Dharwad: ಮಾನವ ಜಾತಿ ತಾನೊಂದೆ ವಲಂ; ತಾಯಿಹೃದಯಕ್ಕೂ ಕ್ರೂರಿಯಾಗಲು ತರಬೇತಿ ಕೊಡುತ್ತಿರುವ ಕಾಲದಲ್ಲಿದ್ದೇವೆ

H.S. Raghavendra Rao : ‘ಇಂಥ ಸನ್ನಿವೇಶದಲ್ಲಿಯೂ ನನ್ನದೇ ಆದ ‘ಕಂಫರ್ಟ್ ಜೋನಿನಲ್ಲಿ ಬದುಕಿರುವ ನಾನೂ ಅಪರಾಧಿಯೇ. ನಲವತ್ತು ವರ್ಷ ಮಕ್ಕಳಿಗೆ ಕಲಿಸಿದ ಪಾಠಗಳ ‘ಫಲವನ್ನು’ ನೋಡಿ, ನನಗೆ ಅವಮಾನವಾಗಿದೆ, ನಾಚಿಕೆಯಾಗಿದೆ. ಈ ಹೊಲಸು ಕೆಲಸಗಳನ್ನು ಪ್ರತಿಯೊಬ್ಬರೂ ವಿರೋಧಿಸಬೇಕು.’

Dharwad: ಮಾನವ ಜಾತಿ ತಾನೊಂದೆ ವಲಂ; ತಾಯಿಹೃದಯಕ್ಕೂ ಕ್ರೂರಿಯಾಗಲು ತರಬೇತಿ ಕೊಡುತ್ತಿರುವ ಕಾಲದಲ್ಲಿದ್ದೇವೆ
ಡಾ. ಎಚ್. ಎಸ್. ರಾಘವೇಂದ್ರ ರಾವ್
Follow us
ಶ್ರೀದೇವಿ ಕಳಸದ
|

Updated on: Apr 12, 2022 | 7:26 PM

Vandalising Stalls in Dharwad : ಧಾರವಾಡದ ಹಣ್ಣಿನ ವ್ಯಾಪಾರಿ. ಹದಿನೈದು ವರ್ಷಗಳಿಂದಲೂ ಇಲ್ಲಿಯ ನುಗ್ಗಿಕೆರಿ ಹನುಮಂತನಗುಡಿಯ ಪ್ರಾಂಗಣದಲ್ಲಿ ವ್ಯಾಪಾರಕ್ಕೆ ತೊಡಗಿರುವಂಥವರು. ಶನಿವಾರ ಶ್ರೀರಾಮ ಸೇನೆಯ ತುಕಡಿಯೊಂದು ಅವರ ವ್ಯಾಪಾರಕ್ಕೆ ಅಡ್ಡಪಡಿಸಿ ಬರೋಬರಿ ಐದು ಕ್ವಿಂಟಾಲ್​ ಕಲ್ಲಂಗಡಿಯನ್ನು ಧ್ವಂಸಗೊಳಿಸಿದ ದೃಶ್ಯ ಕಣ್ಣಪಾಪೆಗಂಟಿ ಕುಳಿತಿದೆ. ನಮ್ಮೆಲ್ಲರ ಧಮನಿಗಳಲ್ಲಿ ಹರಿಯುತ್ತಿರುವ ಬಣ್ಣ, ಬಿರಿದ ಆ ಕಲ್ಲಂಗಡಿಯ ಒಡಲು. ಯಾಕೋ ಈ ರೂಪಕ ಇನ್ನೇನೋ ಸೂಚಿಸುವಂತಿದೆ. ಯಾವುದೂ ಒಮ್ಮೆಲೇ ಭುಗಿಲೇಳುವುದಿಲ್ಲ, ಅದು ಕೆಟ್ಟದ್ದೇ ಆಗಿರಲಿ ಒಳ್ಳೆಯದೇ ಆಗಿರಲಿ, ಬಿತ್ತದೆ ಬೆಳೆಯುವುದುಂಟೆ?; ಪುಂಡರೇ, ನೀವು ಯಾವ ಧರ್ಮದಲ್ಲಿಯೇ ಹುಟ್ಟಿರಲಿ, ಯಾವ ಜಾತಿಯವರೇ ಆಗಿರಲಿ, ಯಾವ ಭಾಗದವರೇ ಆಗಿರಲಿ, ಯಾವ ಪಕ್ಷದವರೇ ಆಗಿರಲಿ, ಯಾರೇ ನಿಮಗೆ ರೊಕ್ಕ ಮುಕ್ಕಿಸುತ್ತ, ವಿಷ ಕಕ್ಕಿಸುತ್ತಿರಲಿ, ಯಾರೇ ನಿಮ್ಮೊಳಗಿನ ಗೂಳಿತನಕ್ಕೆ ಕೆಂಪು ತೋರಿಸಿ ಇಂಥ ಸಾಲು ಪ್ರಕರಣಗಳೊಳಗೆ ನುಗ್ಗಿಸುತ್ತಿರಲಿ. ಇನ್ನಾದರೂ ಯೋಚಿಸಿ. ನಿಮ್ಮ ಹಿಂದೆ ಹೆತ್ತ ಒಡಲ ಸಂಕಟಗಳ ಮೂಟೆಯಿದೆ. ನಿಮ್ಮ ಮುಂದೆ ನಿಮ್ಮದೇ ಕುಡಿಗಳು ಕನಸು ಕಂಗಳುಗಳಿವೆ. ಹೆಗಲಿಗೆ ಹೆಗಲಿಲ್ಲದೆ ಬದುಕಬಂಡಿ ಚಲಿಸದೆನ್ನುವ ಸತ್ಯದ ಗಾಲಿಗಳನ್ನು ಮುರಿದು ಆತ್ಮದ್ರೋಹ ಮಾಡಿಕೊಳ್ಳದಿರಿ.

ಬೆಂಗಳೂರಿನಲ್ಲಿ ವಾಸವಾಗಿರುವ ಲೇಖಕ, ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರ ಬರಹ.

ಕಳೆದ ಮೂವತ್ತು ವರ್ಷಗಳಲ್ಲಿ ಧರ್ಮಕೇಂದ್ರಿತ ಮತ್ತು ಜಾತಿಕೇಂದ್ರಿತ ರಾಜಕಾರಣದ ಆರ್ಭಟ ಹೆಚ್ಚಾಗಿ, ಪ್ರಗತಿಯ ಮಾದರಿಗಳನ್ನು ಅವಲಂಬಿಸಿದ ರಾಜಕಾರಣವು ಹಿನ್ನೆಲೆಗೆ ಸರಿಯಿತು. ಇದರ ಪರಿಣಾಮವಾಗಿ ಹಣದ ರಾಜ್ಯಭಾರ ನಿರಂತರವಾಗಿ ಮುಂದುವರಿದಿದೆ. ಇದಕ್ಕೆ ಯಾವ ಪ್ರಮುಖ ರಾಜಕೀಯ ಪಕ್ಷವೂ ಅಪವಾದವಲ್ಲ.

ರಾಜಕಾರಣಿಗಳು ಹಲ್ಲು ಉಗುರುಗಳಾದರೆ, ಅವುಗಳ ಹಿಂದೆ ಇರುವ ಹುಲಿ ಸಿಂಹಗಳು ಮಾತ್ರ ಬಗೆಬಗೆ ಬಣ್ಣದ ಬಂಡವಾಳಶಾಹಿಗಳೇ. ನಮ್ಮ ಪ್ರಗತಿಪರ ಹೋರಾಟಗಾರರಲ್ಲಿ ಅನೇಕರು ಈ ದುರಂತದ ಫಲಾನುಭವಿಗಳೋ, ಮೂಕಪ್ರೇಕ್ಷಕರೋ, ಈ ಹುನ್ನಾರಗಳನ್ನು ಅರ್ಥಮಾಡಿಕೊಳ್ಳಲಾರದ ‘ಮುಗ್ಧ’ರೋ (?) ಆಗಿರುವುದು ಈ ಸನ್ನಿವೇಶದ ಇನ್ನೊಂದು ಮುಖ.

ಧರ್ಮ, ಜಾತಿ, ಲಿಂಗಗಳ ಹೆಸರಿನಲ್ಲಿ ಶತಮಾನಗಳಿಂದ ನಡೆದಿರುವ ಶೋಷಣೆಯನ್ನು ವಿರೋಧಿಸುವುದು ಎಲ್ಲರ ಕರ್ತವ್ಯವಾದರೂ ಅದಕ್ಕೆ ಕೊಡುವ ಒತ್ತು ‘ವರ್ಗಪ್ರಭುತ್ವ’ವನ್ನು ಮರೆಯಲು ಎಡೆ ಮಾಡಿಕೊಡಬಾರದು. ಈಗ ಆಗುತ್ತಿರುವುದು ಹಾಗೆಯೇ.

ಸರಿಯಾದ ಶಿಕ್ಷಣ, ಸೂಕ್ತವಾದ ವೈದ್ಯಸೌಲಭ್ಯಗಳನ್ನು ಉಚಿತವಾಗಿ, ಖಾಸಗೀ ವಲಯದ ಹಸ್ತಕ್ಷೇಪವಿಲ್ಲದೆ ನೀಡಲು ಎಲ್ಲರೂ ಕೂಡಿ ಒತ್ತಾಯ ತರುವ ಬದಲು, ಸವಲತ್ತುಗಳಿಗಾಗಿ ಪೈಪೋಟಿ ನಡೆಸುವ ವೈನೋದಿಕಕ್ಕೆ ನಾವು ಪ್ರೇಕ್ಷಕರಾಗಿದ್ದೇವೆ. ಸರಿಯಾದ ತಿಳಿವಳಿಕೆ ನೀಡುವ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ ದಶಕಗಳೇ ಕಳೆದವು. (ಹೀಗಾಗಲು ಕಾರಣ ಅಧ್ಯಾಪಕರು ಮಾತ್ರವಲ್ಲ). ಎಲ್ಲ ಕ್ಷೇತ್ರಗಳಲ್ಲಿಯೂ ಅಡೆತಡೆಯಿಲ್ಲದೆ ನಡೆಯುತ್ತಿರುವ ಖಾಸಗೀಕರಣ ಮತ್ತು ಅದನ್ನು ಜಾರಿಗೆ ತರುತ್ತಿರುವ ಪ್ರಜಾಪ್ರಭುತ್ವ(?) ಕೂಡಾ ಇದಕ್ಕೆ ಕಾರಣ.

ಇದುವರೆಗೆ ಹೇಳಿದ ಮಾತುಗಳು ಪೀಠಿಕೆಯಂತೆ. ಜನಸಮುದಾಯವನ್ನು ಓಟಿನ ಬೇಟೆಗಾಗಿ ‘ಬಹುಸಂಖ್ಯಾತರು’ ಮತ್ತು ‘ಅಲ್ಪಸಂಖ್ಯಾತರ’ ಎಂದು ಒಡೆಯುವ ಕೆಲಸದಲ್ಲಿ ಯಶಸ್ವಿಯಾದವರು ಆ ಕೆಲಸವನ್ನು ನಿರ್ಲಜ್ಜೆಯಿಂದ ಮುಂದುವರಿಸಿದ್ದಾರೆ. ಅಧಿಕಾರದ ಹಂಬಲ, ಅಧಿಕಾರದ ಅಮಲು ಮತ್ತು ಅಧಿಕಾರ ಕೊಡುವ ಆತ್ಮವಿಶ್ವಾಸಗಳು ಆಡಳಿತಪಕ್ಷವನ್ನು ಹಿಂದೆಂದೂ ಕಾಣದ ವರ್ತನೆಯಲ್ಲಿ ತೊಡಗಿಸಿದೆ. ಸರ್ಕಾರಕ್ಕೆ ಸಮಾನಾಂತರವಾಗಿ ಮೂಡಿರುವ ಅಧಿಕಾರಕೇಂದ್ರಗಳಿಗೆ ಅದೇ ಸರ್ಕಾರದ ಕುಮ್ಮಕ್ಕು ಸಿಕ್ಕರೆ, ಆ ‘ಇರ್ಬಾಯ ಖಡ್ಗ’ದ ಏಟಿಗೆ ಗುರಿಯಾಗುವ ಜನರ ಪಡಿಪಾಟಲು ಹೇಳತೀರದು. ಇಂದು ಬಹುಸಂಖ್ಯಾತರಲ್ಲಿ ಬಡವರಲ್ಲಿ ಬಡವರಾದವರು ಕೂಡಾ ತಮಗೆ ಆಗುತ್ತಿರುವ ಅನ್ಯಾಯವನ್ನು ಮರೆತು ಅಲ್ಪಸಂಖ್ಯಾತರ ಮೇಲೆ ಎರಗಲು ಸಿದ್ಧವಾಗುವಂತೆ ಮಾಡಲಾಗಿದೆ.

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಎಷ್ಟು ಗಾಳಿಸುದ್ದಿಗಳು? ಮೊದಲು ಬೆಚ್ಚುತ್ತಿದ್ದೆ, ಈಗ ಹುಸಿನಗೆ

‘ಚರಿತ್ರೆಯ ಭಾರ’ದಿಂದ ವರ್ತಮಾನವು ಕುಸಿಯುವಂತೆ ಮಾಡಲು ಸರ್ಕಾರವೇ ಸಿದ್ಧವಾಗಿದೆ. ಆಹಾರ, ಉಡುಪು, ವ್ಯಾಪಾರ, ಉದ್ಯೋಗ ಮುಂತಾದ ಸಕಲಷ್ಟನ್ನೂ ಧರ್ಮದ ಕನ್ನಡಕದಿಂದ ನೋಡಲು ತರಬೇತಿ ಕೊಡುತ್ತಿದ್ದಾರೆ.

ಈ ಅವಮಾನವನ್ನು, ಈ ಅನ್ಯಾಯವನ್ನು ಪ್ರತಿಭಟಿಸದೆ ಇರುವುದು ಸಾಧ್ಯವೇ ಇಲ್ಲ. ಸುಮ್ಮನಿರುವುದು ಅಪರಾಧ. ಆದರೆ, ಸ್ವತಃ ನಾವು ಕೂಡಾ ‘ನಮ್ಮದೇ’(?) ಧರ್ಮದ(?) ದಲಿತರನ್ನು, ಹೆಣ್ಣುಮಕ್ಕಳನ್ನು ಹೇಗೆ ನೋಡಿಕೊಂಡಿದ್ದೇವೆ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಲೇಬೇಕು. ಒಂದು ‘ಸೆಟ್’ ಶ್ರೀಮಂತರ ಬದಲು ಇನ್ನೊಂದು ‘ಸೆಟ್’ ಶ್ರೀಮಂತರನ್ನು ಬೆಂಬಲಿಸುವುದು ತಾತ್ಕಾಲಿಕವಾದ ಹುನ್ನಾರವಾಗುವುದೂ ತಪ್ಪೇ, ಆದರೆ, ಅದು ಶಾಶ್ವತವಾದ ನೀತಿಯಾಗುವುದು ಇನ್ನೂ ದೊಡ್ಡ ತಪ್ಪು.

ಹಿಜಾಬ್ ವಿವಾದವಾಗಲೀ, ಜಾತ್ರೆಯಲ್ಲಿ ಮಾಡುವ ವ್ಯಾಪಾರವಾಗಲೀ ಯಾವುದು ತಪ್ಪು ಯಾವುದು ಸರಿ ಎನ್ನುವುದು ಎಂತಹ ಸಾಮಾನ್ಯನಿಗೂ ತಿಳಿಯುತ್ತದೆ. ಅದಕ್ಕೆ ಬೇಕಾದ್ದು ಬುದ್ಧಿಯಲ್ಲ, ಹೃದಯ. ನಮ್ಮದು ತಾಯಿಯ ಹೃದಯಕ್ಕೂ ಕ್ರೂರಿಯಾಗಲು ತರಬೇತಿ ಕೊಡುತ್ತಿರುವ ಕಾಲ.

ಮಾಧ್ಯಮಗಳು, ಬುದ್ಧಿಜೀವಿಗಳು, ಕಲಾವಿದರು ಇತ್ತಂಡವಾಗಿ ಕತ್ತಿ ಮಸೆಯುತ್ತಿರುವಾಗ ‘ಅನ್ಯವಿಮರ್ಶೆ’ ಮತ್ತು ‘ಆತ್ಮವಿಮರ್ಶೆ’ಗಳ ನಡುವಿನ ಸಮತೋಲನವನ್ನು ಕಂಡುಕೊಳ್ಳಬೇಕು ನಾವು. ಇಲ್ಲವಾದರೆ, ಯಾರನ್ನೂ ಯಾರೂ ಬದಲಿಸಲು ಸಾಧ್ಯವಾಗುವುದಿಲ್ಲ.

ನಾನು ಸರಿತಪ್ಪುಗಳ ಖಾನೇಶುಮಾರಿ ತೀರ್ಪು ಕೊಡುವ ಕೆಲಸದಲ್ಲಿ ತೊಡಗಿಲ್ಲ. ಸನ್ನಿವೇಶದಲ್ಲಿಯೂ ನನ್ನದೇ ಆದ ‘ಕಂಫರ್ಟ್ ಜೋನಿನಲ್ಲಿ ಬದುಕಿರುವ ನಾನೂ ಅಪರಾಧಿಯೇ. ನಲವತ್ತು ವರ್ಷ ಮಕ್ಕಳಿಗೆ ಕಲಿಸಿದ ಪಾಠಗಳ “ಫಲವನ್ನು’ ನೋಡಿ, ನನಗೆ ಅವಮಾನವಾಗಿದೆ, ನಾಚಿಕೆಯಾಗಿದೆ. ಈ ಹೊಲಸು ಕೆಲಸಗಳನ್ನು ಪ್ರತಿಯೊಬ್ಬರೂ ವಿರೋಧಿಸಬೇಕು.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Dharwad: ಮಾನವ ಜಾತಿ ತಾನೊಂದೆ ವಲಂ; ಈಗಲೇ ಈ ಸಾಂಸ್ಕೃತಿಕ ಭಯೋತ್ಪಾದನೆಯನ್ನು ಹತ್ತಿಕ್ಕಬೇಕು

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್