತ್ತು ಕೌಶಲಯುತವಾಗಿ ಬುಟ್ಟಿ ಹೆಣೆಯುತ್ತಾರೆ. ಪಕ್ಷಿಗಳು ಕಾಡಿನಲ್ಲಿ ಹೆಣೆದರೆ ಇವರು ರಸ್ತೆಬದಿಯಲ್ಲಿ. ಆಡಿಸುವಾತನ ಕೈಯಲ್ಲಿ ಆಟಿಕೆಯಾಗಿರುವ ಇವರ ಮಕ್ಕಳಿಗೆ ಇವರು ಹೆಣೆಯುವ ಬುಟ್ಟಿಗಳೇ ಆಟಿಕೆಗಳು. ಈ ಮಕ್ಕಳಿಗೆ ಚಂದದ ಬಟ್ಟೆಗಳು ಇಲ್ಲದಿದ್ದರೂ ದುಬಾರಿ ಬೆಲೆಯ ಆಟಿಕೆಗಳಿಲ್ಲದಿದ್ದರೂ ಅವರ ಮುಖದಲ್ಲಿನ ನಿಷ್ಕಲ್ಮಶ ನಗು, ಪ್ರೀತಿ ಅದ್ಭುತ ಶಕ್ತಿಯೇ.

ಇವರ ಕೈಯಿಂದ ಸಿದ್ಧವಾಗುವ ಪೂಜಾ ಬುಟ್ಟಿ, ಹೂದಾನಿ, ಲ್ಯಾಂಪ್, ರೊಟ್ಟಿ ಬುಟ್ಟಿ, ಕಮಲದ ಬುಟ್ಟಿ, ಬಟ್ಟೆ ಇಡುವ ಬುಟ್ಟಿಗಳು ಎಂಥವರನ್ನೂ ಕ್ಷಣ ಆಕರ್ಷಿಸುತ್ತವೆ. ಆದರೆ ಅವುಗಳನ್ನು ಮಾರುವುದೇ ಸವಾಲು. ‘ಎಲ್ಲರೂ ಖುಷಿಯಿಂದ ಬಂದು ನೋಡುತ್ತಾರೆ, ಕೊಳ್ಳುವುದಿಲ್ಲ. ಯಾರೋ ಒಬ್ಬಿಬ್ಬರು ಕೊಳ್ಳುತ್ತಾರೆ. ಎರಡು ದಿನಕ್ಕೆ ಒಂದು ಬುಟ್ಟಿ ಮಾರಾಟವಾಗುವುದೇ ಹೆಚ್ಚು. ನಮ್ಮ ಹೊಟ್ಟೆಪಾಡಿಗೆ ಇರುವುದು ಇದೊಂದೇ ಮಾರ್ಗ. ಕುಲಕಸುಬನ್ನೇ ನೆಚ್ಚಿ ಬದುಕು ಸಾಗಿಸಬೇಕು. ಬುಟ್ಟಿ ಮಾರಾಟವಾದರೆ ಹೊಟ್ಟೆ ತುಂಬ ಊಟ, ಇಲ್ಲವಾದರೆ ಇಲ್ಲ’ ಎಂಬ ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಶೈಲಮ್ಮ.

Artisans lifestyle bengaluru

ಹೂಡಿದಲ್ಲೇ ಬದುಕು

ಎಲ್ಲವೂ ಯಂತ್ರಮಯವಾಗುತ್ತಿರುವ ಆಧುನಿಕ ಜಗತ್ತಿನಲ್ಲಿ, ಪರಿಸರಕ್ಕೆ ಹಾನಿಯುಂಟು ಮಾಡುವ ಬಣ್ಣಬಣ್ಣದ ಪ್ಲಾಸ್ಟಿಕ್ ವಸ್ತುಗಳು ಮಾರುಕಟ್ಟೆಗೆ ದಾಪುಗಾಲಿಟ್ಟಿರುವಾಗ ‘ಪರಿಸರ ಸ್ನೇಹಿ ಪೀಠೋಪಕರಣ’ ಗೃಹ ಬಳಕೆ ಕರಕುಶಲ ವಸ್ತುಗಳತ್ತ ಜನರು ಇನ್ನಾದರೂ ಗಮನಿಸಬೇಕಿದೆ. ಇದರಿಂದ ರಸ್ತೆ ಬದಿ ವಾಸಿಸುವ ಜನರ ಬದುಕು ಹಸನಾಗುವುದಕ್ಕೆ ಸ್ವಲ್ಪಾದರೂ ಸಹಾಯವಾಗುತ್ತದೆ. ಕರಕುಶಲ ಕಲೆಯೂ ಉಳಿಯುತ್ತದೆ.

ಇದನ್ನೂ ಓದಿ : Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?

Read Full Article

Click on your DTH Provider to Add TV9 Kannada