ಹೊಟ್ಟೆ ನೋವಿನಿಂದ ಆರು ವರ್ಷದ ಬಾಲಕಿ ಸಾವು, ಶಾಲೆಯಲ್ಲಿ ನೀಡಿದ ಪೌಷ್ಟಿಕಾಂಶದ ಮಾತ್ರೆಯೇ ಕಾರಣ
ಆರು ವರ್ಷದ ಬಾಲಕಿ ಹೊಟ್ಟೆ ನೋವಿನಿಂದ ಸಾವನ್ನಪ್ಪಿದ್ದು, ಶಾಲೆಯಲ್ಲಿ ನೀಡಿದ ಪೌಷ್ಟಿಕಾಂಶದ ಮಾತ್ರೆಯೇ ಇದಕ್ಕೆ ಕಾರಣ ಎಂದು ಆಕೆಯ ಮನೆಯವರು ಆರೋಪಿಸಿದ್ದಾರೆ. ತಮಿಳುನಾಡು ಕೊಯಮತ್ತೂರಿನ ಸಿಂಗಾನಲ್ಲೂರಿನ ಕಾರ್ಪೊರೇಷನ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.
ಕೊಯಮತ್ತೂರು, ಮಾ.9: ತಮಿಳುನಾಡು ಕೊಯಮತ್ತೂರಿನ ಸಿಂಗಾನಲ್ಲೂರಿನ ಕಾರ್ಪೊರೇಷನ್ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದ, ಆರು ವರ್ಷದ ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಇದೀಗ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. ಶಾಲೆಯಲ್ಲಿ ನೀಡಿದ ಪೌಷ್ಟಿಕಾಂಶದ ಮಾತ್ರೆ ಸೇವಿಸಿಯೇ ಸಾವನ್ನಪ್ಪಿದ್ದಾಳೆ ಎಂದು ಬಾಲಕಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೀಗ ಆಕೆಯ ಸಾವಿಗೆ ಕಾರಣ ಏನು ಎಂಬ ಬಗ್ಗೆ ಪತ್ತೆ ಮಾಡಲು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಬಾಲಕಿಯನ್ನು ಕೊಯಮತ್ತೂರು ನಗರದ ವರದರಾಜಪುರಂನ ಲಕ್ಷ್ಮಿ ಮಿಲ್ ಕಾಲೋನಿಯ ರಾಜಮಣಿ ಮತ್ತು ಭುವನೇಶ್ವರಿ ದಂಪತಿಯ ಪುತ್ರಿ ದಿಯಾ ಶ್ರೀ ಎಂದು ಹೇಳಲಾಗಿದೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ಬಾಲಕಿಯ ಪೋಷಕರು ಶಾಲೆಯಲ್ಲಿ ವಿತರಿಸಲಾದ ಪೌಷ್ಟಿಕಾಂಶದ ಮಾತ್ರೆಯಿಂದಲ್ಲೇ (ಫೆರಸ್ ಸಲ್ಫೇಟ್ ಮಾತ್ರೆಯೊಂದಿಗೆ ಫೋಲಿಕ್ ಆಮ್ಲ) ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಮಂಗಳವಾರದಿಂದ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಮನೆಯಲ್ಲಿ ಅಜವೈನ್ (ಕೇರಂ ಸೀಡ್) ನೀರನ್ನು ನೀಡಲಾಯಿತು. ರಾತ್ರಿ ನೋವು ಹೆಚ್ಚಾದ ಕಾರಣ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ನಂತರ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ (CMCH) ಸ್ಥಳಾಂತರಿಸಲಾಯಿತು. ಆಕೆಯ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಶಾಲಾ ಆಡಳಿತ ಮಂಡಳಿ ನೀಡುವ ಪೌಷ್ಠಿಕಾಂಶದ ಮಾತ್ರೆ ಸೇವಿಸುತ್ತಿದ್ದಾಳೆ ಎಂದು ಆಕೆಯ ಪೋಷಕರು ತಿಳಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ದಿಯಾ ಗುರುವಾರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ವೇಗವಾಗಿ ಬಂದ ಆಟೋ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವು, ಮೂವರಿಗೆ ಗಾಯ
ಸಿಎಂಸಿಎಚ್‌ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವಪರೀಕ್ಷೆ ವರದಿ ಇನ್ನೂ ಬರಬೇಕಿದ್ದು, ವರದಿ ಆಧರಿಸಿ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಗಾನಲ್ಲೂರು ಪೊಲೀಸರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ