Digital payments proxy app: ಆನ್​ಲೈನ್ ಡಿಜಿಟಲ್ ಪೇಮೆಂಟ್ ವೇಳೆ ಎಚ್ಚರವಾಗಿಲ್ಲದಿದ್ದರೆ ಪಿಗ್ಗಿ ಬೀಳೋದು ಗ್ಯಾರಂಟಿ

| Updated By: Srinivas Mata

Updated on: Jan 05, 2022 | 8:55 PM

ಡಿಜಿಟಲ್ ಪಾವತಿ ಆಗುವ ವೇಳೆ ಹೇಗೆ ಮೋಸ ಮಾಡಲಾಗುತ್ತದೆ ಎಂದು ತಿಳಿದುಕೊಳ್ಳಬೇಕಾ? ಈ ಲೇಖನದಲ್ಲಿ ವಿಡಿಯೋ ಸಹಿತವಾಗಿ ವಿವರಣೆ ನೀಡಲಾಗಿದೆ.

Digital payments proxy app: ಆನ್​ಲೈನ್ ಡಿಜಿಟಲ್ ಪೇಮೆಂಟ್ ವೇಳೆ ಎಚ್ಚರವಾಗಿಲ್ಲದಿದ್ದರೆ ಪಿಗ್ಗಿ ಬೀಳೋದು ಗ್ಯಾರಂಟಿ
ಸಾಂದರ್ಭಿಕ ಚಿತ್ರ
Follow us on

ಆನ್​ಲೈನ್ ಪೇಮೆಂಟ್ ಸ್ವೀಕರಿಸುತ್ತಿದ್ದೀರಾ? ಅದರಲ್ಲೇನೂ ವಿಶೇಷ ಇಲ್ಲ ಬಿಡಿ. ಆದರೆ ಈ ಲೇಖನ ಓದಿದ ನಂತರ ನಿಮ್ಮ ನಿರ್ಧಾರದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ನಗದುರಹಿತ ಮತ್ತು ಆನ್‌ಲೈನ್ ಪಾವತಿಗಳು ಹೆಚ್ಚಾಗುವುದರೊಂದಿಗೆ ಗ್ರಾಹಕರು ಮತ್ತು ವರ್ತಕರು- ವ್ಯಾಪಾರಿಗಳಿಗೆ ದೊಡ್ಡ ಪ್ರಯೋಜನವಾಗಿದೆ ಎಂಬುದೇನೋ ನಿಜ. ಅದು ಸುಲಭ ಮತ್ತು ಸುರಕ್ಷಿತ ಪಾವತಿ ವಿಧಾನದಿಂದ ಬಳಕೆದಾರರಿಗೆ ಪ್ರಯೋಜನವನ್ನು ನೀಡಿರುವುದು ಮಾತ್ರವಲ್ಲದೆ ಭಾರತೀಯ ಉದ್ಯಮ- ವ್ಯವಹಾರಗಳಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ. ಆದರೆ ಪ್ರತಿ ನಾಣ್ಯಕ್ಕೂ ಎರಡು ಬದಿ ಇರುವಂತೆ ಇದಕ್ಕೂ ಮತ್ತೊಂದು ಬದಿ ಇದೆ. ಈ ಆನ್‌ಲೈನ್ ಪಾವತಿ ವಿಧಾನಗಳು ಹಣಕಾಸಿನ ವಂಚನೆಗಳು ಮತ್ತು ವಂಚನೆಗಳ ಅಪಾಯವನ್ನು ಹೆಚ್ಚಿಸಿವೆ. ಆತಂಕ ಹೆಚ್ಚು ಮಾಡುವ ಮತ್ತೊಂದು ಅಂಶ ಏನೆಂದರೆ, ಇದಕ್ಕೆ ಬಲಿಪಶುಗಳಾಗುವುದರಿಂದ ತಪ್ಪಿಸಿಕೊಳ್ಳುವುದಕ್ಕೆ ಜನಸಾಮಾನ್ಯರಲ್ಲಿ ಸ್ವಲ್ಪವೇ ತಿಳಿವಳಿಕೆ ಇದೆ ಅಥವಾ ಏನೇನೂ ಜ್ಞಾನವಿಲ್ಲ.

ಆನ್‌ಲೈನ್ ಪಾವತಿ ವಂಚನೆಯ ಇಂತಹ ಘಟನೆಯೊಂದು ಇಂಟರ್​ನೆಟ್​ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ‘Paytm’ ಆ್ಯಪ್ ಮೂಲಕ ಹಣ ಪಾವತಿ ಮಾಡುತ್ತಿರುವ ಹುಡುಗಿ ಕಾಣಿಸಿಕೊಂಡಿದ್ದಾಳೆ. ವಿಡಿಯೋವನ್ನು ಸೆರೆ ಹಿಡಿಯುವ ವ್ಯಕ್ತಿಯು ಕೆಲವು ಪ್ರಾಕ್ಸಿ ಅಪ್ಲಿಕೇಷನ್‌ನೊಂದಿಗೆ ಆ ಯುವತಿ ಪಾವತಿಯನ್ನು ನಕಲಿ ಮಾಡಿದ್ದಾಳೆ ಎಂದು ಆರೋಪಿಸುತ್ತಾರೆ. ಅದು ಪೇಟಿಎಂ ಪಾವತಿಯಂತೆ ಕಾಣುವ ಸ್ಕ್ರೀನ್ ತೋರಿಸುತ್ತದೆ.

ವಿಡಿಯೋವನ್ನು ರೆಕಾರ್ಡ್ ಮಾಡುವ ವ್ಯಕ್ತಿಯು ಬಿಲ್ ಅನ್ನು ನಗದು ಮೂಲಕ ಪಾವತಿಸಲು, ಇಲ್ಲದಿದ್ದರೆ ಯುವತಿಯು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಾಗಿ ಕೇಳುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಮತ್ತು ಅಂತಹ ಅಪ್ಲಿಕೇಷನ್‌ಗಳ ಬಗ್ಗೆ ಜಾಗರೂಕರಾಗಿರಿ ಎಂದು ವೀಕ್ಷಕರಿಗೆ ಮನವಿ ಮಾಡಲಾಗುತ್ತದೆ.

ಇದನ್ನೂ ಓದಿ: 5 safety tips to follow in digital payment: ಡಿಜಿಟಲ್ ಪೇಮೆಂಟ್ ವೇಳೆ ಈ 5 ತಪ್ಪುಗಳನ್ನು ಮಾಡಬೇಡಿ