ತಿಂಗಳಲ್ಲಿ 15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!

ಉತ್ತರ ಪ್ರದೇಶದಲ್ಲಿ ಊರಿನ ಹಿರಿಯರು ಮತ್ತು ಗ್ರಾಮಸ್ಥರ ಮುಂದೆ ಈ ಮಹಿಳೆ ತನ್ನ ನಿರ್ಧಾರವನ್ನು ಬಹಿರಂಗವಾಗಿ ಘೋಷಿಸಿದ್ದಾಳೆ. ತಾನು ಗಂಡನ ಜೊತೆ 15 ದಿನ ಇರುತ್ತೇನೆ, ಪ್ರೇಮಿಯ ಜೊತೆ 15 ದಿನ ಇರುತ್ತೇನೆ. ತನ್ನ ಸಮಯವನ್ನು ಪತಿ ಮತ್ತು ಪ್ರೇಮಿಯ ನಡುವೆ ಸಮಾನವಾಗಿ ಹಂಚಿಕೊಳ್ಳುವುದಾಗಿ ಆಕೆ ತಿಳಿಸಿದ್ದಾಳೆ. ಆಕೆಯ ಈ ನಿರ್ಧಾರ ಕೇಳಿದ ಪಂಚಾಯ್ತಿ ಕಟ್ಟೆಯ ಮುಖಂಡರು ದಂಗಾಗಿದ್ದಾರೆ.

ತಿಂಗಳಲ್ಲಿ 15 ದಿನ ಗಂಡನ ಜೊತೆ, 15 ದಿನ ಪ್ರೇಮಿ ಜೊತೆ; ಈ ಮಹಿಳೆಯ ಶೋಕಿಗೆ ಊರವರು ಶಾಕ್!
Representative Image

Updated on: Aug 26, 2025 | 8:51 PM

ನವದೆಹಲಿ, ಆಗಸ್ಟ್ 26: ಉತ್ತರ ಪ್ರದೇಶದಲ್ಲಿ (Uttar Pradesh) ವಿಚಿತ್ರ ಪ್ರಕರಣವೊಂದು ನಡೆದಿದೆ. ಮಹಿಳೆಯೊಬ್ಬಳು ಮದುವೆಯಾದರೂ ಅಕ್ರಮ ಸಂಬಂಧ (Extra Marital Affair) ಇಟ್ಟುಕೊಂಡಿದ್ದಾಳೆ ಎಂಬ ಕಾರಣಕ್ಕೆ ಪಂಚಾಯ್ತಿ ಕರೆಯಲಾಗಿತ್ತು. ಪಂಚಾಯ್ತಿ ವೇಳೆ ರಾಂಪುರ ಜಿಲ್ಲೆಯ ಮಹಿಳೆ ಗಂಡ ಮತ್ತು ಪ್ರೇಮಿಯ ಜೊತೆ ತಿಂಗಳಿನ 15 ದಿನಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತೇನೆ ಎಂದು ಘೋಷಿಸಿದ್ದಾಳೆ. ಆಕೆ ಗಂಡನನ್ನು ಬಿಟ್ಟು ತನ್ನ ಪ್ರೇಮಿಯೊಂದಿಗೆ 10 ಬಾರಿ ಓಡಿಹೋಗಿದ್ದಳು! ತಾನು ಗಂಡನ ಜೊತೆಗೆ ಇರುವುದಾದರೆ ಆತ ತಿಂಗಳಿನ 15 ದಿನಗಳನ್ನು ನನ್ನ ಪ್ರೇಮಿಯ ಜೊತೆ ಕಳೆಯಲು ಒಪ್ಪಬೇಕೆಂದು ಆಕೆ ಷರತ್ತು ಹಾಕಿದ್ದಾಳೆ. ಇದನ್ನು ಕೇಳಿದ ಆಕೆಯ ಗಂಡ ಮಾತ್ರವಲ್ಲದೆ ಊರ ಮುಖಂಡರು, ಜನರು ಕೂಡ ಶಾಕ್ ಆಗಿದ್ದಾರೆ.

ಪಂಚಾಯ್ತಿಯ ಮುಂದೆ ಆ ಮಹಿಳೆ ಪ್ರತಿ ತಿಂಗಳೂ 15 ದಿನಗಳನ್ನು ತನ್ನ ಗಂಡನೊಂದಿಗೆ ಮತ್ತು ಉಳಿದ 15 ದಿನಗಳನ್ನು ತನ್ನ ಪ್ರೇಮಿಯೊಂದಿಗೆ ಕಳೆಯಲು ಅವಕಾಶ ನೀಡಬೇಕೆಂದು ಅವಳು ಒತ್ತಾಯಿಸಿದ್ದಾಳೆ. ಈ ಪ್ರಸ್ತಾಪವು ಪಂಚಾಯ್ತಿಯನ್ನು ದಿಗ್ಭ್ರಮೆಗೊಳಿಸಿತು. ಇದಕ್ಕೆ ಆಕೆಯ ಪತಿ ಕಣ್ಣೀರು ಹಾಕಿದ್ದು, “ಯಾವ ಪಂಚಾಯ್ತಿಯೂ ಬೇಡ, ಆಕೆಗೆ ಯಾರ ಜೊತೆಗೆ ಇಷ್ಟವೋ ಅವರ ಜೊತೆಗೇ ಇರಲಿ. ನೀವು ನನ್ನನ್ನು ಒಂಟಿಯಾಗಿ ಬಿಟ್ಟುಬಿಡಿ” ಎಂದು ಪಂಚಾಯ್ತಿಯ ಮುಂದೆ ಕೈ ಮುಗಿದು ಬೇಡಿಕೊಂಡಿದ್ದಾನೆ.

ಇದನ್ನೂ ಓದಿ: Viral: ಆಹಾರ ವೇಸ್ಟ್ ಮಾಡುವ ಗ್ರಾಹಕರಿಗೆ ಬೀಳುತ್ತೆ 20 ರೂ ದಂಡ, ಇದು ಪುಣೆಯ ಈ ರೆಸ್ಟೋರೆಂಟ್‌ನ ರೂಲ್ಸ್

ದಂಪತಿಗಳ ನಡುವೆ ಪದೇ ಪದೇ ಜಗಳವಾಡಿದ ನಂತರ ಕುಟುಂಬದ ಸದಸ್ಯರು ಈ ವಿಷಯವನ್ನು ಪರಿಹರಿಸಲು ಪಂಚಾಯ್ತಿ ಕರೆದಿದ್ದರು. ಅಲ್ಲಿ, ಹಿರಿಯರು ಮತ್ತು ಗ್ರಾಮಸ್ಥರ ಮುಂದೆ ಆ ಮಹಿಳೆ ತನ್ನ ನಿರ್ಧಾರವನ್ನು ಬಹಿರಂಗವಾಗಿ ಘೋಷಿಸಿದಳು. ತನ್ನ ಸಮಯವನ್ನು ತನ್ನ ಪತಿ ಮತ್ತು ಪ್ರೇಮಿಯ ನಡುವೆ ಸಮಾನವಾಗಿ ಹಂಚಿಕೊಳ್ಳುವುದಾಗಿ ಆಕೆ ಹೇಳಿದಳು. ಇದಕ್ಕೆ ಆಕೆಯ ಗಂಡ “ಹೋಗಿ ನಿನ್ನ ಪ್ರೇಮಿಯೊಂದಿಗೆ ಇರು” ಎಂದು ಹೇಳಿದನು. ಅವನ ಹೇಳಿಕೆ ಕೇಳಿ ಅಲ್ಲಿದ್ದವರು ಆಶ್ಚರ್ಯಕ್ಕೊಳಗಾದರು.

ಇದನ್ನೂ ಓದಿ: ಗೆಳೆಯನ ಹೆಂಡತಿಯನ್ನು ತಾನಿಟ್ಟುಕೊಂಡು ತನ್ನ ಪತ್ನಿಯನ್ನು ಆತನಿಗೆ ಕೊಟ್ಟ ಸ್ನೇಹಿತ!

ಆ ಮಹಿಳೆ ಸುಮಾರು ಒಂದೂವರೆ ವರ್ಷಗಳ ಹಿಂದೆ ತನ್ನ ಪಕ್ಕದ ಹಳ್ಳಿಯ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಳು. ಮದುವೆಯಾದ ಸ್ವಲ್ಪ ಸಮಯದ ನಂತರ, ಅವಳು ತಾಂಡಾ ಪ್ರದೇಶದ ಯುವಕನೊಂದಿಗೆ ಸಂಬಂಧ ಬೆಳೆಸಿಕೊಂಡು ಅವನೊಂದಿಗೆ ಓಡಿಹೋದಳು. ಪ್ರತಿ ಬಾರಿಯೂ, ಪತಿ ಅವಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ. ಆದರೆ ಆ ಮಹಿಳೆ ಇದೇ ರೀತಿ 10 ಬಾರಿ ಆತನ ಜೊತೆ ಓಡಿಹೋಗಿದ್ದಳು. ಇದರಿಂದ ಆಕೆಯ ಗಂಡನ ಮನೆಯವರು ಪಂಚಾಯ್ತಿ ಸೇರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ