AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Book: ‘ಒಡಲು ಉರಿದಾಗ‘, ಶಿವಶಂಕರ ಕಡದಿನ್ನಿಯವರ ಒಂದು ಗಜಲ್ ಸಂಕಲನ

ಅರಬ್ಬಿ, ಉರ್ದು ಮುಂತಾದ ಪೌರ್ವಾತ್ಯ ಭಾಷೆಗಳಲ್ಲಿ ಜನಪ್ರಿಯವಾಗಿರುವ ಗಜಲ್, ಪ್ರೀತಿಯೇ ಸ್ಥಾಯೀಭಾವವಾಗಿರುವ ಹಾಗೂ ಅದರ ವಿವಿಧ ಆಯಾಮಗಳೇ ಸಂಚಾರಿಭಾವಗಳಾಗಿರುವ ಒಂದು ದ್ವಿಪದಿ ಮಾಲೆ ಅಥವಾ ಗೇಯಗೀತೆ. ಇದಕ್ಕೆ ತನ್ನದೇ ನಿರ್ದಿಷ್ಟ ಛಂದಸ್ಸು, ಲಯ ಮತ್ತು ನಿಯಮಗಳಿವೆ.

New Book: ‘ಒಡಲು ಉರಿದಾಗ‘, ಶಿವಶಂಕರ ಕಡದಿನ್ನಿಯವರ ಒಂದು ಗಜಲ್ ಸಂಕಲನ
Book
TV9 Web
| Edited By: |

Updated on: Jul 23, 2022 | 3:50 PM

Share

ಅರಬ್ಬಿ, ಉರ್ದು ಮುಂತಾದ ಪೌರ್ವಾತ್ಯ ಭಾಷೆಗಳಲ್ಲಿ ಜನಪ್ರಿಯವಾಗಿರುವ ಗಜಲ್, ಪ್ರೀತಿಯೇ ಸ್ಥಾಯೀಭಾವವಾಗಿರುವ ಹಾಗೂ ಅದರ ವಿವಿಧ ಆಯಾಮಗಳೇ ಸಂಚಾರಿಭಾವಗಳಾಗಿರುವ ಒಂದು ದ್ವಿಪದಿ ಮಾಲೆ ಅಥವಾ ಗೇಯಗೀತೆ. ಇದಕ್ಕೆ ತನ್ನದೇ ನಿರ್ದಿಷ್ಟ ಛಂದಸ್ಸು, ಲಯ ಮತ್ತು ನಿಯಮಗಳಿವೆ.

ಕನ್ನಡದಲ್ಲಿ ಉತ್ತರ ಕರ್ನಾಟಕದ ಶಾಂತರಸದಿಂದ ಜನಪ್ರಿಯಗೊಂಡ ಈ ಕಾವ್ಯ ಪ್ರಕಾರದಲ್ಲಿ ಇಂದು ನೂರಾರು ಮಂದಿ ಗಜಲುಗಳನ್ನು ರಚಿಸುತ್ತಿದ್ದಾರೆ. ಆದರೆ ಕನ್ನಡದ ಜಾಯಮಾನಕ್ಕೆ ಹಾಗೂ ಮಾತ್ರಾಲಯ ಮತ್ತು ನುಡಿಗಟ್ಟಿಗೆ ಇದನ್ನು ಒಗ್ಗಿಸುವುದು, ಜತೆಗೆ ಸಮಕಾಲೀನತೆ, ಹೊಸತನ ಮತ್ತು ವೈವಿಧ್ಯತೆಯನ್ನು ಸಾಧಿಸುವುದು ನಿಜಕ್ಕೂ ದೊಡ್ಡ ಸವಾಲು.

ಈ ಸವಾಲನ್ನು ಯುವ ಕವಿ ಶಿವಶಂಕರ ಕಡದಿನ್ನಿಯವರು ಇದೀಗ ಹೊರತರುತ್ತಿರುವ ಒಡಲು ಉರಿದಾಗ ಎಂಬ ತಮ್ಮ ಗಜಲುಗಳ ಸಂಕಲನದಲ್ಲಿ ತಮ್ಮದೇ ರೀತಿಯಲ್ಲಿ ಎದುರಿಸಿದ್ದಾರೆ.

ದಲಿತ ಮತ್ತು ಬಂಡಾಯ ಕಾವ್ಯ ಸಂವೇದನೆಯನ್ನು ಗಜಲ್ ಛಂದಸ್ಸಿಗೆ ಕಸಿ ಮಾಡಲು ಇಲ್ಲಿ ಅವರು ಯತ್ನಿಸಿದ್ದಾರೆ. ಸಮಕಾಲೀನ ಸಂದರ್ಭದ ಬಡತನ, ಹಸಿವು, ಶೋಷಣೆ, ಭ್ರಷ್ಟಾಚಾರ ಮತ್ತು ವಂಚನೆಯ ನಡುವೆ ಪರಿಶುದ್ಧ ಪ್ರೀತಿಗಾಗಿ, ಮಾನವೀಯ ಅಂತಃಕರಣಕ್ಕಾಗಿ ಅವರು ಹಾತೊರೆದಿದ್ದಾರೆ. ಮಡುಗಟ್ಟಿದ ವಿಷಾದವೇ ಇಲ್ಲಿನ ಸ್ಥಾಯೀಭಾವವಾಗಿ ಓದುಗರ ಮನಸ್ಸನ್ನು ಕಲಕುತ್ತದೆ ಎಂದು ಬಿ.ಆರ್​, ಲಕ್ಷ್ಮಣರಾವ್ ಅವರು ಪುಸ್ತಕದ ಬಗ್ಗೆ ಬರೆದಿದ್ದಾರೆ.

ರಾಯಚೂರು ಜಿಲ್ಲೆಯ ಶಿವಶಂಕರ್ ಗಝಲ್ ಕಾವ್ಯ ರಚಿಸುತ್ತಾರೆಂಬುದು ಹೆಮ್ಮೆಯ ಸಂಗತಿ, ಉರ್ದು ಭಾಷೆಯ ಸೊಗಸನ್ನು, ಸೊಗಡನ್ನು ಹೆಚ್ಚಿಸಿರುವ ಗಝಲ್, ಎರಡು ಸಾಲುಗಳಲ್ಲಿ ಪ್ರೀತಿ, ಪ್ರೇಮ ವಿರಹ ಅನುರಾಗ ಇತ್ಯಾದಿ ಮೋಹಕ ಭಾವಾತ್ಮಕ ವಸ್ತುಗಳನ್ನು ಒಳಗೊಂಡು, ವಾಹ್! ವಾಹ್​! ಎಂಬ ಉದ್ಘಾರದೊಂದಿಗೆ ಕೇಳುಗರ ಅಂತರಂಗಕ್ಕಿಳಿಯುವ ವಿನೂತನ ಶೈಲಿಯ ಸುಂದರ ಕಾವ್ಯ ಪ್ರಕಾರ, ಉರ್ದುವಿನಷ್ಟೇ ಶಕ್ತಿಯುತ ಸತ್ವಪೂರ್ಣ ಶೈಲಿಯಲ್ಲಿ ಕನ್ನಡದ ಗಝಲ್ ರಚನೆಯಾಗಲು ಕಾರಣ-ಅಂದಿನ ನಿಜಾಮರು, ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳ ಪಟ್ಟಂತಹ ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಆಡಳಿತ ಭಾಷೆ ಹಾಗೂ ಶಿಕ್ಷಣ ಮಾಧ್ಯಮವು ಉರ್ದುವೆ ಆಗಿತ್ತು.

ಆದ್ದರಿಂದಲೇ ಕನ್ನಡ ಕವಿಗಳಿಗೆ ಕನ್ನಡ ಭಾಷೆಯ ಜತೆಗೆ ಉರ್ದುವಿನಲ್ಲಿಯೂ ಪಾಂಡಿತ್ಯಗಳಿಸಲು ಸಾಧ್ಯವಾಯಿತು. ಕವಿ ಶಾಂತರಸ, ಜಂಬಣ್ಣ ಅಮರಚಿಂತ, ಮುಕ್ತಾಯಕ್ಕ ಮುಂತಾದ ಖ್ಯಾತ ಗಝಲ್​ಗಳನ್ನು ರಚಿಸಿ ಹಾಡಿ ಪ್ರೇಕ್ಷಕರ ಹೃನ್ಮನಗಳನ್ನು ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದು ಡಾ. ಬಿ.ಟಿ. ಲಲಿತಾ ನಾಯಕ್ ಶುಭಕೋರಿದ್ದಾರೆ.

ಶಿವಶಂಕರ ಕಡದಿನ್ನಿ ಪರಿಚಯ: ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಡದಿನ್ನಿಯವರಾದ ಶಿವಶಂಕರ ಕಡದಿನ್ನಿ ಅವರು ಹುಟ್ಟಿದ್ದು 1997ರ ಜೂನ್ ಜೂನ್ 12ರಂದು ಜನಿಸಿದರು. ಓದಿದ್ದು ಬಿಎ ಮಳೆಬಿಲ್ಲು, ಜಪಾನಿ ಸಾಹಿತ್ಯ ಹೈಕುಗಳ ಮಾದರಿಯಲ್ಲಿ ಬರೆದ ನಸುಕು ಕವನ ಸಂಕಲನ ಇತ್ತೀಚೆಗೆ ಪ್ರಕಟವಾಗಿದೆ.

ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!