Viral Video: ದನದ ಕೊಟ್ಟಿಗೆಯಲ್ಲಿ 12 ಅಡಿ ಉದ್ದದ ಕಾಳಿಂಗ ಸರ್ಪ

ಒಂದಲ್ಲಾ, ಎರಡಲ್ಲಾ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪ. ಅಂದು ಹಸುಗಳ ಕೂಗಾಟ ತೀವ್ರವಾಗಿತ್ತು. ರೈತ ನೇರವಾಗಿ ಕೊಟ್ಟಿಗೆಗೆ ಬಂದು ಹುಲ್ಲು ಹಾಕಿ, ಹೊರwಬೇಕು ಎನ್ನುವಷ್ಟರಲ್ಲಿ ಯಾರೋ ಶಿಳ್ಳೆ ಹೊಡೆದಂತೆ ಭಾಸವಾಗಿತ್ತು. ಕೂಡಲೇ ಬ್ಯಾಟರಿ ಬಿಟ್ಟು ವೀಕ್ಷಿಸಿದಾಗ ಅಷ್ಟು ದೊಡ್ಡ ಕಾಳಿಂಗಸರ್ಪವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ಅರಣ್ಯಾಧಿಕಾರಿಗಳು ಕರೆ ಮಾಡಿ ಕರೆಸಿಕೊಂಡಿದ್ದಾರೆ.

ಅನಕಪಲ್ಲಿ, ಏಪ್ರಿಲ್ 28: ದನದ ಕೊಟ್ಟಿಗೆಯಲ್ಲಿ ಹಸುಗಳು ನಿರಂತರವಾಗಿ ಕೂಗುತ್ತಿದ್ದವು, ಏನೆಂದು ನೋಡಲು ಕೊಟ್ಟಿಗೆಗೆ ಹೋದಾಗ ವ್ಯಕ್ತಿಗೆ ಶಾಕ್ ಕಾದಿತ್ತು. ಘಟನೆ ಅನಕಪಲ್ಲಿಯಲ್ಲಿ ನಡೆದಿದೆ. ಕೊಟ್ಟಿಗೆಗೆ ಹೋಗಿ ಸುತ್ತಲೆಲ್ಲಾ ವೀಕ್ಷಿಸಿದಾದ ಎಲ್ಲಿಂದಲೋ ಶಿಳ್ಳೆ ಹೊಡೆದಂತೆ ಶಬ್ದ ಕೇಳುತ್ತಿತ್ತು. ಬ್ಯಾಟರಿ ಹಿಡಿದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿ 12 ಅಡಿ ಉದ್ದದ ಕಾಳಿಂಗಸರ್ಪ(King Cobra) ಕಾಣಿಸಿಕೊಂಡಿತ್ತು. ಮಡುಗುಳದ ಉಪನಗರಗಳಲ್ಲಿ ಬೃಹತ್ ಗಾತ್ರದ ಹಾವು ಸಂಚಲನ ಸೃಷ್ಟಿಸಿದೆ.

ಹಸುಗಳು ಕೂಗುತ್ತಿತ್ತು, ಹೊರಗೆ ಬಂದು ಅದಕ್ಕೆ ಹುಲ್ಲು ಹಾಕುವಷ್ಟರಲ್ಲಿ ಶಿಳ್ಳೆ ಹೊಡೆದಂಥಾ ಶಬ್ದ ಕೇಳಿತ್ತು. ನಾನು ಮೇಲಕ್ಕೆ ನೋಡಿದಾಗ, ಕೊಟ್ಟಿಗೆಯಲ್ಲಿ ಒಂದು ದೊಡ್ಡ ಹೆಬ್ಬಾವು ಕಾಣಿಸಿತು. ಭಯದಿಂದ ಹೊರಗೆ ಓಡಿ ಹೋದೆ. ಬಳಿಕ ಅರಣ್ಯ ಅಧಿಕಾರಿಗಳು ಮತ್ತು ಹಾವು ಹಿಡಿಯವು ವೆಂಕಟೇಶ್ ಅವರಿಗೆ ವಿಷಯ ತಿಳಿಸಿದ್ದರು.

ಹೊಲಕ್ಕೆ ಓಡಿದ ವೆಂಕಟೇಶ್ ಹಾವು ಹಿಡಿಯಲು ಸಿದ್ಧತೆ ಮಾಡಿಕೊಂಡಿದ್ದರು. ಪರ್ವತವೆಂಬಷ್ಟು ದೊಡ್ಡದ ಹಾವು ದೊಪ್ಪೆಂದು ಕೆಳಗೆ ಬಿದ್ದು, ವೇಳದಲ್ಲಿ ಮರದ ರೆಂಬೆ ಏರಿತು. ಕೊನೆಗೂ ಎರಡು ಗಂಟೆಗಳ ಕಾಲ ನಿರಂತರ ಪ್ರಯತ್ನ ಪಟ್ಟು ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ
ಹೆಂಡತಿ ಗರ್ಭಿಣಿ ಇರುವಾಗ ಗಂಡ ಈ ವಿಷಯವನ್ನು ತಿಳಿದಿರಬೇಕು
ಬೇರೊಬ್ಬರು ಬಳಸಿದ ಲೋಟದಲ್ಲಿ ನೀರು ಕುಡಿಯುವ ಮುನ್ನ ಎಚ್ಚರ!
ನದಿ ನೀರಿನ ಸ್ನಾನ ಮಾಡುವುದರಿಂದ ಆರೋಗ್ಯದಲ್ಲಿ ಈ ಲಾಭಗಳಾಗುವುದು ಖಂಡಿತ
Teething in Babies: ಮಗುವಿಗೆ ಹಲ್ಲು ಬರುವಾಗ ಈ ರೀತಿ ಮಾಡಿ

ಮತ್ತಷ್ಟು ಓದಿ: ಹಾವಿನ ದ್ವೇಷ; ಆಸ್ಪತ್ರೆಯಲ್ಲಿದ್ದರೂ ಬಿಡದೆ 5 ವರ್ಷದಲ್ಲಿ 11 ಬಾರಿ ಯುವತಿಗೆ ಕಚ್ಚಿದ ಸರ್ಪ

ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು ಮತ್ತು ಸೆರೆಹಿಡಿಯಲಾದ ಕಾಳಿಂಗ ಸರ್ಪವನ್ನು ಕಾಡಿಗೆ ಬಿಡಲಾಯಿತು. ಇಂತಹ ಹಾವನ್ನು ತಾನು ಹಿಂದೆಂದೂ ನೋಡಿರಲಿಲ್ಲ ಎಂದು ರೈತ ಹೇಳಿದ್ದಾರೆ.
ರೈತ ಅರ್ಜುನ್ ರಾವ್ ಮಾತನಾಡಿ, ಇಷ್ಟು ವರ್ಷಗಳಲ್ಲಿ ಅಷ್ಟು ದೊಡ್ಡ ಹಾವನ್ನು ಎಂದೂ ನೋಡಿರಲಿಲ್ಲ, ಈ ಘಟನೆಯು ಈ ಪ್ರದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಮಾನವ ಮತ್ತು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡ ತ್ವರಿತ ಕ್ರಮವನ್ನು ಹಲವರು ಶ್ಲಾಘಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ