ಕನ್ನಡ ರಾಜ್ಯೋತ್ಸವ ವಿಶೇಷ: ಕನ್ನಡ ಕೈಬರಹದ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿದ ಭಾಷಾ ಭಾರತಿ ಪ್ರಾಧಿಕಾರ

ಕನ್ನಡ ರಾಜ್ಯೋತ್ಸವ ವಿಶೇಷ: ಕನ್ನಡ ಕೈಬರಹದ ರಾಷ್ಟ್ರಮಟ್ಟದ ಸ್ಪರ್ಧೆ ಆಯೋಜಿಸಿದ ಭಾಷಾ ಭಾರತಿ ಪ್ರಾಧಿಕಾರ
ಕುವೆಂಪು ಭಾಷಾ ಭಾರತಿ

ಭಾರತದ ಯಾವುದೇ ಭಾಗದಲ್ಲಿ ಇರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Oct 25, 2021 | 10:33 AM

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ (ಅನುವಾದ ಅಕಾಡೆಮಿ) ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡಕ್ಕಾಗಿ ನಾವು’ ಅಭಿಯಾನ ಆಯೋಜಿಸಿದೆ. ಈ ಅಭಿಯಾನದ ಅಂಗವಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಸುಂದರ ಕನ್ನಡ ಕೈಬರಹದಲ್ಲಿ ಬರೆಯುವ ಸ್ಪರ್ಧೆಯನ್ನು ನಡೆಸಲಾಗುತ್ತಿದೆ.

ದೇಶದ ಯಾವುದೇ ಭಾಗದಲ್ಲಿ ಇರುವ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಏಳನೆಯ ತರಗತಿವರೆಗಿನ ವಿಭಾಗ, ಎಂಟರಿಂದ ದ್ವಿತೀಯ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ವಿವಿಧ ವೃತ್ತಿಪರ ಪದವಿಗಳೂ ಸೇರಿದಂತೆ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಕನ್ನಡ ಕೈಬರಹದೊಂದಿಗೆ ವಿಚಾರಗಳನ್ನು ಮಂಡಿಸಿದ ಮೂವರು ವಿದ್ಯಾರ್ಥಿಗಳಿಗೆ, ಅಂದರೆ ಒಟ್ಟು ಒಂಬತ್ತು ವಿದ್ಯಾರ್ಥಿಗಳಿಗೆ ತಲಾ ₹ 5 ಸಾವಿರ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

‘ಕನ್ನಡವನ್ನು ಬೆಳೆಸಲು ನಾನೇನು ಮಾಡುತ್ತೇನೆ?’ ಎಂಬ ವಿಷಯದ ಬಗ್ಗೆ ಎ4 ಹಾಳೆಯ ಒಂದು ಪುಟದಲ್ಲಿ ಸುಂದರ ಕೈಬರಹದಲ್ಲಿ ಬರೆದು ಕನ್ನಡದಲ್ಲಿ ಸಹಿ ಮಾಡಬೇಕು. ಅದೇ ಹಾಳೆಯ ಹಿಂದಿನ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ತರಗತಿ ಮತ್ತು ತಾವು ಕಲಿಯುತ್ತಿರುವ ವಿದ್ಯಾಸಂಸ್ಥೆಯ ವಿಳಾಸ ಮತ್ತು ತಮ್ಮ ಅಥವಾ ಹೆತ್ತವರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಅದರ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರ, ಸಹಿ, ಮೊಹರು ಮತ್ತು ದೂರವಾಣಿ ಸಂಖ್ಯೆ ಇರಬೇಕು.

ಸ್ಪರ್ಧಿಗಳು ತಮ್ಮ ಬರಹವನ್ನು ತ್ವರಿತ ಅಂಚೆ ಅಥವಾ ಕೊರಿಯರ್ ಮೂಲಕ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ ಅಂಚೆ, ಬೆಂಗಳೂರು- 560 056 ವಿಳಾಸಕ್ಕೆ ಕಳುಹಿಸಿಕೊಡಬೇಕು. ಲಕೋಟೆಯ ಹೊರಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿ ಸಹಿತ ವಿದ್ಯಾಸಂಸ್ಥೆಯ ವಿಳಾಸ ನಮೂದಿಸಬೇಕು. ಪ್ರವೇಶಿಕೆಗಳು ಮೇಲೆ ನೀಡಲಾದ ವಿಳಾಸಕ್ಕೆ ತಲುಪಲು ಕೊನೆಯ ದಿನಾಂಕ ಅಕ್ಟೋಬರ್ 29 ಕೊನೆಯ ದಿನ. ಹೊರರಾಜ್ಯಗಳಿಂದ ಬರುವ ಪ್ರವೇಶಿಕೆಗಳಿಗೆ ಅಕ್ಟೋಬರ್ 30 ಕೊನೆಯ ದಿನ. ಸಂಪರ್ಕ ಸಂಖ್ಯೆ 080 23183312.

ಇದನ್ನೂ ಓದಿ: ‘ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ?’ ಧ್ವನಿ ಎತ್ತಿದ ರಿಷಬ್​ ಶೆಟ್ಟಿ ಇದನ್ನೂ ಓದಿ: ರಾಜ್ಯೋತ್ಸವ ಪ್ರಶಸ್ತಿಗೆ ಆನ್​ಲೈನ್​ನಲ್ಲಿ ಮೊಬೈಲ್​ ಮೂಲಕವೂ ಅರ್ಜಿ ಸಲ್ಲಿಸಲು ಇದೆ ಅವಕಾಶ

Follow us on

Most Read Stories

Click on your DTH Provider to Add TV9 Kannada