Indian Space Association: ಇಂದು ಭಾರತೀಯ ಬಾಹ್ಯಾಕಾಶ ಸಂಘವನ್ನು ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ಭಾರತೀಯ ಬಾಹ್ಯಾಕಾಶ ಸಂಘವೆಂಬುದು, ಬಾಹ್ಯಾಕಾಶ ಮತ್ತು ಉಪಗ್ರಹ ಕಂಪನಿಗಳ ಒಂದು ಪ್ರಧಾನ ಉದ್ದಿಮೆಯಾಗಲಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಸಾಮೂಹಿಕ ಶಕ್ತಿಯಾಗಲು ಬಯಸುವ ಕಂಪನಿಗಳನ್ನು ಇದು ಒಳ್ಳಗೊಳ್ಳಲಿದೆ.

Indian Space Association: ಇಂದು ಭಾರತೀಯ ಬಾಹ್ಯಾಕಾಶ ಸಂಘವನ್ನು ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಇಂದು ಭಾರತೀಯ ಬಾಹ್ಯಾಕಾಶ ಸಂಘ (ISpA-Indian Space Association)ವನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಉದ್ಘಾಟನೆ ಸಮಾರಂಭ ಬೆಳಗ್ಗೆ 11 ಗಂಟೆಗೆ ವರ್ಚ್ಯುವಲ್​ ಆಗಿ ನಡೆಯಲಿದೆ. ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಬಾಹ್ಯಾಕಾಶ ಉದ್ಯಮದ ಪ್ರತಿನಿಧಿಗಳೊಟ್ಟಿಗೆ ಸಂವಾದ ನಡೆಸುವರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡಿದ್ದು, ಅಕ್ಟೋಬರ್​ 11ರಂದು ಬೆಳಗ್ಗೆ 11ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಘವನ್ನು ಉದ್ಘಾಟನೆ ಮಾಡಲಿದ್ದೇನೆ. ಈ ಕ್ಷೇತ್ರದ ಪ್ರಮುಖ ಪಾಲುದಾರರೊಂದಿಗೆ ಸಂವಾದ ನಡೆಸಲು ಖಂಡಿತ ಖುಷಿಯಿದೆ ಎಂದಿದ್ದಾರೆ. 

ಭಾರತೀಯ ಬಾಹ್ಯಾಕಾಶ ಸಂಘವೆಂಬುದು, ಬಾಹ್ಯಾಕಾಶ ಮತ್ತು ಉಪಗ್ರಹ ಕಂಪನಿಗಳ ಒಂದು ಪ್ರಧಾನ ಉದ್ದಿಮೆಯಾಗಲಿದೆ. ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಸಾಮೂಹಿಕ ಶಕ್ತಿಯಾಗಲು ಬಯಸುವ ಕಂಪನಿಗಳನ್ನು ಇದು ಒಳ್ಳಗೊಳ್ಳಲಿದೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಸರ್ಕಾರ ಮತ್ತು ಅದರ ಏಜೆನ್ಸಿಗಳನ್ನು ಸೇರಿ, ಎಲ್ಲ ಪಾಲುದಾರರನ್ನೂ ಒಳಗೊಳ್ಳುತ್ತದೆ ಮತ್ತು ರೂಪಿತ ನೀತಿಗಳ ಪರ ವಕಾಲತ್ತು ಕೆಲಸ ಕೈಗೊಳ್ಳುತ್ತದೆ ಎಂದು ತಿಳಿಸಿದೆ.

ಈ ಐಎಸ್​ಪಿಎ ಸಂಸ್ಥಾಪಕ ಸದಸ್ಯರಾಗಿ ಲಾರ್ಸನ್ ಮತ್ತು ಟ್ಯೂಬ್ರೊ, ನೆಲ್ಕೊ (ಟಾಟಾ ಗ್ರೂಪ್), ಒನ್ ವೆಬ್, ಭಾರತಿ ಏರ್‌ಟೆಲ್, ಮ್ಯಾಪ್‌ಮಿಂಡಿಯಾ, ವಾಲ್‌ಚಂದನಗರ್ ಇಂಡಸ್ಟ್ರೀಸ್ ಮತ್ತು ಅನಂತ್ ಟೆಕ್ನಾಲಜಿ ಲಿಮಿಟೆಡ್. ಇತರ ಪ್ರಮುಖ ಸದಸ್ಯರಲ್ಲಿ ಗೋದ್ರೆಜ್, ಹ್ಯೂಸ್ ಇಂಡಿಯಾ, ಅಜಿಸ್ಟಾ-ಬಿಎಸ್‌ಟಿ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಬಿಇಎಲ್, ಸೆಂಟಮ್ ಎಲೆಕ್ಟ್ರಾನಿಕ್ಸ್ ಮತ್ತು ಮ್ಯಾಕ್ಸರ್ ಇಂಡಿಯಾಗಳು ಸೇರ್ಪಡೆಯಾಗಿವೆ ಎಂದು ಪ್ರಧಾನಮಂತ್ರಿ ಕಚೇರಿ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಲಾಕಪ್ ಚಿಲಕ ತೆಗೆದು ಅತ್ಯಾಚಾರ ಆರೋಪಿ ಪರಾರಿ! ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಘಟನೆ

Viral Video: ಆಸ್ಪತ್ರೆಯಲ್ಲಿ ತನ್ನ ನೆಚ್ಚಿನ ಹಾಡು ಕೇಳಿ ನೃತ್ಯ ಮಾಡಿದ ಪುಟ್ಟ ಮಗು; ನೆಟ್ಟಿಗರ ಹೃದಯ ಗೆದ್ದ ವಿಡಿಯೋ ನೋಡಿ

Read Full Article

Click on your DTH Provider to Add TV9 Kannada