ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಗುಜರಾತ್ ಭೇಟಿ ಬೆನ್ನಲ್ಲೇ 150 ಆಪ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಅರವಿಂದ್ ಕೇಜ್ರಿವಾಲ್, ಭಗವಂತ್ ಮಾನ್ ಗುಜರಾತ್ ಭೇಟಿ ಬೆನ್ನಲ್ಲೇ 150 ಆಪ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ
ಬಿಜೆಪಿಗೆ ಸೇರ್ಪಡೆಯಾದ ಆಪ್ ಸದಸ್ಯರು

ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಗುಜರಾತ್‌ಗೆ ಎರಡು ದಿನಗಳ ಭೇಟಿ ನೀಡಿದ್ದರು. ಅಲ್ಲಿ ಅವರು ರೋಡ್‌ಶೋ ನಡೆಸಿದ್ದರು. ಅದರ ಮರುದಿನವೇ ಆಪ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

TV9kannada Web Team

| Edited By: Sushma Chakre

Apr 05, 2022 | 8:05 PM

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arwind Kejriwal) ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ (Bhagwant Mann) ಗುಜರಾತ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಆಪ್​ನ ಸುಮಾರು 150 ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿಗೆ ಸೇರಿದ್ದಾರೆ. ಕಾಂಗ್ರೆಸ್ ಕೂಡ ಹಿನ್ನಡೆ ಅನುಭವಿಸಿದ್ದು, ಹಲವು ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಅರವಿಂದ್ ಕೇಜ್ರಿವಾಲ್ ಮತ್ತು ಭಗವಂತ್ ಮಾನ್ ಗುಜರಾತ್‌ಗೆ ಎರಡು ದಿನಗಳ ಭೇಟಿ ನೀಡಿದ್ದರು. ಅಲ್ಲಿ ಅವರು ರೋಡ್‌ಶೋ ನಡೆಸಿದ್ದರು. ಸ್ಥಳೀಯ ದೇವಸ್ಥಾನ, ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ, ಸಭೆಗಳನ್ನು ನಡೆಸಿದ್ದರು. ಅವರು ಭಾನುವಾರ ಸಂಜೆ ಗುಜರಾತ್‌ನಿಂದ ಹೊರಟಿದ್ದಾರೆ. ಅದರ ಮರುದಿನವೇ ಅಂದರೆ ಸೋಮವಾರವೇ ಗಾಂಧಿನಗರದ ಕಮಲಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಆಮ್ ಆದ್ಮಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬಿಜೆಪಿಗೆ ವಲಸೆ ಹೋಗಿದ್ದಾರೆ.

ಬಿಜೆಪಿ ಗುಜರಾತ್‌ನ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಸಿನ್ಹ ವಘೇಲಾ, ದೆಹಲಿ ಸಿಎಂ ಮತ್ತು ಪಂಜಾಬ್ ಸಿಎಂ ಅವರ ಮನೆಗೆ ತಲುಪಿಲ್ಲ, ಊಟ ಕೂಡ ಮಾಡಿಲ್ಲ. ಅಷ್ಟರಲ್ಲಾಗಲೇ ಅವರ ಪಕ್ಷದಿಂದ ಅನೇಕರು ಬಿಜೆಪಿ ಸೇರಿದ್ದಾರೆ. ಇದು ಗುಜರಾತ್ ಜನರನ್ನು ಯಾರೂ ಮರುಳು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಬಿಜೆಪಿಗೆ ಗುಜರಾತ್‌ನ ಜನರ ಆಶೀರ್ವಾದವಿದೆ. ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಕೇವಲ ಐದು ದಿನಗಳಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ: ಮತ್ತೊಬ್ಬ ನಿವೃತ್ತ ಪೊಲೀಸ್ ಅಧಿಕಾರಿ ರಾಜಕೀಯಕ್ಕೆ; IPS ಭಾಸ್ಕರ್ ರಾವ್ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

ಸ್ವಯಂ ನಿವೃತ್ತಿ ಪಡೆದಿದ್ದ IPS ಭಾಸ್ಕರ್ ರಾವ್ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್​ಗೆ ಸೇರ್ಪಡೆ

Follow us on

Related Stories

Most Read Stories

Click on your DTH Provider to Add TV9 Kannada