Dr. Veena Shanteshwar‘s Birthday: ಅಪೂರ್ಣಗೊಂಡ ಮಾನವಾನುಭವವನ್ನು ವೀಣಾ ಪೂರ್ಣಗೊಳಿಸಿದ್ದಾರೆ

Shantinath Desai : ‘ಶಾಂತಿನಾಥ ದೇಸಾಯಿಯವರಿಗೆ ಅವರದೇ ಆದ ಸೂಕ್ಷ್ಮತನದಲ್ಲಿ ಹೆಣ್ಣನ್ನು ಗುರುತಿಸುವ ಶಕ್ತಿ ಇತ್ತು. ಹಾಗಾಗಿ ಅಷ್ಟಾದರೂ ವೀಣಾ ಅವರ ಕಥೆಗಳನ್ನು ಆರಂಭದ ದಿನಗಳಲ್ಲಿ ನಿಜದ ನೆಲೆಯಲ್ಲಿ ಚರ್ಚಿಸೋಕೆ ಸಾಧ್ಯವಾಯಿತು ಎನ್ನಿಸುತ್ತದೆ.’

Dr. Veena Shanteshwar‘s Birthday: ಅಪೂರ್ಣಗೊಂಡ ಮಾನವಾನುಭವವನ್ನು ವೀಣಾ ಪೂರ್ಣಗೊಳಿಸಿದ್ದಾರೆ
ಡಾ. ಎಂ. ಎಸ್. ಆಶಾದೇವಿ ಮತ್ತು ಡಾ. ವೀಣಾ ಶಾಂತೇಶ್ವರ
Follow us
ಶ್ರೀದೇವಿ ಕಳಸದ
|

Updated on:Feb 22, 2022 | 7:01 PM

ಡಾ. ವೀಣಾ ಶಾಂತೇಶ್ವರ | Dr. Veena Shanteshwar : ಸ್ತ್ರೀಮನ ಕ್ವಚಿತ್ತಾದದ್ದು, ಗೌಣವಾದದ್ದು, ಅದನ್ನು ಪುರುಷಲೋಕದಲ್ಲಿ ಅಷ್ಟೊಂದು ಘನತೆಯಿಂದ ನೋಡಬೇಕಾಗಿಲ್ಲ. ಹೆಣ್ಣುಮಕ್ಕಳಿಗೆ ಮಾತ್ರ ಅದು ಗೊತ್ತಾಗುತ್ತದೆ. ಪಾಪ ಅವರೇ ಬರೆದುಕೊಳ್ಳಲಿ ಬಿಡಿ… ಇವೆಲ್ಲ ಮೌಲ್ಯಮಾಪನ, ಅಧ್ಯಯನ, ದೃಷ್ಟಿಕೋನದ ಮಾತುಗಳು ಆಗಿರಬಹುದು. ಆದರೆ ಇವು ಅವಳ ಅಭಿವ್ಯಕ್ತಿಯನ್ನು ಅಪಮೌಲ್ಯೀಕರಣಗೊಳಿಸುತ್ತ ಬಂದಿವೆ. ಇದು ಒಟ್ಟು ಸ್ತ್ರೀ ಅಭಿವ್ಯಕ್ತಿಗೆ ಮಾಡುತ್ತಿರುವ ಅವಮಾನದ ಮಾತುಗಳಾಗಿ ಕೇಳಿಸುತ್ತವೆ. ಅಂದರೆ, ಯಾವ ಮಾನವಾನುಭವವೇ ಕಲೆಯ ಅನುಭವ ಎಂದು ಹೇಳುತ್ತಿದ್ದರೋ ಆ ಮಾನುಭಾವದಲ್ಲಿ ಹೆಣ್ಣಿನ ಸಂವೇದನೆ ತುಂಬಾ ಗೌಣವಾಗಿತ್ತು ಎನ್ನುವುದನ್ನೂ ನೀವು ಯಾವತ್ತೂ ಗುರುತಿಸಿಕೊಳ್ಳಲಿಲ್ಲ. ಲೇಖಕಿಯರು ಬರೆಯಲಾರಂಭಿಸಿದಾಗಲೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದೊಂದು ಊನವಾಗಿ ಕಾಣುತ್ತದೆ, ದೌರ್ಬಲ್ಯವಾಗಿ ಕಾಣುತ್ತದೆ ಹಾಗೆಯೇ ವೈಕಲ್ಯವೂ. ಇಂಥ ಸನ್ನಿವೇಶದಲ್ಲಿ ವೀಣಾ ಅಂಥವರು ಅಪೂರ್ಣಗೊಂಡ ಮಾನವಾನುಭವವನ್ನು ಪೂರ್ಣಗೊಳಿಸುತ್ತಿದ್ದಾರೆ ಎನ್ನುವ ಕೃತಜ್ಞತಾ ಭಾವವೂ ಹೊಮ್ಮಲಿಲ್ಲವಲ್ಲ? ಡಾ. ಎಂ. ಎಸ್. ಆಶಾದೇವಿ, ವಿಮರ್ಶಕಿ

*

ಯಾವ ಹೊಸ ಹೆಣ್ಣನ್ನು ಚಿತ್ರಿಸುತ್ತಿದ್ದೀವಿ ಎಂದು ನವ್ಯರು ಹೇಳಲು ಪ್ರಯತ್ನ ಪಡುತ್ತಿದ್ದರೋ ಅಂಥ ಹೆಣ್ಣನ್ನು ಚಿತ್ರಿಸುವುದಕ್ಕೆ ಸಾಧ್ಯವಾಗಿದ್ದು ಕೆಲವೇ ಕೆಲ ಲೇಖಕರಿಗೆ ಮಾತ್ರ. ಎಲ್ಲರಿಗೂ ಸಾಧ್ಯವಾಯಿತು ಎಂದು ನನಗಂತೂ ಅನ್ನಿಸಿಲ್ಲ. ಸ್ವತಃ ಅನಂತಮೂರ್ತಿಯವರು ಚಿತ್ರಿಸಲು ಪ್ರಯತ್ನಿಸಿದ ಹೆಣ್ಣು ಯಾವ ಅರ್ಥದಲ್ಲಿಯೂ ಆಧುನಿಕವಾದ ಹೆಣ್ಣಲ್ಲ. ಅವರ ಚಂದ್ರಿ ಕೂಡ ದೇಹ ಸರ್ವಸ್ವದ ಹೆಣ್ಣು ಮಾತ್ರ. ಇಡೀ ಕಾದಂಬರಿಯಲ್ಲಿ ಅವಳನ್ನು ಲೈಂಗಿಕತೆಯ ಮೂಲಕವೇ ಕಟ್ಟಿಕೊಟ್ಟಿದ್ದಾರೆ ಹೊರತು, ಅವಳ ಘನ ವ್ಯಕ್ತಿತ್ವ ಮತ್ತು ಬೌದ್ಧಿಕತೆಯ ಮೂಲಕ ಅಲ್ಲ. ಅವಳ ಅಸ್ತಿತ್ವ ಕಾಣಿಸದ ಹಾಗೆ ಇಡೀ ಕಾದಂಬರಿ ರೂಪಿತಗೊಂಡಿದೆ. ಪ್ರಾಣೇಶಾಚಾರ್ಯರಿಗೆ ಆಕೆ ಅದ್ಭುತವಾದ ಅನುಭವವನ್ನು ತಂದುಕೊಡುತ್ತಾಳೆ ಎನ್ನುವುದು ಬೇರೆ. ಆದರೆ, ಆ ಅನುಭವ ಮತ್ತದೇ ಹಳೆಯ ಹೆಣ್ಣಿನ ಚಿತ್ರಣವನ್ನೇ ಭದ್ರವಾಗಿ ಸ್ಥಾಪಿಸುತ್ತಾ ಹೋಯಿತಲ್ಲ?

‘ಅವಸ್ಥೆ’ಯಲ್ಲಿ ಗೌರಿ ಮಾತ್ರ ಇಂಟಲೆಕ್ಚುವಲ್ ಥರ ಕಾಣಿಸಿಕೊಳ್ಳುತ್ತಾಳೆ. ಕೃಷ್ಣೇಗೌಡರಿಗೆ ಪ್ಯಾರಲೈಸಿಸ್ ಆದ ಸಂದರ್ಭದಲ್ಲಿ ಗೌರಿ ಆಸ್ಪತ್ರೆಗೆ ಹೋಗುತ್ತಾಳೆ. ಪರಮಪ್ರಿಯನಾದ ಗೆಳೆಯನನ್ನು ಮುಟ್ಟುವಾಗ, ಕ್ಷಮಿಸು, ನನಗೆ ಈಗದೆಲ್ಲ ಆಗುವುದಿಲ್ಲ ಎಂಬರ್ಥದಲ್ಲಿ ಪ್ರತಿಕ್ರಿಯಿಸುತ್ತಾರೆ; ಹೆಣ್ಣಿನ ಸ್ಪರ್ಶ ಎನ್ನುವುದು ಮಾನವ ಘನತೆಯ ಸ್ಪರ್ಶದ ಅರಿವು ಎನ್ನುವುದು ಆ ಪಾತ್ರಕ್ಕೆ ಇಲ್ಲವಾಗುವುದನ್ನು ಗಮನಿಸಿ. ಕೊನೆಗೂ ಅನಂತಮೂರ್ತಿಯವರಿಗೆ ಹೊಸ ಹೆಣ್ಣನ್ನು ಕಾಣಿಸೋದಕ್ಕೆ ಸಾಧ್ಯವಾಯಿತಾದರೂ ಅವಳನ್ನು ಒಳಗಣ್ಣಿನಿಂದ ಕಾಣಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ : Shantinath Desai’s Birthday : ಮಂದಾಕಿನಿ ನಳಿನಿ ಶಾರದಾಬಾಯಿ ಬಂದಿದ್ದಾರೆ

ತೇಜಸ್ವಿಯವರು, ಕಿರಿಗೂರಿನ ಗಯ್ಯಾಳಿಗಳು ಬಿಟ್ಟರೆ, ಅವರ ಕಾದಂಬರಿಯಲ್ಲಿ ಹೆಣ್ಣು ಮೇಜರ್ ಅಬ್ಸೆನ್ಸ್. ಗಯ್ಯಾಳಿಗಳು ಎನ್ನುವ ಶೀರ್ಷಿಕೆ ಮತ್ತು ಆ ಕಾದಂಬರಿ ಅಂತ್ಯಗೊಂಡ ಬಗ್ಗೆ ನನಗೆ ತಕರಾರಿಗೆ, ಮಾರನೆಯ ದಿನ ಯಥಾಸ್ಥಿತಿಯಲ್ಲಿ ಆ ಊರಿನಲ್ಲಿ ಹೆಣ್ಣುಮಕ್ಕಳ ಬದುಕು ಸಾಗುತ್ತದೆ. ನಮ್ಮಲ್ಲಿ ಸ್ತ್ರೀವಾದಿ ಲೇಖಕರೆಂದರೆ ಲಂಕೇಶ್ ಮತ್ತು ಶಾಂತಿನಾಥ ದೇಸಾಯಿಯವರು ಮಾತ್ರ. ಅವರಿಬ್ಬರೇ ಅವಳನ್ನು ನಿಜದಲ್ಲಿ, ಸತ್ಯದಲ್ಲಿ, ಶಕ್ತಿಯಲ್ಲಿ ಗುರುತಿಸೋಕೆ ಪ್ರಯತ್ನ ಪಟ್ಟವರು. ಶಾಂತಿನಾಥರ ಕ್ಷಿತಿಜದ ಮಂದಾಕಿನಿ,  ಬಹುಶಃ ವೀಣಾ ಅವರ ನಾಯಕಿಯರಿಗೆ ಸರಿಸಮನಾಗಿ ನಿಲ್ಲುವ ಒಬ್ಬ ಹೆಣ್ಣು ಎನ್ನಿಸುತ್ತದೆ. ಏಕೆಂದರೆ, ದೇಸಾಯಿಯವರಿಗೆ ಅವರದೇ ಆದ ಸೂಕ್ಷ್ಮತನದಲ್ಲಿ ಹೆಣ್ಣನ್ನು ಸರಿಯಾಗಿ ಗುರುತಿಸುವ ಶಕ್ತಿ ಇತ್ತು. ಇಷ್ಟೆಲ್ಲ ಇದ್ದಾಗಲೇ ವೀಣಾ ಅವರ ಕಥೆಗಳನ್ನು ನಿಜದ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೆ ಮತ್ತು ಚರ್ಚಿಸುವುದಕ್ಕೆ ಸಾಧ್ಯವಾಯಿತು ಎನ್ನಿಸುತ್ತದೆ. ಬಹುಶಃ ಈ ಬಗೆಯ ಮಾತುಗಳನ್ನು ಬರೆದಿದ್ದು ಆರಂಭದ ದಿನಗಳಲ್ಲಿ ಇರಬಹುದು.

ಇನ್ನು, ಲೇಖಕರ ಹೆಣ್ಣು ಮತ್ತು ಲೇಖಕಿಯಾಗಿ ವೀಣಾ ಅವರ ಹೆಣ್ಣು, ಇಬ್ಬರನ್ನೂ ಎದುರುಬದುರು ನಿಲ್ಲಿಸಿ ನೋಡಬೇಕಿತ್ತು. ಆಗ ವೀಣಾ ಅವರ ಹೆಣ್ಣು ಹೇಗೆ ಕಾಣುತ್ತಾಳೆ ಎನ್ನುವುದನ್ನು ನೋಡಬೇಕಿತ್ತು. ನವೋದಯದಲ್ಲಿದ್ದ ಮೀಸಲಾತಿ ಪರಿಕಲ್ಪನೆಯ ಮುಂದುವರಿಕೆಯಾಗಿ ವೀಣಾ ಮತ್ತು ವೈದೇಹಿಯವರನ್ನು ಕಾಣುತ್ತಾ ಬಂದರು. ಆದರೆ ನಾವು ಅವರನ್ನು ನಿಲ್ಲಿಸಿ, ಹೊರಳು ದಾರಿಯಲ್ಲಿ, ಅವರೇ ಕಟ್ಟಿದ ಹೊಸ ಮಾರ್ಗದಲ್ಲಿ ಚರ್ಚೆ ಮಾಡಬೇಕಿತ್ತು. ಹೊಸ ಮಾರ್ಗದ ಹರಿಕಾರರಾಗಿ ವೀಣಾ ಅವರನ್ನು ಗುರುತಿಸಬೇಕಾಗಿತ್ತು. ಹೆಣ್ಣಿಗೆ ಅವಳದೇ ಆದ ದಾರಿಯಿದೆ ಅದನ್ನವಳು ಭಾವ ಮತ್ತು ಬೌದ್ಧಿಕ ಶಕ್ತಿಯಿಂದ ವಿಶಿಷ್ಟವಾಗಿ ಕಟ್ಟಿದ್ದಾಳೆ ಎನ್ನುವುದನ್ನು ನಿಮಗೆ ಅವಳ ಭಾವವನ್ನು, ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದೇವಿ ಅಥವಾ ದೆವ್ವ ಎಂಬ ಅತಿರೇಕದಲ್ಲಿ ಅವಳನ್ನು ನೋಡುತ್ತ ಬಂದಿರಿ. ಅವಳನ್ನು ನೋಡುವ ದಾರಿಯಲ್ಲಿ ಇದ್ದಂಥ ತಪ್ಪುದಾರಿಗಳನ್ನು ಸರಿ ಮಾಡುತ್ತ ಹೋದವರಲ್ಲಿ ವೀಣಾ ಮೊದಲಿಗರೆನ್ನಿಸಿಕೊಂಡರು.

(ಮುಂದಿನ ಭಾಗವನ್ನು ನಿರೀಕ್ಷಿಸಿ)

ಭಾಗ 1 : Dr. Veena Shanteshwar‘s Birthday: ‘ವೀಣಾ ಕನ್ನಡದ ಮುಖ್ಯ ಲೇಖಕಿ ಮಾತ್ರವಲ್ಲ ಭಾರತದ ಮುಖ್ಯ ಲೇಖಕಿ’ ಎಂಎಸ್ ಆಶಾದೇವಿ

Published On - 6:17 pm, Tue, 22 February 22

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು