New Book : ‘ಗ್ರೋಯಿಂಗ್ ಅಪ್​ ಕಾರಂತ’ ಕೃತಿ ನಾಳೆ ಬಿಡುಗಡೆ

| Updated By: ಶ್ರೀದೇವಿ ಕಳಸದ

Updated on: Oct 07, 2021 | 2:21 PM

Growing Up Karanth : ‘1936ರಲ್ಲಿ ಅಂತರ್ಜಾತೀಯ ವಿವಾಹ ಎನ್ನುವುದು ಎಷ್ಟೊಂದು ಕ್ಲಿಷ್ಟಕರ ವಿಚಾರವಾಗಿತ್ತು. ಅವರ ಕೆಲಸ ಕಾರ್ಯ ಮತ್ತು ಒತ್ತಡಗಳ ನಡುವೆಯೂ ನಮ್ಮನ್ನು ಹೇಗೆ ಬೆಳೆಸಿದರು, ಒಟ್ಟಾರೆಯಾಗಿ ಅವರನ್ನು ಪ್ರೋತ್ಸಾಹಿಸಿದ ಮಿತ್ರರು ಮತ್ತು ಪ್ರಭಾವ ಬೀರಿದ ವ್ಯಕ್ತಿಗಳು... ಹೀಗೆ ನಮ್ಮ ತಂದೆ ಶಿವರಾಮ ಕಾರಂತರ ವೈಯಕ್ತಿಕ ಬದುಕಿನ ಅನೇಕ ಸಂಗತಿಗಳನ್ನಿಟ್ಟುಕೊಂಡು ನಾವು ಮೂರು ಜನ ಬರೆಯಲು ಶುರು ಮಾಡಿದೆವು.’ ಡಾ. ಕೆ. ಉಲ್ಲಾಸ ಕಾರಂತ

New Book : ‘ಗ್ರೋಯಿಂಗ್ ಅಪ್​ ಕಾರಂತ’ ಕೃತಿ ನಾಳೆ ಬಿಡುಗಡೆ
ಡಾ. ಕೆ. ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್
Follow us on

Growing Up Karanth : ‘ನನ್ನ ತಂದೆ ಹೆಚ್ಚೂ ಕಡಿಮೆ ಒಂದು ಶತಮಾನದ (‘95 ವರ್ಷಗಳು) ಕಾಲ ಬದುಕಿದರು. ತಮ್ಮ ವಿಚಾರ, ಬರೆವಣಿಗೆಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾರ್ವಜನಿಕ ಬದುಕು ಸೂಕ್ತವಾಗಿ ದಾಖಲಾಗಿದೆ. ಆದರೆ, ವೈಯಕ್ತಿಕ ಬದುಕಿನ ಬಗ್ಗೆ ಸಮರ್ಪಕವಾಗಿ ದಾಖಲಾಗಿಲ್ಲ, ಅವರ ಆತ್ಮಕಥನದಲ್ಲಿಯೂ ಕೂಡ. ಹಾಗಾಗಿ ಅವರ ವೈಯಕ್ತಿಕ ಬದುಕು ಹೇಗಿತ್ತು, ಏನೆಲ್ಲ ಕಷ್ಟನಷ್ಟಗಳಿಂದ ಕೂಡಿತ್ತು? ನಮ್ಮ ತಾಯಿ ಲೀಲಾ ಆಳ್ವಾ ಅವರನ್ನು ಮದುವೆಯಾದಾಗ, ಅಂದರೆ 1936ರಲ್ಲಿ ಅಂತರ್ಜಾತೀಯ ವಿವಾಹ ಎಷ್ಟೊಂದು ಕ್ಲಿಷ್ಟಕರ ಸಂದರ್ಭದಿಂದ ಕೂಡಿತ್ತು. ಅವರ ಕೆಲಸ ಕಾರ್ಯ ಮತ್ತು ಒತ್ತಡಗಳ ನಡುವೆಯೂ ನಮ್ಮನ್ನು ಹೇಗೆ ಬೆಳೆಸಿದರು ಮತ್ತು ಬದುಕಿನುದ್ದಕ್ಕೂ ಅವರನ್ನು ವೈಯಕ್ತಿಕವಾಗಿ ಪ್ರೋತ್ಸಾಹಿಸಿದ ಮಿತ್ರರು ಮತ್ತು ಪ್ರಭಾವ ಬೀರಿದ ವ್ಯಕ್ತಿಗಳು… ಹೀಗೆ ಒಟ್ಟಾರೆಯಾಗಿ ಅವರ ಬದುಕಿನ ವೈಯಕ್ತಿಕ ಸಂಗತಿಗಳನ್ನಿಟ್ಟುಕೊಂಡು ನಾವು ಮೂರು ಜನ ಬರೆಯಲು ಶುರು ಮಾಡಿದೆವು.’
ಡಾ ಕೆ. ಉಲ್ಲಾಸ ಕಾರಂತ, ಖ್ಯಾತ ಜೀವಶಾಸ್ತ್ರಜ್ಞ

ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತ ಅವರ ವೈಯಕ್ತಿಕ ಬದುಕು ಹೇಗಿತ್ತು ಎನ್ನುವುದನ್ನು ಅವರ ಮಕ್ಕಳಾದ ಡಾ. ಕೆ. ಉಲ್ಲಾಸ ಕಾರಂತ, ಮಾಲವಿಕಾ ಕಪೂರ್, ಕ್ಷಮಾ ರಾವ್ ಅವರು ತಮ್ಮ ನೆನಪುಗಳಿಂದ ಹೆಕ್ಕಿತೆಗೆದು ಅಕ್ಷರಗಳಲ್ಲಿ ಪೋಣಿಸಿಟ್ಟಿದ್ದಾರೆ. ವೆಸ್ಟ್ ಲ್ಯಾಂಡ್​ ಪ್ರಕಾಶನದಿಂದ ಪ್ರಕಟವಾಗುತ್ತಿರುವ ‘ಗ್ರೋಯಿಂಗ್ ಅಪ್ ಕಾರಂತ’ ಇಂಗ್ಲಿಷ್ ಕೃತಿ ಇದೇ ಶುಕ್ರವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

ಕಾರಂತರ ಮಗ ಡಾ. ಕೆ. ಉಲ್ಲಾಸ ಕಾರಂತ, ‘ನನ್ನ ತಂದೆ ಹೆಚ್ಚೂ ಕಡಿಮೆ ಒಂದು ಶತಮಾನದ (‘95 ವರ್ಷಗಳು) ಕಾಲ ಬದುಕಿದರು. ತಮ್ಮ ವಿಚಾರ, ಬರೆವಣಿಗೆಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಉಳಿದಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾರ್ವಜನಿಕ ಬದುಕು ಸೂಕ್ತವಾಗಿ ದಾಖಲಾಗಿದೆ. ಆದರೆ, ವೈಯಕ್ತಿಕ ಬದುಕಿನ ಬಗ್ಗೆ ಸಮರ್ಪಕವಾಗಿ ಅನಾವರಣಗೊಂಡಿಲ್ಲ, ಅವರ ಆತ್ಮಕಥನದಲ್ಲಿಯೂ ಕೂಡ. ಹಾಗಾಗಿ ಅವರ ವೈಯಕ್ತಿಕ ಬದುಕು ಹೇಗಿತ್ತು, ಏನೆಲ್ಲ ಕಷ್ಟನಷ್ಟಗಳಿಂದ ಕೂಡಿತ್ತು? ನಮ್ಮ ತಾಯಿ ಲೀಲಾ ಆಳ್ವಾ ಅವರನ್ನು ಮದುವೆಯಾದಾಗ, ಅಂದರೆ 1936ರಲ್ಲಿ ಅಂತರ್ಜಾತೀಯ ವಿವಾಹ ಎಷ್ಟೊಂದು ಕ್ಲಿಷ್ಟಕರ ಸಂದರ್ಭದಿಂದ ಕೂಡಿತ್ತು. ಅವರ ಕೆಲಸ ಕಾರ್ಯ ಮತ್ತು ಒತ್ತಡಗಳ ನಡುವೆಯೂ ನಮ್ಮನ್ನು ಹೇಗೆ ಬೆಳೆಸಿದರು ಮತ್ತು ಬದುಕಿನುದ್ದಕ್ಕೂ ಅವರನ್ನು ವೈಯಕ್ತಿಕವಾಗಿ ಪ್ರೋತ್ಸಾಹಿಸಿದ ಮಿತ್ರರು ಮತ್ತು ಪ್ರಭಾವ ಬೀರಿದ ವ್ಯಕ್ತಿಗಳು… ಹೀಗೆ ಒಟ್ಟಾರೆಯಾಗಿ ಅವರ ಬದುಕಿನ ವೈಯಕ್ತಿಕ ಸಂಗತಿಗಳನ್ನಿಟ್ಟುಕೊಂಡು ನಾವು ಮೂರು ಜನ ಬರೆಯಲು ಶುರು ಮಾಡಿದೆವು. ಇನ್ನೊಂದು ಮುಖ್ಯವಾಗಿ ಅಂಶವೆಂದರೆ, ಅವರು ಇಷ್ಟು ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ತೊಡಗಿಕೊಂಡರೂ, ಇತರೇ ರಾಜ್ಯಗಳಲ್ಲಿ ಕೂಡ ಕೆಲಸ ಮಾಡಿದರೂ ಕರ್ನಾಟಕದ ಹೊರಗೆ ಅವರ ಹೆಸರು ಪಸರಿಸಲೇ ಇಲ್ಲ, ಕಾರಣ ಅವರು ಕನ್ನಡದಲ್ಲಿ ಬರೆಯುತ್ತ ಬಂದರು. ಹಾಗಾಗಿ ಕನ್ನಡಿಗರಿಗೆ, ಇತರೇ ಭಾಷಿಕರಿಗೆ, ದೇಶ-ವಿದೇಶಕ್ಕೆ ಅವರು ತಲುಪಲಿ ಎನ್ನುವ ಆಶಯದಿಂದ ಇಂಗ್ಲಿಷ್​ನಲ್ಲಿ ಬರೆಯಲು ನಿರ್ಧರಿಸಿದೆವು’ ಎನ್ನುತ್ತಾರೆ.

‘ಗ್ರೋಯಿಂಗ್ ಅಪ್ ಕಾರಂತ’ ; ಲೀಲಾ ಕಾರಂತರ ಕಣ್ಣಲ್ಲಿ ಶಿವರಾಮ ಕಾರಂತರು…

ಬೆಂಗಳೂರು ಇಂಟರ್ನ್ಯಾಷನಲ್​ ಸೆಂಟರ್ (BIC)ನಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಹಿರಿಯ ಕಥೆಗಾರ ವಿವೇಕ ಶಾನಭಾಗ, ಪತ್ರಕರ್ತರಾದ ಸುಗತ ಶ್ರೀನಿವಾಸರಾಜು, ಶೋಭಾ ನಾರಾಯಣ ಪಾಲ್ಗೊಳ್ಳಲಿದ್ದಾರೆ. ಡಾ. ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್ ಕೂಡ ಉಪಸ್ಥಿತರಿರುತ್ತಾರೆ.

ಸಭಾಂಗಣ ಕಾರ್ಯಕ್ರಮದ ನೇರಪ್ರಸಾರವನ್ನು ಇಲ್ಲಿ ವೀಕ್ಷಿಸಬಹುದು : https://bangaloreinternationalcentre.org/event/growing-up-karanth/

ಇದನ್ನೂ ಓದಿ :Covid Diary : ಅಚ್ಚಿಗೂ ಮೊದಲು : ಡಾ. ಎಚ್. ಎಸ್. ಅನುಪಮಾ ಅವರ ‘ಕೋವಿಡ್ ಡಾಕ್ಟರ್ ಡೈರಿ’ ಇಂದಿನಿಂದ ನಿಮ್ಮ ಓದಿಗೆ  

Published On - 12:39 pm, Thu, 7 October 21