AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Edible Oil: ಖಾದ್ಯ ತೈಲ ಬೆಲೆ ತಗ್ಗಿಸಲು ಅವುಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

Edible Oil: ಕೇಂದ್ರದ ಈ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಮತ್ತಷ್ಟು ಕುಸಿತವಾಗಲಿದೆ. ಆ ಮೂಲಕ ದೇಶಾದ್ಯಂತ ಗ್ರಾಹಕರಿಗೆ ಇನ್ನೂ ಹೆಚ್ಚಿನ ನಿರಾಳತೆ ದೊರಕಲಿದೆ.

Edible Oil: ಖಾದ್ಯ ತೈಲ ಬೆಲೆ ತಗ್ಗಿಸಲು ಅವುಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ
ಖಾದ್ಯ ತೈಲ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ganapathi bhat

Updated on: Oct 10, 2021 | 10:58 PM

ದೆಹಲಿ: ಆಹಾರ ಮತ್ತು ಸಾರ್ವಜನಿಕ ಪಡಿತರ ಇಲಾಖೆ ಮಹತ್ವದ ನಿರ್ಧಾರದಲ್ಲಿ 2022ರ ಮಾರ್ಚ್ 31ರ ವರೆಗಿನ ಅವಧಿಗೆ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದೆ. ಪರವಾನಗಿಗಳ ಅಗತ್ಯತೆಗಳನ್ನು ತೆಗೆದು ಹಾಕುವುದು, ದಾಸ್ತಾನು ಮಿತಿ ಮತ್ತು ನಿರ್ದಿಷ್ಟ ಆಹಾರ ಉತ್ಪನ್ನಗಳ ಸಾಗಾಣೆಗೆ ನಿರ್ಬಂಧ (ತಿದ್ದುಪಡಿ) ಆದೇಶ 2021ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂದರೆ 2021ರ ಸೆಪ್ಟೆಂಬರ್ 8 ರಿಂದ ಅನ್ವಯವಾಗುವಂತೆ ಹೊರಡಿಸಲಾಗಿದೆ. ಭವಿಷ್ಯದ ವ್ಯಾಪಾರದಲ್ಲಿ ಸಾಸಿವೆ ಎಣ್ಣೆ ಮತ್ತು ಎಣ್ಣೆ ಬೀಜಗಳನ್ನು ಎನ್​ಸಿಡಿಇಎಕ್ಸ್ ನಿಂದ ಅಮಾನತು ಮಾಡಲಾಗಿದ್ದು, ಅದು 2021ರ ಅಕ್ಟೋಬರ್ 8 ರಿಂದ ಜಾರಿಗೆ ಬಂದಿದೆ.

ಕೇಂದ್ರದ ಈ ನಿರ್ಧಾರದಿಂದ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಮತ್ತಷ್ಟು ಕುಸಿತವಾಗಲಿದೆ. ಆ ಮೂಲಕ ದೇಶಾದ್ಯಂತ ಗ್ರಾಹಕರಿಗೆ ಇನ್ನೂ ಹೆಚ್ಚಿನ ನಿರಾಳತೆ ದೊರಕಲಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಏರಿಕೆಯಾಗಿರುವುದು ದೇಶೀಯವಾಗಿ ಖಾದ್ಯ ತೈಲಗಳ ಬೆಲೆ ಮೇಲೂ ಗಮನಾರ್ಹ ಪರಿಣಾಮ ಬೀರಿದೆ. ಇದೀಗ ಭಾರತ ಸರ್ಕಾರ ಖಾದ್ಯ ತೈಲದಂತಹ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಬಹುಹಂತದ ಕಾರ್ಯತಂತ್ರವನ್ನು ರೂಪಿಸಿದೆ. ಆಮದು ಸುಂಕ ವ್ಯವಸ್ಥೆ ಏಕರೂಪಗೊಳಿಸುವುದು, ನಾನಾ ದಾಸ್ತಾನುಗಾರರು ತಮ್ಮ ಬಳಿ ಹೊಂದಿರುವ ದಾಸ್ತಾನುಗಳನ್ನು ಸ್ವಯಂ ಘೋಷಣೆ ಮಾಡಿಕೊಳ್ಳಲು ವೆಬ್ ಪೋರ್ಟಲ್ ಆರಂಭ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಖಾದ್ಯ ತೈಲಗಳ ಬೆಲೆಯನ್ನು ದೇಶೀಯವಾಗಿ ಮತ್ತಷ್ಟು ತಗ್ಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದು, ಕೇಂದ್ರ ಸರ್ಕಾರ ಹೊರಿಡಿಸಿರುವ ಈ ಆದೇಶವನ್ನು ಎಲ್ಲ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ಆದೇಶದಡಿ ಖಾದ್ಯ ತೈಲಗಳು ಮತ್ತು ಎಣ್ಣೆ ಬೀಜಗಳ ದಾಸ್ತಾನು ಮಿತಿಯನ್ನು ಆಯಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ನಿರ್ಧರಿಸಲಿವೆ. ಅವು ಆಯಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಲ್ಲಿನ ಬಳಕೆ ಮತ್ತು ಲಭ್ಯವಿರುವ ದಾಸ್ತಾನು ಆಧರಿಸಿ, ಈ ಕೆಳಗಿನವುಗಳನ್ನು ಹೊರತುಪಡಿಸಿ ನಿರ್ಧಾರಗಳನ್ನು ಕೈಗೊಳ್ಳಲಿವೆ:

ಎ) ವಿದೇಶಿ ವ್ಯಾಪಾರ ನಿರ್ದೇಶನಾಲಯದಿಂದ ಕೋಡ್ ನಂಬರ್ ಪಡೆದಿರುವ ಆಮದುದಾರರು – ರಫ್ತುದಾರರು, ಸಂಸ್ಕರಣದಾರರು, ಕಾರ್ಖಾನೆಗಳ ಮಾಲಿಕರು, ಎಣ್ಣೆ ತೆಗೆಯುವವರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಥವಾ ಡೀಲರ್ ಗಳು ತಮ್ಮ ಇಡೀ ರಫ್ತು ಮಾಡಲಿರುವ ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ಪ್ರಮಾಣ ರಫ್ತು ದಾಸ್ತಾನು ಮಿತಿಯ ವ್ಯಾಪ್ತಿಯಲ್ಲಿದೆ ಎಂದು ನಿರೂಪಿಸಿದಾಗ.

ಬಿ) ಆಮದುದಾರರು, ಸಂಸ್ಕರಣೆದಾರರು, ಕಾರ್ಖಾನೆ ಮಾಲಿಕರು, ಎಣ್ಣೆ ತೆಗೆಯುವವರು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಅಥವಾ ಡೀಲರ್ ಗಳು ಅಥವಾ ಆಮದುದಾರರು ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳಿಗೆ ಸಂಬಂಧಿಸಿದಂತೆ ಇಡೀ ಪ್ರಮಾಣ ಆಮದು ಮೂಲದಿಂದ ಪಡೆದಿರುವುದು ಎಂಬುದನ್ನು ನಿರೂಪಿಸಬೇಕು.

ಒಂದು ವೇಳೆ ಸಂಬಂಧಿಸಿದ ಕಾನೂನುಬದ್ಧ ಸಂಸ್ಥೆಗಳು ನಿಗದಿಗಿಂತ ಹೆಚ್ಚಿನ ದಾಸ್ತಾನನ್ನು ಹೊಂದಿದ್ದರೆ ಅವುಗಳು ಆ ಕುರಿತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ (https://evegoils.nic.in/EOSP/login) ಪೋರ್ಟಲ್ ನಲ್ಲಿ ಘೋಷಣೆ ಮಾಡಿಕೊಳ್ಳಬೇಕು ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನಿರ್ಧರಿಸಿದ ದಾಸ್ತಾನು ಮಿತಿಯೊಳಗೆ ತಂದುಕೊಳ್ಳಬೇಕು. ಈ ಕಾರ್ಯ ಸಂಬಂಧಿಸಿದ ಅಧಿಕಾರಿಗಳು ಆದೇಶ ಹೊರಡಿಸಿದ 30 ದಿನಗಳಲ್ಲಿ ಆಗಬೇಕು.

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಾರರು ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನನ್ನು ನಿರಂತರವಾಗಿ ಘೋಷಿಸುವುದನ್ನು ಖಾತ್ರಿಪಡಿಸಬೇಕಾಗಿದೆ ಮತ್ತು ಆ ಕುರಿತ ಮಾಹಿತಿಯನ್ನು ಇಲಾಖೆಯ ಪೋರ್ಟಲ್ ಅಂದರೆ ಆಹಾರ ಮತ್ತು ಸಾರ್ವಜನಿಕ ಪಡಿತರ ವಿತರಣಾ ಇಲಾಖೆಯ (https://evegoils.nic.in/EOSP/login) ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡಬೇಕು.

ಇದನ್ನೂ ಓದಿ: Edible Oil: ಖಾದ್ಯ ತೈಲದ ಬೆಲೆ ಇಳಿಕೆ ಮಾಡಲು ಸೀಮಾ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಇದನ್ನೂ ಓದಿ: Edible Oil: ಭಾರತದ ಖಾದ್ಯ ತೈಲ ಆಮದು 6 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆ

ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್