Tamil Nadu: ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ 18 ಪ್ರಯಾಣಿಕರಿಂದ 6.5 ಕೋಟಿ ರೂ. ಮೌಲ್ಯದ 12 ಕೆಜಿ ಚಿನ್ನ ವಶ

ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ 18 ಪ್ರಯಾಣಿಕರಿಂದ 6.5 ಕೋಟಿ ಮೌಲ್ಯದ 12 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Tamil Nadu: ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ 18 ಪ್ರಯಾಣಿಕರಿಂದ 6.5 ಕೋಟಿ ರೂ. ಮೌಲ್ಯದ 12 ಕೆಜಿ ಚಿನ್ನ ವಶ
Gold
Follow us
TV9 Web
| Updated By: ನಯನಾ ರಾಜೀವ್

Updated on: Nov 23, 2022 | 9:55 AM

ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ 18 ಪ್ರಯಾಣಿಕರಿಂದ 6.5 ಕೋಟಿ ಮೌಲ್ಯದ 12 ಕೆಜಿ ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಡಿಆರ್‌ಐ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಅಧಿಕಾರಿಗಳು ಸೋಮವಾರ ಏರ್ ಅರೇಬಿಯಾ ವಿಮಾನದಲ್ಲಿ ಶಾರ್ಜಾದಿಂದ ತಮ್ಮ ಲಗೇಜಿನಲ್ಲಿ ಚಿನ್ನವನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಪ್ರಯಾಣಿಕರನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಈ ಪ್ರಯಾಣಿಕರ ಪ್ಯಾಂಟ್‌ಗಳು, ಒಳ ಉಡುಪುಗಳು, ಲಗೇಜ್‌ಗಳ ಜೇಬಿನಿಂದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: Tamil Nadu: 12 kg gold valued at Rs 6.5 cr seized from 18 passengers at Coimbatore airport

ಪ್ರಯಾಣಿಕರು ದೇಹದೊಳಗೂ ಚಿನ್ನವನ್ನು ಬಚ್ಚಿಟ್ಟಿದ್ದರು. ಒಟ್ಟು 12 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದು, ಸುಮಾರು 6.5 ಕೋಟಿ ರೂ. ಬೆಲೆಬಾಳುತ್ತದೆ.

ಚೆನ್ನೈನ ಸುರೇಶ್ ಕುಮಾರ್, ಕಡಲೂರಿನ ಶಂಕರ್, ಪರಮಕುಡಿಯ ರಾಮಪ್ರಭು ಮತ್ತು ಸೇಲಂನ ಕುಮಾರವೆಲ್ ಎಂಬ ನಾಲ್ವರು ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ