Dr. Veena Shanteshwar‘s Birthday: ‘ಹಿಂದೂ-ಮುಸ್ಲಿಂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆರೆತು ಬದುಕಿದ ಅನುಭವ ನಮ್ಮದು’

Kannada Writer Dr. Veena Shanteshwar : ‘ಪ್ರಸ್ತುತ ದಿನಮಾನದಲ್ಲಿ ತಕ್ಷಣದ ಪ್ರತಿಕ್ರಿಯೆಗಳನ್ನು ಮಾತ್ರ ಗಮನಿಸಿ ಮೌನವಾಗಿರುವವರನ್ನು ಜನವಿರೋಧಿಗಳೆನ್ನುವ ಗುಂಪಿಗೆ ಸೇರಿಸುತ್ತಾರೆ. ಇದು ಸರಿಯಲ್ಲ. ಸಾತ್ವಿಕ ಕ್ರಮದಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸುವವರಿಗೆ ತಮ್ಮದೇ ಆದ  ಅಭಿವ್ಯಕ್ತಿಯ ಗತಿಯೂ ಇರುತ್ತದೆ ಎಂಬುದನ್ನು ಗಮನಿಸಬೇಕು.’

Dr. Veena Shanteshwar‘s Birthday: ‘ಹಿಂದೂ-ಮುಸ್ಲಿಂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬೆರೆತು ಬದುಕಿದ ಅನುಭವ ನಮ್ಮದು’
ಪ್ರಜ್ಞಾ ಮತ್ತಿಹಳ್ಳಿ ಮತ್ತು ಡಾ. ವೀಣಾ ಶಾಂತೇಶ್ವರ
Follow us
ಶ್ರೀದೇವಿ ಕಳಸದ
|

Updated on:Feb 24, 2022 | 5:12 PM

ಡಾ. ವೀಣಾ ಶಾಂತೇಶ್ವರ | Dr. Veena Shanteshwar : ಸಮಾಜದ ಪಾಚಿಗಟ್ಟಿದ ವ್ಯವಸ್ಥೆಯ ವಿರುದ್ಧ ಜ್ವಾಲಾಮುಖಿಯಷ್ಟು ಬಿಸಿಯಾಗಿ ಸಿಡಿದೇಳುವ ಪಾತ್ರಗಳನ್ನು ಸೃಷ್ಟಿಸಿದ ವೀಣಾ ಅವರು ವೈಯಕ್ತಿಕ ಸಂವಹನದಲ್ಲಿ ಬೆಳದಿಂಗಳಿನ ಮಮತೆಯುಣ್ಣಿಸುವ ವಾತ್ಸಲ್ಯಮಯಿಯೆನ್ನುವುದು ಅವರ ಹತ್ತಿರದ ಒಡನಾಡಿಗಳಿಗೆಲ್ಲ ವೇದ್ಯವಾಗಿರುವ ಸಂಗತಿ. ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಫೋನಾಯಿಸಿದರೆ, ನೀವೆಲ್ಲ ಹೇಗಿದ್ದೀರಿ ಎಂದು ನಮ್ಮೆಲ್ಲರ ಕ್ಷೇಮವನ್ನು ಅಪಾರ ಕಾಳಜಿಯಿಂದ ವಿಚಾರಿಸಿಕೊಂಡರು. ಅಚ್ಚುಕಟ್ಟುತನಕ್ಕೆ ಇನ್ನೊಂದು ಹೆಸರೇ ವೀಣಾ ಮೇಡಂ ಎನ್ನುವುದು ಅವರನ್ನು ಬಲ್ಲವರೆಲ್ಲರೂ ಒಕ್ಕೊರಲಿನಿಂದ ಒಪ್ಪಿಕೊಳ್ಳುವ ಸಂಗತಿ. ಧಾರವಾಡದ ‘ಮಂತ್ರಾಲಯ’ದ ಗೇಟು ತೆಗೆದು ಒಳಹೊಕ್ಕೊಡನೆ ಕಣ್ಣಿಗೆ ಬೀಳುವುದು ವೀಣಾ ಅವರು ಅಪಾರ ಕಾಳಜಿಯಿಂದ ಪೋಷಿಸಿಕೊಂಡು ಬಂದ ಪುಟ್ಟದಾದರೂ ತುಂಬಾ ಚೆಂದದ ಹೂದೋಟ. ಕೆಲಸಗಾರರಿಂದ ಹಿಡಿದು ಅಭ್ಯಾಗತರವರೆಗೆ ಎಲ್ಲರನ್ನೂ ಸಮಾನವಾದ ಪ್ರೀತಿ-ಆದರದೊಂದಿಗೆ ಕಾಣುತ್ತಾರೆ. ಪ್ರಜ್ಞಾ ಮತ್ತಿಹಳ್ಳಿ, ಲೇಖಕಿ

*

(ಭಾಗ 1)

ಯಾರೇನು ಅಂದುಕೊಳ್ಳುತ್ತಾರೆ ಎಂದು ಯೋಚಿಸುವುದು ಮತ್ತು ಅದಕ್ಕಾಗಿ ತನ್ನ ನಿಲುವನ್ನು ಮರೆ ಮಾಚಿಕೊಳ್ಳುವುದು ಅವರ ಜಾಯಮಾನವೇ ಅಲ್ಲ. ಅವರ ನೇರ, ದಿಟ್ಟ, ನಿರ್ಭಿಡೆಯ ಸ್ವಭಾವವನ್ನು ಕೆಲವರು ಕಹಿಯೆಂದು ಭಾವಿಸುವುದೂ ಉಂಟು. ಆದರೆ ಅಂತಃಕರಣದ ಮೃದು ಸಿಹಿಯನ್ನು ಉಂಡವರು ಈ ನೇರವಂತಿಕೆಯ ಹಿಂದಿನ ಬದ್ಧತೆಯ ಬೆಳಕನ್ನು ಕಾಣಬಲ್ಲರು.

ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತು ಸಾಂಕ್ರಾಮಿಕ ರೋಗದ ಭಯಕ್ಕೆ ಸಿಲುಕಿ ಒಂದು ಪಲ್ಲಟಕ್ಕೆ ಸಾಕ್ಷಿಯಾಯಿತು. ಈ ದಿನಗಳಲ್ಲಿ ನಿಮ್ಮ ಅನಿಸಿಕೆಯೇನು? ಜಗತ್ತಿನ ಸಾವುನೋವುಗಳು ಬೇಸರ ತಲ್ಲಣದ ಎಳೆಯನ್ನು ಈತನಕವೂ ಹೆಣೆದುಕೊಂಡೇ ಇವೆ. ಆದರೆ ಎಲ್ಲರಂತೆ ನಾನೂ ಕೂಡ ಮುಂಜಾಗರೂಕತೆಯ ಕ್ರಮವೆಂದು ಸಾಮಾಜಿಕ ಸಭೆ-ಸಮಾರಂಭ ಮತ್ತು ಕಾರ್ಯಕ್ರಮಗಳಲ್ಲಿ ಈತನಕವೂ ಭಾಗವಹಿಸುತ್ತಿಲ್ಲ. ಈ ನಡುವೆ ಬಂಧು-ಬಾಂಧವರನ್ನು ಭೆಟ್ಟಿಯಾಗುವ ಸನ್ನಿವೇಶಗಳು ಕಡಿಮೆಯಾಗಿವೆ. ಆದರೆ ಕುಟುಂಬದ ಸದಸ್ಯರು ಒಟ್ಟಿಗೆ ಬದುಕುವ ಅವಕಾಶ ದೊರೆಯಿತು. ಓದಲು, ಬರೆಯಲು ಸಾಕಷ್ಟು ಸಮಯಾವಕಾಶ ದೊರೆಯಿತು. ಏಕಾಂತದ ಆಲೋಚನೆ-ಅಧ್ಯಯನಗಳಿಗೆ ಇದು ದಾರಿ ಮಾಡಿಕೊಟ್ಟಿತು.

ಇದನ್ನು ಓದಿ : Art and Entertainment : ಅಧಿಕಾರದ ಶಕ್ತಿಕೇಂದ್ರ ಮಲಗಿದ ಹೆಬ್ಬಾವಿನಂತೆ, ಅದರೊಂದಿಗೆ ಸದಾ ಸೆಣಸುತ್ತಲೇ ಇರಬೇಕು

ನಿಮ್ಮ ಬದುಕಿನ ಆರಂಭ ಕಾಲದ ವಾತಾವರಣವನ್ನು ಈಗಿನ ಸಾಮಾಜಿಕ ಸಂದರ್ಭಗಳೊಂದಿಗೆ ಹೋಲಿಸಿ ನೋಡಿದಾಗ ನಿಮಗೆ ಏನು ಅನ್ನಿಸುತ್ತೆ? ನನ್ನ ಬಾಲ್ಯದಲ್ಲಿ ಮಹಿಳೆಯರ ಸ್ಥಿತಿಗತಿಗಳು, ಸಾಮಾಜಿಕ ನಂಬಿಕೆಗಳು ಇವುಗಳನ್ನು ನೆನಪಿಸಿಕೊಂಡರೆ ಈಗ ಅಪಾರವಾದ ಸುಧಾರಣೆಯಾಗಿದೆ. ವಿದ್ಯಾಭ್ಯಾಸ, ಉದ್ಯೋಗ, ಜೀವನ ಮಟ್ಟ ಇವುಗಳಲ್ಲಿ ಆಗಿರುವ ಸುಧಾರಣೆಗಳಿಂದ ಬಹಳ ಅನುಕೂಲಕರವಾದ ಬದುಕನ್ನು ನಡೆಸುತ್ತಿದ್ದೇವೆ. ಆದರೆ ಮಾನವ ಸಂಬಂಧಗಳಲ್ಲಿನ ಸ್ಥಿತ್ಯಂತರವು ಬಹಳ ವಿಷಾದ ಭಾವವನ್ನು ಹುಟ್ಟಿಸುತ್ತಿದೆ. ಹಿಂದೂ-ಮುಸ್ಲಿಂ ಸಮುದಾಯಗಳು ಅಪಾರ ಪ್ರೀತಿ ವಿಶ್ವಾಸದಿಂದ ಕೂಡಿ-ಬೆರೆತು ಬದುಕಿದ ಅನುಭವ ನಮ್ಮದು. ಈಗ ರಾಜಕೀಯ ಲಾಭಗಳಿಗಾಗಿ ಮನುಷ್ಯರ ನಡುವೆ ಬೇಧ-ಭಾವ ಮೂಡಿಸುವ ಹುನ್ನಾರು ನಡೆದಿದೆ. ಹೀಗೆ ದ್ವೇಷ ಬಿತ್ತುವ ಕೆಲಸವನ್ನು ಕಂಡಾಗ ನೋವಾಗುತ್ತದೆ.

ಸಮಕಾಲೀನ ತಲ್ಲಣಗಳಿಗೆ ನಿಮ್ಮ ಪ್ರತಿಕ್ರಿಯೆಯೇನು? ಡಾ.ಜಿ.ಎಸ್.ಆಮೂರ ಅವರು ಒಂದು ಮಾತನ್ನು ಹೇಳುತ್ತಿದ್ದರು. ನಾನು ಅದನ್ನು ಸಂಪೂರ್ಣ ಸಹಮತದೊಂದಿಗೆ ಅನುಮೋದಿಸುತ್ತೇನೆ. ಸಮಾಜದ ಆಗುಹೋಗುಗಳನ್ನು ನೋಡಿದಾಗ ಸಂವೇದನಾಶೀಲನಾದ  ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಿಟ್ಟು-ಸಂಕಟ-ನೋವು ಮುಂತಾದ ಭಾವನೆ ಮೂಡಿರುತ್ತದೆ. ಕೆಲವರು ಆಕ್ರೋಶದ ಹೇಳಿಕೆ ಕೊಡುತ್ತಾರೆ, ಬೀದಿಗಿಳಿದು ಹೋರಾಟ ಮಾಡುತ್ತಾರೆ. ಕೆಲವರು ಬಹಿರಂಗ ಹೇಳಿಕೆಗಳನ್ನು ಕೊಡದಿದ್ದರೂ ಮನದಾಳದಲ್ಲಿ ನೊಂದಿರುತ್ತಾರೆ. ತಮ್ಮ ಬರಹಗಳಲ್ಲಿ ಆ ಭಾವವನ್ನು ಪ್ರಕಟಿಸುತ್ತಾರೆ. ಪ್ರಸ್ತುತ ದಿನಮಾನದಲ್ಲಿ ತಕ್ಷಣದ ಪ್ರತಿಕ್ರಿಯೆಗಳನ್ನು ಮಾತ್ರ ಗಮನಿಸಿ ಮೌನವಾಗಿರುವವರನ್ನು ಜನವಿರೋಧಿಗಳೆನ್ನುವ ಗುಂಪಿಗೆ ಸೇರಿಸುತ್ತಾರೆ. ಇದು ಸರಿಯಲ್ಲ. ಸಾತ್ವಿಕ ಕ್ರಮದಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸುವವರಿಗೆ ತಮ್ಮದೇ ಆದ  ಅಭಿವ್ಯಕ್ತಿಯ ಗತಿಯೂ ಇರುತ್ತದೆ ಎಂಬುದನ್ನು ಗಮನಿಸಬೇಕು. ಜಾತಿ-ಮತ-ಧರ್ಮಗಳನ್ನು ಮೀರಿದ ಒಂದು ಮನುಷ್ಯಪ್ರೀತಿಯನ್ನು ಎಲ್ಲರೂ ಗೌರವಿಸುವಂತಾಗಬೇಕು. ಅದೇ ನಮ್ಮೆಲ್ಲರನ್ನು ಉಳಿಸಲು ಸಾಧ್ಯ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Dr. Veena Shanteshwar‘s Birthday: ‘ವೀಣಾ ಕನ್ನಡದ ಮುಖ್ಯ ಲೇಖಕಿ ಮಾತ್ರವಲ್ಲ ಭಾರತದ ಮುಖ್ಯ ಲೇಖಕಿ’ ಎಂಎಸ್ ಆಶಾದೇವಿ

Published On - 2:26 pm, Tue, 22 February 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ