Dr. Veena Shanteshwar‘s Birthday: ‘ವೀಣಾ ಕನ್ನಡದ ಮುಖ್ಯ ಲೇಖಕಿ ಮಾತ್ರವಲ್ಲ ಭಾರತದ ಮುಖ್ಯ ಲೇಖಕಿ’ ಎಂಎಸ್ ಆಶಾದೇವಿ

Dr. Veena Shanteshwar : ‘ವೀಣಾ ಅವರ ಬರವಣಿಗೆಯಲ್ಲಿ ವಿದ್ಯಾವಂತ ಹೆಣ್ಣು ಕಾಣಿಸುತ್ತಾಳೆ ಎಂತಲೋ, ವೈದೇಹಿಯವರಲ್ಲಿ ಕಾಣಿಸಿಕೊಳ್ಳುವಂಥ ಹೆಣ್ಣಿನ ಶಕ್ತಿಯನ್ನು ಇವರು ಅನಾವರಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂತಲೋ... ಹೀಗೆ ವಿಮರ್ಶಾಲೋಕ ಇವರನ್ನು ಗುರುತಿಸಿದ್ದು. ಆದರೆ ಈ ಎರಡೂ ಕ್ಯಾನ್ವಾಸಿನಾಚೆಗೆ ಇವರನ್ನು ಚರ್ಚಿಸುವ ಅಗತ್ಯವಿದೆ.’ ಡಾ. ಎಂ, ಎಸ್. ಆಶಾದೇವಿ

Dr. Veena Shanteshwar‘s Birthday: ‘ವೀಣಾ ಕನ್ನಡದ ಮುಖ್ಯ ಲೇಖಕಿ ಮಾತ್ರವಲ್ಲ ಭಾರತದ ಮುಖ್ಯ ಲೇಖಕಿ’ ಎಂಎಸ್ ಆಶಾದೇವಿ
ಲೇಖಕಿ ಡಾ. ವೀಣಾ ಶಾಂತೇಶ್ವರ
Follow us
ಶ್ರೀದೇವಿ ಕಳಸದ
|

Updated on:Feb 22, 2022 | 1:22 PM

ಡಾ. ವೀಣಾ ಶಾಂತೇಶ್ವರ | Dr. Veena Shanteshwar : ವೀಣಾ ಅವರು, ಕನ್ನಡದ ಮಾತ್ರವಲ್ಲ ಭಾರತದ ಮುಖ್ಯ ಲೇಖಕಿ. ಆದರೆ ನನಗೆ ತುಂಬಾ ದುಃಖ ಮತ್ತು ವಿಲಕ್ಷಣ ಎನ್ನಿಸುವುದು, ವೀಣಾ ಅವರನ್ನು ಕನ್ನಡ ಸಾಹಿತ್ಯದಲ್ಲಿ ಹೇಗೆ ಗುರುತಿಸಬೇಕಾಗಿತ್ತೋ, ಎಲ್ಲಿ ಅವರಿಗೆ ಯಾವ ರೀತಿ ಸ್ಥಾನ ನಿರ್ದೇಶನ ಮಾಡಬೇಕಿತ್ತೋ ಅದು ಇಲ್ಲಿಯತನಕ ಯಾಕೆ ಮಾಡಲು ಆಗಲಿಲ್ಲ ಎನ್ನುವ ವಿಷಯ. ಈತನಕದ ನಡೆದ ಪ್ರಯತ್ನಗಳು, ಅವರನ್ನು ಕನ್ನಡದ ಒಬ್ಬ ಮಹತ್ವದ ಲೇಖಕಿ ಎಂದಷ್ಟೇ ಗುರುತಿಸಿವೆ. ಆದರೆ ನಾನು ಒಬ್ಬ ಸ್ತ್ರೀವಾದಿ ಲೇಖಕಿಯಾಗಿ, ವೀಣಾ ಇದಕ್ಕಿಂತಲೂ ಮೀರಿದ ಮಹತ್ವದ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದೇ ಹೇಳಲಿಚ್ಛಿಸುತ್ತೇನೆ. ಅವರ ಬರೆವಣಿಗೆಯ ಆರಂಭದ ದಿನಗಳಿಂದಲೂ ‘ಲೇಖಕಿ’ ಅನ್ನುವ ವರ್ಗೀಕರಣದ ಆಚೆಗೆ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತಮ್ಮ ಎತ್ತರವನ್ನು, ಶಕ್ತಿಯನ್ನು, ಸೌಂದರ್ಯವನ್ನು ಪಡೆದಂಥವರಾಗಿದ್ದರಲ್ಲ, ಅಂಥ ಆಧುನಿಕ ಲೇಖಕಿಯರಲ್ಲಿ ವೀಣಾ ಬಹುಮುಖ್ಯರು. ಡಾ. ಎಂ. ಎಸ್. ಆಶಾದೇವಿ, ವಿಮರ್ಶಕಿ 

*

(ಭಾಗ 1)

ಇವರ ಬರವಣಿಗೆಯಲ್ಲಿ ವಿದ್ಯಾವಂತ ಹೆಣ್ಣು ಕಾಣಿಸುತ್ತಾಳೆ ಎಂತಲೋ, ವೈದೇಹಿಯವರಲ್ಲಿ ಕಾಣಿಸಿಕೊಳ್ಳುವಂಥ ಹೆಣ್ಣಿನ ಶಕ್ತಿಯನ್ನು ಇವರು ಅನಾವರಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂತಲೋ… ಹೀಗೆ ನಮ್ಮ ಕನ್ನಡ ಸಾಹಿತ್ಯ ವಿಮರ್ಶಾ ಲೋಕ ಇವರನ್ನು ಗುರುತಿಸಿದ್ದು. ಆದರೆ ಈ ಎರಡೂ ಕ್ಯಾನ್ವಾಸಿನಾಚೆಗೆ ಇವರನ್ನು ಚರ್ಚಿಸುವ ಅಗತ್ಯವಿದೆ. ಇವರ ಸಮಕಾಲೀನ ಬರಹಗಾರರೆಲ್ಲರೂ ಇವರಿಗೆ ಆಪ್ತರಾಗಿದ್ದರು. ಅವರೆಲ್ಲರೂ ಇವರ ಬರೆವಣಿಗೆಗೆ ಬಹಳ ಪ್ರೋತ್ಸಾಹ ಕೊಡುವವರೂ ಆಗಿದ್ದರು. ಈ ಎಲ್ಲವನ್ನೂ ಒಪ್ಪಿ ಕೂಡ, ಒಟ್ಟು ನವ್ಯ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಣ್ಣು ಮತ್ತು ವೀಣಾ ಶಾಂತೇಶ್ವರ ಕಟ್ಟಿಕೊಡಲು ಪ್ರಯತ್ನಿಸುತ್ತಿರುವ ಹೆಣ್ಣು, ಇವರಿಬ್ಬರ  ನಡುವಿನ ವ್ಯತ್ಯಾಸವನ್ನು ಗುರುತಿಸಬೇಕಾಗಿದೆ. ಇದೇ ವೀಣಾ ಅವರಿಗೆ ಕನ್ನಡ ಸಾಹಿತ್ಯ ಲೋಕ ಸಲ್ಲಿಸಬೇಕಾಗಿರುವ ಗೌರವ.

ಯು.ಆರ್. ಅನಂತಮೂರ್ತಿಯವರು ಅದೆಷ್ಟು ಪ್ರಗತಿಪರ, ಆಧುನಿಕ ವಿಚಾರವನ್ನು ಹೊಂದಿದ್ದರೆಂದರೆ, ಭಾರತದ ಸಾಮಾಜಿಕ ರೋಗಗಳೆಲ್ಲವಕ್ಕೂ ಪರಿಹಾರವನ್ನು ಹುಡುಕುವಂಥ ಮಹತ್ವಾಕಾಂಕ್ಷಿ ಲೇಖಕ. ಸಂಸ್ಕಾರ, ಅವಸ್ಥೆ,  ಭಾರತೀಪುರ ಕಾದಂಬರಿಗಳನ್ನು ಜಾಗತಿಕ ಮಟ್ಟದಲ್ಲಿ ಅನೇಕರು ಅನೇಕ ವಿಧಗಳಲ್ಲಿ ಶೋಧಿಸಿದರು. ಆದರೆ, ಆ ಬಗೆಯ ಶೋಧಗಳಿಗೆ ಸಿಕ್ಕಂಥ ಭಿತ್ತಿ ನಮ್ಮ ವೀಣಾ ಥರದ ಲೇಖಕಿಯರಿಗೆ ಯಾಕಾಗಿ ಸಿಕ್ಕಿಲ್ಲ ಮತ್ತು ಸಿಗುತ್ತಿಲ್ಲ?

ಇದನ್ನೂ ಓದಿ : G. K. Govind Rao ; ಇದು ಪ್ರೊ. ಜಿಕೆಜಿಯವರ ದತ್ತುಪುತ್ರಿಯ ‘ಆಶಾವಾದ’

ಶಿಕ್ಷಣ ಸಿಕ್ಕ ಕೂಡಲೇ ಹೆಣ್ಣುಮಕ್ಕಳಿಗೆ ಅರಿವು ಮೂಡಿತು. ಅರಿವಿನ ಹಿನ್ನೆಲೆಯಲ್ಲಿ ತಮ್ಮ ಹಕ್ಕು, ಬದುಕು, ವ್ಯಕ್ತಿತ್ವ ಅವಕಾಶಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಶುರು ಮಾಡಿದರು. ಅಂಥವರ ಮೊದಲಗಿತ್ತಿಯಾಗಿ ವೀಣಾ ಎಂದು ಲೇಖಕರು ಹೇಳುತ್ತ ಬಂದಿದ್ದಾರೆ. ಆದರೆ, ಹೀಗೆ ಹೇಳುವಾಗಲೂ ಆ ಕಾಲದ ವಿಮರ್ಶಕರಾದ ಜಿ. ಎಸ್. ಆಮೂರ, ಶಾಂತಿನಾಥ ದೇಸಾಯಿ, ಗಿರಡ್ಡಿ ಗೋವಿಂದರಾಜ ಇವರುಗಳು ಯಾರೂ ವೀಣಾ ಅವರನ್ನು ಸೂಕ್ತ ಸ್ಥಾನ ನಿರ್ದೇಶನದ ಮೂಲಕ ಗೌರವಿಸಲಿಲ್ಲ ಎನ್ನುವುದು ಖೇದಕರ.

ಯಾಕೆ ಹೀಗಾಯಿತು? ವೀಣಾ ಅವರು ತಮ್ಮ ಬರೆವಣಿಗೆಯ ಮೂಲಕ ಎತ್ತಿದ ಪ್ರಶ್ನೆಗಳ ಪ್ರಖರತೆ, ಕಟುವಾಸ್ತವ ಇದೆಯಲ್ಲ, ಅದನ್ನು ಜೀರ್ಣಿಸಿಕೊಳ್ಳುವುದಕ್ಕೆ ಕಷ್ಟವಾಯಿತೋ ಏನೋ ಆ ತಲೆಮಾರಿನವರಿಗೆ. ಆ ವಿಮರ್ಶಕರಲ್ಲಿ ಒಬ್ಬರು, ವೀಣಾ ಅವರು ಸ್ತ್ರೀಮನವನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದಾರೆ ಎಂದಿದ್ದಾರೆ. ಸ್ತ್ರೀಮನವನ್ನು ಚೆನ್ನಾಗಿ ಚಿತ್ರಿಸುವುದು ಎಂದರೆ ಏನು? ಹೆಣ್ಣಿನ ಅಂತರಂಗವನ್ನು, ಮನೋಲೋಕವನ್ನು, ಭಾವಭಿತ್ತಿಯನ್ನು, ಲೋಕಮೀಮಾಂಸೆ, ಬೌದ್ಧಿಕಲೋಕವನ್ನು, ಸಂವೇದನೆಯನ್ನು, ಅನನ್ಯತೆಯನ್ನು ಹೀಗೆ ಏನೂ ಇರಬಹುದು. ಈ ದೃಷ್ಟಿಯಿಂದ ಸ್ತ್ರೀಮನ ಎಂದರೆ ಏನು ಎಂದು ಒಪ್ಪಿಕೊಳ್ಳಬಹುದು. ಆದರೆ, ಈವತ್ತು ಆಧುನಿಕ ಸಂದರ್ಭದಲ್ಲಿ ಸ್ತ್ರೀವಾದಿ ತಾತ್ವಿಕತೆ ಮತ್ತು ವ್ಯಾಖ್ಯಾನ ಬದಲಾಗಿದೆ. ಅದೊಂದು ಅನನ್ಯವಾದ ಮನಸ್ಥಿತಿ, ವಿಶಿಷ್ಟ ಮನೋವಿನ್ಯಾಸ ಎನ್ನುವ ನೆಲೆಯಿಂದ ಹೊಳಪು ಹೆಚ್ಚಿಸಿಕೊಳ್ಳುತ್ತಿದೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಎಸ್ತರ್ ಅನಂತಮೂರ್ತಿಯವರ ‘ನೆನಪು ಅನಂತ’ ಸದ್ಯದಲ್ಲೇ ನಿಮ್ಮ ಓದಿಗೆ

Published On - 1:19 pm, Tue, 22 February 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್