AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ?’ ಧ್ವನಿ ಎತ್ತಿದ ರಿಷಬ್​ ಶೆಟ್ಟಿ

ನವೆಂಬರ್​ 1ರಂದು ಕನ್ನಡ ರಾಜ್ಯೋತ್ಸವ. ರಾಜ್ಯದ ಬಹುತೇಕ ಕಡೆಗಳಲ್ಲಿ ಇದನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ, ಕೊವಿಡ್​ ಇನ್ನೂ ಪೂರ್ತಿಯಾಗಿ ತೊಲಗದ ಕಾರಣ ಕೆಲ ನಿಯಮಗಳು ಜಾರಿಯಲ್ಲಿವೆ.

‘ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ?’ ಧ್ವನಿ ಎತ್ತಿದ ರಿಷಬ್​ ಶೆಟ್ಟಿ
ರಿಷಬ್​-ಬಸವರಾಜ್​ ಬೊಮ್ಮಾಯಿ
TV9 Web
| Edited By: |

Updated on:Oct 21, 2021 | 5:03 PM

Share

ರಿಷಬ್​ ಶೆಟ್ಟಿ ನಿರ್ದೇಶಕನಾಗಿ, ನಟನಾಗಿ ಹಾಗೂ ನಿರ್ಮಾಪಕನಾಗಿ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಇದರ ಜತೆಗೆ ಅವರು ಸಾಮಾಜಿಕ ಚಿಂತನೆಗಳನ್ನು ಕೂಡ ಮಾಡುತ್ತಾರೆ. ಈ ಬಗ್ಗೆ ಆಗೊಂದು ಈಗೊಂದು ಟ್ವೀಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹೊರ ಹಾಕುತ್ತಿರುತ್ತಾರೆ. ಈಗ ಕನ್ನಡ ರಾಜ್ಯೋತ್ಸವದ ಬಗ್ಗೆ ಅವರು ಟ್ವೀಟ್​ ಒಂದನ್ನು ಮಾಡಿದ್ದಾರೆ. ಇದಕ್ಕೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ನವೆಂಬರ್​ 1ರಂದು ಕನ್ನಡ ರಾಜ್ಯೋತ್ಸವ. ರಾಜ್ಯದ ಬಹುತೇಕ ಕಡೆಗಳಲ್ಲಿ ಇದನ್ನು ಹಬ್ಬದ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆದರೆ, ಕೊವಿಡ್​ ಇನ್ನೂ ಪೂರ್ತಿಯಾಗಿ ತೊಲಗದ ಕಾರಣ ಕೆಲ ನಿಯಮಗಳು ಜಾರಿಯಲ್ಲಿವೆ. ಮೈಸೂರು ದಸರಾ ಆಚರಣೆಗೆ ಆರಂಭದಲ್ಲಿ ಕೆಲ ನಿರ್ಬಂಧಗಳನ್ನು ಹೇರಲು ಸರ್ಕಾರ ಮುಂದಾಗಿತ್ತು. ಆದರೆ, ವಿರೋಧದ ನಂತರ ಇದನ್ನು ಸಡಿಲ ಮಾಡಲಾಗಿತ್ತು. ಆದರೆ, ರಾಜಕೀಯ ಸಮಾವೇಶ ಬಂದಾಗ ಈ ಯಾವ ನಿಯಮಗಳೂ ಅನ್ವಯ ಆಗುವುದಿಲ್ಲ. ಉಪ ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳು ರ್ಯಾಲಿ ನಡೆಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಈ ವಿಚಾರ ಇಟ್ಟುಕೊಂಡು ರಿಷಬ್​ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.

‘ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು  ಅವಕಾಶ ನೀಡಬೇಕಾಗಿ ವಿನಂತಿ’ ಎಂದು ರಿಷಬ್​ ಟ್ವೀಟ್​ ಮಾಡಿದ್ದಾರೆ. ಇದನ್ನು ನೂರಾರು ಜನರು ರೀಟ್ವಿಟ್​ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ರಾಜ್​ ಬಿ. ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಜೊತೆಯಾಗಿ ನಟಿಸುತ್ತಿರುವ ‘ಗರುಡ ಗಮನ ವೃಷಭ ವಾಹನ’ ಚಿತ್ರ ಹಲವು ಕಾರಣಗಳಿಂದಾಗಿ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆ ಆಗಿತ್ತು. ‘ಒಂದು ಮೊಟ್ಟೆಯ ಕಥೆ’ ಬಳಿಕ ರಾಜ್​ ಬಿ. ಶೆಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಬೇರೊಂದು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಟ್ರೇಲರ್​ ನೋಡಿದ ಬಳಿಕ ಸಿನಿಪ್ರಿಯ ನಿರೀಕ್ಷೆ ಡಬಲ್​ ಆಗಿದೆ. ನವೆಂಬರ್​ 19ರಂದು ಚಿತ್ರಮಂದಿರಗಳಲ್ಲಿ ‘ಗರುಡ ಗಮನ ವೃಷಭ ವಾಹನ’ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ದಕ್ಷಿಣ ಕೊರಿಯಾದತ್ತ ಹೊರಟ ಕನ್ನಡದ ‘ಪೆಡ್ರೋ’; ಸಂತಸ ಹಂಚಿಕೊಡ ರಿಷಬ್​ ಶೆಟ್ಟಿ 

GGVV Trailer: ರಾಜ್​ ಬಿ ಶೆಟ್ಟಿ ಇನ್ನೊಂದು ಮುಖ ಅನಾವರಣ; ಸಾಥ್​ ನೀಡಿದ ರಿಷಬ್​ ಶೆಟ್ಟಿ

Published On - 5:00 pm, Thu, 21 October 21

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ