Poornachandra Tejaswi Death Anniversary: ‘ಹಲ್ಲು ಕಿರಿಯೋ ಮೂತಿಯಷ್ಟೇ ತೆಗೀತೀಯ! ಶಾಸ್ತ್ರಾಚಾರನೂ ತೆಕ್ಕೊ’

Karvalo : ನಿಮಗೆ ಗೊತ್ತಲ್ಲ ಜನ್ಮದಲ್ಲಿ ಒಂದೇ ಒಂದು ಸಾರಿ ಮದುವೆ ಆಗೋದಂತ!” ಪ್ರಭಾಕರ ಮೂವ್ವತ್ತಾರು ಫೋಟೋ ತೆಗೆಯಬಹುದಾದ ಒಂದು ಇಡೀ ರೋಲನ್ನೇ ಹಾಕಿಕೊಂಡು ಬಂದಿದ್ದ; ಬೆಂಗಳೂರಿನ ಕಲಾಸಕ್ತೆ ಸಂಧ್ಯಾ ನರೇಂದ್ರರಿಗೆ ಈ ಕಾದಂಬರಿಯ ಈ ಭಾಗ ಇಷ್ಟ.

Poornachandra Tejaswi Death Anniversary: ‘ಹಲ್ಲು ಕಿರಿಯೋ ಮೂತಿಯಷ್ಟೇ ತೆಗೀತೀಯ! ಶಾಸ್ತ್ರಾಚಾರನೂ ತೆಕ್ಕೊ’
ಲೇಖಕ ಪೂರ್ಣಚಂದ್ರ ತೇಜಸ್ವಿ ಮತ್ತು ಸಂಧ್ಯಾ ನರೇಂದ್ರ
Follow us
ಶ್ರೀದೇವಿ ಕಳಸದ
|

Updated on: Apr 05, 2022 | 4:18 PM

Poornachandra Tejaswi Death Anniversary : ಮದುವೆ ದಿನ ನಾವೆಲ್ಲಾ ಇಲ್ಲದಿದ್ದರೆ ಮಂದಣ್ಣ ಮದುವೇನೇ ಆಗೋದಿಲ್ಲಂತೆ ಎಂದು ಮಾಮೂಲೀ ಸುಳ್ಳೊಂದನ್ನು ಕರೆಯೋಲೆಯ ಜೊತೆಯಲ್ಲೇ ಮಂದಣ್ಣ ಹೇಳಿಕಳಿಸಿದ್ದ. ನಾವು ಅವರಿವರ ಮಾತುಗಳಿಗೆ ವದಂತಿಗಳಿಗೆಲ್ಲಾ ಬೆಲೆಕೊಟ್ಟು ದೂರಕ್ಕಿರೋದು ಬೇಡವೆಂದು ಮದುವೆಗೆ ಹೋದೆವು. ಸಣ್ಣ ಚಪ್ಪರ ಒಂದನ್ನು ಕಟ್ಟಿದ್ದರು. ನಾನು ಹೋಗಬೇಕಾದರೆ ಮೊದಲೇ ಕರ್ವಾಲೊ ಸಾಹೇಬರು ಪ್ರಭಾಕರ ಎಲ್ಲ ಬಂದಿದ್ದರು. ಪ್ರಭಾಕರ ಕರ್ವಾಲೊರವರಿಗೆ ಮದುವೆಯ ಶಾಸ್ತ್ರಾಚಾರ ವಿಧಿ ವಿಧಾನಗಳನ್ನು ವಿವರಿಸುತ್ತಿದ್ದ. ನಾನು ಹೋಗುತ್ತಿದ್ದಂತೆಯೇ ಅವರು ನಗುತ್ತಾ “ಬನ್ನಿ ಬನ್ನಿ” ಎಂದರು . ನಾನು ಹೋಗಿ ಕುಳಿತಿರಲಿಲ್ಲ. ಅಷ್ಟರಲ್ಲೇ ಯಾರೋ “ಓ ಗಂಡಿನ ಕಡೆಯೋರು ಬಂದ್ರು ಬಂದ್ರು” ಎಂದು ಕೂಗಿದರು. ಹುಲ್ಲಿಗೆ ಬೆಂಕಿಹಾಕಿ ತಮಟೆ ಕಾಯಿಸುತ್ತಾ ಕುಳಿತಿದ್ದ ಇಬ್ಬರು ಹರಿಜನರು ತಕ್ಷಣ ಎದ್ದು “ಢಂಮ್ ಢಂಮ್ಮು ಢಂಮ್ಮು ಢಂಮ್ಮು” ಎಂದು ಬಲವಾಗಿ ತಮಟೆ ಬಡಿಯ ತೊಡಗಿದರು.

ತೇಜಸ್ವಿಯವರ ‘ಕರ್ವಾಲೋ’ದಿಂದ ತಮಗಿಷ್ಟವಾದ ಆಯ್ದ ಭಾಗ ಕಳಿಸಿದವರು ಬೆಂಗಳೂರಿನ ಕಲಾಸಕ್ತೆ ಸಂಧ್ಯಾ ನರೇಂದ್ರ.

ದಿಬ್ಬಣದ ಮುಂಭಾಗದಲ್ಲಿ ಲಕ್ಷ್ಮಣ ತಲೆಗೆ ಒಂದು ಟವಲ್ ಸುತ್ತಿಕೊಂಡು ಪೇಟದ ತರಹ ಮಾಡಿಕೊಂಡು, ಕೇವಲ ಒಂದು ಪಂಚೆ ನೆಟ್ ಬನಿಯನ್ ತೊಟ್ಟುಕೊಂಡು ಬರುತ್ತಾ ಇದ್ದ. ಲಕ್ಷ್ಮಣ ಕೊಂಚ ವಯಸ್ಸಾದವನಂತೆ ಕಾಣಬೇಕೆಂದೂ ಅದಕ್ಕಾಗಿ ಇದೇ ರೀತಿ ವೇಷ ಧರಿಸಬೇಕೆಂದೂ ಮಂದಣ್ಣ ವಿಪರೀತ ಹಟ ಮಾಡಿದನಂತೆ. ಅವನ ಹಿಂದುಗಡೆಯೇ ಮಂದಣ್ಣ ಒಂದು ಪೇಟ ಕಟ್ಟಿಕೊಂಡು ಅದಕ್ಕೊಂದು ಬಾಸಿಂಗ ಸಿಕ್ಕಿಸಿಕೊಂಡು ಅದಕ್ಕೆ ನೇತುಕೊಂಡಿದ್ದ ಗಾಜಿನ ಕುಚ್ಚುಗಳನ್ನೆಲ್ಲಾ ಓಲಾಡಿಸುತ್ತಾ ಬರುತ್ತಿದ್ದ. ಕೈಯಲ್ಲಿ ಒಂದು ಬೆಂಡಿನ ಗದೆ ಹಿಡಿದುಕೊಂಡಿದ್ದ. ಮುಖ ನೋಡಿದೆ. ಗುರುತೇ ಸಿಕ್ಕಲಿಲ್ಲ! ಮೂವತ್ತೆರಡು ಹಲ್ಲುಗಳ ಹಿಂದೆ ಒಂದು ಮೂಗು ಎರಡು ಕಣ್ಣುಗಳು ಮಾತ್ರ ಕಂಡವು. ಬೇರೆ ಯಾರೋ ಒಬ್ಬಾತ ಮಂದಣ್ಣನ ತಲೇಮೇಲೆ ಒಂದು ಛತ್ರಿ ಹಿಡಿದುಕೊಂಡಿದ್ದ. ಹಲವಾರು ಜನ ಹೆಂಗಸರು ಏನೇನೋ ಹೊತ್ತುಕೊಂಡಿದ್ದರು.

ಪ್ರಭಾಕರ ಕ್ಯಾಮರ ತಂದಿದ್ದ. ಜೊತೆಗೆ ಈಚೆಗೆ ಹೊಸದಾಗಿ ಕೊಂಡಿದ್ದ ಪ್ಲಾಷ್‌ಲೈಟನ್ನೂ ತಂದಿದ್ದ. ಬರುವಾಗಲೇ ಮಂದಣ್ಣ ಪ್ರತಿ ಹೆಜ್ಜೆಗೂ ಪ್ರಭಾಕರ ಫೋಟೋ ತೆಗೆದಾನೇನೋ ಎಂದು ನಿರೀಕ್ಷಿಸುತ್ತಾ ನಿಧಾನ ಹೆಜ್ಜೆ ಇಡುತ್ತಾ ಬಂದ. ಅವನ ಹಿಂದೆ ಒಂದೆರಡು ಜನ ಹಳ್ಳಿ ಹುಡುಗರು ಅಕಸ್ಮಾತ್ ಪ್ರಭಾಕರ ಫೋಟೋ ತೆಗೆದರೆ ತಮ್ಮ ಮುಖವೂ ಬೀಳಲೆಂದು ಮಂತ್ರಿಗಳ ಹಿಂದೆ ಇಣುಕುವ ಸ್ಥಳೀಯ ಪುಢಾರಿಗಳಂತೆ ಹತ್ತಿರದಲ್ಲೇ ನಡೆದು ಬಂದರು.

ಇದನ್ನೂ ಓದಿ : Poornachandra Tejaswi Death Anniversary: ನಮ್ಮ ತೇಜಸ್ವಿ; ತೇಜಸ್ವಿಯವರ ಹಸಿವೆ ಮರೆಸಿದ ಆ ಸಂಗೀತ

ಮಂದಣ್ಣ ಮದುವೆಗೆ ಮೊದಲೇ ಪ್ರಭಾಕರನಿಗೆ ಸಿಕ್ಕಿ “ಒಳ್ಳೇ ಪೋಜು ತಕ್ಕೊಡಬೇಕು ಪ್ರಭಾಕರಯ್ಯ. ನೋಡಿದರೆ ಸಾಕು, ಮದುವೆ ಆದಂಗೇ ಇರಬೇಕು. ಆಯ್ತಾ, ಹೈಕ್ಲಾಸು ಪೋಜು ತೆಗೀಬೇಕು. ನಿಮಗೆ ಗೊತ್ತಲ್ಲ ಜನ್ಮದಲ್ಲಿ ಒಂದೇ ಒಂದು ಸಾರಿ ಮದುವೆ ಆಗೋದಂತ!” ಎಂದು ಅಂಗಲಾಚಿದ್ದನಂತೆ. ಅದಕ್ಕೇ ಪ್ರಭಾಕರ ಮೂವ್ವತ್ತಾರು ಫೋಟೋ ತೆಗೆಯಬಹುದಾದ ಒಂದು ಇಡೀ ರೋಲನ್ನೇ ಹಾಕಿಕೊಂಡು ಬಂದಿದ್ದ. ಕರ್ವಾಲೊ ಹೇಳಿದರು, ‘‘ಬರೀ ಮಂದಣ್ಣನ ಹಲ್ಲು ಕಿರಿಯೋ ಮೂತಿ ಏನು ತೆಗೀತೀಯ! ಇವೆಲ್ಲಾ ಶಾಸ್ತ್ರಾಚಾರನೂ ತೆಕ್ಕೊ’’ ಎಂದು.

ಎಲ್ಲ ಗಂಡಿನ ಕಡೆಯವರೂ ಚಪ್ಪರದೊಳಗೆ ಜಾಗ ಮಾಡಿಕೊಂಡರು. ಆದರೆ ಪರಿಸ್ಥಿತಿ ಶಾಂತವಾಗಿದ್ದುದು ಇದ್ದಕ್ಕಿದ್ದಂತೆ ಗೊಂದಲಗೊಳ್ಳುವಂತೆ ಕಂಡಿತು. ಗಂಡಿನ ಕಡೆಯ ಹೆಂಗಸೊಬ್ಬಳು ವಧುವಿಗೆ ಕೊಡುವ ಉಡುಗೊರೆಗಳ ಬುಟ್ಟಿಯನ್ನು ಮದುವೆ ಮಣೆ ಎದುರು ಇಟ್ಟಳು. ತಕ್ಷಣ ತೊಂದರೆ ಆರಂಭವಾಯ್ತು. ಅಲ್ಲಿದ್ದ ಹೆಣ್ಣಿನ ಕಡೆಯ ಯಾರು ಯಾರೋ ಹೆಂಗಸರು ಅದನ್ನು ಪರೀಕ್ಷಿಸಲು ಲಗುಬಗೆಯಿಂದ ನುಗ್ಗಿದರು. ಒಬ್ಬಳು ಕೆಂಪು ಜಲ್ಲಿ ಕಾಗದದಲ್ಲಿ ಸುತ್ತಿಟ್ಟಿದ್ದ ಬಳೆ ಮತ್ತು ತಾಳಿ ಸರಗಳನ್ನು ತೆಗೆದು ನೋಡಿ ತಾತ್ಸಾರದ ಮುಖ ಮಾಡಿಕೊಂಡು ‘ಅಬ್ಬಬ್ಬಬ್ಬ ನೆಗ್ಲಾಕೇ ಆಗಲ್ಲ, ಅಷ್ಟೊಂದು ತೂಕ ಇದೆಯಲ್ಲಾ” ಎಂದು ತಮ್ಮ ಹೆಂಗಸರ ಕಡೆ ತಿರುಗಿ ಹಿಯ್ಯಾಳಿಸಿದಳು.

ಇದನ್ನೂ ಓದಿ : Poornachandra Tejaswi Death Anniversary: ಆ ಮುದುಕಿ ಮೈ ಮುಟ್ಟಿದರೆ ನನ್ನ ತಾಳಿ ಆಣೆ, ಮುಸುಡಿಗೆ ಒರಲೆ ಹಿಡಿಯಾ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!