ಛತ್ ಪೂಜೆ ನೆರವೇರಿಸಿ ಮನೆಗೆ ಹೋಗುತ್ತಿದ್ದ 10 ಮಂದಿ ಸಾವು; ಟ್ರಕ್ ಚಾಲಕನ ನಿರ್ಲಕ್ಷ್ಯಕ್ಕೆ ಮಹಿಳೆಯರು, ಮಕ್ಕಳು ಬಲಿ
ಛತ್ ಪೂಜೆಯನ್ನು ನೆರವೇರಿಸಿ ಒಂದೇ ಆಟೋದಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದರು. ಎದುರುಗಡೆಯಿಂದ ಬಂದ ಟ್ರಕ್ ಈ ಆಟೋಕ್ಕೆ ಡಿಕ್ಕಿಯಾಗಿದೆ ಎಂದು ಸ್ಥಳೀಯರ ಪೊಲೀಸರು ಮಾಹಿತಿ ನೀಡಿದ್ದಾರೆ.
ಛತ್ ಪೂಜೆ ನೆರವೇರಿಸಿ ಆಟೋದಲ್ಲಿ ವಾಪಸ್ ಮನೆಗೆ ಹೋಗುತ್ತಿದ್ದ 10ಮಂದಿ ದುರ್ಮರಣಕ್ಕೀಡಾದ ಘಟನೆ ಅಸ್ಸಾಂ-ತ್ರಿಪುರ ಗಡಿಯಲ್ಲಿ ನಡೆದಿದೆ. ಅಸ್ಸಾಂನ ಕರೀಮ್ಗಂಜ್ನ ಎನ್ಎಚ್-8 ಹೆದ್ದಾರಿಯಲ್ಲಿ ಹೋಗುತ್ತಿದ್ದ ಆಟೋಕ್ಕೆ ಟ್ರಕ್ವೊಂದು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದ್ದು, 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೂವರು ಪುರುಷರು, ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇವರೆಲ್ಲ ಛತ್ ಪೂಜೆಯನ್ನು ನೆರವೇರಿಸಿ ಒಂದೇ ಆಟೋದಲ್ಲಿ ಮನೆಗೆ ವಾಪಸ್ ಹೋಗುತ್ತಿದ್ದರು. ಎದುರುಗಡೆಯಿಂದ ಬಂದ ಟ್ರಕ್ ಈ ಆಟೋಕ್ಕೆ ಡಿಕ್ಕಿಯಾಗಿದೆ ಎಂದು ಸ್ಥಳೀಯರ ಪೊಲೀಸರು ಮಾಹಿತಿ ನೀಡಿದ್ದಾರೆ. ಅಪಘಾತವನ್ನು ಕಣ್ಣಾರೆ ನೋಡಿದವರು ಹೇಳಿರುವ ಪ್ರಕಾರ ತಪ್ಪು ಟ್ರಕ್ ಚಾಲಕನದೇ ಆಗಿದೆ. ಮಿತಿಮೀರಿದ ವೇಗದಲ್ಲಿ ಆತ ಬರುತ್ತಿದ್ದ. ಹೀಗಾಗಿ ಎದುರು ಬಂದ ಆಟೋವನ್ನು ತಪ್ಪಿಸಲು ಅವನಿಗೆ ಆಗಲಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಅಸ್ಸಾಂನ ಅರಣ್ಯ ಮತ್ತು ಅಬಕಾರಿ ಸಚಿವ ಪರಿಮಳ್ ಶುಕ್ಲವೈದ್ಯ ಟ್ವೀಟ್ ಮಾಡಿದ್ದಾರೆ. ಟ್ರಕ್ ಚಾಲಕನನ್ನು ಶೀಘ್ರವೇ ಬಂಧಿಸುವ ಭರವಸೆಯನ್ನೂ ನೀಡಿದ್ದಾರೆ.
Extremely pained to hear about the loss of lives in the tragic road accident in Boithakhal, Karimganj. My deepest condolences to the families of the bereaved. @assampolice has launched a track down operation to nab the truck driver who has fled the scene after incident.
— Parimal Suklabaidya (@ParimalSuklaba1) November 11, 2021
ಇದನ್ನೂ ಓದಿ: ತೃತೀಯ ಲಿಂಗಿಗಳಿಗೆ ಉದ್ಯೋಗದಲ್ಲಿ ಮೀಸಲಾತಿಗೆ ಮದ್ರಾಸ್ ಹೈಕೋರ್ಟ್ ಅನುಮತಿ