ಪೂರ್ವ ಲಡಾಖ್​​ನಲ್ಲಿ ಸೇನಾ ಸಂಘರ್ಷ; ಭಾರತದ ಸಲಹೆಯನ್ನು ಒಪ್ಪದ ಚೀನಾ, 13ನೇ ಸುತ್ತಿನ ಮಾತುಕತೆ ವಿಫಲ

TV9 Digital Desk

| Edited By: Lakshmi Hegde

Updated on:Oct 11, 2021 | 11:02 AM

ಮಾತುಕತೆ ಹೆಚ್ಚೇನೂ ಪರಿಣಾಮ ನೀಡಲಿಲ್ಲ. ಹಾಗಿದ್ದಾಗ್ಯೂ ಕೂಡ ಎರಡೂ ದೇಶಗಳ ಸೈನಿಕರು ಸಂವಹನ ಮುಂದುವರಿಸಲು, ಪ್ರದೇಶದಲ್ಲಿ ಸ್ಥಿರತೆ ಕಾಪಾಡಲು ಒಪ್ಪಿಕೊಂಡಿದ್ದಾರೆ ಎಂದು ಭಾರತ ಹೇಳಿಕೊಂಡಿದೆ.

ಪೂರ್ವ ಲಡಾಖ್​​ನಲ್ಲಿ ಸೇನಾ ಸಂಘರ್ಷ; ಭಾರತದ ಸಲಹೆಯನ್ನು ಒಪ್ಪದ ಚೀನಾ, 13ನೇ ಸುತ್ತಿನ ಮಾತುಕತೆ ವಿಫಲ
ಪೂರ್ವ ಲಡಾಖ್​ ಚಿತ್ರಣ

Follow us on

ಪೂರ್ವ ಲಡಾಖ್​​ನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (LAC) ಬಳಿ ಭಾರತ-ಚೀನಾ ಸೈನಿಕರ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಕೊನೆ ಹಾಡಲು ನಿನ್ನೆ ಎರಡೂ ದೇಶಗಳ ನಡುವೆ ಕಮಾಂಡರ್​ ಮಟ್ಟದ ಮಾತುಕತೆ ನಡೆದಿದೆ. ಆದರೆ ಈ ಮಾತುಕತೆ ವಿಫಲವಾಗಿದೆ..ಸಮಸ್ಯೆಗಳ ಪರಿಹಾರಕ್ಕೆ ನಾವು ಕೊಟ್ಟ ಯಾವುದೇ ಸಲಹೆಗಳನ್ನೂ ಚೀನಾ ಪರಿಗಣಿಸುತ್ತಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ.  ಭಾರತೀಯ ಸೇನೆ ಇಂದು ಹೇಳಿಕೆ ಬಿಡುಗಡೆ ಮಾಡಿದ್ದು, ಪೂರ್ವ ಲಡಾಖ್ ಮತ್ತು ಇತರ ಚೀನಾ ಗಡಿಗಳಲ್ಲಿ ಇರುವ ಎಲ್​ಎಸಿ ಬಳಿ ನಡೆಯುತ್ತಿರುವ ಸಂಘರ್ಷ, ಸಮಸ್ಯೆ ಪರಿಹಾರಕ್ಕಾಗಿ ಭಾರತ ಕೆಲವು ರಚನಾತ್ಮಕ ಸಲಹೆಗಳನ್ನು ಈ ಮಾತುಕತೆಯ ವೇಳೆ ನೀಡಿದೆ. ಆದರೆ ಚೀನಾ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ..ಅಷ್ಟೇ ಅಲ್ಲ ಅವರೂ ಸಹ ಸಮಸ್ಯೆ ಪರಿಹಾರಕ್ಕಾಗಿ ಪ್ರಸ್ತಾವನೆಗಳನ್ನು ಇಟ್ಟಿಲ್ಲ ಎಂದು ಹೇಳಿದೆ.  

ಮಾತುಕತೆ ಹೆಚ್ಚೇನೂ ಪರಿಣಾಮ ನೀಡಲಿಲ್ಲ. ಹಾಗಿದ್ದಾಗ್ಯೂ ಕೂಡ ಎರಡೂ ದೇಶಗಳ ಸೈನಿಕರು ಸಂವಹನ ಮುಂದುವರಿಸಲು, ಪ್ರದೇಶದಲ್ಲಿ ಸ್ಥಿರತೆ ಕಾಪಾಡಲು ಒಪ್ಪಿಕೊಂಡಿದ್ದಾರೆ. ದ್ವಿಪಕ್ಷೀಯ ಸಂಬಂಧದ ಒಟ್ಟಾರೆ ದೃಷ್ಟಿಕೋನವನ್ನು ಚೀನಾ ಗಣನೆಗೆ ತೆಗೆದುಕೊಂಡು, ಅದಕ್ಕೆ ವಿಧೇಯವಾಗಿದ್ದು, ಗಡಿ ಭಾಗದಲ್ಲಿ ಉಂಟಾಗಿರುವ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಭಾರತ ಹೇಳಿಕೊಂಡಿದೆ. ಹಾಗೇ, ಚೀನಾ ದ್ವಿಪಕ್ಷೀಯ ನೀತಿಗಳನ್ನು ಉಲ್ಲಂಘಿಸುತ್ತಿದೆ ಮತ್ತು ಯಥಾಸ್ಥಿತಿಯನ್ನು ಬದಲಿಸುತ್ತಿದೆ ಎಂಬುದನ್ನು ಎರಡೂ ದೇಶಗಳ ಮಾತುಕತೆ ವೇಳೆ ಭಾರತ ಒತ್ತಿ ಹೇಳಿದೆ.

ಪೂರ್ವ ಲಡಾಖ್​ ಸೇರಿ ಅರುಣಾಚಲ ಪ್ರದೇಶ, ಉತ್ತರಾಖಂಡ್​ ಗಡಿಗಳಲ್ಲೂ ಚೀನಾ ಸೈನಿಕರು ಉಪಟಳ ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಮತ್ತೊಮ್ಮೆ ಪೂರ್ವ ಲಡಾಖ್​​ನಲ್ಲಿ ಎರಡೂ ದೇಶದ ಸೈನಿಕರ ಜಟಾಪಟಿ ನಡೆದಿತ್ತು. ಅದರ ಬೆನ್ನಲ್ಲೇ 13ನೇ ಸುತ್ತಿನ, ಕಮಾಂಡರ್​ ಮಟ್ಟದ ಮಾತುಕತೆ ನಡೆದಿತ್ತು. ನಿನ್ನೆ ಬೆಳಗ್ಗೆ 10.30ಗಂಟೆಗೆ ಪ್ರಾರಂಭವಾದ ಮಾತುಕತೆ ಸಂಜೆ 7ಗಂಟೆವರೆಗೆ, ಅಂದರೆ ಎಂಟೂವರೆ ತಾಸುಗಳ ಕಾಲ ನಡೆದಿದೆ.

ಇದನ್ನೂ ಓದಿ: Coronavirus cases in India: ಭಾರತದಲ್ಲಿ 18,132 ಹೊಸ ಕೊವಿಡ್ ಪ್ರಕರಣ ಪತ್ತೆ,193 ಮಂದಿ ಸಾವು

RCB vs KKR, IPL 2021 Eliminator: ಪಂದ್ಯ ಆರಂಭಕ್ಕೂ ಮುನ್ನ ಆರ್​ಸಿಬಿಗೆ ದೊಡ್ಡ ಶಾಕ್: ಇಬ್ಬರು ಸ್ಟಾರ್ ಪ್ಲೇಯರ್ಸ್ ಟೂರ್ನಿಯಿಂದ ಔಟ್

ತಾಜಾ ಸುದ್ದಿ

Click on your DTH Provider to Add TV9 Kannada