2020-21ರ (FY21) ಹಣಕಾಸು ವರ್ಷಕ್ಕಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಡಿಸೆಂಬರ್ 31, 2021 ಗಡುವು ಆಗಿತ್ತು. ಆದರೂ ಇ-ವೆರಿಫಿಕೇಷನ್ ಇನ್ನೂ ಪೂರ್ಣಗೊಳಿಸದವರಿಗೆ ಫೆಬ್ರವರಿ 28, 2022ರ ಒಳಗೆ ಫೈಲಿಂಗ್ ಮಾಡಲು ವಿಸ್ತರಣೆಯನ್ನು ನೀಡಲಾಗಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಭಾನುವಾರ ಇ-ವೆರಿಫಿಕೇಷನ್ ಬಾಕಿ ಇರುವ ಇ-ಫೈಲ್ ಮಾಡಿದ ಐಟಿಆರ್ಗಳ ಪರಿಶೀಲನೆಗೆ ಒಂದು ಬಾರಿ ಸಡಿಲಿಕೆ ನೀಡಿದೆ ಎಂದು ಹೇಳಿದೆ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ದೋಷಗಳಿವೆ ಎಂಬ ದೂರುಗಳ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. “ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) AY2020-21ಗಾಗಿ ಇ-ಫೈಲ್ ಮಾಡಿದ ಐಟಿಆರ್ಗಳ ಪರಿಶೀಲನೆಗಾಗಿ ಒಂದು ಬಾರಿ ಸಡಿಲಿಕೆಯನ್ನು ಒದಗಿಸಿದೆ. ಇದು ITR-V ಫಾರ್ಮ್ ಅನ್ನು ಸಲ್ಲಿಸದ ಕಾರಣ ಅಥವಾ ಬಾಕಿ ಉಳಿದಿರುವ ಇ-ವೆರಿಫಕೇಷನ್ನಿಂದಾಗಿ ಪರಿಶೀಲನೆಗಾಗಿ ಉಳಿದಿದೆ,” ಎಂದು ಸುತ್ತೋಲೆ ಹೊರಡಿಸುವ ಮೂಲಕ ಮಂಡಳಿಯು ಟ್ವೀಟ್‌ನಲ್ಲಿ ತಿಳಿಸಿದೆ. ಅಂತಹ ಪರಿಶೀಲನೆಯನ್ನು ಫೆಬ್ರವರಿ 28, 2022ರೊಳಗೆ ಪೂರ್ಣಗೊಳಿಸಬೇಕು. ಈ ರಿಟರ್ನ್‌ಗಳನ್ನು ಜೂನ್ 30ರೊಳಗೆ ಪ್ರೊಸೆಸ್ ಮಾಡಲಾಗುತ್ತದೆ. ಆ ನಂತರ ಮರುಪಾವತಿಯನ್ನು ನೀಡಲಾಗುತ್ತದೆ.
ನಿಗದಿತ ದಿನಾಂಕದೊಳಗೆ ತಮ್ಮ ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯ ಆಗದವರು ಇನ್ನೂ ಹಾಗೆ ಮಾಡಬಹುದು. ಆದರೆ ತಡವಾಗಿ ಐಟಿಆರ್ ಫೈಲಿಂಗ್‌ಗಾಗಿ ಅವರು ದಂಡ ಶುಲ್ಕವನ್ನು ಪಾವತಿಸಬೇಕಾಗುತ್ತದೆ. FY21ರಿಂದ ಅಥವಾ ಅಸೆಸ್ಮೆಂಟ್ ವರ್ಷ 2021-22 (AY22), ಐಟಿಆರ್ ಫೈಲಿಂಗ್ ಗಡುವನ್ನು ಮೀರಿ ತಡವಾಗಿ ಸಲ್ಲಿಸುವ ದಂಡದ ಮೊತ್ತವನ್ನು ಹಿಂದಿನ ರೂ. 10,000ದಿಂದ ರೂ. 5,000ಕ್ಕೆ ಇಳಿಸಲಾಗಿದೆ. ಆದರೂ ನಿಗದಿತ ದಿನಾಂಕದ ನಂತರವೂ ದಂಡವನ್ನು ಪಾವತಿಸದೆಯೇ ಐಟಿಆರ್ ಅನ್ನು ಸಲ್ಲಿಸಬಹುದಾದ ಒಂದು ಸಣ್ಣ ವರ್ಗವಿದೆ. ಆದಾಯ ತೆರಿಗೆ ಕಾನೂನುಗಳ ಪ್ರಕಾರ, ವರ್ಷದಲ್ಲಿ ಮೂಲ ವಿನಾಯಿತಿ ಮಿತಿಗಿಂತ ಕಡಿಮೆ ಒಟ್ಟು ಆದಾಯವನ್ನು ಹೊಂದಿರುವವರು ತಡವಾಗಿ ಐಟಿಆರ್ ಅನ್ನು ಸಲ್ಲಿಸಲು ತಡವಾದ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ.
ಯಾವುದೇ ತೆರಿಗೆ ಕಡಿತವನ್ನು ಒದಗಿಸದ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಮೂಲ ವಿನಾಯಿತಿಯು ವಯಸ್ಸಿನ ಹೊರತಾಗಿಯೂ ಪ್ರತಿಯೊಬ್ಬರಿಗೆ 2.5 ಲಕ್ಷ ರೂಪಾಯಿ ಇದೆ. ಆದರೆ ಹೊಸ ತೆರಿಗೆ ಪದ್ಧತಿಯಲ್ಲಿ ಮೂಲ ವಿನಾಯಿತಿ ಮಿತಿಯನ್ನು ವಯಸ್ಸಿನ ಬ್ರಾಕೆಟ್ಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೂಲ ವಿನಾಯಿತಿ 2.5 ಲಕ್ಷ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 3 ಲಕ್ಷ ರೂಪಾಯಿ ಇದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿ.
ಆದರೆ, ಹಳೆಯ ತೆರಿಗೆ ಪದ್ಧತಿಯಲ್ಲಿ ಮೂಲಭೂತ ವಿನಾಯಿತಿಗಾಗಿ ಮೇಲೆ ತಿಳಿಸಿದ ವರ್ಗಗಳ ಅಡಿಯಲ್ಲಿ ಬರುವವರಿಗೆ ಕೆಲವು ವಿನಾಯಿತಿಗಳಿವೆ. ಉದಾಹರಣೆಗೆ, ಒಂದು ಅಥವಾ ಹೆಚ್ಚಿನ ಬ್ಯಾಂಕ್ ಖಾತೆಗಳಲ್ಲಿ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಿದವರು ತಮ್ಮ ವರ್ಷದ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಿದ್ದರೂ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಕಾನೂನುಗಳ ಪ್ರಕಾರ, ತಮಗಾಗಿ ಅಥವಾ ಇತರ ವ್ಯಕ್ತಿಗಳಿಗಾಗಿ ರೂ. 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ವಿದೇಶಿ ಪ್ರಯಾಣಕ್ಕೆ ಖರ್ಚು ಮಾಡಿದ ವ್ಯಕ್ತಿಗಳು ತಡವಾಗಿ ಐಟಿಆರ್ ಫೈಲಿಂಗ್‌ಗೆ ದಂಡವನ್ನು ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಐಟಿಆರ್, ಆಧಾರ್, ತೆರಿಗೆ ಯೋಜನೆ ತನಕ 2022ನೇ ಇಸವಿಯಲ್ಲಿನ 5 ಗಡುವು ದಿನಾಂಕಗಳ ಬಗ್ಗೆ ತಿಳಿಯಿರಿ
Published On - 12:37 pm, Thu, 6 January 22