ವಿಶ್ವದಾದ್ಯಂತ ಕೊರೊನಾ ನರ್ತನ, ಭಾರತದಲ್ಲಿ 6 ಲಕ್ಷದ ಗಡಿಯತ್ತ ಸೋಂಕಿತರ ಸಂಖ್ಯೆ!
ಬೆಂಗಳೂರು: ಹೆಜ್ಜೆ ಹೆಜ್ಜೆಗೂ ಆತಂಕ. ಕ್ಷಣ ಕ್ಷಣಕ್ಕೂ ಭಯ. ರಾಜ್ಯನಲ್ಲಿ ಕೊರೊನಾ ಕ್ರೂರಿ ಅಟ್ಟಹಾಸ ಮೆರೆಯುತ್ತಿದೆ. ಗಲ್ಲಿ ಗಲ್ಲಿಯಲ್ಲೂ ರಣಕೇಕೆ ಹಾಕುತ್ತಿದೆ. ಡೆಡ್ಲಿ ವೈರಸ್ ಜೀವವನ್ನ ತೆೆಗೆದು, ದೇಹದೊಳಗೆ ನುಗ್ಗುತ್ತಿದೆ. ಇಲ್ಲಿಯ ವರೆಗೆ ರಾಜ್ಯ, ದೇಶ, ವಿದೇಶಗಳಲ್ಲಿ ಎಷ್ಟು ಸೋಂಕಿತರಿದ್ದಾರೆ ಎನ್ನುವ ಡೀಟೇಲ್ಸ್ ನೋಡೋದಾದ್ರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14 ಸಾವಿರದ 295 ಕ್ಕೆ ಏರಿಕೆಯಾಗಿದೆ. 14,295 ಸೋಂಕಿತರಲ್ಲಿ 7 ಸಾವಿರದ 683 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 14,295 ಜನರ ಪೈಕಿ 226 ಜನ […]
ಬೆಂಗಳೂರು: ಹೆಜ್ಜೆ ಹೆಜ್ಜೆಗೂ ಆತಂಕ. ಕ್ಷಣ ಕ್ಷಣಕ್ಕೂ ಭಯ. ರಾಜ್ಯನಲ್ಲಿ ಕೊರೊನಾ ಕ್ರೂರಿ ಅಟ್ಟಹಾಸ ಮೆರೆಯುತ್ತಿದೆ. ಗಲ್ಲಿ ಗಲ್ಲಿಯಲ್ಲೂ ರಣಕೇಕೆ ಹಾಕುತ್ತಿದೆ. ಡೆಡ್ಲಿ ವೈರಸ್ ಜೀವವನ್ನ ತೆೆಗೆದು, ದೇಹದೊಳಗೆ ನುಗ್ಗುತ್ತಿದೆ. ಇಲ್ಲಿಯ ವರೆಗೆ ರಾಜ್ಯ, ದೇಶ, ವಿದೇಶಗಳಲ್ಲಿ ಎಷ್ಟು ಸೋಂಕಿತರಿದ್ದಾರೆ ಎನ್ನುವ ಡೀಟೇಲ್ಸ್ ನೋಡೋದಾದ್ರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14 ಸಾವಿರದ 295 ಕ್ಕೆ ಏರಿಕೆಯಾಗಿದೆ. 14,295 ಸೋಂಕಿತರಲ್ಲಿ 7 ಸಾವಿರದ 683 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 14,295 ಜನರ ಪೈಕಿ 226 ಜನ ಮೃತಪಟ್ಟಿದ್ದಾರೆ. ಉಳಿದ 6 ಸಾವಿರದ 382 ಕೊರೊನಾ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಒಂದೇ ದಿನವೇ 1,105 ಜನರಿಗೆ ಕೊರೊನಾ ಸೋಂಕು ತಗುಲಿದೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 5,48,318 ಭಾರತದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ- 16,475 ದೇಶದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 3,21,723 ದೇಶದಲ್ಲಿ ಕೊರೊನಾ ಸೋಂಕಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 2,10,120
ಜಗತ್ತಿನಲ್ಲಿ ಕೊರೊನಾ ಸೋಂಕಿತರ ಅಪ್ಡೇಟ್ಸ್ ವಿಶ್ವದಾದ್ಯಂತ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ- 1,04,02,389 ಈವರೆಗೆ ವಿಶ್ವದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ- 5,07,515 ವಿಶ್ವದಲ್ಲಿ 24 ಗಂಟೆ ಅವಧಿಯಲ್ಲಿ 3,402 ಜನರು ಸಾವಾಗಿದೆ. ವಿಶ್ವದಲ್ಲಿ ಕೊರೊನಾ ಸೋಂಕಿತ ಜನ ಗುಣಮುಖ- 56,48,584 ವಿಶ್ವದಲ್ಲಿ ಕೊರೊನಾ ಸೋಂಕಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು- 42,46,290 ವಿಶ್ವದಲ್ಲಿ ಒಟ್ಟು ಕೊರೊನಾ ಸೋಂಕಿತರ ಸ್ಥಿತಿ ಗಂಭೀರ- 57,508
Published On - 7:36 am, Tue, 30 June 20