AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fake Medical Degree: 8ನೇ ತರಗತಿ ಪಾಸಾದವರಿಗೂ ವೈದ್ಯಕೀಯ ಪದವಿ, 14 ನಕಲಿ ವೈದ್ಯರ ಬಂಧನ

ಹಣ ಪಡೆದು 8ನೇ ತರಗತಿ ಪಾಸಾದವರಿಗೂ ವೈದ್ಯಕೀಯ ಪದವಿ ನೀಡುತ್ತಿದ್ದ 14 ನಕಲಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ನಕಲಿ ವೈದ್ಯರು  8 ಮತ್ತು 12ನೇ ತರಗತಿ ಪಾಸಾದವರಿಗೆ 60 ರಿಂದ 80 ಸಾವಿರ ರೂ.ಗೆ ಪದವಿಯನ್ನು ಮಾರಾಟ ಮಾಡುತ್ತಿತ್ತು.

Fake Medical Degree: 8ನೇ ತರಗತಿ ಪಾಸಾದವರಿಗೂ ವೈದ್ಯಕೀಯ ಪದವಿ, 14 ನಕಲಿ ವೈದ್ಯರ ಬಂಧನ
ಆರೋಪಿಗಳುImage Credit source: NDTV
ನಯನಾ ರಾಜೀವ್
|

Updated on:Dec 06, 2024 | 9:18 AM

Share

ಹಣ ಪಡೆದು 8ನೇ ತರಗತಿ ಪಾಸಾದವರಿಗೂ ವೈದ್ಯಕೀಯ ಪದವಿ ನೀಡುತ್ತಿದ್ದ 14 ನಕಲಿ ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ನಕಲಿ ವೈದ್ಯರು  8 ಮತ್ತು 12ನೇ ತರಗತಿ ಪಾಸಾದವರಿಗೆ 60 ರಿಂದ 80 ಸಾವಿರ ರೂ.ಗೆ ಪದವಿಯನ್ನು ಮಾರಾಟ ಮಾಡುತ್ತಿತ್ತು.

ಪ್ರಮುಖ ಆರೋಪಿಯ ಹೆಸರು ರಮೇಶ್, ಈ ಗ್ಯಾಂಗ್ ಅತ್ಯಂತ ಜಾಣತನದಿಂದ ಕೆಲಸ ಮಾಡುತ್ತಿದ್ದು, “ಬೋರ್ಡ್ ಆಫ್ ಎಲೆಕ್ಟ್ರೋ ಹೋಮಿಯೋಪತಿಕ್ ಮೆಡಿಸಿನ್ (ಬಿಇಎಚ್‌ಎಂ) ಗುಜರಾತ್ ಹೆಸರಿನಲ್ಲಿ ನಕಲಿ ಪದವಿಗಳನ್ನು ಹಂಚುತ್ತಿತ್ತು, ತನಿಖೆ ವೇಳೆ ನೂರಾರು ನಕಲಿ ಪ್ರಮಾಣಪತ್ರಗಳು ಪೊಲೀಸರಿಗೆ ಸಿಕ್ಕಿವೆ.

ಸೂರತ್ ನಗರದ ಪಾಂಡೆಸರಾ ಪ್ರದೇಶದಲ್ಲಿ ನಕಲಿ ಪದವಿ ದಂಧೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಕಳೆದ ಕೆಲವು ವರ್ಷಗಳಲ್ಲಿ 1,500 ಕ್ಕೂ ಹೆಚ್ಚು ನಕಲಿ ಪದವಿಗಳನ್ನು ವಿತರಿಸಲಾಗಿದೆ ಎಂದು ಘಟನಾ ಸ್ಥಳದಲ್ಲಿದ್ದ ದಾಖಲೆಗಳು ಬಹಿರಂಗಪಡಿಸಿವೆ.

ಮತ್ತಷ್ಟು ಓದಿ: ಉದ್ಘಾಟನೆಗೊಂಡ ಮರುದಿನವೇ ಬಾಗಿಲು ಮುಚ್ಚಿದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ

ಅನೇಕ ಜನರು ಈ ದಂಧೆಯಿಂದ ನಕಲಿ ಪದವಿಗಳನ್ನು ಖರೀದಿಸಿ ತಮ್ಮದೇ ಆದ ಕ್ಲಿನಿಕ್‌ಗಳನ್ನು ನಡೆಸುತ್ತಿದ್ದರು. ನಕಲಿ ವೈದ್ಯ ಪದವಿ ಹೊಂದಿರುವ ಮೂವರು ಅಲೋಪತಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.

ಆರೋಪಿಯು ಬ್ಯಾಚುಲರ್ ಆಫ್ ಎಲೆಕ್ಟ್ರೋ ಹೋಮಿಯೋಪತಿ ವೈದ್ಯಕೀಯ ವಿಜ್ಞಾನ (ಬಿಇಎಚ್‌ಎಂ) ನೀಡಿದ ಪದವಿಯನ್ನು ತೋರಿಸಿದ್ದ. ಆದರೆ, ಗುಜರಾತ್ ಸರ್ಕಾರ ಅಂತಹ ಯಾವುದೇ ಪದವಿ ನೀಡುವುದಿಲ್ಲ ಎಂಬುದು ತಿಳಿದಿತ್ತು. ಪ್ರಮುಖ ಆರೋಪಿಯು ನಕಲಿ ಪದವಿಗಳನ್ನು ನೀಡಲು ಮಂಡಳಿಯನ್ನು ಸ್ಥಾಪಿಸಲು ಯೋಜಿಸಿದ್ದ. ಅವರು ಐದು ಜನರನ್ನು ನೇಮಿಸಿಕೊಂಡರು ಮತ್ತು ಅವರಿಗೆ ಎಲೆಕ್ಟ್ರೋ-ಹೋಮಿಯೋಪತಿಯಲ್ಲಿ ತರಬೇತಿ ನೀಡಿದರು.

ಗ್ಯಾಂಗ್ ಜನರಿಗೆ 70 ಸಾವಿರ ರೂ.ಗೆ ತರಬೇತಿ ನೀಡುತ್ತಿತ್ತು. ಎಲ್ಲ ಹಣ ಪಾವತಿಸಿ 15 ದಿನದೊಳಗೆ ಪದವಿ ನೀಡಲಾಗುತ್ತಿತ್ತು. ಇಬ್ಬರು ಆರೋಪಿಗಳಾದ ಶೋಭಿತ್ ಮತ್ತು ಇರ್ಫಾನ್ ಹಣ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:18 am, Fri, 6 December 24

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ